See also 2rupture
1rupture ರಪ್ಚರ್‍
ನಾಮವಾಚಕ
  1. ಸ್ನೇಹ ಭಂಗ; ಹೊಂದಿಕೆ ಕೆಟ್ಟು ಅಗಲುವುದು; ಒಡಕು; ಛಿದ್ರ; ವೈಮನಸ್ಯ.
  2. (ವೈದ್ಯಶಾಸ್ತ್ರ) ಹರ್ನಿಯಾ; ಅಂಡವಾಯು; ಅಂತ್ರದ್ಧಿ; ಯಾವುದಾದರೂ ಅಂಗಭಾಗ ತನ್ನ ಆವರಣ ಪೊರೆಯಲ್ಲಿಯ (ಮುಖ್ಯವಾಗಿ ಕಿಬ್ಬೊಟ್ಟೆಯಲ್ಲಿಯ) ಬಿರುಕಿನ ಮೂಲಕ ಹೊರಚಾಚಿಕೊಳ್ಳುವುದರಿಂದ ಆಗುವ ಊತ.
  3. ಒಡೆತ; ಒಡಕು; ಬಿರಿತ; ಬಿರುಕು: the flood caused a rupture of the dam ಪ್ರವಾಹದಿಂದ ಸೇತುವೆಯ ಬಿರುಕುಂಟಾಯಿತು.
See also 1rupture
2rupture ರಪ್ಚರ್‍
ಸಕರ್ಮಕ ಕ್ರಿಯಾಪದ
  1. (ಜೀವಕಣ, ದ್ರವನಾಳ, ಪೊರೆ ಮೊದಲಾದವುಗಳ ವಿಷಯದಲ್ಲಿ) ಬಿರಿಸು; ಒಡೆ; ಹರಿ; ಛಿದ್ರಮಾಡು.
  2. (ಸಂಬಂಧ, ಮದುವೆ ಮೊದಲಾದವನ್ನು) ಕಡಿದುಹಾಕು; ವಿಚ್ಛೇದಮಾಡು.
  3. (ವೈದ್ಯಶಾಸ್ತ್ರ) ಅಂತ್ರದ್ಧಿಯಾಗು; ಅಂಡವಾಯು ಬಾಧಿಸು; ಹರ್ನಿಯಾ ಆಗು.
ಅಕರ್ಮಕ ಕ್ರಿಯಾಪದ
  1. ಹರಿದುಹೋಗು; ಹರಿ; ಬಿರಿ; ಕಡಿದುಹೋಗು; ವಿಚ್ಛೇದವಾಗು.
  2. (ವೈದ್ಯಶಾಸ್ತ್ರ) ಹರ್ನಿಯಾ ಆಗು.