See also 1rot  2rot
3rot ರಾಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rotted; ವರ್ತಮಾನ ಕೃದಂತ rotting).
ಸಕರ್ಮಕ ಕ್ರಿಯಾಪದ
  1. ಕೊಳೆಯಿಸು; ಕೊಳೆಯುವಂತೆ ಮಾಡು.
  2. (ಅಶಿಷ್ಟ) ಕೆಡಿಸಿಬಿಡು; ಹೊಲಸೆಬ್ಬಿಸು; ಹಾಳು ಮಾಡು: has rotted the whole plan ಯೋಜನೆಯನ್ನೆಲ್ಲಾ ಕೆಡಿಸಿಬಿಟ್ಟಿದ್ದಾನೆ.
  3. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
    1. ಕುಚೋದ್ಯಮಾಡು; ಗೇಲಿಮಾಡು; ಲೇವಡಿಮಾಡು; ತಮಾಷೆಮಾಡು.
    2. ಕಾಡು; ಗೋಳುಹೊಯ್ದುಕೊ.
    3. ಬಯ್ಯು; ನಿಂದಿಸು.
ಅಕರ್ಮಕ ಕ್ರಿಯಾಪದ
    1. (ಜೈವಿಕ ಪದಾರ್ಥದ ವಿಷಯದಲ್ಲಿ) ಕೊಳೆ; ಕೊಳೆತುಹೋಗು; ಲೊಡ್ಡುಹಿಡಿ; ಲೊಡ್ಡಾಗು; ಹುಳುತುಹೋಗು; ನಾರು; (ಪ್ರಾಣಿ ಯಾ ಸಸ್ಯ ಮೂಲ ಪದಾರ್ಥದ ವಿಷಯದಲ್ಲಿ) ಬ್ಯಾಕ್ಟೀರಿಯದಂಥ ಸೂಕ್ಷ್ಮಜೀವಿಗಳ ಕಾರ್ಯಾಚರಣೆಯ ಪರಿಣಾಮವಾಗಿ ರಾಸಾಯನಿಕ ವಿಘಟನೆಗೆ ಗುರಿಯಾಗು.
    2. (ರೆಂಬೆ ಮೊದಲಾದವುಗಳಿಂದ) ಕೊಳೆತು ಬೀಳು; ಉದುರು.
  1. (ರೂಪಕವಾಗಿ)
    1. (ಸಂಸ್ಥೆ, ಸಮಾಜ ಮೊದಲಾದವುಗಳ ವಿಷಯದಲ್ಲಿ) ಸತ್ವ ಹೋಗಿ ಯಾ ಬಳಕೆ ತಪ್ಪಿ–ಕ್ಷೀಣಿಸು, ಕ್ಷಯಿಸು, ನಶಿಸಿಹೋಗು.
    2. ನೈತಿಕವಾಗಿ ಕುಸಿ, ಅವನತಿಹೊಂದು.
    3. (ಸೆರೆಯಾಳು) ಸೊರಗು; ಕೊಳೆಯುತ್ತಿರು: left to rot in gaol ಸೆರೆಮನೆಯಲ್ಲಿ ಕೊಳೆಯಲು ಬಿಟ್ಟರು.
  2. ತಮಾಷೆಮಾಡು: he is only rotting ಸುಮ್ಮನೆ ತಮಾಷೆ ಮಾಡುತ್ತಿದ್ದಾನೆ.
ಪದಗುಚ್ಛ

rot off ಕೊಳೆತು ಕಾಂಡ ಮೊದಲಾದವುಗಳಿಂದ ಬಿದ್ದುಹೋಗು, ಉದುರಿ ಹೋಗು.