See also 2oil
1oil ಆಇಲ್‍
ನಾಮವಾಚಕ
  1. ಎಣ್ಣೆ; ತೈಲ; ನೀರಿನಲ್ಲಿ ಕರಗದ, ನೀರಿನ ಮೇಲೆ ತೇಲುವ, ಆಲ್ಕಹಾಲ್‍, ಈಥರ್‍, ಬೆನ್ಸೀನ್‍, ಮೊದಲಾದ ಕಾರ್ಬನಿಕ ದ್ರಾವಕಗಳಲ್ಲಿ ಕರಗುವ, ಜಿಡ್ಡು ಸ್ವಭಾವದ, ರಾಸಾಯನಿಕವಾಗಿ ತಟಸ್ಥ ಗುಣದ, ಉರಿಯಬಲ್ಲ ದ್ರವ ಪದಾರ್ಥ ಯಾ ಸುಲಭವಾಗಿ ದ್ರವವಾಗುವ ಘನ ಪದಾರ್ಥ.
  2. (ಅಮೆರಿಕನ್‍ ಪ್ರಯೋಗ) = petroleum.
  3. (ಸಂಯುಕ್ತಪದಗಳಲ್ಲಿ) ಇಂಧನ; ಇಂಧನವಾಗಿ ಬಳಸುವ ಎಣ್ಣೆ: oil-lamp ಎಣ್ಣೆದೀಪ.
  4. (ಸಾಮಾನ್ಯವಾಗಿ ಬಹುವಚನದಲ್ಲಿ)
    1. = oil-paint.
    2. (ಆಡುಮಾತು) ತೈಲ ವರ್ಣಚಿತ್ರ; ತೈಲ ವರ್ಣಚಿತ್ರಗಳನ್ನು ಬಳಸಿ ರಚಿಸಿದ ಚಿತ್ರ: his best oils are exhibited here ಇಲ್ಲಿ ಆತನ ಅತ್ಯುತ್ತಮ ತೈಲ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.
  5. (ಬಹುವಚನದಲ್ಲಿ) = oilskin.
  6. ಬೆಣ್ಣೆಮಾತು; ಮುಖಸ್ತುತಿ ಮಾಡುವ, ಪುಸಲಾಯಿಸುವ ಮಾತು.
  7. (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍)
    1. ಸುದ್ದಿ; ಸಮಾಚಾರ.
    2. ಸಂಗತಿಗಳು; ನಿಜಾಂಶಗಳು.
ಪದಗುಚ್ಛ
  1. burn the midnight oil ರಾತ್ರಿ ಬಹಳ ಹೊತ್ತಿನವರೆಗೂ ಓದು ಯಾ ಕೆಲಸ ಮಾಡು.
  2. drying oil ಆರುವ ಎಣ್ಣೆ; ಒಣಗುವ ಎಣ್ಣೆ; ಗಾಳಿಗೊಡ್ಡಿದಾಗ ಒಣಗುವ ಎಣ್ಣೆ; ವಾಯುವಿನ ಕ್ರಿಯೆಯಿಂದ ಗಟ್ಟಿಯಾಗುವ, ಆದುದರಿಂದ ಒಣಗಿದಂತಾಗುವ, ಕೆಲವು ಬಗೆಯ ಬೀಜಗಳಿಂದ ತೆಗೆದ ಆವಿಯಾಗುವಂಥದಲ್ಲದ ಯಾವುದೇ ಎಣ್ಣೆ, ಉದಾಹರಣೆಗೆ ಅಗಸೆ ಎಣ್ಣೆ.
  3. non-drying oil ಆರದ ಎಣ್ಣೆ; ಘನಿಸದ ಎಣ್ಣೆ; ವಾಯುವಿನ ಕ್ರಿಯೆಯಿಂದ ಗಟ್ಟಿಯಾಗದ ಯಾವುದೇ ಕೊಬ್ಬೆಣ್ಣೆ.
  4. oil and vinegar (or water) ಎಣ್ಣೆ ಸೀಗೆಕಾಯಿ; ಪರಸ್ಪರ ವಿರುದ್ಧವಾದವು.
  5. oil of almonds ಬಾದಾಮಿ ಎಣ್ಣೆ; ಬಾದಾಮಿ ಬೀಜದಿಂದ ತೆಗೆದ ಎಣ್ಣೆ.
  6. oil of vitriol = sulphuric acid.
