See also 2nest
1nest ನೆಸ್ಟ್‍
ನಾಮವಾಚಕ
  1. (ಹಕ್ಕಿಗಳ) ಗೂಡು; ನೀಡ.
  2. (ಪ್ರಾಣಿಯ, ಕೀಟದ)
    1. ಇಕ್ಕೆ; ಹಕ್ಕೆ; ಮೊಟ್ಟೆ ಹಾಕುವ, ಮರಿ ಮಾಡುವ ಸ್ಥಳ.
    2. ಆವಾಸ; ನಿವಾಸ; ಆಶ್ರಯಸ್ಥಾನ; ಮಲಗುವ ಸ್ಥಳ.
  3. ಸುಖಕರವಾದ, ಅನುಕೂಲವಾದ – ಏಕಾಂತಸ್ಥಳ, ವಿವಿಕ್ತ ಸ್ಥಾನ.
  4. ಕಳ್ಳರ ಕೇಂದ್ರ; ಕೂಟಸ್ಥಾನ; ಕಳ್ಳಕಾಕರು ವಿಶೇಷವಾಗಿ ಸೇರುವ ಸ್ಥಳ.
  5. ಪಾಪ ಮೊದಲಾದವು ಬೆಳೆಯುವ ಸ್ಥಳ, ಅವುಗಳ ಆವಾಸಸ್ಥಾನ: a nest of vice ಪಾಪಕೂಪ.
  6. (ಒಂದೇ ಗೂಡು, ನಿವಾಸ, ಮೊದಲಾದವುಗಳಲ್ಲಿರುವ) ಹಿಂಡು; ಗುಂಪು.
  7. ಮೆಷಿನ್‍ಗನ್‍ಗಳ ತಂಡ, ಗುಂಪು.
  8. (ಒಂದೇ ತರಹದ ವಸ್ತುಗಳ) ಸಂಗ್ರಹ; ತಂಡ; ಸಾಲು; ಪಂಕ್ತಿ.
ಪದಗುಚ್ಛ
  1. $^2$feather one’s nest.
  2. it is an ill bird that fouls its own nest ತನ್ನ ಮನೆಗೆ ತಾನೇ ಕಳಂಕ ತರಬಾರದು.
  3. nest of tables ಮೇಜುತಂಡ; (ಬಳಕೆಗೆ ಬೇಡವಾದಾಗ) ಒಂದರಡಿಯಲ್ಲೊಂದರಂತೆ ಜೋಡಿಸಿದ ಮೇಜುಗಳು.