See also 2rot  3rot
1rot ರಾಟ್‍
ನಾಮವಾಚಕ
  1. (ಜೈವಿಕ ಪದಾರ್ಥದ ವಿಷಯದಲ್ಲಿ) ಕೊಳೆತ; ಲೊಡ್ಡು; ಹುಳುತು ಹೋಗುವುದು; ಕೊಳೆತು ನಾರುವುದು.
  2. ಕುರಿಯ ಪಿತ್ತಕೋಶದ ಕೊಳೆರೋಗ.
  3. (ಅಶಿಷ್ಟ) ಅಸಂಬದ್ದ ಮಾತು; ಹುಚ್ಚು ವಾದ; ಅವಿವೇಕದ ಹೇಳಿಕೆ, ವಾದ, ಪ್ರಸ್ತಾಪ, ಮಾರ್ಗ: it is perfect rot to trust him ಅವನನ್ನು ನಂಬುವುದು ಶುದ್ಧ ಅವಿವೇಕ.
  4. (ಕ್ರಿಕೆಟ್‍ ಆಟ, ಯುದ್ಧ ಮೊದಲಾದವುಗಳಲ್ಲಿ ಒಂದು ಪಕ್ಷಕ್ಕೆ ಒದಗುವ) ಸೋಲು ಸರಣಿ; ಹಠಾತ್ತಾದ (ನಿಷ್ಕಾರಣ) ಸೋಲುಗಳು; ಅಪಜಯ ಪರಂಪರೆ: a rot set in ಹಠಾತ್ತಾದ ಸೋಲುಗಳು ಆರಂಭವಾದವು.
  5. (ಗುಣಮಟ್ಟ ಮೊದಲಾದವುಗಳಲ್ಲಿನ) ಹಠಾತ್‍–ಕುಸಿತ, ಇಳಿತ, ಅವನತಿ.
  6. ನೈತಿಕ ಯಾ ಸಾಮಾಜಿಕ–ಅವನತಿ, ಕುಸಿತ.