See also 2rubber  3rubber  4rubber
1rubber ರಬರ್‍
ನಾಮವಾಚಕ
  1. ಉಜ್ಜಲು ಬಳಸುವ ಗಟ್ಟಿಯಾದ ಕುಂಚ ಯಾ ಬಟ್ಟೆ.
  2. ಉಜ್ಜು ಲೋಹ; ಉಜ್ಜುಗಲ್ಲು.
  3. ಉಜ್ಜು ಸುರುಳಿ, ಪಿಂಡಿ; ಉಜ್ಜಿ ಮೆರಗು ಕೊಡಲು ಬಳಸುವ ಸುರುಳಿ ಯಾ ಪಿಂಡಿ.
  4. ದೊಡ್ಡ ಒರಟಾದ ಅರ.
  5. ಮರ್ದಕ; ನೀವುವ ವ್ಯಕ್ತಿ.
  6. (ಶಾಖವಾಯು ಸ್ನಾನದಲ್ಲಿ) ನೀವುಕ ಸೇವಕ.
  7. ಉಜ್ಜುವ ಸಲಕರಣೆ, ಸಾಧನ.
  8. ರಬ್ಬರು:
    1. ಗಟ್ಟಿಯಾದ, ಸ್ಥಿತಿಸ್ಥಾಪಕ ಶಕ್ತಿಯುಳ್ಳ, ಸಸ್ಯಕ್ಷೀರದಿಂದ ಯಾ ತಕವಾಗಿ ತಯಾರಿಸುವ ಒಂದು ವಸ್ತು.
    2. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಪೆನ್ಸಿಲ್‍ ಯಾ ಶಾಯಿಯ ಗುರುತುಗಳನ್ನು ಅಳಿಸಲು ಬಳಸುವ ರಬ್ಬರ್‍ (ತುಂಡು).
  9. = condom.
  10. (ಬಹುವಚನದಲ್ಲಿ) (ಅಮೆರಿಕನ್‍ ಪ್ರಯೋಗ) ಪಾದರಕ್ಷೆ ಮಣ್ಣಾಗದಂತೆ, ನೆನೆಯದಂತೆ ಅದರ ಮೇಲೆ ತೊಡುವ ರಬ್ಬರಿನ ಮೇಲ್ಜೋಡು.
  11. ಉಜ್ಜುಯಂತ್ರ; ಉಜ್ಜುವುದರ ಮೂಲಕ ಕೆಲಸ ಮಾಡುವ ಯಂತ್ರಭಾಗ.
See also 1rubber  3rubber  4rubber
2rubber ರಬರ್‍
ಗುಣವಾಚಕ
  1. ರಬ್ಬರಿನ; ರಬ್ಬರಿಗೆ ಸಂಬಂಧಪಟ್ಟ; ರಬ್ಬರಿನಿಂದ ಮಾಡಿದ.
  2. ರಬ್ಬರುಳ್ಳ.
  3. ರಬ್ಬರು ಲೇಪಿಸಿದ.
  4. ರಬ್ಬರನ್ನು ಉತ್ಪತ್ತಿಮಾಡುವ.
See also 1rubber  2rubber  4rubber
3rubber ರಬರ್‍
ಸಕರ್ಮಕ ಕ್ರಿಯಾಪದ

ರಬ್ಬರಿನ ಲೇಪಕೊಡು.

See also 1rubber  2rubber  3rubber
4rubber ರಬರ್‍
ನಾಮವಾಚಕ

(ವಿಸ್ಟ್‍, ಬ್ರಿಡ್ಜ್‍, ಕ್ರಿಕೆಟ್‍, ಲಾನ್‍ ಟೆನಿಸ್‍, ಮೊದಲಾದ ಆಟಗಳಲ್ಲಿ) ಅದೇ ಆಟಗಾರರು ಯಾ ಪಕ್ಷಗಳು ಒಂದಾದಮೇಲೆ ಒಂದರಂತೆ ಆಡುವ ಮೂರು ಯಾ ಐದು ಆಟಗಳು (ಮೂರರಲ್ಲಿ ಎರಡು, ಐದರಲ್ಲಿ ಮೂರನ್ನು ಗೆದ್ದವರು ಒಟ್ಟಿನಲ್ಲಿ ಗೆದ್ದವರೆಂದು ತೀರ್ಮಾನ).

ಪದಗುಚ್ಛ
  1. have a rubber ಮೂರಾಟವಾಡು.
  2. the rubber
    1. ಈ ಮೂರಾಟದಲ್ಲಿ ಎರಡಾಟ ಗೆಲ್ಲುವುದು.
    2. ಒಬ್ಬೊಬ್ಬರೂ ಒಂದೊಂದಾಟ ಗೆದ್ದಿರುವಾಗ ಆಡುವ ಮೂರನೆಯ ಆಟ.