See also 2long  3long  4long
1long ಲಾಂಗ್‍
ಗುಣವಾಚಕ
( ತರರೂಪ longer ಉಚ್ಚಾರಣೆ ಲಾಂಗರ್‍, ತಮರೂಪ longest ಉಚ್ಚಾರಣೆ ಲಾಂಗಿಸ್ಟ್‍).
  1. (ಕಾಲದ ವಿಷಯದಲ್ಲಿ) ಬಹು; ಹೆಚ್ಚು; ದೀರ್ಘ; ದೀರ್ಘಾವಧಿಯ; ಬಹಳ ಕಾಲದ; ಬೇಗ ಮುಗಿಯದ: a long journey ದೀರ್ಘ(ಕಾಲದ) ಪ್ರಯಾಣ. a long time ago ಬಹಳ ಕಾಲದ ಹಿಂದೆ. a long meeting ದೀರ್ಘ(ಕಾಲದ) ಸಭೆ. long life ದೀರ್ಘಜೀವನ; ದೀರ್ಘಾಯುಸ್ಸು. the vacation is two months long ರಜೆ ಎರಡು ತಿಂಗಳ ದೀರ್ಘಾವಧಿಯದು.
  2. (ಅಳತೆಯ ವಿಷಯದಲ್ಲಿ) ಉದ್ದ; ನೀಳ; ಲಂಬ; ಉದ್ದದ; ನಿಡಿದಾದ; ಉದ್ದವಿರುವ; ದೀರ್ಘ(ವಾದ); ಬಹಳ ಅಂತರದ: two metres long ಎರಡು ಮೀಟರ್‍ ಉದ್ದ. a long line ಉದ್ದವಾದ ರೇಖೆ.
  3. ಉದ್ದನೆಯ; ದೊಡ್ಡ; ಭಾರಿ; ಹಲವು ಅಂಕಿಗಳು, ವಸ್ತುಗಳು, ವಿಷಯಗಳು, ಮೊದಲಾದವು ಉಳ್ಳ: a long list ಉದ್ದನೆಯ ಯಾ ದೊಡ್ಡ ಪಟ್ಟಿ. a long family ದೊಡ್ಡ – ಸಂಸಾರ, ಕುಟುಂಬ; ಮಕ್ಕಳಿರುವ ಕುಟುಂಬ.
  4. ತೀರ ಉದ್ದ; ಅತಿ ದೀರ್ಘ; ಬೇಸರವಾಗುವಷ್ಟು ವಿಲಂಬಿತ; ಹೇಳಿರುವುದಕ್ಕಿಂತಲೂ ಹೆಚ್ಚಾಗಿದೆಯೆಂದು, ಹೆಚ್ಚೆಂದು – ತೋರುವ, ಅನಿಸುವ: ten long miles ಹತ್ತು ಮೈಲಿಯಷ್ಟು ದೀರ್ಘದೂರ.
  5. ಲಂಬ; ನೀಳವಾದ; ಉದ್ದನೆಯ ಆಕಾರವುಳ್ಳ: long clay ಲಂಬ ಚುಂಗಾಣಿ.
  6. ಬಹುಕಾಲದ; ದೀರ್ಘಕಾಲದ; ಬಹುಕಾಲ – ಇರುವ, ಉಳಿಯುವ: a long friendship ಬಹುಕಾಲದ ಸ್ನೇಹ. a long farewell ದೀರ್ಘ ಬೀಳ್ಕೊಡುಗೆ; ಬಹುಕಾಲ ಪರಸ್ಪರ ಭೇಟಿಯಾಗದ ಯಾ ಬಹುಕಾಲದ ಅಗಲಿಕೆಯ ಸಂದರ್ಭದ ಬಿಳ್ಕೊಡುಗೆ. a long custom ಬಹುಕಾಲದ, ಬಹುಕಾಲದಿಂದ (ನಡೆದು) ಬಂದ – ಪದ್ಧತಿ.
  7. (ಒಬ್ಬ ವ್ಯಕ್ತಿಯ ನೆನಪಿನ ಯಾ ಸ್ಮೃತಿ ಯಾ ಜ್ಞಾಪಕದ ವಿಷಯದಲ್ಲಿ) ಬಹುಕಾಲ ನಿಲ್ಲುವ; ದೀರ್ಘಕಾಲ, ಚಿರಕಾಲ-ಉಳಿಯುವ: a long memory ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳುವಿಕೆ.
  8. ದೂರದ:
    1. ದೂರ ವ್ಯಾಪಿಯಾದ.
    2. ದೂರ ಪ್ರಭಾವಿ; ದೂರ ಪರಿಣಾಮಿ; ದೂರದಲ್ಲಿದ್ದು – ಕೆಲಸ ಮಾಡುವ, ಪರಿಣಾಮ ಬೀರುವ.
    3. ಬಹಳ ಕಾಲಾಂತರ ಯಾ ಬಹಳ ವ್ಯತ್ಯಾಸ ಹೊಂದಿರುವ.
  9. (ಧ್ವನಿ ಯಾ ಛಂದಸ್ಸು) (ಸ್ವರ ಯಾ ಮಾತ್ರೆಯ ವಿಷಯದಲ್ಲಿ)
    1. ದೀರ್ಘ(ವಾದ).
    2. ಒತ್ತಿರುವ; ಒತ್ತುಳ್ಳ; ಒತ್ತು ಹಾಕಿರುವ.
