See also 2rush  3rush
1rush ರಷ್‍
ನಾಮವಾಚಕ
    1. (ಜವುಗಿನಲ್ಲಿಯೂ ನೀರಿನ ಅಂಚುಗಳಲ್ಲಿಯೂ ಬೆಳೆಯುವ) ಜೊಂಡು.
    2. ಜೊಂಡು ಕಡ್ಡಿ.
    3. (ಸಮೂಹವಾಚಕವಾಗಿ) ಜೊಂಡು.
  1. (ಪ್ರಾಚೀನ ಪ್ರಯೋಗ) ಕೆಲಸಕ್ಕೆ ಬಾರದ್ದು; ಬೆಲೆಯಿಲ್ಲದ್ದು; ಹುಲ್ಲುಕಡ್ಡಿ: not worth a rush ಒಂದು ಹುಲ್ಲುಕಡ್ಡಿಯ ಬೆಲೆಬಾಳುವುದಿಲ್ಲ; ಣಸಮಾನ; ಣಸಶ.
See also 1rush  3rush
2rush ರಷ್‍
ಸಕರ್ಮಕ ಕ್ರಿಯಾಪದ
    1. ಜೋರಾಗಿ, ಬಿರುಸಾಗಿ, ಅವಸರವಸರವಾಗಿ – ಒಯ್ಯು, ತಳ್ಳು, ದಬ್ಬು, ನೂಕು, ದೂಡು, ನುಗ್ಗಿಸು: rushed them into danger ಅವರನ್ನು ಅಪಾಯಕ್ಕೆ ದೂಡಿದನು.
    2. ಅವಸರವಾಗಿ – ಕೊಂಡೊಯ್ಯು, ಸಾಗಿಸು: was rushed to the hospital ಆಸ್ಪತ್ರೆಗೆ ಅವಸರವಸರವಾಗಿ ಒಯ್ಯಲಾಯಿತು.
  1. (ಸೈನ್ಯ) ರಭಸದಿಂದ, ಹಠಾತ್ತನೆ – ಆಕ್ರಮಣ ಮಾಡು; ನುಗ್ಗಿ ಹಿಡಿದುಕೊ: they rushed the enemy trenches ಶತ್ರುವಿನ ಕಂದಕಗಳನ್ನು ಹಠಾತ್ತನೆ ಆಕ್ರಮಣ ಮಾಡಿ ಹಿಡಿದರು.
  2. (ಚಿನ್ನದ ಗಣಿ ಪ್ರದೇಶ, ಸಭೆಯಲ್ಲಿ ವೇದಿಕೆ ಮೊದಲಾದವನ್ನು) ಮುತ್ತಿ ವಶಪಡಿಸಿಕೊ; ನುಗ್ಗಿ ಆಕ್ರಮಿಸಿಕೊ.
  3. (ಅಡಚಣೆ, ಹೊಳೆ, ಬೇಲಿ ಮೊದಲಾದವನ್ನು) ನುಗ್ಗಿಕೊಂಡು ದಾಟು; ಭೇದಿಸಿಕೊಂಡು ನುಗ್ಗು.
  4. (ಅಶಿಷ್ಟ) (ಗಿರಾಕಿಗೆ) ವಿಪರೀತ, ದುಬಾರಿ – ಬೆಲೆ ಹಾಕು.
  5. ಅವಸರದಿಂದ ಮಾಡು ಯಾ ವ್ಯವಹರಿಸು: don’t rush your dinner ಅವಸರದಿಂದ ಊಟ ಮಾಡಬೇಡ. the bill was rushed through Parliament ಪಾರ್ಲಿಮೆಂಟಿನಲ್ಲಿ ಮಸೂದೆಯನ್ನು ಅವಸರದಿಂದ ಅಂಗೀಕರಿಸಲಾಯಿತು.
  6. (ವ್ಯಕ್ತಿಯನ್ನು) ಅವಸರಿಸು; ಅವಸರಪಟ್ಟು ಮಾಡುವಂತೆ ಬಲಾತ್ಕರಿಸು.
  7. (ಅಮೆರಿಕನ್‍ ಪ್ರಯೋಗ) ಒಂದು ವ್ಯವಹಾರ ಯಾ ಪ್ರಸ್ತಾವ ಕುದುರಿಸಲು (ವ್ಯಕ್ತಿಯನ್ನು) ಓಲೈಸು, ಮರ್ಜಿಹಿಡಿ; (ಅವನಿಗೆ) ವಿಶೇಷ ಗಮನಕೊಡು.
ಅಕರ್ಮಕ ಕ್ರಿಯಾಪದ
  1. ರಭಸದಿಂದ ನುಗ್ಗು; ಆತುರದಿಂದ, ಹಿಂದುಮುಂದು ನೋಡದೆ – ಮುನ್ನುಗ್ಗು: rush into extremes ವಿಪರೀತಕ್ಕೆ ನುಗ್ಗು; ಅತಿಗೆ ನುಗ್ಗು.
