See also 2reel  3reel  4reel
1reel ರೀಲ್‍
ನಾಮವಾಚಕ
  1. (ದಾರ, ರೇಷ್ಮೆ, ನೂತ ನೂಲು, ಕಾಗದ, ತಂತಿ ಮೊದಲಾದವನ್ನು ತಯಾರಿಸುವಲ್ಲಿ, ಅವುಗಳನ್ನು ಸುತ್ತಲು ಬಳಸುವ) ರಾಟೆ ಯಾ ಕಂಡಿಕೆ.
  2. (ಮುಖ್ಯವಾಗಿ ಗಾಳದಲ್ಲಿ ಮೀನು ಹಿಡಿಯುವಾಗ ದಾರವನ್ನು ಸುತ್ತುತ್ತಾ ಹಿಂದಕ್ಕೆಳೆದುಕೊಳ್ಳು, ಯಾ ಬಿಚ್ಚಿ ಸಡಿಲಗೊಳಿಸಲು, ಗಾಳದ ಹಿಡಿಕೆಯ ಬಳಿ ಇರುವ) ಗಾಳದುರುಳೆ.
  3. (ಹಲವು ಬಗೆಯ ಯಂತ್ರಗಳಲ್ಲಿ ರಾಟೆಯಂತೆ ಸುತ್ತುವ) ಉರುಳೆ.
  4. (ಚಲನಚಿತ್ರ) ರೀಲು; ಹಿಲ್ಮನ್ನು ಸುತ್ತಿರುವ ಉರುಳೆ: two reelers ಎರಡು ರೀಲಿನ ಹಿಲ್ಮು.
  5. ರೀಲು; ರೀಲಿಗೆ, ರಾಟೆಗೆ ಸುತ್ತಿದ ದಾರ ಮೊದಲಾದವುಗಳ ಮೊತ್ತ, ಪ್ರಮಾಣ.
  6. ರೀಲ್‍:
    1. ಎರಡು ಯಾ ಹೆಚ್ಚು ಜೋಡಿಗಳು ಎದುರುಬದುರು ನಿಂತು ಮಾಡುವ ಸ್ಕಾಟ್‍ಲೆಂಡಿನ ಯಾ ಜಾನಪದ ನೃತ್ಯ.
    2. ಈ ನೃತ್ಯದ ಸಂಗೀತ.
ಪದಗುಚ್ಛ

off the reel ತಡೆಬಡೆಯೇ ಇಲ್ಲದೆ; ಸರ್ರನೆ; ಸತತ ಧಾರೆಯಾಗಿ; ನಿರರ್ಗಳವಾಗಿ.