    3. (ಇಂಗ್ಲಿಷ್‍ ಭಾಷೆಯ ಸ್ವರದ ವಿಷಯದಲ್ಲಿ) ದೀರ್ಘ; ಆಯಾ ಅಕ್ಷರದಲ್ಲಿ ತೋರಿಸಿರುವುದರ ದೀರ್ಘ ಉಚ್ಚಾರಣೆಯಿರುವ (ಉದಾಹರಣೆಗೆ pill ಮತ್ತು cut ಗಳಲ್ಲಿರುವುದಕ್ಕಿಂತ pile ಮತ್ತು cute ಪದಗಳಲ್ಲಿ i ಮತ್ತು uಗಳು ದೀರ್ಘವಾಗಿವೆ).
  10. (ಪಂಥ, ಆಟ ಯಾ ಅವಕಾಶದಲ್ಲಿ) ದೂರವಾದ; ಕಡಮೆಯಾದ; ಅಲ್ಪವಾದ; ಎದುರಾಳಿಗಿರುವ ಅವಕಾಶಕ್ಕೆ ಹೋಲಿಸಿದರೆ ತನ್ನ ಅವಕಾಶ – ಅಲ್ಪವಾದ, ಕಡಿಮೆಯಾದ.
  11. (ಸ್ಟಾಕ್‍ ಎಕ್ಸ್‍ಚೇಂಜ್‍)
    1. (ಸ್ಟಾಕುಗಳ ವಿಷಯದಲ್ಲಿ) ಬೆಲೆ ಹೆಚ್ಚುವುದೆಂಬ ನಿರೀಕ್ಷೆಯ ಮೇರೆಗೆ ಮುಂಗಡವಾಗಿ ಹೆಚ್ಚು ಪ್ರಮಾಣಗಳಲ್ಲಿ ಕೊಂಡಿರುವ.
    2. (ಬ್ರೋಕರನ ವಿಷಯದಲ್ಲಿ) ಈ ಆಧಾರದ ಮೇಲೆ ಕೊಳ್ಳುವ.
  12. (ವಿನಿಮಯ ಹುಂಡಿಯ ವಿಷಯದಲ್ಲಿ) ದೂರ ವಾಯಿದೆಯ; ಬಹಳ ಕಾಲದ ನಂತರ, ದೂರದ ದಿನಾಂಕದಲ್ಲಿ ವಾಯಿದೆ ತುಂಬುವ.
  13. (ತಂಪುಪಾನೀಯದ ವಿಷಯದಲ್ಲಿ) ದೊಡ್ಡ ಪ್ರಮಾಣದ ಹಾಗೂ ಉಲ್ಲಾಸದಾಯಕವಾದ.
  14. (ಆಡುಮಾತು) (ವ್ಯಕ್ತಿಯ ವಿಷಯದಲ್ಲಿ) ಎತ್ತರವಾದ; ಎತ್ತರದ; ಉದ್ದವಾದ: Long John ಉದ್ದನೆ ಜಾನ್‍.
  15. (ಆಡುಮಾತು) (ಸಾಮಾನ್ಯವಾಗಿ long on) ಸಮೃದ್ಧವಾಗಿರುವ; ಪುಷ್ಕಳವಾಗಿರುವ.
ಪದಗುಚ್ಛ
  1. make a long arm (ಮುಖ್ಯವಾಗಿ ಊಟದ ಮೇಜಿನ ವಿಷಯದಲ್ಲಿ) ತೋಳನ್ನು – ಉದ್ದಮಾಡು, ನೀಡು; ದೂರದಲ್ಲಿರುವ ವಸ್ತುವನ್ನು ಎಟುಕಿಸಿಕೊಳ್ಳಲು ತೋಳುಚಾಚು.
  2. two, three, etc. long miles ಎರಡು ಮೈಲಿಗಿಂತ, ಮೂರು ಮೈಲಿಗಿಂತ ದೂರ.
ನುಡಿಗಟ್ಟು
  1. as $^1$broad as it is long.
  2. at long 4last.
  3. by a long $^1$chalk.
  4. draw the long bow ಉತ್ಪ್ರೇಕ್ಷೆಯಿಂದ ತುಂಬಿದ ಕಥೆಗಳನ್ನೋ ಬರಿಯ ಕಟ್ಟುಕಥೆಗಳನ್ನೋ ಹೇಳು.
  5. have a long arm (ಒಬ್ಬನ ಪ್ರಭಾವ ಯಾ ಅಧಿಕಾರ) ಬಹುದೂರ – ಹರಡಿರು, ವ್ಯಾಪಿಸಿರು.
  6. in the long run (ಕಷ್ಟಕಾರ್ಪಣ್ಯಗಳನ್ನೆಲ್ಲ ಅನುಭವಿಸಿದ ಮೇಲೆ) ಕಟ್ಟಕಡೆಗೆ; ತೀರ ಕೊನೆಗೆ; ಆಖೈರಿಗೆ; ಅಂತಿಮವಾಗಿ.
  7. long in the tooth ವಯಸ್ಸಾಗಿರುವ; ವಯಸ್ಸಾದ; ಮುದಿಯಾದ.
  8. take long views ದೂರಾಲೋಚನೆ ಮಾಡು; ದೂರದ ಪರಿಣಾಮಗಳನ್ನು ಲೆಕ್ಕಕ್ಕೆ ತೆಗೆದುಕೊ.
  9. the long green (ಅಮೆರಿಕನ್‍ ಪ್ರಯೋಗ, ಅಶಿಷ್ಟ) ದುಡ್ಡು; ಹಣ.