See also 2only  3only
1only ಓನ್‍ಲಿ
ಕ್ರಿಯಾವಿಶೇಷಣ
  1. ಕೇವಲ; ಮಾತ್ರ; ಅಷ್ಟೇ; ಬರಿದೆ; ಸುಮ್ಮನೆ: only you can guess ನೀನೊಬ್ಬನೇ, ನೀನೊಬ್ಬ ಮಾತ್ರ, ಅದನ್ನು ಊಹಿಸಬಲ್ಲೆ. I only thought I would do it ಅದನ್ನು ಮಾಡಬೇಕೆಂದು ನಾನು ಸುಮ್ಮನೆ, ಬರಿದೆ ಯೋಚಿಸಿದೆ, ಅಷ್ಟೆ. I not only heard it but I saw it ನಾನದನ್ನು ಕೇಳಿದ್ದಷ್ಟೇ ಅಲ್ಲ, ನೋಡಿಯೂ ನೋಡಿದೆ. will only make matters worse ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ, ಅಷ್ಟೆ. needed six runs only ಕೇವಲ ಆರು ರನ್ನುಗಳು ಬೇಕಿತ್ತು. is only a child ಕೇವಲ ಮಗು.
  2. ಆಗತಾನೇ; ಆಗಷ್ಟೇ; ಆಗ ಮಾತ್ರ; ಹಿಂದೆ ಆಗಿರದೆ: saw them only yesterday ಅವರನ್ನು ಕೇವಲ ನಿನ್ನೆ ನೋಡಿದೆ, ನಿನ್ನೆಯಷ್ಟೇ ನೋಡಿದೆ (ಹಿಂದೆ ಅಲ್ಲ).
  3. ಅಲ್ಲಿಯವರೆಗೆ, ಮುಂಚೆ–ಅಲ್ಲದೆ; -ನೇ; -ವೇ: arrives only on Tuesday ಮಂಗಳವಾರವೇ ಬರುವುದು (ಅದಕ್ಕೆ ಮುಂಚೆ ಅಲ್ಲ).
  4. ಕೇವಲ; ಅದಕ್ಕಿಂತ ಹೆಚ್ಚಿನ ಪ್ರಯೋಜನವಿಲ್ಲದೆ: hurried home only to find her gone ಅವಳು ಹೊರಟು ಹೋಗಿದ್ದನ್ನು ಕಂಡುಕೊಳ್ಳಲಷ್ಟೇ ಮನಗೆ ಬೇಗ ಹೋಗಿದ್ದಾಯಿತು.
ಪದಗುಚ್ಛ
  1. if only ಹಾಗೆ, ಅಷ್ಟು–ಮಾತ್ರ, ಆಗಿಬಿಟ್ಟರೆ: if only someone would leave me a legacy ಯಾರಾದರೂ ನನಗೊಂದು ಆಸ್ತಿ ಬಿಟ್ಟು ಹೋಗುವುದಾದರೆ.
  2. only not ಅಷ್ಟು ಯಾ ಹಾಗೆ ಮಾತ್ರ ಆಗಲಿಲ್ಲ; ಅದೊಂದು ಮಾತ್ರ ಆಗಲಿಲ್ಲ; ಅಷ್ಟು ಮಾತ್ರ ಬಿಟ್ಟು: he was about to swoon, only he did not ಅವನು ಇನ್ನೇನು ಮೂರ್ಛೆ ಹೋಗುವುದರಲ್ಲಿದ್ದ, ಆದರೆ ಹೋಗಲಿಲ್ಲ.
  3. only too ಬಹಳ; ಅತಿ; ತೀರ: only too glad (ನಿರೀಕ್ಷಿಸಿದ್ದಕ್ಕೆ ಯಾ ಇಚ್ಛಿಸಿದ್ದಕ್ಕೆ ವ್ಯತಿರಿಕ್ತವಾಗಿ) ಬಹಳ ಸಂತೋಷ. only too true ತೀರ ನಿಜ.