See also 2run
1run ರನ್‍
ಕ್ರಿಯಾಪದ
(ವರ್ತಮಾನ ಕೃದಂತ running; ಭೂತರೂಪ ran ಉಚ್ಚಾರಣೆ ರ್ಯಾನ್‍; ಭೂತಕೃದಂತ ಅದೇ).
ಸಕರ್ಮಕ ಕ್ರಿಯಾಪದ
  1. (ನಿರ್ದಿಷ್ಟ ದ್ರವದಿಂದ) ತುಂಬಿ ಹರಿ: rivers are said to run blood after an engagement ಯುದ್ಧವೊಂದರ ತರುವಾಯ ನದಿಗಳು ರಕ್ತದಿಂದ ಹರಿಯುತ್ತವೆ ಎಂದು ಹೇಳಲಾಗಿದೆ.
  2. (ನೀರು ಮೊದಲಾದವನ್ನು) ಹರಿಸು; ಹರಿಯುವಂತೆ ಮಾಡು; ಸುರಿಸು; ಸೂಸು; ಸ್ರವಿಸು (ರೂಪಕವಾಗಿ ಸಹ): fountains run wine ಕಾರಂಜಿಗಳು ಮದ್ಯವನ್ನು ಉಕ್ಕಿಹರಿಸುತ್ತವೆ.
  3. (ಸ್ನಾನದ ತೊಟ್ಟಿಗೆ) ನೀರು ತುಂಬು.
  4. ಮಾರ್ಗ ಹಿಡಿ: run a scent ಬೇಟೆಯಲ್ಲಿ ವಾಸನೆ ಹಿಡಿದು ಹೋಗು.
  5. ಅನುಸರಿಸು: things must run their course ಘಟನೆಗಳು ತಮ್ಮ ಹಾದಿಯನ್ನು, ಸಂದರ್ಭಗಳು ತಮ್ಮ ಮಾರ್ಗವನ್ನು ಅನುಸರಿಸಲೇಬೇಕು.
  6. (ಒಂದರೊಳಕ್ಕೆ) ಹೊಗಿಸು; ತೂರಿಸು; ನಾಟಿಸು.
  7. (ಕ್ರಿಕೆಟ್‍) (ಬ್ಯಾಟುಗಾರನ ವಿಷಯದಲ್ಲಿ) ರನ್‍ ಗಳಿಸಲು ಒಂದು ವಿಕೆಟ್ಟಿನಿಂದ ಇನ್ನೊಂದಕ್ಕೆ ಓಡು.
  8. (ಪಂದ್ಯವನ್ನು, ದೂರವನ್ನು) ಓಡು: run a race ಓಟದ ಪಂದ್ಯದಲ್ಲಿ ಓಡು.
  9. ಅಲೆ; ಸುತ್ತು: run the streets ಬೀದಿಗಳಲ್ಲಿ ಅಲೆ; ಬೀದಿಪೋರನಾಗು; ಬಿಕಾರಿಯಾಗಿ ಅಲೆ.
  10. ಈಡಾಗು; ಒಳಗಾಗು: run risks ಅಪಾಯಗಳಿಗೆ ಈಡಾಗು.
  11. ನಡಸು; ನಿರ್ವಹಿಸು: the Derby was run in a snow-storm ಡಾರ್ಬಿ ಕುದುರೆ ಜೂಜು ಹಿಮಪಾತದಲ್ಲಿ ನಡೆಯಿತು.
  12. (ಬಟ್ಟೆಗೆ) ದಾಟು ಹೊಲಿಗೆ ಹಾಕು.
  13. ಬೆನ್ನಟ್ಟು; ಬೇಟೆಯಾಡು: run the fox five miles ನರಿಯನ್ನು ಐದು ಮೈಲಿ ದೂರ ಅಟ್ಟಿಸಿಕೊಂಡು ಹೋಗು.
  14. (ಯಂತ್ರ, ವಾಹನ ಮೊದಲಾದವನ್ನು) ಓಡಿಸು; ನಡೆಸು; ಚಾಲನೆಗೊಳಿಸು; ಓಡುವಂತೆ ಮಾಡು.
  15. (ದನ ಮೊದಲಾದವನ್ನು) ಮೇಯಲು ಬಿಡು, ಆಟ್ಟು, ಹೊಡೆ: run cattle ದನಕರುಗಳನ್ನು ಮೇಯುವುದಕ್ಕೆ ಹೊಡೆ.
  16. (ಹಣ ಸಲ್ಲಿಸುವ ಮುಂಚೆ ಲೆಕ್ಕವನ್ನು) ಏರಲು ಬಿಡು; ಇನ್ನೂ ಹೆಚ್ಚಾಗಲು, ಇನ್ನೂ ಬೆಳೆಯಲು – ಬಿಡು.
  17. (ಲೇಖನ ಮೊದಲಾದವನ್ನು) ತ್ತಪತ್ರಿಕೆ ಯಾ ನಿಯತಕಾಲಿಕದಲ್ಲಿ ಪ್ರಕಟಿಸು.
  18. (ವ್ಯಕ್ತಿಯನ್ನು) ಚುನಾವಣೆಗೆ ನಿಲ್ಲಿಸು, ಸೂಚಿಸು ಯಾ ಬೆಂಬಲಿಸು.
  19. (ವ್ಯಾಪಾರ, ಉದ್ಯಮ ಮೊದಲಾದವನ್ನು) ನಿರ್ವಹಿಸು; ನಡೆಸು; ನಿರ್ದೇಶಿಸು.
  20. (ವಾಹನವನ್ನು) ಸ್ವಂತವಾಗಿ ಇಟ್ಟುಕೊಂಡು ನಿಯತವಾಗಿ ಬಳಸು, ಓಡಿಸು.
  21. ಒಂದು ನಿರ್ದಿಷ್ಟ ರೀತಿಯಲ್ಲಿ ಓಡಿಸು, ನಡೆಸು, ಚಲಿಸುವಂತೆ ಮಾಡು: ran the car into a tree ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿದ.
  22. (ಕಣ್ಣನ್ನು) ಸ್ಥೂಲವಾಗಿ – ಓಡಿಸು, ಆಡಿಸು: ran my eye down the page ಪುಟದ ಮೇಲೆ ಸ್ಥೂಲವಾಗಿ ಕಣ್ಣಾಡಿಸಿದೆ.
  23. ಪಂದ್ಯಕ್ಕೆ (ಕುದುರೆ ಮೊದಲಾದವನ್ನು) ಇಳಿಸು, ಭಾಗಿಯಾಗಿಸು, ಸ್ಪರ್ಧಿಯನ್ನಾಗಿಸು.
  24. (ಬಂದೂಕು ಮೊದಲಾದವನ್ನು) ಕಳ್ಳಸಾಗಣೆ ಮಾಡು; ಕಾನೂನುಬಾಹಿರವಾಗಿ, ಕಳ್ಳತನದಲ್ಲಿ (ದೇಶ ಮೊದಲಾದವುಗಳ ಒಳಕ್ಕೆ) ನುಗ್ಗಿಸು.
  25. ವಾಹನದಲ್ಲಿ (ವ್ಯಕ್ತಿಯನ್ನು) ಕರೆದುಕೊಂಡು ಹೋಗು: run a person to the shop ವ್ಯಕ್ತಿಯನ್ನು ಅಂಗಡಿಗೆ ವಾಹನದಲ್ಲಿ ಕೂರಿಸಿಕೊಂಡು, ಕರೆದುಕೊಂಡು ಹೋಗು.
  26. (ವಹಿಸಿದ ಕೆಲಸ) ಮಾಡು; ಮಾಡಿ ಮುಗಿಸು; ನಿರ್ವಹಿಸು.
ಅಕರ್ಮಕ ಕ್ರಿಯಾಪದ
  1. ಓಡು; ಧಾವಿಸು.
    1. ಓಟ ಕೀಳು; ಓಡಿಹೋಗು; ಪಲಾಯನ ಮಾಡು.
    2. ತಲೆ ತಪ್ಪಿಸಿಕೊಂಡು, ತಲೆಮರೆಸಿಕೊಂಡು – ಹೋಗು, ಓಡು.
