See also 2stipple
1stipple ಸ್ಟಿಪ(ಪ್‍)ಲ್‍
ಸಕರ್ಮಕ ಕ್ರಿಯಾಪದ
    1. ಚುಕ್ಕೆ ನಕಾಶೆ ರಚಿಸು; (ಫಲಕವನ್ನು, ನಕ್ಷೆಯನ್ನು) ಚುಕ್ಕೆಗಳಿಂದ, ಬಿಂದುಗಳಿಂದ – ಕೆತ್ತು, ಕೊರೆ.
    2. ಚುಕ್ಕೆ ಚಿತ್ರಣ ಮಾಡು; ರೇಖಾಚಿತ್ರ, ವರ್ಣಚಿತ್ರಗಳನ್ನು (ಗೆರೆಗಳಿಂದ ಮಾಡದೆ) ಬಿಂದುಗಳಿಂದ ರಚಿಸು.
  1. (ಬಳಿದಿರುವ ಬಣ್ಣ , ಸಿಮೆಂಟು, ಮೊದಲಾದವುಗಳ ನಯವಾದ ಮೇಲ್ಮೈ ಯನ್ನು) ಒರಟುಗೊಳಿಸು; ತರಕಲಾಗಿಸು.
ಅಕರ್ಮಕ ಕ್ರಿಯಾಪದ

ಬಿಂದು ಚಿತ್ರಣ ಯಾ ನಕಾಸೆ ರಚಿಸು; ಚುಕ್ಕೆ ಗಳಿಂದ – ಚಿತ್ರ ರಚಿಸು ಯಾ ನಕಾಸೆ ಕೊರೆ.

See also 1stipple
2stipple ಸ್ಟಿಪ(ಪ್‍)ಲ್‍
ನಾಮವಾಚಕ
  1. ಬಿಂದುಚಿತ್ರಣ; ಚುಕ್ಕೆ ಚಿತ್ರಣ; ಬಿಂದುಗಳನ್ನು ಕೊರೆದು ಯಾ ಬಿಂದು ಗಳಿಂದ ನಕಾಸೆ ಯಾ ವರ್ಣಚಿತ್ರ ರಚಿಸುವುದು.
  2. ಬಿಂದುಚಿತ್ರಣದ ಯಾ ಬಿಂದುಚಿತ್ರಣದಂಥ – ಪರಿಣಾಮ; ಬಿಂದುಚಿತ್ರಣದಿಂದ ಉಂಟಾದ ವಿವಿಧ ವರ್ಣಛಾಯೆಗಳು.
  3. ಬಿಂದು, ಚುಕ್ಕೆ – ಚಿತ್ರಣದ ವಿಧಾನ, ತಂತ್ರ.