See also 2ramp  3ramp  4ramp
1ramp ರ್ಯಾಂಪ್‍
ನಾಮವಾಚಕ
  1. ಇಳಿಜಾರು; (ಮುಖ್ಯವಾಗಿ ಕೋಟೆಯಲ್ಲಿ ಯಾ ಗೋಡೆಯ ತಲೆಗಟ್ಟಿನಲ್ಲಿ ಹೆಚ್ಚುಕಡಮೆ ಎತ್ತರದ ಎರಡು ಮಟ್ಟಗಳನ್ನು ಕೂಡಿಸುವ) ಇಳಿವಾಟ; ಇಳಿವೋರೆ; ಇಳಿಕಲು.
  2. (ಹೆಚ್ಚುಕಡಮೆ ಎತ್ತರದ ಒದೆಗಳ ಮೇಲಿನ ಕಮಾನಿನಲ್ಲಿ) ಎದುರುಬದುರಾದ ಒದೆಗಂಬಗಳ ಮಟ್ಟದ ವ್ಯತ್ಯಾಸ.
  3. (ಮೆಟ್ಟಲು ಸಾಲಿನ ಕಟಕಟೆಯಲ್ಲಿನ) ಕೈಗಂಬಿಯ ಏರುವೋರೆ; ಮೇಲುಬಾಗು.
  4. ಮೆಟ್ಟಿಲೇಣಿ; ಏಣಿಮೆಟ್ಟಿಲು; ವಿಮಾನವನ್ನು ಏರಲು ಯಾ ಇಳಿಯಲು ಮಾಡಿರುವ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯಬಹುದಾದ ಮೆಟ್ಟಿಲು ಸಾಲು.
  5. (ಬ್ರಿಟಿಷ್‍ ಪ್ರಯೋಗ) ರಸ್ತೆ – ತಡೆ, ಡುಬ್ಬ; ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆಗಡ್ಡಲಾಗಿ ಕಟ್ಟಿರುವ ದಿಂಡು.