See also 2name  3name
1name ನೇಮ್‍
ನಾಮವಾಚಕ
  1. ಹೆಸರು; ನಾಮ; ನಾಮಧೇಯ; ಅಭಿಧಾನ: mention person by name ವ್ಯಕ್ತಿಯನ್ನು ಹೆಸರು ಹಿಡಿದು ಹೇಳು.
  2. ಹೆಸರು; ನಾಮಧೇಯ; ಒಬ್ಬ ವ್ಯಕ್ತಿಯ ಯಾ ವ್ಯಕ್ತಿಗಳ ಗುಂಪಿನ ಹೆಸರು, ಮುಖ್ಯವಾಗಿ ಅನೇಕ ವ್ಯಕ್ತಿಗಳಿಗೆ ಅನ್ವಯಿಸುವ ಹೆಸರು.
  3. ಪ್ರಖ್ಯಾತ, ಪ್ರಸಿದ್ಧ – ವ್ಯಕ್ತಿ; ಖ್ಯಾತನಾಮ: Gandhi himself and many great names were there ಸಾಕ್ಷಾತ್‍ ಗಾಂಧಿ ಮಾತ್ರವಲ್ಲದೆ, ಅನೇಕ ಖ್ಯಾತನಾಮರೂ ಅಲ್ಲಿದ್ದರು.
  4. ಒಂದುಗೊತ್ತಾದ ಹೆಸರಿನವರು; ಕುಲ; ಬಣ; ಮನೆತನ: all the clans hostile to the name of Nehru ನೆಹರೂ ಮನೆತನವನ್ನು ದ್ವೇಷಿಸುವ ಎಲ್ಲ ಬಣದವರು.
  5. (ಒಳ್ಳೆಯ ಯಾ ಕೆಟ್ಟ) ಹೆಸರು; ಕೀರ್ತಿ; ಖ್ಯಾತಿ: has an ill name ಅವನಿಗೆ ಕೆಟ್ಟ ಹೆಸರು ಬಂದಿದೆ.
  6. ಕೇವಲ ಹೆಸರಿಗೆ ಮಾತ್ರ ಇರುವಂಥದು; ನಾಮ ಮಾತ್ರದ್ದು; ನಿಜಾಂಶವಲ್ಲದ್ದು; ನಾಮಕಾವಾಸ್ತೆ; ವಾಸ್ತವಾಂಶವಲ್ಲದ್ದು; ಕೇವಲ ಕಾಲ್ಪನಿಕ: honour had become a name ಗೌರವವೆಂಬುದು ಹೆಸರಿಗೆ ಮಾತ್ರ ಉಳಿದಿದ್ದಿತು.
ಪದಗುಚ್ಛ
  1. a good name ಒಳ್ಳೆಯ ಹೆಸರು.
  2. by name (ಎಂಬ) ಹೆಸರಿನ; (ಎಂದು) ಕರೆಯಲಾದ: Rama by name ರಾಮ ಎಂಬ ಹೆಸರಿನ.
  3. by the name of = ಪದಗುಚ್ಛ\((2)\).
  4. call person names ಒಬ್ಬನ ವಿಷಯವಾಗಿ ಅವಮಾನದ ಮಾತುಗಳನ್ನಾಡು; ಒಬ್ಬನನ್ನು ಹೀನಾಮಾನವಾಗಿ ಬಯ್ಯಿ.
  5. give a $^1$dog a bad name and hang him.
  6. has a name for honesty ಪ್ರಾಮಾಣಿಕನೆಂದು ಪ್ರಖ್ಯಾತಿ ಹೊಂದಿದ್ದಾನೆ.
  7. has the name of being honest = ಪದಗುಚ್ಛ\((6)\).
  8. have to one’s name (ಹಣ ಮೊದಲಾದವನ್ನು) ಉಳ್ಳವನಾಗಿರು; ಪಡೆದಿರು: does not have a penny to his name ಅವನ ಹತ್ತಿರ ಒಂದು ಬಿಡಿಕಾಸೂ ಇಲ್ಲ.
  9. in all but name ಹೆಸರೊಂದು ಬಿಟ್ಟು ಉಳಿದೆಲ್ಲ; ವಾಸ್ತವವಾಗಿ; ಕಾರ್ಯತಃ.
  10. in a person’s name(ಒಬ್ಬನ) ಸಾಕ್ಷಿಯಾಗಿ; (ಒಬ್ಬನ) ಹೆಸರಿನಲ್ಲಿ; ದೇವರು ಮೊದಲಾದವರ ಮೇಲೆ ಆಣೆಯಿಟ್ಟು: in the name of goodness ಒಳ್ಳೆಯತನದ ಮೇಲೆ ಆಣೆಯಿಟ್ಟು; ಒಳ್ಳೆಯತನದ ಹೆಸರಿನಲ್ಲಿ.
