1nest
ನೆಸ್ಟ್
ನಾಮವಾಚಕ
- (ಹಕ್ಕಿಗಳ) ಗೂಡು; ನೀಡ.
- (ಪ್ರಾಣಿಯ, ಕೀಟದ)
- ಇಕ್ಕೆ; ಹಕ್ಕೆ; ಮೊಟ್ಟೆ ಹಾಕುವ, ಮರಿ ಮಾಡುವ ಸ್ಥಳ.
- ಆವಾಸ; ನಿವಾಸ; ಆಶ್ರಯಸ್ಥಾನ; ಮಲಗುವ ಸ್ಥಳ.
- ಸುಖಕರವಾದ, ಅನುಕೂಲವಾದ – ಏಕಾಂತಸ್ಥಳ, ವಿವಿಕ್ತ ಸ್ಥಾನ.
- ಕಳ್ಳರ ಕೇಂದ್ರ; ಕೂಟಸ್ಥಾನ; ಕಳ್ಳಕಾಕರು ವಿಶೇಷವಾಗಿ ಸೇರುವ ಸ್ಥಳ.
- ಪಾಪ ಮೊದಲಾದವು ಬೆಳೆಯುವ ಸ್ಥಳ, ಅವುಗಳ ಆವಾಸಸ್ಥಾನ: a nest of vice ಪಾಪಕೂಪ.
- (ಒಂದೇ ಗೂಡು, ನಿವಾಸ, ಮೊದಲಾದವುಗಳಲ್ಲಿರುವ) ಹಿಂಡು; ಗುಂಪು.
- ಮೆಷಿನ್ಗನ್ಗಳ ತಂಡ, ಗುಂಪು.
- (ಒಂದೇ ತರಹದ ವಸ್ತುಗಳ) ಸಂಗ್ರಹ; ತಂಡ; ಸಾಲು; ಪಂಕ್ತಿ.
ಪದಗುಚ್ಛ
- $^2$feather one’s nest.
- it is an ill bird that fouls its own nest ತನ್ನ ಮನೆಗೆ ತಾನೇ ಕಳಂಕ ತರಬಾರದು.
- nest of tables ಮೇಜುತಂಡ; (ಬಳಕೆಗೆ ಬೇಡವಾದಾಗ) ಒಂದರಡಿಯಲ್ಲೊಂದರಂತೆ ಜೋಡಿಸಿದ ಮೇಜುಗಳು.
2nest
ನೆಸ್ಟ್
ಅಕರ್ಮಕ ಕ್ರಿಯಾಪದ
- (ಒಂದು ಗೊತ್ತಾದ ಸ್ಥಳದಲ್ಲಿ) ಗೂಡುಕಟ್ಟು; ಗೂಡನ್ನು ಮಾಡಿಕೊ; ಗೂಡುಕಟ್ಟುವ ಕೆಲಸದಲ್ಲಿ ತೊಡಗು.
- (ಕಾಡು ಹಕ್ಕಿಗಳ) ಗೂಡು ಲೂಟಿ ಮಾಡು; ಗೂಡನ್ನು ಯಾ ಮೊಟ್ಟೆಗಳನ್ನು ಬೇಟೆಯಾಡು.
- (ಪೆಟ್ಟಿಗೆ, ಮೇಜು, ಮೊದಲಾದವನ್ನು) ಒಂದರೊಳಗೊಂದನ್ನಿರಿಸಿ ಅಡಕ ಮಾಡು.