  2. ಅವಸರವಸರವಾಗಿ ಹೋಗು, ಪ್ರಯಾಣ ಮಾಡು.
    1. ಗಾಲಿಗಳ ಮೇಲೆ ಹೋಗು, ಉರುಳು, ಚಲಿಸು; ಅಕ್ಷದ ಮೇಲೆ (ಹೇಗೋ ಹಾಗೆ) ಸುತ್ತು; ಉರುಳಿಕೊಂಡು, ಜಾರಿಕೊಂಡು – ಸಾಗು: time runs ಕಾಲ ಉರುಳುತ್ತಿದೆ. rope runs in pulley ಹಗ್ಗ ಕಪ್ಪಿಯ ಸುತ್ತ ತಿರುಗುತ್ತದೆ.
    2. ಸರಾಗವಾಗಿ ನಡೆ, ಸಾಗು.
  3. ಚಾಲ್ತಿಯಲ್ಲಿರು; ಜಾರಿಯಲ್ಲಿರು; ಕಾರ್ಯಾವಧಿ ಹೊಂದಿರು: contract runs for two years ಕರಾರು ಎರಡು ವರ್ಷ ಜಾರಿಯಲ್ಲಿರುತ್ತದೆ.
  4. ಚಾಲನೆಯಲ್ಲಿರು: left the engine running ಎಂಜಿನ್ನನ್ನು ಚಾಲನೆಯಲ್ಲಿಟ್ಟನು.
  5. (ಬಸ್ಸು, ರೈಲು ಮೊದಲಾದ ಸಾರ್ವಜನಿಕ ವಾಹನಗಳ ವಿಷಯದಲ್ಲಿ) (ಭೂಮಿಯ ಮೇಲಾಗಲಿ ನೀರಿನ ಮೇಲಾಗಲಿ ತನ್ನ ಮಾರ್ಗದಲ್ಲಿ ಸ್ಥಳದಿಂದ ಸ್ಥಳಕ್ಕೆ) ಓಡಾಡು: the train is running late ರೈಲು ತಡವಾಗಿ ಓಡುತ್ತಿದೆ.
  6. (ನಾಟಕ, ಚಲನಚಿತ್ರ, ವಸ್ತುಪ್ರದರ್ಶನ ಮೊದಲಾದವು) ನಡೆಯುತ್ತಿರು; ಪ್ರದರ್ಶಿತವಾಗು: is now running at the Majestic ಮೆಜೆಸ್ಟಿಕ್‍ ಚಿತ್ರಮಂದಿರದಲ್ಲಿ ಈಗ ನಡೆಯುತ್ತಿದೆ. the play ran 100 nights ನಾಟಕ ನೂರು ರಾತ್ರಿ ಪ್ರದರ್ಶಿತವಾಯಿತು, ನಡೆಯಿತು.
    1. ಪಂದ್ಯದಲ್ಲಿ ಸ್ಪರ್ಧಿಸು.
    2. ಪಂದ್ಯದಲ್ಲಿ ನಿರ್ದಿಷ್ಟಸ್ಥಾನ ಪಡೆ: run second (ಪಂದ್ಯದಲ್ಲಿ) ಎರಡನೆಯವನಾಗಿ ಬರು.
  7. (ಚುನಾವಣೆಯಲ್ಲಿ ಶಾಸನಸಭೆ, ಅಧ್ಯಕ್ಷಸ್ಥಾನ ಮೊದಲಾದವಕ್ಕೆ) ಉಮೇದುವಾರನಾಗಿ, ಅಭ್ಯರ್ಥಿಯಾಗಿ – ನಿಲ್ಲು, ಸ್ಪರ್ಧಿಸು: ran for president ಅಧ್ಯಕ್ಷಸ್ಥಾನಕ್ಕೆ ನಿಂತಿದ್ದ.
  8. (ದ್ರವ, ಕಾಳು, ಮರಳು, ಪಾತ್ರೆ ಮೊದಲಾದವುಗಳ ವಿಷಯದಲ್ಲಿ) ಹರಿ; ಸುರಿ; ಸೋರು; ಸೂಸು; ತೊಟ್ಟಿಕ್ಕು; ಸ್ರವಿಸು (ರೂಪಕವಾಗಿ ಸಹ): till the blood ran ರಕ್ತ ಹರಿಯುವ ತನಕ.
  9. (ಬಟ್ಟೆಯ ಬಣ್ಣದ ವಿಷಯದಲ್ಲಿ) (ಬಣ್ಣ ಹಾಕಿರುವ ಭಾಗದಿಂದ ಬಣ್ಣಹಾಕದ ಭಾಗಕ್ಕೆ) ಹರಡು; ವ್ಯಾಪಿಸು.
  10. (ಕ್ರಿಕೆಟ್‍) (ಬ್ಯಾಟ್ಸ್‍ಮನ್ನನ ವಿಷಯದಲ್ಲಿ) ಚೆಂಡನ್ನು ಹೊಡೆದು (ಗುರಿಕೋಲುಗಳ ನಡುವೆ) ಓಡು; ಓಡಲು ಪ್ರಾರಂಭಿಸು.
  11. ಒಂದು ದಿಕ್ಕಿನಲ್ಲಿರು ಯಾ ದಿಕ್ಕಿಗೆ ಹೋಗು.
  12. (ನೌಕಾಯಾನ) (ಹಡಗು, ಮೀನು ಮೊದಲಾದವುಗಳ ವಿಷಯದಲ್ಲಿ) ನೇರವಾಗಿ ವೇಗದಿಂದ ಹೋಗು: ship runs into port ಹಡಗು ಬಂದರಿನೊಳಕ್ಕೆ ನೇರವಾಗಿ ಹೋಗುತ್ತದೆ.
  13. ವೇಗವಾಗಿ ಹರಡು ಯಾ ಯುಕ್ತ ಸ್ಥಳದಿಂದಾಚೆ ವ್ಯಾಪಿಸು: a shiver ran down my spine ನನ್ನ ಬೆನ್ನುಮೂಳೆಯ ಕೆಳಗಿನವರೆಗೂ ನಡುಕ ವ್ಯಾಪಿಸಿತು.
  14. (ಯೋಚನೆ, ಷ್ಟಿ, ಸ್ಮೃತಿ ಮೊದಲಾದವುಗಳ ವಿಷಯದಲ್ಲಿ) ಸುಳಿ; ಓಡು; ಪ್ರವಹಿಸು; ಹರಿ: thoughts run through one’s head ತಲೆಯೊಳಗೆ ಯೋಚನೆಗಳು ಹರಿಯುತ್ತವೆ.
  15. ಕಣ್ಣಾಡು; ಷ್ಟಿಹರಿ: eyes run over object ವಸ್ತುವಿನ ಮೇಲೆ ಷ್ಟಿ ಹರಿಯುತ್ತದೆ.
  16. (ಕಾಲುಚೀಲ ಮೊದಲಾದವುಗಳ ಹೆಣಿಗೆಯಲ್ಲಿ) ಏಣಿ ತೆರಪು ಕಾಣಿಸು.
  17. (ಮೋಂಬತ್ತಿಯ ವಿಷಯದಲ್ಲಿ) ಕರಗಿ ಕೆಳಕ್ಕೆ ಹರಿ: candle runs ಮೋಂಬತ್ತಿ ಕರಗಿ ಹರಿಯುತ್ತದೆ.
  18. (ರಂಧ್ರದ ವಿಷಯದಲ್ಲಿ, ಮುಖ್ಯವಾಗಿ ಕಣ್ಣುಗಳು ಯಾ ಮೂಗುಗಳ ವಿಷಯದಲ್ಲಿ) ದ್ರವ – ಹರಿಸು, ಸೂಸು, ಸೋರು, ಸ್ರವಿಸು: eyes run ಕಣ್ಣುಗಳು ನೀರು ಸುರಿಸುತ್ತವೆ; ಕಣ್ಣೀರು ಸುರಿಯುತ್ತದೆ. nose runs ಮೂಗು ಸೋರುತ್ತದೆ; ನೆಗಡಿಯಾಗಿದೆ.
