See also 2lock  3lock
1lock ಲಾಕ್‍
ನಾಮವಾಚಕ
  1. (ಬಾಗಿಲು, ಮುಚ್ಚಳ, ಮೊದಲಾದವನ್ನು ಭದ್ರವಾಗಿ ಮುಚ್ಚುವ, ಬೀಗದ ಕೈ ಯಾ ನಿರ್ದಿಷ್ಟ ಚಲನೆಗಳ ಸಂಯೋಜನೆಯಿಂದ ತೆಗೆಯಬಹುದಾದ) ಬೀಗ; ಕೀಲಿ; ಲಾಕು.
  2. (ನೀರು) ಮಟ್ಟಕಟ್ಟೆ; ಜಲಬಂಧ; ನೀರು ಏರಿಳಿಕೆ ಕಟ್ಟೆ; ಕಾಲುವೆಯ ಆ ನದಿಯ ಮೂಲಕ ದೋಣಿಯನ್ನು ಯಾ ಹಡಗನ್ನು ಒಯ್ಯುವಾಗ ವಿವಿಧ ಹಂತಗಳಲ್ಲಿ ನೀರಿನ ಮಟ್ಟವನ್ನು ಏರಿಳಿಸುವಂತೆ ಅಲ್ಲಲ್ಲಿ ತೂಬು ಬಾಗಿಲುಗಳನ್ನಿಟ್ಟಿರುವ ಕಟ್ಟೆ, ವಿಭಾಗ.
  3. ಮುಂಚಕ್ರ ತಿರುಗಣೆ; ಚಲನೆಯ ದಿಕ್ಕನ್ನು ಬದಲಾಯಿಸಲು ವಾಹನದ ಮುಂಚಕ್ರಗಳನ್ನು ತಿರುಗಿಸುವುದು.
  4. ತಿರುಗೋರೆ; ತಿರುಗುವಾಸಿ; ವಾಹನದ ಮುಂದಿನ ಚಕ್ರಗಳು ತಿರುಗುವಾಗ ಹಿಂದಿನ ಚಕ್ರಗಳ ಸಮತಲದಿಂದ ಎಷ್ಟು ಓರೆಯಾಗಬಹುದೋ ಆ ಪ್ರಮಾಣ.
  5. ತೆಕ್ಕೆತೊಡರು; ಅಂತರ ತೆಕ್ಕೆ; ಪರಸ್ಪರ ಬಂಧ; ಚಲನೆ ಸಾಧ್ಯವಿಲ್ಲದಂತೆ ಒಂದರೊಡನೆ ಇನ್ನೊಂದು ತೊಡರಿಕೊಂಡಿರುವುದು ಯಾ ಒಂದಕ್ಕೊಂದು ತಡೆಯಾಗಿರುವುದು (ಉದಾಹರಣೆಗೆ ರಸ್ತೆಯಲ್ಲಿ ವಾಹನಗಳ ಸಾಲುಗಳ ಕಿಕ್ಕಿರಿತ).
  6. (ಕುಸ್ತಿಯಲ್ಲಿ) ಬೀಗದ ಪಟ್ಟು; ಎದುರಾಳಿಯ ಅಂಗವನ್ನು ಚಲಿಸಿದಂತೆ ಹಿಡಿದಿಡುವ ಹಿಡಿತ.
  7. (ರಗ್ಬಿ ಕಾಲ್ಚೆಂಡಾಟ) ನೂಕಾಟದ ಎರಡನೆಯ ಸಾಲಿನಲ್ಲಿರುವ ಆಟಗಾರ.
  8. ಚಕ್ರಬೀಗ; ಚಕ್ರದ ಯಾ ಗಾಲಿಯ ತಡೆ; ಚಕ್ರವನ್ನು ಸುತ್ತದಂತೆ ನಿಲ್ಲಿಸುವ ಬಿರಿ ಯಾ ಸಲಕರಣೆ.
  9. (ಬಂದೂಕಿನ) ಚಾಪು; ಕುದುರೆ; ಮದ್ದುಗುಂಡನ್ನು ಸಿಡಿಸುವ ಕೀಲು.
  10. = airlock(2).
  11. ಬಂಧಕ – ಸಂಪುಟ, ಕೋಷ್ಠ; ಯಾವುದೇ ಯಂತ್ರ ವ್ಯವಸ್ಥೆಯಲ್ಲಿ ಇರಬಹುದಾದ ಅಧಿಕ ಒತ್ತಡದ ಯಾ ನಿರ್ವಾತ ಪ್ರದೇಶಕ್ಕೆ ಪ್ರವೇಶಿಸುವ ಯಾ ಅಲ್ಲಿಂದ ಹೊರ ಬರುವ ಮಾರ್ಗದಲ್ಲಿ ಉಪಕೋಷ್ಠವಾಗಿ ಅಳವಡಿಸಿರುವ ವಾಯುಸಂಪುಟ.