  11. in God’s name ದೇವರ ಸಾಕ್ಷಿಯಾಗಿ; ದೇವರಾಣೆಗೂ.
  12. in heaven’s name = ಪದಗುಚ್ಛ\((11)\).
  13. in name (or name only) ನಾಮ್‍ಕೆವಾಸ್ತೆ; ಹೆಸರಿಗೆ ಮಾತ್ರ: is the leader in name only ಹೆಸರಿಗೆ ಮಾತ್ರ ನಾಯಕ.
  14. in one’s own name ಸ್ವಂತ ಹೆಸರಿನಲ್ಲಿ; ಅನಧಿಕೃತವಾಗಿ; ಅಧಿಕಾರರಹಿತವಾಗಿ; ಸರಿಯಾದ ಅಧಿಕಾರ ಇಲ್ಲದೆ, ಪಡೆಯದೆ; ಸ್ವತಂತ್ರವಾಗಿ.
  15. in the name of = ಪದಗುಚ್ಛ\((10)\).
  16. keep one’s name on the books ಕಾಲೇಜು, ಸಂಘಸಂಸ್ಥೆ, ಮೊದಲಾದವುಗಳ ಸದಸ್ಯನಾಗಿರು.
  17. know by name
    1. ಹೆಸರು ಮಾತ್ರ ಕೇಳಿರು: I know the man by name ನಾನು ಅವನ ಹೆಸರು ಮಾತ್ರ ಕೇಳಿದ್ದೇನೆ.
    2. ವ್ಯಕ್ತಿಶಃ ತಿಳಿದಿರು; ವೈಯಕ್ತಿಕವಾಗಿ ಪರಿಚಯ ಪಡೆದಿರು: the teacher knows all the pupils by name ಉಪಾಧ್ಯಾಯನಿಗೆ ಎಲ್ಲಾ ವಿದ್ಯಾರ್ಥಿಗಳ ವೈಯಕ್ತಿಕ ಪರಿಚಯವಿದೆ.
  18. make a name for oneself ಒಳ್ಳೆಯ ಹೆಸರು ಮಾಡು: ಖ್ಯಾತಿಗಳಿಸು.
  19. name after (ಒಬ್ಬ ನಿರ್ದಿಷ್ಟ ವ್ಯಕ್ತಿಯ) ಹೆಸರಿಡು: named him after his grandfather ಅವನಿಗೆ ಅವನ ತಾತನ ಹೆಸರಿಟ್ಟರು.
  20. name of the game (ಆಡುಮಾತು) ಕೆಲಸದ – ಮುಖ್ಯ ಉದ್ದೇಶ, ಮುಖ್ಯತತ್ತ , ಮೊದಲಾದವು.
  21. of the name of = ಪದಗುಚ್ಛ\((2)\).
  22. one’s good name (ಒಬ್ಬನ) ಒಳ್ಳೆಯ ಹೆಸರು; ಒಳ್ಳೆಯವನೆಂಬ ಪ್ರಸಿದ್ಧಿ.
  23. put one’s name down for
    1. ಉಮೇದುವಾರನಾಗಿ ಅರ್ಜಿ ಮೊದಲಾದವನ್ನು ಹಾಕಿಕೊ; ಉಮೇದುವಾರನಾಗಿ ಹೆಸರು ನೋಂದಾಯಿಸು.
  24. take person’s (esp. God’s) name in vain
    1. ಒಬ್ಬನ (ಮುಖ್ಯವಾಗಿ ದೇವರ) ಹೆಸರನ್ನು – ಲಘುವಾಗಿ ಬಳಸು ಯಾ ಅಪವಿತ್ರಗೊಳಿಸು, ಕಳಂಕಗೊಳಿಸು.
    2. (ಹಾಸ್ಯ ಪ್ರಯೋಗ) ಒಬ್ಬನ ಹೆಸರನ್ನು ಉಚ್ಚರಿಸು, ಹೇಳು.
  25. use (person’s) name ಒಬ್ಬನ ಹೆಸರನ್ನು ಬಳಸಿಕೊ, ಆಧಾರವಾಗಿ, ಪ್ರಮಾಣವಾಗಿ ಉಲ್ಲೇಖಿಸು.
  26. virtuous in name (only) ಹೆಸರಿಗೆ (ಮಾತ್ರ) ಶೀಲವಂತ; ನಾಮಮಾತ್ರ ಸಂಭಾವಿತ.
  27. what’s its (or his) name (ಯಾವುದೋ ಒಂದರ, ಒಬ್ಬನ ಹೆಸರು ಹೇಳಲು ಹೊರಟು, ಅದು ನೆನಪಾಗದಿರುವಾಗ) ಅದರ (ಅವನ) ಹೆಸರು ಅದೇನೋ ಹೇಳುತ್ತಾರಲ್ಲಪ್ಪಾ!
