See also 1ramp  3ramp  4ramp
2ramp ರ್ಯಾಂಪ್‍
ಸಕರ್ಮಕ ಕ್ರಿಯಾಪದ

(ಸೈನ್ಯ) ಇಳಿವೋರೆಯನ್ನು ಒದಗಿಸು; ಇಳಿಜಾರನ್ನು ಕಟ್ಟು; (ಇಳಿ) ಓಟವಿಟ್ಟು ಕಟ್ಟು.

ಅಕರ್ಮಕ ಕ್ರಿಯಾಪದ
  1. (ವಂಶಲಾಂಛನ ವಿದ್ಯೆ) (ಪ್ರಾಣಿಯ, ಮುಖ್ಯವಾಗಿ ಸಿಂಹದ ವಿಷಯದಲ್ಲಿ) ಹಿಂಗಾಲ ಮೇಲೇರಿ ನಿಲ್ಲು; ಮುಂಗಾಲ ಪಂಜಗಳನ್ನೆತ್ತಿ ಬಾಲ ನಿಮಿರಿಸಿಕೊಂಡು ಹಿಂಗಾಲ ಮೇಲೆ ನಿಲ್ಲು.
  2. ಮೇಲೆ ಬೀಳುವ, ಮೇಲೆರಗುವ, ಬೆದರಿಸುವ – ಭಂಗಿಯನ್ನು ತಳೆ ಯಾ ಭಂಗಿಯಲ್ಲಿ ನಿಲ್ಲು.
  3. (ಈಗ ಹಾಸ್ಯ ಪ್ರಯೋಗ) ಹುಚ್ಚುಹುಚ್ಚಾಗಿ ಎಗರಾಡು. ರೇಗಾಡು; ಕ್ರೋಧಾವೇಶದಿಂದ ಹಾರಾಡು.
  4. (ವಾಸ್ತುಶಿಲ್ಪ) (ಗೋಡೆಯ ವಿಷಯದಲ್ಲಿ)
    1. ಮೇಲುಗಡೆಗೆ ಓರೆಯಾಗಿ, ಏರುವೋರೆಯಾಗಿ ಏರು.
    2. ಇಳಿಜಾರಾಗಿ, ಇಳುಕಲಾಗಿ – ಇಳಿ.