2lock
ಲಾಕ್
ಸಕರ್ಮಕ ಕ್ರಿಯಾಪದ
-
- (ಬಾಗಿಲು, ಪೆಟ್ಟಿಗೆ, ಮೊದಲಾದವಕ್ಕೆ) ಬೀಗ ಹಾಕು.
- (ಮುಖ್ಯವಾಗಿ ಮನೆ ಮೊದಲಾದವಕ್ಕೆ) ಬೀಗ ಹಾಕಿ ಮುಚ್ಚು, ಭದ್ರಪಡಿಸು.
- (ವ್ಯಕ್ತಿಯನ್ನು ಯಾ ವಸ್ತುವನ್ನು ಬೀಗ ಹಾಕಿ ಯಾ ಬೀಗ ಹಾಕುವುದರಿಂದಲೋ ಎಂಬಂತೆ) ಒಳಗೆ ಕೂಡು; ಕೂಡಿಹಾಕು.
- (ಸುಲಭವಾಗಿ ಬಳಸಲಾರದಂತೆ) ಹಾಕಿಡು; ಭದ್ರಮಾಡು: capital locked up in land ಜಮೀನಿನಲ್ಲಿ ಹೂಡಿಟ್ಟಿರುವ ಬಂಡಬಾಳ.
- (ರೂಪಕವಾಗಿ) (ಕೈಗೆ ಸಿಕ್ಕದಂತೆ) ಅಡಗಿಸಿಡು; ಮುಚ್ಚಿಡು; ಬಚ್ಚಿಡು; ರಹಸ್ಯಗೊಳಿಸು: facts locked up in hieroglyphics ಚಿತ್ರಲಿಪಿಯಲ್ಲಿ ಅಡಗಿಸಿರುವ ಸಂಗತಿಗಳು.
- (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) (ನೆಲ, ಬೆಟ್ಟಗುಡ್ಡಗಳು, ಮೊದಲಾದವುಗಳ ವಿಷಯದಲ್ಲಿ) ಸುತ್ತುಗಟ್ಟು; ಆವೃತವಾಗು; ಆವರಿಸು: locked by land ನೆಲದಿಂದ ಸುತ್ತುಗಟ್ಟಲ್ಪಟ್ಟ, ಸುತ್ತುವರಿದ; ಭೂಮ್ಯಾವೃತವಾದ.
- (ಅತ್ತಿತ್ತ ಅಲುಗಾಡದಂತೆ) ಸಿಕ್ಕಿಸು; ಬದ್ಧಗೊಳಿಸು; ಮುಖ್ಯವಾಗಿ ಯಂತ್ರದ ಸೇರಿಕೆ ಭಾಗಗಳನ್ನು (ಒಂದರೊಳಗೊಂದನ್ನು ಸೇರಿಸಿ) ಬಿಗಿ ಮಾಡು.
- (ಬಾಹುವಿನಲ್ಲಿ, ಆಲಿಂಗನದಲ್ಲಿ ಯಾ ಹೋರಾಟದಲ್ಲಿ) ಬಂಧಿಸು; ತೆಕ್ಕೆ ಹಾಕು; ತಬ್ಬಿ ಹಿಡಿ: locked in embrace ತಬ್ಬಿ ಹಿಡಿದ; ತೆಕ್ಕೆಯಲ್ಲಿ ಸಿಕ್ಕಿದ; ಬಾಹುವಿನಲ್ಲಿ, ಆಲಿಂಗನದಲ್ಲಿ – ಬಂಧಿಸಿದ.
- (ಕಾಲುವೆ ಮೊದಲಾದವಕ್ಕೆ) ಜಲಬಂಧಗಳನ್ನು ಯಾ ಮಟ್ಟಕಟ್ಟೆಗಳನ್ನು ಒದಗಿಸು; ಕಾಲುವೆಯಲ್ಲಿ ಜಲಬಂಧಗಳನ್ನು ರಚಿಸು, ಕಟ್ಟು.
