See also 2seed
1seed ಸೀಡ್‍
ನಾಮವಾಚಕ
  1. ಬಿತ್ತ; ಬೀಜ; (ಬಿತ್ತನೆ) ಕಾಳು; ಹೂ ಬಿಡುವ ಸಸ್ಯದ, ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ: its seeds are black ಅದರ ಬೀಜಗಳು ಕಪ್ಪಗಿವೆ. it drops its seeds everywhere ತನ್ನ ಬೀಜಗಳನ್ನು ಅದು ಎಲ್ಲೆಲ್ಲೂ ಚೆಲ್ಲುತ್ತದೆ, ಎರಚುತ್ತದೆ. to be kept for seed ಬೀಜಕ್ಕಾಗಿ, ಬೀಜವಾಗಿ ಯಾ ಬಿತ್ತನೆಗಾಗಿ ಇಡಲು, ಇಡುವ ಸಲುವಾಗಿ.
  2. ವೀರ್ಯ; ಧಾತು; ಪುಂಸ್ತ್ವ; ರೇತಸ್ಸು.
  3. (ಪ್ರಾಚೀನ ಪ್ರಯೋಗ) ಸಂತಾನ; ಸಂತತಿ; ಪೀಳಿಗೆ; ವಂಶಜರು: the seed of Abraham ಅಬ್ರಹಾಂನ ವಂಶಜರು; ಹೀಬಊ ಜನಾಂಗ.
  4. (ಕ್ರೀಡೆಗಳಲ್ಲಿ) ಕ್ರಮಾಂಕದ ಆಟಗಾರ; ಆಯ್ದ ಆಟಗಾರ; ನಿರ್ದಿಷ್ಟ ಅವಧಿಯಲ್ಲಿ ಭಾಗವಹಿಸಿದ ಪಂದ್ಯಗಳಲ್ಲಿ ಗಳಿಸಿದ ಜಯಾಪಜಯಗಳ ಆಧಾರದ ಮೇಲೆ ಒಟ್ಟು ಆಟಗಾರರ ಅರ್ಹತಾ ಪಟ್ಟಿಯಲ್ಲಿ ನಿರ್ದಿಷ್ಟ ಸಂಖ್ಯಾಂಕನದ ಸ್ಥಾನ ಗಳಿಸಿದ ಯಾ ಕ್ರಮಾಂಕ ನೀಡಲಾದ ಮತ್ತು ಸದ್ಯದ ಪಂದ್ಯದಲ್ಲಿ ಅನಂತರದ ಸುತ್ತುಗಳಲ್ಲಿ ಆಡುವ ಅವಕಾಶ ಕಲ್ಪಿಸಲು ಮೊದಲಿನ ಸುತ್ತುಗಳಲ್ಲಿ ಆಡುವುದರಿಂದ ವಿನಾಯಿತಿ ನೀಡಿದ ಯಾ ಪಡೆದ ಆಟಗಾರ.
  5. ಬೀಜ; ರೇಡಿಯಮ್‍ ಮೊದಲಾದವುಗಳನ್ನು ಪ್ರಯೋಗಿಸಲು ಬಳಸುವ ಬೀಜಾಕಾರದ ಕೋಶ.
  6. = seed crystal.
ಪದಗುಚ್ಛ
  1. go (or run) to seed
    1. (ಹೂವು ಬಿಡುವುದು ನಿಂತು) ಬೀಜವಾಗಲು, ಬೀಜ ಬಿಡಲು – ತಿರುಗು.
    2. (ರೂಪಕವಾಗಿ) (i) (ವಸ್ತುವಿನ ವಿಷಯದಲ್ಲಿ) ಹರಕು ಮುರುಕಾಗು; ಜೂಲು ಜೂಲಾಗು; ಚಿಂದಿ ಚಿಂದಿ ಆಗು. (ii) (ವ್ಯಕ್ತಿ ಯಾ ಪ್ರಾಣಿಯ ವಿಷಯದಲ್ಲಿ) ಜೀರ್ಣವಾಗು; ಬಲಹೀನವಾಗು; ನಿಸ್ಸತ್ತ್ವವಾಗು; ದುರ್ಬಲವಾಗು; ದೇಹಶಕ್ತಿ, ಮನಶ್ಶಕ್ತಿಗಳೆಲ್ಲ ಉಡುಗಿಹೋಗು. (iii) (ವೇಷವಸನಗಳಲ್ಲಿ) ಸದಾ ಕೊಳಕು ಕೊಳಕಾಗಿರು, ಹೊಲಸಾಗಿರು. (iv) ನಿರ್ವೀರ್ಯವಾಗು; ನಿಷ್ಪರಿಣಾಮವಾಗು; ನಿಷ್ಫಲವಾಗು.
  2. raise up seed (ಪ್ರಾಚೀನ ಪ್ರಯೋಗ) ಸಂತಾನೋತ್ಪತ್ತಿ ಮಾಡು; ವಂಶಾಭಿವೃದ್ಧಿ ಮಾಡು; ಮಕ್ಕಳು ಹುಟ್ಟಿಸು.