See also 1lump  3lump  4lump
2lump ಲಂಪ್‍
ಸಕರ್ಮಕ ಕ್ರಿಯಾಪದ
  1. ಮುದ್ದೆಕಟ್ಟು; ಮುದ್ದೆ ಮಾಡು.
  2. ಒಟ್ಟಿಗೆ ಸೇರಿಸು; ಒಟ್ಟುಗೂಡಿಸು; ಎಲ್ಲವನ್ನೂ ಒಂದೇ ಎನ್ನುವಂತೆ ಸೇರಿಸಿಬಿಡು; ಪರಸ್ಪರ ವ್ಯತ್ಯಾಸ, ತಾರತಮ್ಯ ಗಣಿಸದೆ ಸೇರಿಸಿ ಬಿಡು.
  3. (ಯಾವುದಾದರೂ ಸಂದರ್ಭ, ಜೂಜುಕುದುರೆ, ಮೊದಲಾದವುಗಳ ಮೇಲೆ) ಹಣವೆಲ್ಲವನ್ನೂ ಪಣವಾಗಿ ಒಡ್ಡು.
  4. ಅಲಕ್ಷ್ಯದಿಂದ ಎತ್ತಿಕೊಂಡು ಹೋಗು ಯಾ ಎಸೆ: lumping crates round the yard ಅಂಗಳದಲ್ಲೆಲ್ಲಾ ಪೆಟ್ಟಿಗಳನ್ನು ಬಿಸಾಕುತ್ತಾ.
ಅಕರ್ಮಕ ಕ್ರಿಯಾಪದ
  1. ಮುದ್ದೆಗಟ್ಟು; ಮುದ್ದೆಮುದ್ದೆಯಾಗು; ಗಂಟುಗಂಟುಗಳಾಗಿ ಎದ್ದುಕೊ: it is starting to lump ಅದು ಮುದ್ದೆಗಟ್ಟುತ್ತಿದೆ. ಮುದ್ದೆಯಾಗುತ್ತಿದೆ.
  2. ಒಡ್ಡೊಡ್ಡಾಗಿ ಯಾ ಕಷ್ಟದಿಂದ ಕಾಲೆತ್ತಿ ಹಾಕುತ್ತಾ – ನಡೆ, ಚಲಿಸು.
  3. (ತೊಪ್ಪನೆ, ಭಾರವಾಗಿ) ಕುಕ್ಕರಿಸು.