See also 2lump  3lump  4lump
1lump ಲಂಪ್‍
ನಾಮವಾಚಕ
  1. (ಗೊತ್ತಾದ ಆಕಾರವಿಲ್ಲದ) ಮುದ್ದೆ; ಗಟ್ಟಿ; ಗಡ್ಡೆ; ಉಂಡೆ; ಪಿಂಡ.
  2. (ಅಶಿಷ್ಟ) ದೊಡ್ಡ ಮೊತ್ತ; ಗುಡ್ಡೆ; ರಾಶಿ; ಒಟ್ಟಿಲು: lump of money ಹಣದ ದೊಡ್ಡ ಮೊತ್ತ.
  3. ದೊಡ್ಡ ಗುಂಪು, ಭಾಗ, ಸಮೂಹ: lump of voters ಮತದಾರರ ದೊಡ್ಡ ಗುಂಪು.
  4. (ಆಕಾರ ಕೊಡಲು ಸಿದ್ಧಗೊಳಿಸಿರುವ ಕಲಸಿದ ಮಣ್ಣಿನ ಯಾ ನಾದಿದ ಹಿಟ್ಟಿನ) ಮುದ್ದೆ.
  5. (ಮುಖ್ಯವಾಗಿ ರೋಗದಿಂದ, ಏಟಿನಿಂದ ಆದ) ಗಂಟು; ಗಂತಿ; ಊತ; ಬೋರೆ; ಮೂಗುಗಾಯ.
  6. ದೊಣ್ಣೆ ಭಾಗವತ; ಒರಟ; ದಡ್ಡ; ಒಡ್ಡ.
  7. (ಬ್ರಿಟಿಷ್‍ ಪ್ರಯೋಗ) (the lump) (ಕಟ್ಟಡ ಕಟ್ಟುವುದು ಮೊದಲಾದ ವೃತ್ತಿಗಳಲ್ಲಿನ) ದಿನಗೂಲಿ ಕೆಲಸಗಾರರು.
ಪದಗುಚ್ಛ
  1. in the lump ಒಟ್ಟಾರೆ; ಒಟ್ಟಿನಲ್ಲಿ; ಸಗಟಿನಲ್ಲಿ; ರಾಶಿಯಲ್ಲಿ; ಒಟ್ಟಿನ ಮೇಲೆ: in the lump they were an interesting people ಒಟ್ಟಿನಲ್ಲಿ ಅವರು ಸ್ವಾರಸ್ಯದ ಜನ.
  2. lump in throat (ಭಾವಾವೇಶದಿಂದ) ಕೊರಳ ಬಿಗಿತ; ಗಂಟಲು ಬಿಗಿಯುವಿಕೆ.
  3. lump sugar ಸಕ್ಕರೆ ತುಂಡು; ಚೂರುಗಳಾಗಿ ಯಾ ಘನಾಕೃತಿಗಳಾಗಿ ಕತ್ತರಿಸಿದ ಗಟ್ಟಿ ಸಕ್ಕರೆ.
  4. lump sum
    1. (ಹಲವು ಬಾಬುಗಳನ್ನೊಳಗೊಂಡ) ಒಟ್ಟು ಮೊತ್ತ; ಒಟ್ಟು ರಾಶಿ.
    2. ಒಂದೇ ಗಂಟಿನಲ್ಲಿ ಕೊಟ್ಟ ಹಣ.
ನುಡಿಗಟ್ಟು
  1. get one’s lumps = ನುಡಿಗಟ್ಟು \((2)\).
  2. take one’s lumps ಪಾಲಿಗೆ ಬಂದದ್ದನ್ನು ತೆಗೆದುಕೊ; ನ್ಯಾಯವಾಗಿಯೋ ಅನ್ಯಾಯವಾಗಿಯೋ ತನಗೆ ಬಂದ ನಷ್ಟ, ಶಿಕ್ಷೆ, ಮೊದಲಾದವನ್ನು ಸ್ವೀಕರಿಸು, ಸಹಿಸು, ಅನುಭವಿಸು.
See also 1lump  3lump  4lump
2lump ಲಂಪ್‍
ಸಕರ್ಮಕ ಕ್ರಿಯಾಪದ
  1. ಮುದ್ದೆಕಟ್ಟು; ಮುದ್ದೆ ಮಾಡು.
  2. ಒಟ್ಟಿಗೆ ಸೇರಿಸು; ಒಟ್ಟುಗೂಡಿಸು; ಎಲ್ಲವನ್ನೂ ಒಂದೇ ಎನ್ನುವಂತೆ ಸೇರಿಸಿಬಿಡು; ಪರಸ್ಪರ ವ್ಯತ್ಯಾಸ, ತಾರತಮ್ಯ ಗಣಿಸದೆ ಸೇರಿಸಿ ಬಿಡು.
  3. (ಯಾವುದಾದರೂ ಸಂದರ್ಭ, ಜೂಜುಕುದುರೆ, ಮೊದಲಾದವುಗಳ ಮೇಲೆ) ಹಣವೆಲ್ಲವನ್ನೂ ಪಣವಾಗಿ ಒಡ್ಡು.
  4. ಅಲಕ್ಷ್ಯದಿಂದ ಎತ್ತಿಕೊಂಡು ಹೋಗು ಯಾ ಎಸೆ: lumping crates round the yard ಅಂಗಳದಲ್ಲೆಲ್ಲಾ ಪೆಟ್ಟಿಗಳನ್ನು ಬಿಸಾಕುತ್ತಾ.
ಅಕರ್ಮಕ ಕ್ರಿಯಾಪದ
  1. ಮುದ್ದೆಗಟ್ಟು; ಮುದ್ದೆಮುದ್ದೆಯಾಗು; ಗಂಟುಗಂಟುಗಳಾಗಿ ಎದ್ದುಕೊ: it is starting to lump ಅದು ಮುದ್ದೆಗಟ್ಟುತ್ತಿದೆ. ಮುದ್ದೆಯಾಗುತ್ತಿದೆ.
  2. ಒಡ್ಡೊಡ್ಡಾಗಿ ಯಾ ಕಷ್ಟದಿಂದ ಕಾಲೆತ್ತಿ ಹಾಕುತ್ತಾ – ನಡೆ, ಚಲಿಸು.
  3. (ತೊಪ್ಪನೆ, ಭಾರವಾಗಿ) ಕುಕ್ಕರಿಸು.
See also 1lump  2lump  4lump
3lump ಲಂಪ್‍
ನಾಮವಾಚಕ

