See also 2lump  3lump  4lump
1lump ಲಂಪ್‍
ನಾಮವಾಚಕ
  1. (ಗೊತ್ತಾದ ಆಕಾರವಿಲ್ಲದ) ಮುದ್ದೆ; ಗಟ್ಟಿ; ಗಡ್ಡೆ; ಉಂಡೆ; ಪಿಂಡ.
  2. (ಅಶಿಷ್ಟ) ದೊಡ್ಡ ಮೊತ್ತ; ಗುಡ್ಡೆ; ರಾಶಿ; ಒಟ್ಟಿಲು: lump of money ಹಣದ ದೊಡ್ಡ ಮೊತ್ತ.
  3. ದೊಡ್ಡ ಗುಂಪು, ಭಾಗ, ಸಮೂಹ: lump of voters ಮತದಾರರ ದೊಡ್ಡ ಗುಂಪು.
  4. (ಆಕಾರ ಕೊಡಲು ಸಿದ್ಧಗೊಳಿಸಿರುವ ಕಲಸಿದ ಮಣ್ಣಿನ ಯಾ ನಾದಿದ ಹಿಟ್ಟಿನ) ಮುದ್ದೆ.
  5. (ಮುಖ್ಯವಾಗಿ ರೋಗದಿಂದ, ಏಟಿನಿಂದ ಆದ) ಗಂಟು; ಗಂತಿ; ಊತ; ಬೋರೆ; ಮೂಗುಗಾಯ.
  6. ದೊಣ್ಣೆ ಭಾಗವತ; ಒರಟ; ದಡ್ಡ; ಒಡ್ಡ.
  7. (ಬ್ರಿಟಿಷ್‍ ಪ್ರಯೋಗ) (the lump) (ಕಟ್ಟಡ ಕಟ್ಟುವುದು ಮೊದಲಾದ ವೃತ್ತಿಗಳಲ್ಲಿನ) ದಿನಗೂಲಿ ಕೆಲಸಗಾರರು.
ಪದಗುಚ್ಛ
  1. in the lump ಒಟ್ಟಾರೆ; ಒಟ್ಟಿನಲ್ಲಿ; ಸಗಟಿನಲ್ಲಿ; ರಾಶಿಯಲ್ಲಿ; ಒಟ್ಟಿನ ಮೇಲೆ: in the lump they were an interesting people ಒಟ್ಟಿನಲ್ಲಿ ಅವರು ಸ್ವಾರಸ್ಯದ ಜನ.
  2. lump in throat (ಭಾವಾವೇಶದಿಂದ) ಕೊರಳ ಬಿಗಿತ; ಗಂಟಲು ಬಿಗಿಯುವಿಕೆ.
  3. lump sugar ಸಕ್ಕರೆ ತುಂಡು; ಚೂರುಗಳಾಗಿ ಯಾ ಘನಾಕೃತಿಗಳಾಗಿ ಕತ್ತರಿಸಿದ ಗಟ್ಟಿ ಸಕ್ಕರೆ.
  4. lump sum
    1. (ಹಲವು ಬಾಬುಗಳನ್ನೊಳಗೊಂಡ) ಒಟ್ಟು ಮೊತ್ತ; ಒಟ್ಟು ರಾಶಿ.
    2. ಒಂದೇ ಗಂಟಿನಲ್ಲಿ ಕೊಟ್ಟ ಹಣ.
ನುಡಿಗಟ್ಟು
  1. get one’s lumps = ನುಡಿಗಟ್ಟು \((2)\).
  2. take one’s lumps ಪಾಲಿಗೆ ಬಂದದ್ದನ್ನು ತೆಗೆದುಕೊ; ನ್ಯಾಯವಾಗಿಯೋ ಅನ್ಯಾಯವಾಗಿಯೋ ತನಗೆ ಬಂದ ನಷ್ಟ, ಶಿಕ್ಷೆ, ಮೊದಲಾದವನ್ನು ಸ್ವೀಕರಿಸು, ಸಹಿಸು, ಅನುಭವಿಸು.