  19. ಕಾಡಾಗಿ ಬೆಳೆ, ಹರಡು; ಹುಚ್ಚಾಬಟ್ಟೆ ಬೆಳೆ, ಹರಡು.
  20. (ಬೆಂಕಿ, ಸುದ್ದಿ ಮೊದಲಾದವುಗಳ ವಿಷಯದಲ್ಲಿ) ಬೇಗನೆ – ಹಬ್ಬು, ಹರಡು, ವ್ಯಾಪಿಸು, ಪ್ರಸರಿಸು: news ran like wildfire ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು.
  21. ಹಬ್ಬು; ಹಾಯಿ; ಹಾದಿರು: a creeper runs round the house ಒಂದು ಬಳ್ಳಿ ಮನೆಯ ಸುತ್ತ ಹಬ್ಬಿದೆ.
  22. ಮುಂದುವರಿ; ಮುಂಬರಿ; ಸಾಗು: story runs in these words ಕಥೆ ಈ ಮಾತುಗಳಲ್ಲಿ ಸಾಗುತ್ತದೆ.
  23. ಓಲು; ಪ್ರತ್ತಿತೋರು; ಸಮಾನ ಲಕ್ಷಣ ಹೊಂದಿರು: mangoes run big this year ಈ ವರ್ಷ ಮಾವಿನ ಹಣ್ಣುಗಳು ಬಹುಮಟ್ಟಿಗೆ ತೋರವಾಗಿ ಬಿಟ್ಟಿವೆ, ದಪ್ಪವಾಗಿ ಬೆಳೆಯುವ ಲಕ್ಷಣ ತೋರುತ್ತಿವೆ.
  24. ಒಲವು, ಪ್ರತ್ತಿ – ಹೊಂದಿರು; ಹಾದಿಹಿಡಿ: prices are running high ಬೆಲೆಗಳು ಏರುವ ದಾರಿ ಹಿಡಿದಿವೆ.
  25. (ಯಂತ್ರ ಯಾ ಯಂತ್ರಭಾಗಗಳ ವಿಷಯದಲ್ಲಿ) ಸರಾಗವಾಗಿ, ಅಡೆತಡೆಯಿಲ್ಲದೆ – ಚಲಿಸು, ಓಡು, ನಡೆ, ಕೆಲಸಮಾಡು.
  26. (ಸಾಮನ್‍ ಮೀನಿನ ವಿಷಯದಲ್ಲಿ) ಸಮುದ್ರದಿಂದ ನದಿಯ ಒಳಭಾಗಕ್ಕೆ – ಹೋಗು, ಹತ್ತು, ಪ್ರವೇಶಿಸು.
ಪದಗುಚ್ಛ
  1. cut and run (ಅಶಿಷ್ಟ) ಓಡಿಹೋಗು; ಪಲಾಯನಮಾಡು.
  2. he who runs may read (ವಿವರಣೆ ಮೊದಲಾದವು) ಸುಲಭವಾಗಿ ಅರ್ಥವಾಗುತ್ತದೆ; ಸ್ಪಷ್ಟವಾಗಿದೆ.
  3. how your tongue runs! ನಿನ್ನ ನಾಲಗೆ ಹೇಗೆ ಓಡುತ್ತಿದೆ! ಏನು ಎಡೆಬಿಡದೆ ಮಾತನಾಡುತ್ತೀಯೆ!
  4. one’s blood runs cold ಬಹಳ ಗಾಬರಿಗೊಂಡಿದ್ದಾನೆ; ಭಯಪಟ್ಟಿದ್ದಾನೆ; ತಲ್ಲಣಗೊಂಡಿದ್ದಾನೆ.
  5. place where writs do not run ಆಜ್ಞೆಗಳು, ನಿರೂಪಗಳು ಊರ್ಜಿತವಾಗದ, ಮನ್ನಣೆ ಪಡೆಯದ ಸ್ಥಳ.
  6. run about
    1. ಎಡೆಯಿಂದೆಡೆಗೆ, ಒಬ್ಬನಿಂದ ಮತ್ತೊಬ್ಬನಲ್ಲಿಗೆ ಸಂಭ್ರಮದಿಂದ ಒಡಾಡು.
    2. (ಮುಖ್ಯವಾಗಿ ಮಕ್ಕಳ ವಿಷಯದಲ್ಲಿ) ನಿರಾತಂಕವಾಗಿ ಆಟವಾಡು, ಓಡಾಡು, ಜಿಗಿದಾಡು.
  7. run across
    1. ಅಕಸ್ಮಾತ್ತಾಗಿ ಸಂಧಿಸು, ಭೇಟಿಯಾಗು.
    2. (run across to) ಒಂದು ಸ್ಥಳಕ್ಕೆ ಹ್ರಸ್ವ ಭೇಟಿ ನೀಡು.
  8. run after
    1. ಮೆಚ್ಚಿ ಬೆನ್ನುಹತ್ತಿ ಹೋಗು, ಹಿಂಬಾಲಿಸು, ಅನುಸರಿಸು.
    2. ಸಹವಾಸ ಅಪೇಕ್ಷಿಸಿ ಹೋಗು.
    3. (ಹವ್ಯಾಸ ಮೊದಲಾದವಕ್ಕೆ) ಹೆಚ್ಚು ಗಮನಕೊಡು; ಹೆಚ್ಚುಕಾಲ ವಿನಿಯೋಗಿಸು.
  9. run against
    1. ಅಕಸ್ಮಾತ್ತಾಗಿ ಸಂಧಿಸು, ಭೇಟಿಯಾಗು.
    2. ಪ್ರತಿಕೂಲವಾಗಿರು; ವಿರುದ್ಧವಾಗಿರು: this runs against my interest ಇದು ನನ್ನ ಹಿತಕ್ಕೆ ಪ್ರತಿಕೂಲವಾಗಿದೆ.
  10. run along (ಆಡುಮಾತು) (ಸ್ಥಳದಿಂದ) ಹೊರಟುಹೋಗು; ನಿಕಲಾಯಿಸು.
  11. run around
    1. (ಬ್ರಿಟಿಷ್‍ ಪ್ರಯೋಗ) (ಕಾರು ಮೊದಲಾದವುಗಳ ಮೂಲಕ) ಒಂದು ಸ್ಥಳದಿಂದ ಇನ್ನೊಂದಕ್ಕೆ ಕರೆದೊಯ್ಯು.
    2. ಮತ್ತೆ ಮತ್ತೆ ಮೋಸ ಮಾಡು ಯಾ ತಪ್ಪಿಸಿಕೊ.
  12. run around with (ಅಶಿಷ್ಟ) (ಮುಖ್ಯವಾಗಿ ಆಕಸ್ಮಿಕವಾಗಿ ಯಾ ನ್ಯಾಯಬಾಹಿರವಾಗಿ) ಮೈಥುನದಲ್ಲಿ, ಸಂಭೋಗದಲ್ಲಿ ತೊಡಗು.
  13. run at ನುಗ್ಗಿ ಮೇಲೆ ಬೀಳು; ಕೈಮಾಡು; ಆಕ್ರಮಣಮಾಡು.
  14. run away
    1. ಓಡಿಹೋಗು; ಕಂಬಿಕೀಳು; ಪೇರಿಕೀಳು; ತಲೆತಪ್ಪಿಸಿಕೊಂಡು ಹೋಗು; ಪರಾರಿಯಾಗು; ಪಲಾಯನಮಾಡು.
    2. ಎತ್ತಿಕೊಂಡು ಹೋಗು, ಓಡಿಹೋಗು.
    3. (ಕುದುರೆ) ಹತೋಟಿ ತಪ್ಪಿ ಓಡಿಹೋಗು.
    4. (ಕುದುರೆ ಯಾ ಮನುಷ್ಯ ಪಂದ್ಯದಲ್ಲಿ) ಇತರ ಸ್ಪರ್ಧಿಗಳನ್ನು ಹಿಂದೆ ಹಾಕಿ ಬಹಳ ಮುಂದೆ ಓಡು.
