See also 2reel  3reel  4reel
1reel ರೀಲ್‍
ನಾಮವಾಚಕ
  1. (ದಾರ, ರೇಷ್ಮೆ, ನೂತ ನೂಲು, ಕಾಗದ, ತಂತಿ ಮೊದಲಾದವನ್ನು ತಯಾರಿಸುವಲ್ಲಿ, ಅವುಗಳನ್ನು ಸುತ್ತಲು ಬಳಸುವ) ರಾಟೆ ಯಾ ಕಂಡಿಕೆ.
  2. (ಮುಖ್ಯವಾಗಿ ಗಾಳದಲ್ಲಿ ಮೀನು ಹಿಡಿಯುವಾಗ ದಾರವನ್ನು ಸುತ್ತುತ್ತಾ ಹಿಂದಕ್ಕೆಳೆದುಕೊಳ್ಳು, ಯಾ ಬಿಚ್ಚಿ ಸಡಿಲಗೊಳಿಸಲು, ಗಾಳದ ಹಿಡಿಕೆಯ ಬಳಿ ಇರುವ) ಗಾಳದುರುಳೆ.
  3. (ಹಲವು ಬಗೆಯ ಯಂತ್ರಗಳಲ್ಲಿ ರಾಟೆಯಂತೆ ಸುತ್ತುವ) ಉರುಳೆ.
  4. (ಚಲನಚಿತ್ರ) ರೀಲು; ಹಿಲ್ಮನ್ನು ಸುತ್ತಿರುವ ಉರುಳೆ: two reelers ಎರಡು ರೀಲಿನ ಹಿಲ್ಮು.
  5. ರೀಲು; ರೀಲಿಗೆ, ರಾಟೆಗೆ ಸುತ್ತಿದ ದಾರ ಮೊದಲಾದವುಗಳ ಮೊತ್ತ, ಪ್ರಮಾಣ.
  6. ರೀಲ್‍:
    1. ಎರಡು ಯಾ ಹೆಚ್ಚು ಜೋಡಿಗಳು ಎದುರುಬದುರು ನಿಂತು ಮಾಡುವ ಸ್ಕಾಟ್‍ಲೆಂಡಿನ ಯಾ ಜಾನಪದ ನೃತ್ಯ.
    2. ಈ ನೃತ್ಯದ ಸಂಗೀತ.
ಪದಗುಚ್ಛ

off the reel ತಡೆಬಡೆಯೇ ಇಲ್ಲದೆ; ಸರ್ರನೆ; ಸತತ ಧಾರೆಯಾಗಿ; ನಿರರ್ಗಳವಾಗಿ.

See also 1reel  3reel  4reel
2reel ರೀಲ್‍
ಸಕರ್ಮಕ ಕ್ರಿಯಾಪದ
  1. (ದಾರ, ಗಾಳದ ಹುರಿ ಮೊದಲಾದವನ್ನು) ಉರುಳೆಗೆ ಸುತ್ತು.
  2. (ರೇಷ್ಮೆ ಗೂಡಿನಿಂದ ಎಳೆಯನ್ನು ಬಿಡಿಸಿ) ರಾಟೆಗೆ ಸುತ್ತು.
  3. (ಮೀನು, ಹಡಗಿನ ವೇಗಮಾಪನದ ತೇಲುವೆ ಮೊದಲಾದವನ್ನು ಎಳೆಯಲು, ದಾರವನ್ನು) ರಾಟೆಗೆ ಸುತ್ತಿಕೊ.
  4. (ಕಥೆ, ಪಟ್ಟಿ, ಪದ್ಯಗಳು ಮೊದಲಾದವನ್ನು) ತಡೆಬಡೆಯಿಲ್ಲದೆ, ನೀರುಕುಡಿದಂತೆ, ಧಾರಾಕಾರವಾಗಿ–ಹೇಳುಬಿಡು, ಪಠಿಸು.
  5. (ಮಿಡತೆ ಮೊದಲಾದವುಗಳ ವಿಷಯದಲ್ಲಿ, ಸುತ್ತುವ ರಾಟೆಯಂತೆ) ಕಟಕಟ ಶಬ್ದಮಾಡು.
ಪದಗುಚ್ಛ

reel off = 2reel\((4)\).

See also 1reel  2reel  4reel
3reel ರೀಲ್‍
ಅಕರ್ಮಕ ಕ್ರಿಯಾಪದ
  1. (ಕಣ್ಣು, ಬುದ್ಧಿ, ತಲೆ, ಇವುಗಳ ವಿಷಯದಲ್ಲಿ) ಸುತ್ತು; ಗಿರ್ಕಿಹೊಡೆ.
  2. (ಆ ಕಡೆಯಿಂದ ಈ ಕಡೆಗೆ, ಪಕ್ಕದಿಂದ ಪಕ್ಕಕ್ಕೆ, ಹಿಂದಕ್ಕೂ ಮುಂದಕ್ಕೂ) ತೊನೆದಾಡು; ತೂಗಾಡು; ಜಗ್ಗಾಡು; ಅಲ್ಲಾಡು: the front rank reeled under the shock ಮುಂಚೂಣಿಯು ಆ ಹೊಡೆತದ ರಭಸದಿಂದ ಜಗ್ಗಾಡಿತು. the ship reeled ಹಡಗು ಪಕ್ಕದಿಂದ ಪಕ್ಕಕ್ಕೆ ಅಲ್ಲಾಡಿಬಿಟ್ಟಿತು.
  3. ತತ್ತರಿಸು; ತೂರಾಡು: he reeled like a drunken sailor ಅಮಲೇರಿದ ನಾವಿಕನಂತೆ ಅವನು ತೂರಾಡಿದ.
  4. ಅಲ್ಲಾಡಿದಂತೆ ತೋರು: the mountain reeled before his eyes ಆ ಪರ್ವತ ಅವನ ಕಣ್ಣಮುಂದೆ ಅಲ್ಲಾಡಿದಂತೆ ತೋರಿತು.
  5. ರೀಲ್‍ ನೃತ್ಯ ಮಾಡು.
See also 1reel  2reel  3reel
4reel ರೀಲ್‍
ನಾಮವಾಚಕ
  1. ಅಲುಗಾಟ; ಅಳ್ಳಾಟ; ತೂರಾಟ; ತೂಗಾಟ: without a reel or a stagger ಎಳ್ಳಷ್ಟೂ ಅಳ್ಳಾಟ ಯಾ ತೂರಾಟ ಇಲ್ಲದೆ.
  2. (ರೂಪಕವಾಗಿ) ತತ್ತರ: the reel of vice around ಸುತ್ತಮುತ್ತ ಇರುವ ದುರಾಚಾರದ ತತ್ತರ.