  28. what is in a name ಹೆಸರಿನಲ್ಲೇನಿದೆ? (ಹೆಸರೆಂಬುದು ಕೇವಲ ಸಾಂಕೇತಿಕ).
  29. win oneself a name = ಪದಗುಚ್ಛ\((18)\).
See also 1name  3name
2name ನೇಮ್‍
ಸಕರ್ಮಕ ಕ್ರಿಯಾಪದ
  1. ಹೆಸರುಕೊಡು; ಹೆಸರಿಡು; ಹೆಸರಿಸು; ಹೆಸರಿಟ್ಟು ಕರೆ; ನಾಮಕರಣ ಮಾಡು: the child was named after its father ಮಗುವಿಗೆ ತಂದೆಯ ಹೆಸರನ್ನಿಡಲಾಯಿತು.
  2. (ವ್ಯಕ್ತಿ ಯಾ ವಸ್ತುವನ್ನು) ನಿಜವಾದ, ಸರಿಯಾದ ಹೆಸರಿನಿಂದ ಕರೆ, ಹೆಸರಿಸು.
  3. ಹೆಸರನ್ನು – ಹೇಳು, ಗುರುತಿಸು: I am sure that I have seen that bonny face, but I cannot name you ಆ ಚೆಲುವಾದ ಮುಖವನ್ನು ನಾನು ಖಂಡಿತವಾಗಿ ನೋಡಿದ್ದೇನೆ, ಆದರೆ ಆ ಹೆಸರನ್ನು ಹೇಳಲಾರೆ.
  4. (ಸ್ಥಾನ, ಹುದ್ದೆ, ಮೊದಲಾದವುಗಳಿಗೆ, ಒಬ್ಬ ವ್ಯಕ್ತಿಯನ್ನು) ನಾಮಕರಣ ಮಾಡು; ಹೆಸರು ಸೂಚಿಸು; ನೇಮಿಸು: Mr. X has been named for the directorship ನಿರ್ದೇಶಕನ ಸ್ಥಾನಕ್ಕೆ Xರವರ ಹೆಸರನ್ನು ಸೂಚಿಸಲಾಗಿದೆ.
  5. ಹೇಳು; ತಿಳಿಸು; ಉಚ್ಚರಿಸು.
  6. ಸ್ಪಷ್ಟವಾಗಿ ಹೇಳು; ನಮಊದಿಸು: name your price ನಿನ್ನ ಬೆಲೆ ಹೇಳು; ನೀನು ಹೇಳುವ ಬೆಲೆ ಎಷ್ಟೆಂಬುದನ್ನು ತಿಳಿಸು.
  7. ದೃಷ್ಟಾಂತವಾಗಿ ಕೊಡು; ಉದಾಹರಣೆಯಾಗಿ ಹೇಳು.
  8. (ಶಾಸನ ಸಭೆಯ ಅಧ್ಯಕ್ಷನ ವಿಷಯದಲ್ಲಿ) ಸದಸ್ಯನನ್ನು ಅವಿಧೇಯನೆಂದು ಹೆಸರಿಸಿ ಹೇಳು.
  9. ಅಪೇಕ್ಷಣೀಯವಾದುದೆಂದು ತಿಳಿಸು, ಸ್ಪಷ್ಟಗೊಳಿಸು.
ಪದಗುಚ್ಛ
  1. name names (ಮುಖ್ಯವಾಗಿ ಆಪಾದನೆ ಮಾಡುವಾಗ ವ್ಯಕ್ತಿ ಮೊದಲಾದವನ್ನು) ಹೆಸರಿನಿಂದ ನಿರ್ದೇಶಿಸು; ಹೆಸರು ಹೇಳಿ (ಇಂಥವನೆಂದು) ಗುರುತಿಸು: ಸ್ಪಷ್ಟಪಡಿಸು.
  2. name the day (ಹೆಂಗಸು) ಮದುವೆ ದಿನವನ್ನು ಗೊತ್ತುಮಾಡಿ ಹೇಳು.
  3. you name it (ಆಡುಮಾತು) ಏನೇ ಆಗಲಿ; ಅದೇನೇ ಇರಲಿ; ನಿನಗೆ ಇಷ್ಟ ಬಂದದ್ದು.
See also 1name  2name
3name ನೇಮ್‍
ಗುಣವಾಚಕ
  1. ಹೆಸರುಳ್ಳ; ಹೆಸರಿನ: name tag ಹೆಸರು(ಳ್ಳ) ಪಟ್ಟಿ.
  2. ಹೆಸರುವಾಸಿಯಾದ; ಒಳ್ಳೆಯ ಹೆಸರಿನ; ಪ್ರಸಿದ್ಧ; ಪ್ರಖ್ಯಾತ: a name brand ಹೆಸರುವಾಸಿಯಾದ (ವ್ಯಾಪಾರಿ) ಗುರುತು. name actor ಪ್ರಸಿದ್ಧ ನಟ.