  15. run match (or marriage) (ಬಂಧುಬಳಗದವರನ್ನು ಬಿಟ್ಟು) ಓಡಿಹೋಗಿ ಮಾಡಿಕೊಂಡ ಮದುವೆ; ಪಲಾಯನ ಮದುವೆ.
  16. run away ring (or knock) ತಮಾಷೆಗಾಗಿ ತಟ್ಟಿ ಓಡಿಹೋಗುವವನು ಮಾಡುವ ಬಾಗಿಲ ಶಬ್ದ.
  17. run away with
    1. (ವ್ಯಕ್ತಿಯನ್ನು, ಕದ್ದ ಸಾಮಾನನ್ನು) ಎತ್ತಿಕೊಂಡು ಓಡಿಹೋಗು; ಹಾರಿಸಿಕೊಂಡು ಓಡಿಹೋಗು.
    2. (ಅಭಿಪ್ರಾಯ ಮೊದಲಾದವನ್ನು) ಆತುರವಾಗಿ, ವಿಚಾರ ಮಾಡದೆ ನಂಬಿ(ಕೊಂಡು)ಬಿಡು, ಒಪ್ಪಿ(ಕೊಂಡು) ಬಿಡು.
    3. (ಖರ್ಚು ಮಾಡಿ) ಹಣ ಮೊದಲಾದವನ್ನು ಪೂರೈಸಿಬಿಡು, ತಿಂದು ಹಾಕು.
    4. (ಕುದುರೆ ಮೊದಲಾದವುಗಳ ವಿಷಯದಲ್ಲಿ) (ಸವಾರನನ್ನು, ಬಂಡಿಯನ್ನು, ಬಂಡಿಯಲ್ಲಿರುವ ಪ್ರಯಾಣಿಕರನ್ನು) ಎತ್ತಿಕೊಂಡು ಓಡಿಹೋಗು; ಎಳೆದುಕೊಂಡು ಓಡಿಹೋಗು.
    5. (ಬಹುಮಾನವನ್ನು) ಸುಲಭವಾಗಿ ಗೆಲ್ಲು.
  18. run back over the past ಸಿಂಹಾವಲೋಕನ ಮಾಡು.
  19. run boat down to the water ದೋಣಿಯನ್ನು ನೀರಿಗೆ ತೆಗೆದುಕೊಂಡು ಹೋಗು.
  20. run down
    1. (ಗಡಿಯಾರ ಮೊದಲಾದವುಗಳ ವಿಷಯದಲ್ಲಿ) ಕೊಟ್ಟ ಕೀಲಿ ಉಡುಗಿ ನಿಂತುಹೋಗು.
    2. (ವ್ಯಕ್ತಿ, ಆರೋಗ್ಯ ಮೊದಲಾದವುಗಳ ವಿಷಯದಲ್ಲಿ) ಇಳಿದುಹೋಗು; ಬಡವಾಗು; ಕ್ಷೀಣಿಸು; ಹೆಚ್ಚಿಗೆ ಕಲಸ ಮಾಡಿಯೋ ಪುಷ್ಟಿಯಾದ ಆಹಾರ ಮೊದಲಾದವುಗಳ ಅಭಾವದಿಂದಲೋ – ಶಕ್ತಿಗುಂದು, ಸೊರಗು (ಭೂತಕೃದಂತದಲ್ಲಿ ಸಹ): he is much run down ಅವನು ಬಹಳ ಇಳಿದುಹೋಗಿದ್ದಾನೆ.
    3. (ವ್ಯಕ್ತಿ ಮೊದಲಾದವರನ್ನು) ಕೆಡವು; ಕೆಡವಿ ಬೀಳಿಸು; ಉರುಳಿಸು.
    4. (ಹಡಗು ಮೊದಲಾದವನ್ನು) ಡಿಕ್ಕಿ ಹೊಡೆ; ಡಿಕ್ಕಿ ಹೊಡೆದು ಮುಳಗಿಸು: the cyclist was run down by a bus ಬಸ್ಸು ಸೈಕಲ್‍ ಸವಾರನನ್ನು ಕೆಡವಿತು, ಉರುಳಿಸಿತು.
    5. (ಬೇಟೆಯನ್ನು, ವ್ಯಕ್ತಿಯನ್ನು) ಬೆನ್ನಟ್ಟು; ಬೆನ್ನಟ್ಟಿ ಹಿಡಿ; ಹುಡುಕಿ (ಕಂಡು)ಹಿಡಿ; ಪತ್ತೆಹಚ್ಚು: run down information ಸಮಾಚಾರವನ್ನು ಪತ್ತೆಹಚ್ಚು.
    6. ಹೀನಯಿಸು; ಅಲ್ಲಗಳೆ; ಜರೆ: she was always running down her husband ಅವಳು ಗಂಡನನ್ನು ಯಾವಾಗಲೂ ಜರೆಯುತ್ತಿದ್ದಳು.
    7. (ಬ್ಯಾಟರಿಯ ವಿಷಯದಲ್ಲಿ) ಶಕ್ತಿ ಇಳಿದು ಹೋಗು; ಬರಿದಾಗು: the battery has run down, it needs recharging ಬ್ಯಾಟರಿಯ ಶಕ್ತಿ ಇಳಿದು ಹೋಗಿದೆ; ಅದಕ್ಕೆ ಮತ್ತೆ ವಿದ್ಯುತ್‍ಶಕ್ತಿಯನ್ನು ತುಂಬಬೇಕು.
  21. run dry ಬತ್ತಿ ಹೋಗು; ಮುಗಿದು ಹೋಗು; ಬರಿದಾಗು.
  22. run a coach ಕೋಚು ಬಂಡಿಯನ್ನು ನಡಸು.
  23. run croquet-hoop ಕ್ರೋಕೆ ಚೆಂಡನ್ನು ವಲಯದಲ್ಲಿ ನೇರವಾಗಿ ತೂರಿಸು.
  24. run errands ಸಮಾಚಾರ ತೆಗೆದುಕೊಂಡು ಹೋಗು; ದೌತ್ಯದ ಕೆಲಸದ ಮೇಲೆ ಓಡಾಡು.
  25. run horse ಕುದುರೆಯನ್ನು ಜೂಜಿಗೆ ಕಳುಹಿಸು.
  26. run for it ಪಲಾಯನಮಾಡಿ ರಕ್ಷಣೆ ಪಡೆ.
  27. run in
    1. (ಯೋಧರ ವಿಷಯದಲ್ಲಿ) ನೇರವಾಗಿ ಸಂಧಿಸು; ಮುಖಾಮುಖಿಯಾಗು; ಹತ್ತಿರ ನುಗ್ಗು; ಕೈ ಕೈ ಹತ್ತುವಂತೆ ಬರು.
    2. (ರಗ್ಬಿ ಕಾಲ್ಚೆಂಡಾಟದಲ್ಲಿ) ಎದುರಾಳಿಯ ಗುರಿಗೆರೆಯ ಹಿಂದಕ್ಕೆ ಚೆಂಡು ತೆಗೆದುಕೊಂಡು ಹೋಗಿ ನೆಲಕ್ಕೆ ಸೋಕಿಸು.
    3. (ಮನೆಗೆ) ಬಂದು ಹೋಗು; (ವ್ಯಕ್ತಿಯನ್ನು) ನೋಡಿಕೊಂಡು ಹೋಗು; ಸ್ವಲ್ಪಹೊತ್ತು ಭೇಟಿಮಾಡು.
    4. (ಆಡುಮಾತು) ದಸ್ತಗಿರಿಮಾಡಿ ಬಂಧನದಲ್ಲಿಡು.
    5. (ಆಡುಮಾತು) (ಅಭ್ಯರ್ಥಿಯಾಗಿ ನಿಲ್ಲಿಸಿ) ಚುನಾವಣೆ ಮಾಡಿಸು.
    6. (ಹೊಸ ಯಂತ್ರವನ್ನು ಯಾ ವಾಹನವನ್ನು) ಎಚ್ಚರಿಕೆಯಿಂದ ಓಡಿಸು, ನಡೆಸು,
    7. ಸಾಲಕ್ಕೆ ಬೀಳು; ಸಾಲ ಮಾಡು.