  12. (ಬ್ರಿಟಿಷ್‍ ಪ್ರಯೋಗ) ಗುಹ್ಯರೋಗದ ಆಸ್ಪತ್ರೆ; ಮೇಹರೋಗ ಚಿಕಿತ್ಸಾಲಯ.
ಪದಗುಚ್ಛ
  1. full lock = 1lock(4).
  2. under lock and key ಸುಭದ್ರವಾಗಿ ಬೀಗಹಾಕಿ ಇಟ್ಟಿರುವ.
ನುಡಿಗಟ್ಟು

lock, stock, and barrel (ಒಂದು ವಸ್ತುವಿನ) ಇಡೀ; ಪೂರ್ತಿ; ಸಂಪೂರ್ಣ.

See also 1lock  3lock
2lock ಲಾಕ್‍
ಸಕರ್ಮಕ ಕ್ರಿಯಾಪದ
    1. (ಬಾಗಿಲು, ಪೆಟ್ಟಿಗೆ, ಮೊದಲಾದವಕ್ಕೆ) ಬೀಗ ಹಾಕು.
    2. (ಮುಖ್ಯವಾಗಿ ಮನೆ ಮೊದಲಾದವಕ್ಕೆ) ಬೀಗ ಹಾಕಿ ಮುಚ್ಚು, ಭದ್ರಪಡಿಸು.
  1. (ವ್ಯಕ್ತಿಯನ್ನು ಯಾ ವಸ್ತುವನ್ನು ಬೀಗ ಹಾಕಿ ಯಾ ಬೀಗ ಹಾಕುವುದರಿಂದಲೋ ಎಂಬಂತೆ) ಒಳಗೆ ಕೂಡು; ಕೂಡಿಹಾಕು.
  2. (ಸುಲಭವಾಗಿ ಬಳಸಲಾರದಂತೆ) ಹಾಕಿಡು; ಭದ್ರಮಾಡು: capital locked up in land ಜಮೀನಿನಲ್ಲಿ ಹೂಡಿಟ್ಟಿರುವ ಬಂಡಬಾಳ.
  3. (ರೂಪಕವಾಗಿ) (ಕೈಗೆ ಸಿಕ್ಕದಂತೆ) ಅಡಗಿಸಿಡು; ಮುಚ್ಚಿಡು; ಬಚ್ಚಿಡು; ರಹಸ್ಯಗೊಳಿಸು: facts locked up in hieroglyphics ಚಿತ್ರಲಿಪಿಯಲ್ಲಿ ಅಡಗಿಸಿರುವ ಸಂಗತಿಗಳು.
  4. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ನೆಲ, ಬೆಟ್ಟಗುಡ್ಡಗಳು, ಮೊದಲಾದವುಗಳ ವಿಷಯದಲ್ಲಿ) ಸುತ್ತುಗಟ್ಟು; ಆವೃತವಾಗು; ಆವರಿಸು: locked by land ನೆಲದಿಂದ ಸುತ್ತುಗಟ್ಟಲ್ಪಟ್ಟ, ಸುತ್ತುವರಿದ; ಭೂಮ್ಯಾವೃತವಾದ.
  5. (ಅತ್ತಿತ್ತ ಅಲುಗಾಡದಂತೆ) ಸಿಕ್ಕಿಸು; ಬದ್ಧಗೊಳಿಸು; ಮುಖ್ಯವಾಗಿ ಯಂತ್ರದ ಸೇರಿಕೆ ಭಾಗಗಳನ್ನು (ಒಂದರೊಳಗೊಂದನ್ನು ಸೇರಿಸಿ) ಬಿಗಿ ಮಾಡು.
  6. (ಬಾಹುವಿನಲ್ಲಿ, ಆಲಿಂಗನದಲ್ಲಿ ಯಾ ಹೋರಾಟದಲ್ಲಿ) ಬಂಧಿಸು; ತೆಕ್ಕೆ ಹಾಕು; ತಬ್ಬಿ ಹಿಡಿ: locked in embrace ತಬ್ಬಿ ಹಿಡಿದ; ತೆಕ್ಕೆಯಲ್ಲಿ ಸಿಕ್ಕಿದ; ಬಾಹುವಿನಲ್ಲಿ, ಆಲಿಂಗನದಲ್ಲಿ – ಬಂಧಿಸಿದ.
  7. (ಕಾಲುವೆ ಮೊದಲಾದವಕ್ಕೆ) ಜಲಬಂಧಗಳನ್ನು ಯಾ ಮಟ್ಟಕಟ್ಟೆಗಳನ್ನು ಒದಗಿಸು; ಕಾಲುವೆಯಲ್ಲಿ ಜಲಬಂಧಗಳನ್ನು ರಚಿಸು, ಕಟ್ಟು.
  8. (ಹಡಗು ಯಾ ದೋಣಿಯನ್ನು) ಜಲಬಂಧದ ಮೂಲಕ ಏರಿಸಿ ಯಾ ಇಳಿಸಿ ಸಾಗಿಸು.
  9. (ರೂಪಕವಾಗಿ) ಸೆರೆಹಾಕು; ಬಂಧಿಸಿಡು: senses locked in sleep ನಿದ್ರಾಮುದ್ರಿತವಾದ ಇಂದ್ರಿಯಗಳು.