ಲಂಪ್‍(ಮೀನು); ಅರೆಪಾರದರ್ಶಕವಾದ, ನಸು ಹಸುರು ಬಣ್ಣದ, ವಸ್ತುಗಳಿಗೆ ಭದ್ರವಾಗಿ ಕಚ್ಚಿಕೊಳ್ಳುವ, ವಿಕಾರವಾದ ಒಂದು ಕಡಲ ಮೀನು.

See also 1lump  2lump  3lump
4lump ಲಂಪ್‍
ಸಕರ್ಮಕ ಕ್ರಿಯಾಪದ

(ಆಡುಮಾತು) (ಒಂದರ ವಿಷಯದಲ್ಲಿ) ಅಸಮಾಧಾನ ಪಡು; ಅಸಮಾಧಾನವಾದರೂ ಸಹಿಸಿಕೊ.

ಪದಗುಚ್ಛ

like it or lump it ಇಷ್ಟಪಡು ಯಾ ಬಿಡು, ಸಹಿಸಿಕೊ: if you don’t like it you may lump it ನಿನಗೆ ಅದು ಇಷ್ಟವಾಗದಿದ್ದಲ್ಲಿ, ನುಂಗಿಕೋ; ನೀನು ಇಷ್ಟಪಡುತ್ತೀಯೋ ಇಲ್ಲವೋ ಎನ್ನುವುದು ನನಗೆ ಬೇಕಾಗಿಲ್ಲ, ನಾನದನ್ನು ಲೆಕ್ಕಿಸುವುಕಿಲ್ಲ, ನೀನದನ್ನು ಸಹಿಸಿಕೊಳ್ಳಬೇಕು.