  28. run into
    1. (ಅಭ್ಯಾಸ, ಹುಚ್ಚುತನ ಮೊದಲಾದವಕ್ಕೆ) ಈಡಾಗು; ಬೀಳು.
    2. ಒಂದಾಗು; ಒಂದುಗೂಡು; ಅವಿಚ್ಛಿನ್ನವಾಗಿ ಮುಂದುವರಿದಿರು.
    3. ಡಿಕ್ಕಿ ಹೊಡೆ; ಢಕ್ಕಾಮುಕ್ಕಿಯಾಗು: the bus ran into a wall ಬಸ್ಸು ಗೋಡೆಗೆ ಡಿಕ್ಕಿಹೊಡೆಯಿತು.
    4. (ನಿರ್ದಿಷ್ಟ ಸಂಖ್ಯೆಯವರೆಗೆ) ಹೋಗು; ತಲುಪು; ಮುಟ್ಟು: the book has run into five editions ಪುಸ್ತಕ ಐದು ಮುದ್ರಣಗಳನ್ನು ಮುಟ್ಟಿದೆ.
    5. ಅನಿರೀಕ್ಷಿತವಾಗಿ ಸಂಧಿಸು, ಭೇಟಿಮಾಡು: I ran into an old friend ಅನಿರೀಕ್ಷಿತವಾಗಿ ಹಳೆಯ ಸ್ನೇಹಿತನನ್ನು ಭೇಟಿ ಮಾಡಿದೆ.
  29. run into the ground (ಆಡುಮಾತು) (ವ್ಯಕ್ತಿಯನ್ನು) ಬಳಲಿಸು; ಸುಸ್ತುಮಾಡು.
  30. run it fine ಕಾಲಾವಕಾಶ ಮೊದಲಾದವನ್ನು ಬಹಳ ಕಡಮೆ ಕೊಡು.
  31. run its course ಅದರ ಸಹಜ ಪ್ರಗತಿಯನ್ನು ಅನುಸರಿಸು; ಅದರ ಸಹಜ ಹಾದಿಯಲ್ಲಿ ಸಾಗು, ಮುಂದುವರಿ.
  32. run low (or short) ಕಡಮೆಯಾಗು; ಸಾಲದೆ ಬರು.
  33. run metal into mould ಲೋಹವನ್ನು ಎರಕ ಹೊಯ್ಯಿ.
  34. run off
    1. ಓಡಿಹೋಗು.
    2. ಹರಿದುಹೋಗು.
    3. ತಟಕ್ಕನೆ ವಿಷಯ ಬಿಟ್ಟು ಹೋಗು.
    4. (ಪದ್ಯ, ಪಟ್ಟಿ ಮೊದಲಾದವನ್ನು) ನಿರರ್ಗಳವಾಗಿ ಹೇಳು, ವಾಚನಮಾಡು, ಬರೆ.
    5. (ದ್ರವವನ್ನು) ಹರಿಸು; ಬಸಿದುಹಾಕು.
    6. (ಪೂರ್ವಭಾವಿ ಪಂದ್ಯಗಳಾದ ಮೇಲೆ ಯಾ ಸ್ಪರ್ಧಿಗಳು ಸರಿಸಮವಾಗಿದ್ದಾಗ) ನಿರ್ಣಾಯಕ ಪಂದ್ಯದಿಂದ ನಿರ್ಧರಿಸು.
    7. (ಪ್ರತಿಗಳು ಮೊದಲಾದವನ್ನು) ಯಂತ್ರದಿಂದ ತೆಗೆ.
  35. run off one’s feet ಬಳಲುವವರೆಗೆ ದುಡಿ, ಕೆಲಸದಲ್ಲಿ ತೊಡಗಿರು; ಬಹಳವಾಗಿ ಕೆಲಸ ಮಾಡು.
  36. run on
    1. (ಬರೆದ ಅಕ್ಷರಗಳು) ಒತ್ತಾಗಿರು; ಕೂಡಿಕೊಂಡಿರು; ಹೆಣೆದುಕೊಂಡಿರು.
    2. ಮುಂದುವರಿ; ನಡೆಯುತ್ತಿರು; ಸಾಗು.
    3. (ಕಾಲ) ಕಳೆದು ಹೋಗು; ಹರಿದು ಹೋಗು.
    4. ನಿರರ್ಗಳವಾಗಿ ಮಾತುಹರಿಸು; ತಡೆಬಡೆಯಿಲ್ಲದೆ, ಒಂದೇ ಸಮನೆ ಮಾತಾಡು.
    5. (ಮುದ್ರಣ) ಹಿಂದಿನ ಪಂಕ್ತಿಯಲ್ಲೇ ಮುಂದುವರಿ, ಮುಂದುವರಿಸು.
    6. ಸಂಬಂಧಪಟ್ಟಿರು; ಕುರಿತದ್ದಾಗಿರು; ಕುರಿತು – ಹರಿಯುತ್ತಿರು, ಹೋಗುತ್ತಿರು, ಸಾಗುತ್ತಿರು: talk runs on a subject ಒಂದು ವಿಷಯ ಕುರಿತು ಮಾತು ಸಾಗುತ್ತದೆ.
  37. run one close (or hard) (ಓಟದ ಪಂದ್ಯ, ಸ್ಪರ್ಧೆ ಮೊದಲಾದವುಗಳಲ್ಲಿ) ಹಿಂದೆಯೇ ಒತ್ತಿ ಬರು; (ತಾರತಮ್ಯ ಗುಣದಲ್ಲಿ) ಸರಿಸಮವೆಂದೇ ಹೇಳುವಂತಿರು; ಹತ್ತಿರ ಹತ್ತಿರ ಒಂದೇ ಮಟ್ಟದಲ್ಲಿರು.
  38. run one’s eye along (down, over) something (ಒಂದರ) ಮೇಲೆ ಕಣ್ಣೋಡಿಸು.
  39. run one’s hand along (down, over) something (ಒಂದರ) ಮೇಲೆ ಕೈಯಾಡಿಸು.
  40. run one’s head against ತಲೆಯಿಂದ ಡಿಕ್ಕಿಹೊಡೆ.
  41. run out
    1. (ಅವಧಿ, ದಾಸ್ತಾನು) ಕೊನೆಗೊಳ್ಳು; ಮುಗಿದುಹೋಗು; ಮುಗಿ; ತೀರು.
    2. ಪಾತ್ರೆಯಿಂದ ಹರಿದುಹೋಗು, ಸೋರಿಹೋಗು; (ಪಾತ್ರೆ) ಸೋರು.
    3. (ಕ್ರಿಕೆಟ್‍) ರನ್‍ ಗಳಿಸಲು ಓಡುತ್ತಿರುವ ಬ್ಯಾಟುಗಾರ ವಿಕೆಟ್ಟಿನ ಆವರಣ ತಲುಪುವುದರೊಳಗೆ ಅವನ ವಿಕೆಟ್ಟನ್ನು ಚೆಂಡಿನಿಂದ ಹೊಡೆದುರುಳಿಸಿ ಅವನನ್ನು ಔಟು ಮಾಡು.
    4. (ಹಗ್ಗ) ಉದ್ದಕ್ಕೆ ಹೋಗುವುದಕ್ಕೆ ಬಿಡು; ಸಡಿಲಬಿಡು.
    5. ಹೊರಹೊರಡು; ಚಾಚಿಕೊ.
    6. (ಸ್ಪರ್ಧೆಯಲ್ಲಿ) ಗೊತ್ತಾದ ಸ್ಥಾನದಲ್ಲಿ ಬರು; ಗೊತ್ತಾದ ಗೆಲ್ಲಂಕ ಪೂರ್ತಿ ಮಾಡು.
    7. (ಓಟದ ಪಂದ್ಯವನ್ನು) ಓಡಿ ಮುಗಿಸು.
    8. (ಬಂದೂಕು ಮೊದಲಾದವನ್ನು) ಮುನ್‍ಚಾಚಿಸು.
    9. ಓಡಿಓಡಿ ದಣಿದುಹೋಗು, ಸುಸ್ತಾಗು.
