ಹೆಸರು; ನಾಮ; ನಾಮಧೇಯ; ಅಭಿಧಾನ: mention person by name ವ್ಯಕ್ತಿಯನ್ನು ಹೆಸರು ಹಿಡಿದು ಹೇಳು.
ಹೆಸರು; ನಾಮಧೇಯ; ಒಬ್ಬ ವ್ಯಕ್ತಿಯ ಯಾ ವ್ಯಕ್ತಿಗಳ ಗುಂಪಿನ ಹೆಸರು, ಮುಖ್ಯವಾಗಿ ಅನೇಕ ವ್ಯಕ್ತಿಗಳಿಗೆ ಅನ್ವಯಿಸುವ ಹೆಸರು.
ಪ್ರಖ್ಯಾತ, ಪ್ರಸಿದ್ಧ – ವ್ಯಕ್ತಿ; ಖ್ಯಾತನಾಮ: Gandhi himself and many great names were there ಸಾಕ್ಷಾತ್ ಗಾಂಧಿ ಮಾತ್ರವಲ್ಲದೆ, ಅನೇಕ ಖ್ಯಾತನಾಮರೂ ಅಲ್ಲಿದ್ದರು.
ಒಂದುಗೊತ್ತಾದ ಹೆಸರಿನವರು; ಕುಲ; ಬಣ; ಮನೆತನ: all the clans hostile to the name of Nehru ನೆಹರೂ ಮನೆತನವನ್ನು ದ್ವೇಷಿಸುವ ಎಲ್ಲ ಬಣದವರು.
(ಒಳ್ಳೆಯ ಯಾ ಕೆಟ್ಟ) ಹೆಸರು; ಕೀರ್ತಿ; ಖ್ಯಾತಿ: has an ill name ಅವನಿಗೆ ಕೆಟ್ಟ ಹೆಸರು ಬಂದಿದೆ.
ಕೇವಲ ಹೆಸರಿಗೆ ಮಾತ್ರ ಇರುವಂಥದು; ನಾಮ ಮಾತ್ರದ್ದು; ನಿಜಾಂಶವಲ್ಲದ್ದು; ನಾಮಕಾವಾಸ್ತೆ; ವಾಸ್ತವಾಂಶವಲ್ಲದ್ದು; ಕೇವಲ ಕಾಲ್ಪನಿಕ: honour had become a name ಗೌರವವೆಂಬುದು ಹೆಸರಿಗೆ ಮಾತ್ರ ಉಳಿದಿದ್ದಿತು.
ಪದಗುಚ್ಛ
a good name ಒಳ್ಳೆಯ ಹೆಸರು.
by name (ಎಂಬ) ಹೆಸರಿನ; (ಎಂದು) ಕರೆಯಲಾದ: Rama by name ರಾಮ ಎಂಬ ಹೆಸರಿನ.
have to one’s name (ಹಣ ಮೊದಲಾದವನ್ನು) ಉಳ್ಳವನಾಗಿರು; ಪಡೆದಿರು: does not have a penny to his name ಅವನ ಹತ್ತಿರ ಒಂದು ಬಿಡಿಕಾಸೂ ಇಲ್ಲ.
in all but name ಹೆಸರೊಂದು ಬಿಟ್ಟು ಉಳಿದೆಲ್ಲ; ವಾಸ್ತವವಾಗಿ; ಕಾರ್ಯತಃ.
in a person’s name(ಒಬ್ಬನ) ಸಾಕ್ಷಿಯಾಗಿ; (ಒಬ್ಬನ) ಹೆಸರಿನಲ್ಲಿ; ದೇವರು ಮೊದಲಾದವರ ಮೇಲೆ ಆಣೆಯಿಟ್ಟು: in the name of goodness ಒಳ್ಳೆಯತನದ ಮೇಲೆ ಆಣೆಯಿಟ್ಟು; ಒಳ್ಳೆಯತನದ ಹೆಸರಿನಲ್ಲಿ.