  10. (ಮುಖ್ಯವಾಗಿ ಕಾರ್ಮಿಕರನ್ನು ಕೆಲಸಕ್ಕೆ ಬರಗೊಡದೆ ಬಲವಂತವಾಗಿ ಹೊರಗಿಡುವ ಮಾಲಿಕನ ವಿಷಯದಲ್ಲಿ) ಬೀಗಮುದ್ರೆ ಹಾಕು; ಬಾಗಿಲಿಗೆ ಬೀಗ ಹಾಕಿ ವ್ಯಕ್ತಿಯನ್ನು ಹೊರಗಿರಿಸು.
ಅಕರ್ಮಕ ಕ್ರಿಯಾಪದ
  1. (ಬಾಗಿಲು, ಕಿಟಕಿ, ಪೆಟ್ಟಿಗೆ, ಮೊದಲಾದವುಗಳ ವಿಷಯದಲ್ಲಿ) ಬೀಗ ಹಾಕುವಂತಿರು; ಬೀಗವುಳ್ಳದ್ದಾಗಿರು; ಬೀಗ ಹೊಂದಿರು.
  2. (ಅತ್ತಿತ್ತ ಅಲುಗಾಡದಂತೆ) ಸಿಕ್ಕಿಕೊ; ಬದ್ಧವಾಗು.
  3. (ಮುಖ್ಯವಾಗಿ) (ಯಂತ್ರದ ಸೇರುವೆಗಳ ವಿಷಯದಲ್ಲಿ) ಒಂದರೊಳಗೊಂದು ಸೇರಿ – ಬಿಗಿಯಾಗು, ಬಿಗಿದುಕೊ.
  4. (ಹಡಗು ಯಾ ದೋಣಿಯ ವಿಷಯದಲ್ಲಿ) ಜಲಬಂಧದ ಯಾ ಮಟ್ಟಕಟ್ಟೆಯ ಮೂಲಕ ಸಾಗು.
  5. (ಸೈನ್ಯ) ಕಾಲಿಗೆ ಸಿಕ್ಕು; (ಹಿಂದಿನ ಸಾಲಿನ ವಿಷಯದಲ್ಲಿ) ಮುಂದಿನ ಸಾಲಿನ ಹೆಜ್ಜೆಗೆ ತಗುಲುವಷ್ಟು ಹತ್ತಿರ ಹೆಜ್ಜೆ ಇಡು.
  6. (ವಾಹನದ ವಿಷಯದಲ್ಲಿ) ತಿರುಗುವಾಸಿ ಚಕ್ರ ಹೊಂದಿರು; ಹಿಂದಿನ ಚಕ್ರಗಳಿಂದ ಸ್ವತಂತ್ರವಾಗಿ, ಸಮತಲದಿಂದ ಆಚೆ ಮತ್ತು ಈಚೆ ತಿರುಗಬಲ್ಲ ಮುಂದಿನ ಚಕ್ರಗಳನ್ನು ಪಡೆದಿರು.
  7. (ವಾಹನದ ಮುಂದಿನ ಚಕ್ರಗಳ ವಿಷಯದಲ್ಲಿ) ಹಿಂದಿನ ಚಕ್ರಗಳ ಸಮತಲದಿಂದ ಆಚೆ ಈಚೆ ತಿರುಗುವ ಸ್ವಾತಂತ್ರ್ಯ ಪಡೆದಿರು.
ಪದಗುಚ್ಛ
  1. lock on to ರಾಡಾರ್‍ ಮೊದಲಾದವುಗಳ ಮೂಲಕ ಪತ್ತೆ ಹಚ್ಚಿ ಯಾ ಪತ್ತೆ ಹಚ್ಚಿಸಿ, ಆನಂತರ ಜಾಡುಹಿಡಿದು – ಹೋಗು, ಹಿಂಬಾಲಿಸು.
  2. lock out
    1. = 2lock (ಸಕರ್ಮಕ ಕ್ರಿಯಾಪದ \(11\)).
    2. (ವ್ಯಕ್ತಿಯನ್ನು) ಬಾಗಿಲಿಗೆ ಬೀಗ ಹಾಕಿ ಹೊರಗಿಡು.
  3. lock step = 2lock (ಅಕರ್ಮಕ ಕ್ರಿಯಾಪದ \(5\)).
See also 1lock  2lock
3lock ಲಾಕ್‍
ನಾಮವಾಚಕ
  1. ಕುರುಳು; ಗುಂಗುರು ಗುಂಗುರಾಗಿ ಯಾ ಒಟ್ಟಿಗೆ ಇಳಿಬೀಳುವ ಕೂದಲಿನ ಭಾಗ.
  2. (ಬಹುವಚನದಲ್ಲಿ) ತಲೆಗೂದಲು.
  3. ಉಣ್ಣೆಯ ಯಾ ಹತ್ತಿಯ ತೆಂಡೆ ಯಾ ಕುಚ್ಚು.