  42. run out of (ದಾಸ್ತಾನು, ವಿಷಯ ಮೊದಲಾದವು) ಖಾಲಿಯಾಗು; ಬರಿದಾಗು; ಮುಗಿದು ಹೋಗು.
  43. run out on (ಆಡುಮಾತು) (ಒಬ್ಬ ವ್ಯಕ್ತಿಯನ್ನು) ಕೈಬಿಡು; ತೊರೆ.
  44. run over
    1. (ಪಾತ್ರೆ, ಅದರಲ್ಲಿಯ ಪದಾರ್ಥ) ತುಂಬಿಹರಿ; ಹೊರಸೂಸು; ಚೆಲ್ಲು.
    2. (ಮನಸ್ಸಿನಲ್ಲಿ) ಪುನರಾವರ್ತನೆ ಮಾಡು; ಹಿಂದಿನದನ್ನು ಮತ್ತೆ – ನೆನೆ, ಜ್ಞಾಪಕ ಮಾಡಿಕೊ, ಮಾಡಿಕೊಡು.
    3. ಕಣ್ಣೋಡಿಸು; ತಿರುವಿಹಾಕು; ಕಣ್ಣುಹಾಯಿಸು; ಸ್ಥೂಲವಾಗಿ, ಅವಸರವಸರವಾಗಿ – ನೋಡು, ಓದು.
    4. (ಸಾರಾಂಶ ಹೇಳುವುದರ ಮೂಲಕ) ಸಿಂಹಾವಲೋಕನ ಮಾಡು.
    5. (ಪಿಯಾನೋ ವಾದ್ಯದ ಕೀಲಿ ಬಿರಡೆಗಳ ಮೇಲೆ) ಬೇಗ ಕೈ ಓಡಿಸು.
    6. (ವಾಹನ) (ಕೆಳಗೆ ಬಿದ್ದವನ ಮೇಲೆ) ಹರಿದುಹೋಗು.
    7. ಒಂದು ಸ್ಥಳಕ್ಕೆ ಅವಸರದ ಭೇಟಿಕೊಡು; ಸ್ವಲ್ಪ ಬಂದು ಹೋಗು.
  45. run ragged (ವ್ಯಕ್ತಿಯನ್ನು) ಬಳಲಿಸು; ಸುಸ್ತು ಮಾಡು.
  46. run 1riot.
  47. run rope through an eyelet ಹಗ್ಗವನ್ನು ಕಂಡಿಯಲ್ಲಿ ಹೋಗಿಸು, ಪೋಣಿಸು.
  48. run ship aground ಹಡಗನ್ನು (ಆಳವಿಲ್ಲದ ನೀರಿನಲ್ಲಿ) ನೆಲಹತ್ತಿಸು.
  49. run a simile too far ಉಪಮೆಯನ್ನು ಅತಿಯಾಗಿ ಮುಂದುವರಿಸು, ಹಿಗ್ಗಿಸು.
  50. run a temperature ಜ್ವರ ಬಂದಿರು.
  51. run the show(ಅಶಿಷ್ಟ) ಕೈಕೊಂಡ ಕೆಲಸ ಮೊದಲಾದವನ್ನು ಪ್ರಮುಖವಾಗಿ ನಿಂತು ನಡೆಸು; ವಹಿವಾಟು ಮೊದಲಾದವನ್ನು ತಾನೇ ಸ್ವತಃ ನಿರ್ವಹಿಸು.
  52. run the water off ನೀರು ಹೊರಗೆ ಹರಿದು ಹೋಗುವಂತೆ ಮಾಡು; ನೀರನ್ನು ಹೊರಕ್ಕೆ ಹರಿಸು.
  53. run thing fine...ರ ಬಗ್ಗೆ ಹೆಚ್ಚು ಕಾಲಾವಕಾಶ ಕೊಡದಿರು; ಬಹಳ ಸ್ವಲ್ಪ ಅವಕಾಶ ಬಿಡು; (ಮುಖ್ಯವಾಗಿ ಕಾಲದ) ಅವಕಾಶವನ್ನು ಅತಿಯಾಗಿ ಮಿತಗೊಳಿಸು.
  54. run through
    1. ಸ್ಥೂಲವಾಗಿ ನೋಡು, ಪರೀಕ್ಷಿಸು; ಕಣ್ಣೋಡಿಸು.
    2. ಒಂದಾದ ಮೇಲೊಂದರಂತೆ ಕ್ರಮವಾಗಿ ಮಾಡಿ ಮುಗಿಸು.
    3. (ಆಸ್ತಿಯನ್ನು, ಹಣವನ್ನು) ಬೇಗನೆ ವೆಚ್ಚಮಾಡಿಬಿಡು; ಅವಿವೇಕದಿಂದ ಮುಗಿಸಿಬಿಡು; ನಿರ್ಲಕ್ಷ್ಯವಾಗಿ ವೆಚ್ಚಮಾಡಿಬಿಡು; (ದುಂದಿನಿಂದ) ಪೋಲುಮಾಡು: he soon ran through the money he won at the races ಕುದುರೆಜೂಜಿನಲ್ಲಿ ಗೆದ್ದ ಹಣವನ್ನೆಲ್ಲಾ ಬೇಗ ಪೋಲುಮಾಡಿದ.
    4. ವ್ಯಾಪಿಸು; ಹರಡು.
    5. (ಕತ್ತಿ ಮೊದಲಾದವುಗಳಿಂದ) ಇರಿ; ತಿವಿ.
    6. (ಬರೆದ ಮಾತುಗಳನ್ನು ಹೊಡೆದು ಹಾಕಲು ಅವುಗಳ ಮೇಲೆ) ಗೆರೆಯೆಳೆ; ಗೀಟುಹಾಕು.
  55. run to
    1. (ಸಂಖ್ಯೆ, ಮೊತ್ತ) ಆಗು; ತಲುಪು; ಮುಟ್ಟು: relief fund runs to crores ಪರಿಹಾರ ನಿಧಿ ಕೋಟಿಗಟ್ಟಲೆ ಆಗುತ್ತದೆ.
    2. (ಖರ್ಚಿಗೆ, ಯೋಜನೆಗೆ, ಹಣ, ಸಾಮರ್ಥ್ಯ ಮೊದಲಾದವು) ಸಾಕಷ್ಟಿರು; ಸಾಕಾಗು.
    3. (ವ್ಯಕ್ತಿಯ ವಿಷಯದಲ್ಲಿ) ಪ್ರತ್ತಿ ತೋರು: runs to fat ದಪ್ಪವಾಗುವ ಪ್ರತ್ತಿ ತೋರುತ್ತಾನೆ.
    4. ಸಂಪನ್ಮೂಲಗಳು ಯಾ ಶಕ್ತಿ – ಇರು.
    5. ಹಾಳಾಗು.
  56. run to earth
    1. (ಬೇಟೆ) ತಪ್ಪಿಸಿಕೊಳ್ಳಲು ಬಿಡದೆ ಇಕ್ಕೆಯವರೆಗೂ ಬೆನ್ನಟ್ಟು, ಹಿಂಬಾಲಿಸು.
    2. (ರೂಪಕವಾಗಿ) ಬಹಳ ಹೊತ್ತು ಹುಡುಕಿದ ಮೇಲೆ ಕಂಡು ಹಿಡಿ; ದೀರ್ಘ ಶೋಧನೆಯ ನಂತರ ಕಂಡುಹಿಡಿ.
  57. run to help another ಮತ್ತೊಬ್ಬನ ಸಹಾಯಕ್ಕೆ ಓಡು, ಧಾವಿಸು.
  58. run to meet one’s troubles etc. ಕಷ್ಟ ಮೊದಲಾದವುಗಳನ್ನು ನಿರೀಕ್ಷಿಸು, ಮುಂಗಾಣು.
  59. run to ruin ಹಾಳಾಗು; ನಾಶವಾಗು.
  60. run to $^1$seed.
  61. run train through ರೈಲನ್ನು ಮಾರ್ಗದ ಮೂಲಕ ಓಡಿಸು.
  62. run up
    1. ಬೇಗ ಬೆಳೆ; ಬೇಗ ಬೆಳೆದುಬಿಡು.
