See also 2ramp  3ramp  4ramp
1ramp ರ್ಯಾಂಪ್‍
ನಾಮವಾಚಕ
  1. ಇಳಿಜಾರು; (ಮುಖ್ಯವಾಗಿ ಕೋಟೆಯಲ್ಲಿ ಯಾ ಗೋಡೆಯ ತಲೆಗಟ್ಟಿನಲ್ಲಿ ಹೆಚ್ಚುಕಡಮೆ ಎತ್ತರದ ಎರಡು ಮಟ್ಟಗಳನ್ನು ಕೂಡಿಸುವ) ಇಳಿವಾಟ; ಇಳಿವೋರೆ; ಇಳಿಕಲು.
  2. (ಹೆಚ್ಚುಕಡಮೆ ಎತ್ತರದ ಒದೆಗಳ ಮೇಲಿನ ಕಮಾನಿನಲ್ಲಿ) ಎದುರುಬದುರಾದ ಒದೆಗಂಬಗಳ ಮಟ್ಟದ ವ್ಯತ್ಯಾಸ.
  3. (ಮೆಟ್ಟಲು ಸಾಲಿನ ಕಟಕಟೆಯಲ್ಲಿನ) ಕೈಗಂಬಿಯ ಏರುವೋರೆ; ಮೇಲುಬಾಗು.
  4. ಮೆಟ್ಟಿಲೇಣಿ; ಏಣಿಮೆಟ್ಟಿಲು; ವಿಮಾನವನ್ನು ಏರಲು ಯಾ ಇಳಿಯಲು ಮಾಡಿರುವ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಬಹುದಾದ ಮೆಟ್ಟಿಲು ಸಾಲು.
  5. (ಬ್ರಿಟಿಷ್‍ ಪ್ರಯೋಗ) ರಸ್ತೆ – ತಡೆ, ಡುಬ್ಬ; ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆಗಡ್ಡಲಾಗಿ ಕಟ್ಟಿರುವ ದಿಂಡು.
See also 1ramp  3ramp  4ramp
2ramp ರ್ಯಾಂಪ್‍
ಸಕರ್ಮಕ ಕ್ರಿಯಾಪದ

(ಸೈನ್ಯ) ಇಳಿವೋರೆಯನ್ನು ಒದಗಿಸು; ಇಳಿಜಾರನ್ನು ಕಟ್ಟು; (ಇಳಿ) ಓಟವಿಟ್ಟು ಕಟ್ಟು.

ಅಕರ್ಮಕ ಕ್ರಿಯಾಪದ
  1. (ವಂಶಲಾಂಛನ ವಿದ್ಯೆ) (ಪ್ರಾಣಿಯ, ಮುಖ್ಯವಾಗಿ ಸಿಂಹದ ವಿಷಯದಲ್ಲಿ) ಹಿಂಗಾಲ ಮೇಲೇರಿ ನಿಲ್ಲು; ಮುಂಗಾಲ ಪಂಜಗಳನ್ನೆತ್ತಿ ಬಾಲ ನಿಮಿರಿಸಿಕೊಂಡು ಹಿಂಗಾಲ ಮೇಲೆ ನಿಲ್ಲು.
  2. ಮೇಲೆ ಬೀಳುವ, ಮೇಲೆರಗುವ, ಬೆದರಿಸುವ – ಭಂಗಿಯನ್ನು ತಳೆ ಯಾ ಭಂಗಿಯಲ್ಲಿ ನಿಲ್ಲು.
  3. (ಈಗ ಹಾಸ್ಯ ಪ್ರಯೋಗ) ಹುಚ್ಚುಹುಚ್ಚಾಗಿ ಎಗರಾಡು. ರೇಗಾಡು; ಕ್ರೋಧಾವೇಶದಿಂದ ಹಾರಾಡು.
  4. (ವಾಸ್ತುಶಿಲ್ಪ) (ಗೋಡೆಯ ವಿಷಯದಲ್ಲಿ)
    1. ಮೇಲುಗಡೆಗೆ ಓರೆಯಾಗಿ, ಏರುವೋರೆಯಾಗಿ ಏರು.
    2. ಇಳಿಜಾರಾಗಿ, ಇಳುಕಲಾಗಿ – ಇಳಿ.
See also 1ramp  2ramp  4ramp
3ramp ರ್ಯಾಂಪ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)

  1. (ಜೂಜು ವ್ಯಾಪಾರಿಯಿಂದ) ಸುಳ್ಳು ಪಣದ ಸಾಲವನ್ನು ಕೀಳುವ ಪ್ರಯತ್ನ.
  2. ಅತಿಯಾದ ಬೆಲೆ ವಸೂಲಿ.
  3. (ನಂಬಿಕೆ ಹುಟ್ಟಿಸಿ ಮಾಡುವ) ಮೋಸ; ವಂಚನೆ; ದಗಾಖೋರಿ: the whole thing was a moneymaking ramp ಅದೆಲ್ಲ ಕೇವಲ ಹಣ ಮಾಡಲು ಕಟ್ಟಿದ್ದ ದಗಾಖೋರಿ ಹೂಟ.
See also 1ramp  2ramp  3ramp
4ramp ರ್ಯಾಂಪ್‍
ಸಕರ್ಮಕ ಕ್ರಿಯಾಪದ
  1. (ಜೂಜು ವ್ಯಾಪಾರಿಯಿಂದ) ಸುಳ್ಳುಪಣದ ಸಾಲ ಕೀಳು, ಸುಲಿ ( ಅಕರ್ಮಕ ಕ್ರಿಯಾಪದ ಸಹ).
  2. ಅತಿಯಾದ ಬೆಲೆಯನ್ನು ವಸೂಲ್ಮಾಡು: the blackmarket ramp in whisky ಕಳ್ಳಸಂತೆಯಲ್ಲಿ ವಿಸ್ಕಿ ಮಾರಾಟದಲ್ಲಿ ಅತಿಯಾದ ಬೆಲೆಯನ್ನು ವಸೂಲ್ಮಾಡುತ್ತಿದ್ದಾರೆ, ( ಅಕರ್ಮಕ ಕ್ರಿಯಾಪದ ಸಹ).
  3. (ನಂಬಿಕೆ ಹುಟ್ಟಿಸಿ) (ಒಬ್ಬ ವ್ಯಕ್ತಿಗೆ) ಮೋಸಮಾಡು; ವಂಚಿಸು; ದಗಾ ಹಾಕು.