  7. pour oil on the flame ಉರಿಯುವ ಬೆಂಕಿಗೆ ತುಪ್ಪ ಸುರಿ; ಪರಿಸ್ಥಿತಿಯನ್ನು ಉಣಿಸು.
  8. pour oil on the water ಶಮನ ಮಾಡು; ಸಮಾಧಾನ ಮಾಡು; ಸಾಂತ್ವನಗೊಳಿಸು.
  9. salad oil ಸಲಾಡ್‍ ಎಣ್ಣೆ; ಸಲಾಡ್‍ ತಯಾರಿಸಲು ಬಳಸುವ ಎಳ್ಳೆಣ್ಣೆಯಂಥ ಯಾವುದೇ ಎಣ್ಣೆ.
  10. show smell of oil (ಪ್ರತಿಭೆಗಿಂತ ಹೆಚ್ಚಾಗಿ) ಶ್ರಮದ ಯಾ ದುಡಿಮೆಯ ಚಿಹ್ನೆ ತೋರು.
  11. strap oil ಬೆಲ್ಟಿನಿಂದ ಬಾರಿಸು, ಹೊಡೆ.
  12. strike oil
    1. (ಎಣ್ಣೆಗಾಗಿ ಬಾವಿ ಕೊರೆದಾಗ ಸುದೈವದಿಂದ) ಎಣ್ಣೆ ಪಡೆ.
    2. ಅದೃಷ್ಟಶಾಲಿಯಾಗಿ ಐಶ್ವರ್ಯಗಳಿಸು, ಯಶಸ್ಸು ಪಡೆ.
See also 1oil
2oil ಆಇಲ್‍
ಸಕರ್ಮಕ ಕ್ರಿಯಾಪದ
  1. (ಹೆರೆ ಪದಾರ್ಥವಾಗಿ) ಎಣ್ಣೆ ಹಾಕು.
  2. ಎಣ್ಣೆ ಊಡಿಸು; ಎಣ್ಣೆಯಿಂದ ಸಂಸ್ಕರಿಸು.
  3. (ಹಡಗು ಮೊದಲಾದವುಗಳಿಗೆ) ಇಂಧನವಾಗಿ ಎಣ್ಣೆ–ತುಂಬು, ಒದಗಿಸು.
  4. (ಬೆಣ್ಣೆ, ಗ್ರೀಸು, ಮೊದಲಾದವನ್ನು) ಎಣ್ಣೆಯಾಗಿಸು; ಎಣ್ಣೆ ಮಾಡು; ಎಣ್ಣೆಯಂಥ ದ್ರವವಾಗಿ ಪರಿವರ್ತಿಸು.
ಅಕರ್ಮಕ ಕ್ರಿಯಾಪದ
  1. (ಹಡಗು ಮೊದಲಾದವು) ಎಣ್ಣೆ ತುಂಬಿಕೊ, ಒದಗಿಸಿಕೊ.
  2. (ಬೆಣ್ಣೆ ಮೊದಲಾದವುಗಳ ವಿಷಯದಲ್ಲಿ) ಎಣ್ಣೆಯಾಗು; ಎಣ್ಣೆಯಂಥ ದ್ರವವಾಗಿ ಪರಿವರ್ತನೆಗೊಳ್ಳು, ಪರಿವರ್ತನೆ ಹೊಂದು.
ಪದಗುಚ್ಛ
  1. oil a person’s hand (or palm) ಕೈ ಬೆಚ್ಚಗೆ ಮಾಡು; ಲಂಚ ಕೊಡು.
  2. oil one’s tongue ಬೆಣ್ಣೆ ಮಾತಾಡು; ಮುಖಸ್ತುತಿ ಮಾಡುವ ಮಾತು ಬಳಸು.
  3. oil the wheels
    1. ಚಕ್ರಗಳಿಗೆ (ಹೆರೆ) ಎಣ್ಣೆ ಹಾಕು; ಕೀಲೆಣ್ಣೆಸವರು.
    2. (ಒಳ್ಳೆಯ ಮಾತಿನಿಂದ ಯಾ ಲಂಚ ಕೊಟ್ಟು) ಕೆಲಸ ಕಾರ್ಯಗಳನ್ನು ಸುಗಮಗೊಳಿಸು, ಸುಗಮವಾಗಿ ಆಗುವಂತೆ ಮಾಡು.