    2. ಬೆಲೆ – ಏರಿಸು, ಹೆಚ್ಚಿಸು.
    3. (ಪೂರ್ವಭಾವಿ ಪಂದ್ಯಗಳನ್ನು ಗೆದ್ದು) ಅಂತಿಮ ಪಂದ್ಯದಲ್ಲಿ ಸೋಲು.
    4. (ಮೊತ್ತ, ಸಾಲ ಮೊದಲಾದವು) ಬೇಗ ಬೇಗ – ಏರು, ಹೆಚ್ಚಾಗು, ಬೆಳೆ: his debts are running up ಅವನ ಸಾಲ ಬೇಗ ಬೇಗ ಬೆಳೆಯುತ್ತಿದೆ.
    5. (ಹರಾಜಿನಲ್ಲಿ ಎದುರು ಸವಾಲುದಾರನು) ಹೆಚ್ಚು ಬೆಲೆ ಕೂಗುವಂತೆ ಮಾಡು; ಹೆಚ್ಚು ಸವಾಲು ಕೂಗಿಸು: run up the bidding at an auction ಹರಾಜಿನಲ್ಲಿ ಸವಾಲನ್ನು ಏರಿಸು.
    6. (ಗೋಡೆಯನ್ನು, ಮನೆಯನ್ನು, ಸಾಮಾನ್ಯವಾಗಿ ಭದ್ರತೆಯಿಲ್ಲದೆ) ತುಂಬ ಎತ್ತರಕ್ಕೆ ಎಬ್ಬಿಸು, ಕಟ್ಟು; ಅವಸರವಸರವಾಗಿ, ಆತುರದಿಂದ – ಎಬ್ಬಿಸು.
    7. (ಅಂಕಿಗಳ ಸಾಲನ್ನು) ಕೂಡು.
    8. ಚುರುಕಾಗಿ ಹೊಲಿ, ಹೊಲಿಗೆ ಹಾಕು: she ran up some curtains ಚುರುಕಾಗಿ ಕೆಲವು ಪರದೆಗಳನ್ನು ಹೊಲೆದಳು.
    9. (ಧ್ವಜವನ್ನು) ಎತ್ತು.
    10. (ಬೆಲೆ) ಏರು; ಹೆಚ್ಚಾಗು.
    11. ತ್ವರಿತ ಪ್ರವಾಸ ಕೈಗೊಳ್ಳು; ಅವಸರದ ಭೇಟಿ ನೀಡು.
    12. (ಮೊತ್ತ, ಸಂಖ್ಯೆ) ಆಗು; (-ಕ್ಕೆ) ಏರು.
  63. run up against (ಒಂದು ಅಥವಾ ಹಲವು ಕಷ್ಟಗಳನ್ನು) ಎದುರಿಸು.
  64. run upon
    1. (ಆಲೋಚನೆ ಮೊದಲಾದವುಗಳ ವಿಷಯದಲ್ಲಿ) ಕುರಿತಿರು: his thoughts were running upon the past ಅವನ ಆಲೋಚನೆಗಳು ಹಿಂದಿನದ್ದನ್ನೇ ಕುರಿತಿದ್ದವು.
    2. (ವ್ಯಕ್ತಿಯ ವಿಷಯದಲ್ಲಿ) ಇದ್ದಕ್ಕಿದ್ದ ಹಾಗೆ ಸಂಧಿಸು; ಥಟ್ಟನೆ ಭೇಟಿಯಾಗು.
  65. run wild ಅಡೆತಡೆಯಿಲ್ಲದೆ, ಹುಚ್ಚಾಬಟ್ಟೆ – ಬೆಳೆ.
  66. run with sweat ಬೆವರು ಸುರಿ, ಹರಿ.
  67. the sands are running out (ರೂಪಕವಾಗಿ) ಕಾಲಾವಧಿ (ಮೊದಲಾದವು ಇನ್ನೇನು) ಮುಗಿಯುತ್ತಿದೆ.
  68. run high ಉಕ್ಕೇರು; ತೀವ್ರವಾಗು: feeling ran high ಭಾವ ಉಕ್ಕೇರಿತು.
  69. tune runs in head ರಾಗ ತಲೆಯಲ್ಲಿ ಪುನಃ ಪುನಃ ಕೇಳಿ ಬರುತ್ತಿದೆ; ರಾಗ ತಲೆಯಲ್ಲಿ ಮೊರೆಯುತ್ತಿದೆ, ಗುಂಯ್‍ಗುಡುತ್ತಿದೆ.
  70. verse runs smoothly ಪದ್ಯ ಸರಾಗವಾಗಿ ಓಡುತ್ತಿದೆ.
  71. run in the family (ಗುಣವೊಂದರ ವಿಷಯದಲ್ಲಿ) ವಂಶದಲ್ಲಿ ಯಾ ಕುಟುಂಬದಲ್ಲಿ ಹರಿ; ಕುಟುಂಬದ ಸದಸ್ಯರಿಗೆ ಸಮಾನವಾಗಿರು; ಎಲ್ಲಾ ಸದಸ್ಯರಲ್ಲಿಯೂ ಇರು, ಕಂಡುಬರು.
See also 1run
2run ರನ್‍
ನಾಮವಾಚಕ
    1. ಓಟ; ಧಾವನ; ಓಡುವುದು.
    2. ದೌಡು; ಪಲಾಯನ.
    3. ಓಟದ ದೂರ, ಕಾಲ.
  1. ನಿರ್ದಿಷ್ಟ ಕಾಲದಲ್ಲಿ (ಸಾಮಾನ್ಯವಾಗಿ 24 ಗಂಟೆಗಳಲ್ಲಿ) ಹಡಗು ಪ್ರಯಾಣ ಮಾಡಿದ ದೂರ.
  2. (ಕ್ರಿಕೆಟ್‍) ಓಟ; ರನ್ನು; ಧಾವನಾಂಕ;
    1. ದಾಂಡುಗಾರರು (ಎರಡೂ ಕಡೆಗಳ ವಿಕೆಟ್ಟುಗಳ ನಡುವೆ) ಓಡುವ ಓಟ.
    2. ಹೀಗೆ ಯಾ ಇತರ ರೀತಿಯಲ್ಲಿ ಪಡೆದ ಗೆಲ್ಲಂಕ.
    3. (ಬೇಸ್‍ಬಾಲ್‍) ದಾಂಡುಗಾರನು ಚೆಂಡು ಹೊಡೆದು ಓಡಿ ಪಡೆದ ಅಂಕ.
  3. ವೇಗದ ಚಲನೆ, ಗತಿ.
  4. ನಿಯತವಾದ ಮಾರ್ಗ.
  5. ಧಾಟಿ; ಓಟ; ಗತಿ; ವಿಧಾನ; ರೀತಿ; ಫಕ್ಕಿ; ಮರ್ಮ: cannot get the run of the metre ಛಂದಸ್ಸಿನ ಓಟವೇ ತಿಳಿಯುವುದಿಲ್ಲ, ಸಿಕ್ಕುವುದಿಲ್ಲ.
  6. ಥಟ್ಟನೆಯ ಬೀಳು, ಇಳಿತ: come down with a run (ಕಟ್ಟಡ, ಮನುಷ್ಯ, ವಾಯುಭಾರ ಮಾಪಕದಲ್ಲಿಯ ಪಾದರಸ, ಬೆಲೆ ಮೊದಲಾದವು) ಸರ್ರನೆ ಬಿದ್ದು ಹೋಗು; ಥಟ್ಟನೆ ಇಳಿದುಬಿಡು.
  7. (ಸಂಗೀತ) ಚುರುಕಾಗಿ ವಾದನಮಾಡಿದ ಯಾ ಹಾಡಿದ ಸ್ವರಶ್ರೇಣಿ.
  8. ಸಂತತ ಸರಣಿ; ಪರಂಪರೆ; ಶ್ರೇಣಿ; ಅವಧಿ: a long run of power ದೀರ್ಘಾವಧಿಯ ಅಧಿಕಾರ.
  9. ಉದ್ದ; ಲಾಂಬಿ: a 500 ft. run of pipe 500 ಅಡಿ ಉದ್ದದ ಕೊಳಾಯಿ.
