See also 2only  3only
1only ಓನ್‍ಲಿ
ಕ್ರಿಯಾವಿಶೇಷಣ
  1. ಕೇವಲ; ಮಾತ್ರ; ಅಷ್ಟೇ; ಬರಿದೆ; ಸುಮ್ಮನೆ: only you can guess ನೀನೊಬ್ಬನೇ, ನೀನೊಬ್ಬ ಮಾತ್ರ, ಅದನ್ನು ಊಹಿಸಬಲ್ಲೆ. I only thought I would do it ಅದನ್ನು ಮಾಡಬೇಕೆಂದು ನಾನು ಸುಮ್ಮನೆ, ಬರಿದೆ ಯೋಚಿಸಿದೆ, ಅಷ್ಟೆ. I not only heard it but I saw it ನಾನದನ್ನು ಕೇಳಿದ್ದಷ್ಟೇ ಅಲ್ಲ, ನೋಡಿಯೂ ನೋಡಿದೆ. will only make matters worse ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ, ಅಷ್ಟೆ. needed six runs only ಕೇವಲ ಆರು ರನ್ನುಗಳು ಬೇಕಿತ್ತು. is only a child ಕೇವಲ ಮಗು.
  2. ಆಗತಾನೇ; ಆಗಷ್ಟೇ; ಆಗ ಮಾತ್ರ; ಹಿಂದೆ ಆಗಿರದೆ: saw them only yesterday ಅವರನ್ನು ಕೇವಲ ನಿನ್ನೆ ನೋಡಿದೆ, ನಿನ್ನೆಯಷ್ಟೇ ನೋಡಿದೆ (ಹಿಂದೆ ಅಲ್ಲ).
  3. ಅಲ್ಲಿಯವರೆಗೆ, ಮುಂಚೆ–ಅಲ್ಲದೆ; -ನೇ; -ವೇ: arrives only on Tuesday ಮಂಗಳವಾರವೇ ಬರುವುದು (ಅದಕ್ಕೆ ಮುಂಚೆ ಅಲ್ಲ).
  4. ಕೇವಲ; ಅದಕ್ಕಿಂತ ಹೆಚ್ಚಿನ ಪ್ರಯೋಜನವಿಲ್ಲದೆ: hurried home only to find her gone ಅವಳು ಹೊರಟು ಹೋಗಿದ್ದನ್ನು ಕಂಡುಕೊಳ್ಳಲಷ್ಟೇ ಮನಗೆ ಬೇಗ ಹೋಗಿದ್ದಾಯಿತು.
ಪದಗುಚ್ಛ
  1. if only ಹಾಗೆ, ಅಷ್ಟು–ಮಾತ್ರ, ಆಗಿಬಿಟ್ಟರೆ: if only someone would leave me a legacy ಯಾರಾದರೂ ನನಗೊಂದು ಆಸ್ತಿ ಬಿಟ್ಟು ಹೋಗುವುದಾದರೆ.
  2. only not ಅಷ್ಟು ಯಾ ಹಾಗೆ ಮಾತ್ರ ಆಗಲಿಲ್ಲ; ಅದೊಂದು ಮಾತ್ರ ಆಗಲಿಲ್ಲ; ಅಷ್ಟು ಮಾತ್ರ ಬಿಟ್ಟು: he was about to swoon, only he did not ಅವನು ಇನ್ನೇನು ಮೂರ್ಛೆ ಹೋಗುವುದರಲ್ಲಿದ್ದ, ಆದರೆ ಹೋಗಲಿಲ್ಲ.
  3. only too ಬಹಳ; ಅತಿ; ತೀರ: only too glad (ನಿರೀಕ್ಷಿಸಿದ್ದಕ್ಕೆ ಯಾ ಇಚ್ಛಿಸಿದ್ದಕ್ಕೆ ವ್ಯತಿರಿಕ್ತವಾಗಿ) ಬಹಳ ಸಂತೋಷ. only too true ತೀರ ನಿಜ.
See also 1only  3only
2only ಓನ್‍ಲಿ
ಗುಣವಾಚಕ
  1. ಒಬ್ಬನೇ; ಒಬ್ಬಳೇ; ಒಂದೇ; ಏಕಮಾತ್ರ; ಏಕೈಕ: only way is to die ಸಾಯುವುದೊಂದೇ ದಾರಿ. the only child of his parents ಅವನ ತಂದೆತಾಯಿಗಳ ಒಬ್ಬನೇ ಮಗ, ಏಕಮಾತ್ರ ಪುತ್ರ. my one and only hope ನನ್ನ ಒಂದೇ ಒಂದು ನಿರೀಕ್ಷೆ, ಆಶೆ.
  2. ಅತ್ಯುತ್ತಮ ಯಾ ಗಮನಾರ್ಹವಾದ ಒಂದೇ ಒಂದು: motley is the only wear ವಿದೂಷಕನ ಬಣ್ಣ ಬಣ್ಣದ ಉಡುಪೊಂದೇ ಸರಿಯಾದದ್ದು. gliding is the only sport ಗ್ಲೈಡಿಂಗ್‍ ಒಂದೇ ಅತ್ಯತ್ತಮ ಆಟ.
See also 1only  2only
3only ಓನ್‍ಲಿ
ಸಂಯೋಜಕಾವ್ಯಯ

(ಆಡುಮಾತು)

  1. ಅದೊಂದು ಬಿಟ್ಟರೆ; ಹಾಗೆ ಮಾತ್ರ ಅಲ್ಲದಿದ್ದರೆ; ಅದೊಂದು ಇಲ್ಲದಿದ್ದರೆ: he does well, only that he is nervous at the start ಅವನು ಚೆನ್ನಾಗಿಯೇ ಮಾಡುತ್ತಾನೆ, ಆದರೆ ಪ್ರಾರಂಭದಲ್ಲಿ ಸ್ವಲ್ಪ ಅಳುಕುತ್ತಾನೆ.
  2. ಆದರೆ; ಆದರೆ ಮಾತ್ರ; ಅಂದರೆ ಮಾತ್ರ: he makes good resolutions, only he never keeps them ಅವನು ಒಳ್ಳೆಯ ಸಂಕಲ್ಪಗಳನ್ನೇನೋ ಮಾಡುತ್ತಾನೆ, ಆದರೆ ಮಾತ್ರ ಅವುಗಳನ್ನು ನೆರವೇರಿಸುವುದಿಲ್ಲ.