(ಭೂತರೂಪ ಮತ್ತು ಭೂತಕೃದಂತ rotted; ವರ್ತಮಾನ ಕೃದಂತ rotting).
ಸಕರ್ಮಕ ಕ್ರಿಯಾಪದ
ಕೊಳೆಯಿಸು; ಕೊಳೆಯುವಂತೆ ಮಾಡು.
(ಅಶಿಷ್ಟ) ಕೆಡಿಸಿಬಿಡು; ಹೊಲಸೆಬ್ಬಿಸು; ಹಾಳು ಮಾಡು: has rotted the whole plan ಯೋಜನೆಯನ್ನೆಲ್ಲಾ ಕೆಡಿಸಿಬಿಟ್ಟಿದ್ದಾನೆ.
(ಬ್ರಿಟಿಷ್ ಪ್ರಯೋಗ) (ಅಶಿಷ್ಟ)
ಕುಚೋದ್ಯಮಾಡು; ಗೇಲಿಮಾಡು; ಲೇವಡಿಮಾಡು; ತಮಾಷೆಮಾಡು.
ಕಾಡು; ಗೋಳುಹೊಯ್ದುಕೊ.
ಬಯ್ಯು; ನಿಂದಿಸು.
ಅಕರ್ಮಕ ಕ್ರಿಯಾಪದ
(ಜೈವಿಕ ಪದಾರ್ಥದ ವಿಷಯದಲ್ಲಿ) ಕೊಳೆ; ಕೊಳೆತುಹೋಗು; ಲೊಡ್ಡುಹಿಡಿ; ಲೊಡ್ಡಾಗು; ಹುಳುತುಹೋಗು; ನಾರು; (ಪ್ರಾಣಿ ಯಾ ಸಸ್ಯ ಮೂಲ ಪದಾರ್ಥದ ವಿಷಯದಲ್ಲಿ) ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳ ಕಾರ್ಯಾಚರಣೆಯ ಪರಿಣಾಮವಾಗಿ ರಾಸಾಯನಿಕ ವಿಘಟನೆಗೆ ಗುರಿಯಾಗು.
(ರೆಂಬೆ ಮೊದಲಾದವುಗಳಿಂದ) ಕೊಳೆತು ಬೀಳು; ಉದುರು.
(ರೂಪಕವಾಗಿ)
(ಸಂಸ್ಥೆ, ಸಮಾಜ ಮೊದಲಾದವುಗಳ ವಿಷಯದಲ್ಲಿ) ಸತ್ವ ಹೋಗಿ ಯಾ ಬಳಕೆ ತಪ್ಪಿ–ಕ್ಷೀಣಿಸು, ಕ್ಷಯಿಸು, ನಶಿಸಿಹೋಗು.
ನೈತಿಕವಾಗಿ ಕುಸಿ, ಅವನತಿಹೊಂದು.
(ಸೆರೆಯಾಳು) ಸೊರಗು; ಕೊಳೆಯುತ್ತಿರು: left to rot in gaol ಸೆರೆಮನೆಯಲ್ಲಿ ಕೊಳೆಯಲು ಬಿಟ್ಟರು.
ತಮಾಷೆಮಾಡು: he is only rotting ಸುಮ್ಮನೆ ತಮಾಷೆ ಮಾಡುತ್ತಿದ್ದಾನೆ.
ಪದಗುಚ್ಛ
rot off ಕೊಳೆತು ಕಾಂಡ ಮೊದಲಾದವುಗಳಿಂದ ಬಿದ್ದುಹೋಗು, ಉದುರಿ ಹೋಗು.