  10. ಸಾಮಾನ್ಯ ವರ್ಗ; ಸಾಧಾರಣ, ಸಾದಾ – ತರಗತಿ, ಮಾದರಿ: the common run of men ಸಾಮಾನ್ಯ ಜನ.
  11. (ಸರಕಿನ, ಸಾಮಾನುಗಳ)ವರ್ಗ; ದರ್ಜೆ; ಬಗೆ; ರೀತಿ; ತೆರ; ತರಗತಿ: a superior run of blouses ಉತ್ತಮ ಬಗೆಯ ರವಿಕೆಗಳು.
    1. (ಒಟ್ಟಿಗೆ ಹುಟ್ಟಿದ ಯಾ ಬೆಳೆಸಿದ) ಪ್ರಾಣಿಗಳ ಮಂದೆ, ಹಿಂಡು.
    2. ಚಲಿಸುತ್ತಿರುವ ಮೀನುಗಳ ತಂಡ.
  12. (ಕೆಲವು ಪ್ರಾಣಿಗಳು ಹೋಗುವ) ಮಾಮೂಲಿ – ಜಾಡು, ಹಾದಿ.
  13. (ಕೋಳಿ ಮೊದಲಾದವುಗಳ) ಆವರಣ; ಸುತ್ತುಗಟ್ಟಿನ ಪ್ರದೇಶ.
  14. ಮೇವಿನ ಬಯಲು; ಮೇವುಗಾವಲು; ಹುಲ್ಲುಗಾವಲು: sheep run ಕುರಿಗಾವಲು.
  15. (ನೀರು ಹರಿಯುವುದಕ್ಕಾಗಿ ಇರುವ) ಕೊಳವಿ; ದೋಣಿ.
  16. (ಹಿಂಭಾಗಕ್ಕೆ ಕಿರಿದಾಗುತ್ತಾ ಹೋಗುವ) ಹಡಗಿನ ತಳಭಾಗ.
  17. ಉಪಯೋಗ ಸ್ವಾತಂತ್ರ್ಯ; ಬಳಸುವ ಸ್ವಾತಂತ್ರ್ಯ; ಉಪಯೋಗಿಸುವ ಅಧಿಕಾರ: allowed him the run of their books ಅವರ ಪುಸ್ತಕಗಳನ್ನು ಉಪಯೋಗಿಸುವ ಸ್ವಾತಂತ್ರ್ಯವನ್ನು ಅವನಿಗೆ ಕೊಡಲಾಯಿತು.
    1. (ವಿಮಾನದ ವಿಷಯದಲ್ಲಿ) ಸಿಡಿಗುಂಡುಗಳನ್ನು ಹಾಕುವ ಮುಂಚೆ ಯಾ ಹಾಕುತ್ತಿರುವಾಗಿನ ನೇರವಾದ, ಮಟ್ಟವಾದ ಹಾಗೂ ಒಂದೇ ವೇಗದ ಹಾರಾಟ.
    2. (ಮುಖ್ಯವಾಗಿ ವಿಮಾನದ) ಒಂದು ಹಾರಾಟ.
  18. ಕಿರು ಪ್ರವಾಸ (ಮುಖ್ಯವಾಗಿ ಸಂತೋಷಕ್ಕಾಗಿ ಮಾಡಿದ್ದು).
  19. (ಸರಕು, ಹಣ ಮೊದಲಾದವುಗಳಿಗಾಗಿ) ತುಂಬ ಬೇಡಿಕೆ: a run on the dollar ಡಾಲರಿಗೆ ತುಂಬ ಬೇಡಿಕೆ.
  20. (ಬ್ಯಾಂಕಿನ) ಹಣ ವಾಪಸಾತಿಗೆ ಹಠಾತ್‍ ಬೇಡಿಕೆ; ತಮ್ಮ ಗಿರಾಕಿಗಳು ಇದ್ದಕ್ಕಿದ್ದಂತೆ ತಮ್ಮ ಹಣ ಹಿಂದಿರುಗಿಸುವಂತೆ ಕೇಳುವುದು.
  21. ಒಂದು ಸೂಳಿನ ಉತ್ಪಾದನೆ; ಒಂದು ಸಲದ ಉತ್ಪಾದನೆಯಲ್ಲಿ ದೊರೆತ ಪ್ರಮಾಣ: a print run ಮುದ್ರಣದ ಸಂಖ್ಯೆ.
  22. (ಕಾಲುಚೀಲ ಮೊದಲಾದವುಗಳಲ್ಲಿ) ಹೆಣಿಗೆ ಹಾಕುವಲ್ಲಿ ಏಣಿಯಂಥ ಖಾಲಿ ಜಾಗ.
  23. (ಅಮೆರಿಕನ್‍ ಪ್ರಯೋಗ) ಸಣ್ಣ ತೊರೆ ಯಾ ಹಳ.
ಪದಗುಚ್ಛ
  1. a long run ದೀರ್ಘಕಾಲ: the play had a long run ನಾಟಕ ದೀರ್ಘಕಾಲ ಪ್ರದರ್ಶಿತವಾಯಿತು.
  2. a run of luck ಅಷ್ಟದ ಪರಂಪರೆ, ಹೊಡೆತ.
  3. at a run ಓಡುತ್ತ.
  4. book etc. has a considerable run ಪುಸ್ತಕ ಮೊದಲಾದವಕ್ಕೆ ಗಣನೀಯವಾದ ಬೇಡಿಕೆಯಿದೆ.
  5. had a good run (ಬೇಟೆ, ಹಡಗಿನ ಯಾ ರೈಲಿನ ಪ್ರಯಾಣ ಮೊದಲಾದವುಗಳ ವಿಷಯದಲ್ಲಿ) ಬೇಟೆ ಚೆನ್ನಾಗಿತ್ತು; ಪ್ರಯಾಣ ಚೆನ್ನಾಗಿತ್ತು; ಸೊಗಸಾದ ಬೇಟೆ, ಒಳ್ಳೆಯ ಪ್ರಯಾಣ ಆಯಿತು.
  6. have a run (or a good run) for one’s money ವೆಚ್ಚಕ್ಕೆ ಯಾ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆ, ಪ್ತಿ ಪಡೆ.
  7. in the $^1$long run.
  8. on the run
    1. ತಪ್ಪಿಸಿಕೊಂಡು ಓಡಿಹೋಗುತ್ತಾ; ಪಲಾಯನ ಮಾಡುತ್ತಾ.
    2. ಗಡಿಬಿಡಿಯಿಂದ ಅಲ್ಲಿಂದಿಲ್ಲಿಗೆ ಓಡಾಡುತ್ತ.
  9. run of the mill (ವಿಶೇಷವಾಗಿ) (ಆಯ್ದು ತೆಗೆಯದ ಯಾ ವಿತರಣೆ ಮಾಡದ) ಸಾಧಾರಣ ಯಾ ಸರಿಸುಮಾರಾದ ಯಾ ಮಾಮೂಲಿ – ಉತ್ಪನ್ನ, ಮಾದರಿ.
  10. run on (book etc.) (ಗ್ರಂಥ ಮೊದಲಾದವಕ್ಕೆ) ಹೆಚ್ಚಿನ ಬೇಡಿಕೆ, ಗಿರಾಕಿ.
  11. the run of the market ಪೇಟೆಯ ಹಾಲಿ ಧಾರಣೆ,
  12. the run of one’s teeth ಬಿಟ್ಟಿ ಊಟ (ಸಾಮಾನ್ಯವಾಗಿ ದುಡಿತಕ್ಕೆ ಪ್ರತಿಫಲವಾಗಿ).
  13. have a run of nights (ನಾಟಕ, ಚಲನಚಿತ್ರ ಮೊದಲಾದವು) ಒಂದೇ ಸಮನೆ ಅನೇಕ ರಾತ್ರಿಗಳು ಪ್ರದರ್ಶನವಾಗು: play has a run of $50$ nights ನಾಟಕ ಒಂದೇ ಸಮನೆ 50 ರಾತ್ರಿಗಳು ನಡೆಯಿತು, ಪ್ರದರ್ಶನವಾಯಿತು.