See also 1name  3name
2name ನೇಮ್‍
ಸಕರ್ಮಕ ಕ್ರಿಯಾಪದ
  1. ಹೆಸರುಕೊಡು; ಹೆಸರಿಡು; ಹೆಸರಿಸು; ಹೆಸರಿಟ್ಟು ಕರೆ; ನಾಮಕರಣ ಮಾಡು: the child was named after its father ಮಗುವಿಗೆ ತಂದೆಯ ಹೆಸರನ್ನಿಡಲಾಯಿತು.
  2. (ವ್ಯಕ್ತಿ ಯಾ ವಸ್ತುವನ್ನು) ನಿಜವಾದ, ಸರಿಯಾದ ಹೆಸರಿನಿಂದ ಕರೆ, ಹೆಸರಿಸು.
  3. ಹೆಸರನ್ನು – ಹೇಳು, ಗುರುತಿಸು: I am sure that I have seen that bonny face, but I cannot name you ಆ ಚೆಲುವಾದ ಮುಖವನ್ನು ನಾನು ಖಂಡಿತವಾಗಿ ನೋಡಿದ್ದೇನೆ, ಆದರೆ ಆ ಹೆಸರನ್ನು ಹೇಳಲಾರೆ.
  4. (ಸ್ಥಾನ, ಹುದ್ದೆ, ಮೊದಲಾದವುಗಳಿಗೆ, ಒಬ್ಬ ವ್ಯಕ್ತಿಯನ್ನು) ನಾಮಕರಣ ಮಾಡು; ಹೆಸರು ಸೂಚಿಸು; ನೇಮಿಸು: Mr. X has been named for the directorship ನಿರ್ದೇಶಕನ ಸ್ಥಾನಕ್ಕೆ Xರವರ ಹೆಸರನ್ನು ಸೂಚಿಸಲಾಗಿದೆ.
  5. ಹೇಳು; ತಿಳಿಸು; ಉಚ್ಚರಿಸು.
  6. ಸ್ಪಷ್ಟವಾಗಿ ಹೇಳು; ನಮಊದಿಸು: name your price ನಿನ್ನ ಬೆಲೆ ಹೇಳು; ನೀನು ಹೇಳುವ ಬೆಲೆ ಎಷ್ಟೆಂಬುದನ್ನು ತಿಳಿಸು.
  7. ದೃಷ್ಟಾಂತವಾಗಿ ಕೊಡು; ಉದಾಹರಣೆಯಾಗಿ ಹೇಳು.
  8. (ಶಾಸನ ಸಭೆಯ ಅಧ್ಯಕ್ಷನ ವಿಷಯದಲ್ಲಿ) ಸದಸ್ಯನನ್ನು ಅವಿಧೇಯನೆಂದು ಹೆಸರಿಸಿ ಹೇಳು.
  9. ಅಪೇಕ್ಷಣೀಯವಾದುದೆಂದು ತಿಳಿಸು, ಸ್ಪಷ್ಟಗೊಳಿಸು.
ಪದಗುಚ್ಛ
  1. name names (ಮುಖ್ಯವಾಗಿ ಆಪಾದನೆ ಮಾಡುವಾಗ ವ್ಯಕ್ತಿ ಮೊದಲಾದವನ್ನು) ಹೆಸರಿನಿಂದ ನಿರ್ದೇಶಿಸು; ಹೆಸರು ಹೇಳಿ (ಇಂಥವನೆಂದು) ಗುರುತಿಸು: ಸ್ಪಷ್ಟಪಡಿಸು.
  2. name the day (ಹೆಂಗಸು) ಮದುವೆ ದಿನವನ್ನು ಗೊತ್ತುಮಾಡಿ ಹೇಳು.
  3. you name it (ಆಡುಮಾತು) ಏನೇ ಆಗಲಿ; ಅದೇನೇ ಇರಲಿ; ನಿನಗೆ ಇಷ್ಟ ಬಂದದ್ದು.