3rush
ರಷ್
ನಾಮವಾಚಕ
- ನುಗ್ಗು(ವುದು); (ನೂಕು) ನುಗ್ಗಲು; ನುಗ್ಗಾಟ.
- ಹೊಡೆತ; ಮೇಲೆ ಬೀಳುವುದು; ಆಕ್ರಮಣ; ದಾಳಿ.
- ಚಟುವಟಿಕೆಯ ಭರಾಟೆ: a sudden rush of business ಇದ್ದಕ್ಕಿದ್ದಂತೆ ವ್ಯಾಪಾರದ ಭರಾಟೆ.
- (ಚಲನಚಿತ್ರ) (ಬಹುವಚನದಲ್ಲಿ) (ಆಡುಮಾತು) (ಕಡಿತಕ್ಕೆ ಮುಂಚಿನ ಚಲನಚಿತ್ರದ) ಪ್ರಥಮ ಮುದ್ರಣ ಯಾ ಪೂರ್ವಪ್ರದರ್ಶನ.
- (ಕಾಲ್ಚೆಂಡಾಟ)
- ಚೆಂಡಿಗಾಗಿ ಹಲವು ಆಟಗಾರರು ಹಾಕಿದ ಒಟ್ಟು ಮುತ್ತಿಗೆ, ನುಗ್ಗಾಟ.
- (ಅಮೆರಿಕನ್ ಪ್ರಯೋಗ) ಚೆಂಡನ್ನು ಎತ್ತಿಕೊಂಡು ಹೋಗುವುದು.
- ನುಗ್ಗು ವಲಸೆ; (ಮುಖ್ಯವಾಗಿ ಹೊಸ ಚಿನ್ನದ ಗಣಿಗೆ) ಹೆಚ್ಚು ಸಂಖ್ಯೆಯಲ್ಲಿ ತಟ್ಟನೆ ಹೊರಡುವ ಜನರ ವಲಸೆ.
- (ಯಾವುದಾದರೂ ಸರಕಿಗೆ) ವಿಪರೀತ ಗಿರಾಕಿ; ಭಾರಿ ಬೇಡಿಕೆ.
- (ವಿಶೇಷಣವಾಗಿ) ಅವಸರದಲ್ಲಿ ಯಾ ವೇಗವಾಗಿ ಮಾಡಿದ: a rush job ಅವಸರದಲ್ಲಿ ಮಾಡಿದ ಕೆಲಸ.