  2. ರಭಸದಿಂದ – ಹರಿ, ಹರಡು, ಬೀಳು, ಉರುಳು: blood rushed to his face ರಕ್ತ ಅವನ ಮುಖಕ್ಕೆ ಅಡರಿತು, ಹರಿಯಿತು; ಅವನ ಮುಖ ಕೆಂಪಾಯಿತು.
ಪದಗುಚ್ಛ
  1. rush a bill through ಮಸೂದೆಗೆ ಅವಸರವಾಗಿ ಅಂಗೀಕಾರ ಪಡೆ; ಮಸೂದೆಯನ್ನು ನುಗ್ಗಿಸು.
  2. rush at ಮೇಲೆ ನುಗ್ಗು; ಮೇಲೆ ಬೀಳು; ದಾಳಿಮಾಡು.
  3. rush a thing down (the field) ವಸ್ತುವನ್ನು ಮೈದಾನದಲ್ಲಿ ನುಗ್ಗಿಸು: ball was rushed down the field ಆಟದ ಮೈದಾನದಲ್ಲಿ ಚೆಂಡನ್ನು ಜೋರಾಗಿ ಒಯ್ಯಲಾಯಿತು.
  4. rush into print (ಬರೆದದ್ದನ್ನು) ಆತುರವಾಗಿ ಅಚ್ಚು ಹಾಕಿಸು; ಆತುರವಾಗಿ (ಲೇಖನವನ್ನು) ಪತ್ರಿಕೆಗೆ ಕಳಿಸು; (ವಿವೇಚನೆಯಿಲ್ಲದೆ ಪುಸ್ತಕ ಮೊದಲಾದವನ್ನು) ಆತುರದಿಂದ ಪ್ರಕಟಿಸು.
  5. rush one to place ಅವಸರವಾಗಿ ಸಾಗಿಸು, ಕೊಂಡೊಯ್ಯು: patient was rushed to the hospital ರೋಗಿಯನ್ನು ಆಸ್ಪತ್ರೆಗೆ ತ್ವರೆಯಿಂದ ಸಾಗಿಸಲಾಯಿತು, ಕೊಂಡೊಯ್ಯಲಾಯಿತು.
  6. rush one’s fences ಅತಿ ದುಡುಕಿನಿಂದ ವರ್ತಿಸು; ತರಾತುರಿಯಿಂದ ನಡೆದುಕೊ.
See also 1rush  2rush
3rush ರಷ್‍
ನಾಮವಾಚಕ
  1. ನುಗ್ಗು(ವುದು); (ನೂಕು) ನುಗ್ಗಲು; ನುಗ್ಗಾಟ.
  2. ಹೊಡೆತ; ಮೇಲೆ ಬೀಳುವುದು; ಆಕ್ರಮಣ; ದಾಳಿ.
  3. ಚಟುವಟಿಕೆಯ ಭರಾಟೆ: a sudden rush of business ಇದ್ದಕ್ಕಿದ್ದಂತೆ ವ್ಯಾಪಾರದ ಭರಾಟೆ.
  4. (ಚಲನಚಿತ್ರ) (ಬಹುವಚನದಲ್ಲಿ) (ಆಡುಮಾತು) (ಕಡಿತಕ್ಕೆ ಮುಂಚಿನ ಚಲನಚಿತ್ರದ) ಪ್ರಥಮ ಮುದ್ರಣ ಯಾ ಪೂರ್ವಪ್ರದರ್ಶನ.
  5. (ಕಾಲ್ಚೆಂಡಾಟ)
    1. ಚೆಂಡಿಗಾಗಿ ಹಲವು ಆಟಗಾರರು ಹಾಕಿದ ಒಟ್ಟು ಮುತ್ತಿಗೆ, ನುಗ್ಗಾಟ.
    2. (ಅಮೆರಿಕನ್‍ ಪ್ರಯೋಗ) ಚೆಂಡನ್ನು ಎತ್ತಿಕೊಂಡು ಹೋಗುವುದು.
  6. ನುಗ್ಗು ವಲಸೆ; (ಮುಖ್ಯವಾಗಿ ಹೊಸ ಚಿನ್ನದ ಗಣಿಗೆ) ಹೆಚ್ಚು ಸಂಖ್ಯೆಯಲ್ಲಿ ತಟ್ಟನೆ ಹೊರಡುವ ಜನರ ವಲಸೆ.
  7. (ಯಾವುದಾದರೂ ಸರಕಿಗೆ) ವಿಪರೀತ ಗಿರಾಕಿ; ಭಾರಿ ಬೇಡಿಕೆ.
  8. (ವಿಶೇಷಣವಾಗಿ) ಅವಸರದಲ್ಲಿ ಯಾ ವೇಗವಾಗಿ ಮಾಡಿದ: a rush job ಅವಸರದಲ್ಲಿ ಮಾಡಿದ ಕೆಲಸ.