- (ಹಡಗು ಯಾ ದೋಣಿಯನ್ನು) ಜಲಬಂಧದ ಮೂಲಕ ಏರಿಸಿ ಯಾ ಇಳಿಸಿ ಸಾಗಿಸು.
- (ರೂಪಕವಾಗಿ) ಸೆರೆಹಾಕು; ಬಂಧಿಸಿಡು: senses locked in sleep ನಿದ್ರಾಮುದ್ರಿತವಾದ ಇಂದ್ರಿಯಗಳು.
- (ಮುಖ್ಯವಾಗಿ ಕಾರ್ಮಿಕರನ್ನು ಕೆಲಸಕ್ಕೆ ಬರಗೊಡದೆ ಬಲವಂತವಾಗಿ ಹೊರಗಿಡುವ ಮಾಲಿಕನ ವಿಷಯದಲ್ಲಿ) ಬೀಗಮುದ್ರೆ ಹಾಕು; ಬಾಗಿಲಿಗೆ ಬೀಗ ಹಾಕಿ ವ್ಯಕ್ತಿಯನ್ನು ಹೊರಗಿರಿಸು.
ಅಕರ್ಮಕ ಕ್ರಿಯಾಪದ
- (ಬಾಗಿಲು, ಕಿಟಕಿ, ಪೆಟ್ಟಿಗೆ, ಮೊದಲಾದವುಗಳ ವಿಷಯದಲ್ಲಿ) ಬೀಗ ಹಾಕುವಂತಿರು; ಬೀಗವುಳ್ಳದ್ದಾಗಿರು; ಬೀಗ ಹೊಂದಿರು.
- (ಅತ್ತಿತ್ತ ಅಲುಗಾಡದಂತೆ) ಸಿಕ್ಕಿಕೊ; ಬದ್ಧವಾಗು.
- (ಮುಖ್ಯವಾಗಿ) (ಯಂತ್ರದ ಸೇರುವೆಗಳ ವಿಷಯದಲ್ಲಿ) ಒಂದರೊಳಗೊಂದು ಸೇರಿ – ಬಿಗಿಯಾಗು, ಬಿಗಿದುಕೊ.
- (ಹಡಗು ಯಾ ದೋಣಿಯ ವಿಷಯದಲ್ಲಿ) ಜಲಬಂಧದ ಯಾ ಮಟ್ಟಕಟ್ಟೆಯ ಮೂಲಕ ಸಾಗು.
- (ಸೈನ್ಯ) ಕಾಲಿಗೆ ಸಿಕ್ಕು; (ಹಿಂದಿನ ಸಾಲಿನ ವಿಷಯದಲ್ಲಿ) ಮುಂದಿನ ಸಾಲಿನ ಹೆಜ್ಜೆಗೆ ತಗುಲುವಷ್ಟು ಹತ್ತಿರ ಹೆಜ್ಜೆ ಇಡು.
- (ವಾಹನದ ವಿಷಯದಲ್ಲಿ) ತಿರುಗುವಾಸಿ ಚಕ್ರ ಹೊಂದಿರು; ಹಿಂದಿನ ಚಕ್ರಗಳಿಂದ ಸ್ವತಂತ್ರವಾಗಿ, ಸಮತಲದಿಂದ ಆಚೆ ಮತ್ತು ಈಚೆ ತಿರುಗಬಲ್ಲ ಮುಂದಿನ ಚಕ್ರಗಳನ್ನು ಪಡೆದಿರು.
- (ವಾಹನದ ಮುಂದಿನ ಚಕ್ರಗಳ ವಿಷಯದಲ್ಲಿ) ಹಿಂದಿನ ಚಕ್ರಗಳ ಸಮತಲದಿಂದ ಆಚೆ ಈಚೆ ತಿರುಗುವ ಸ್ವಾತಂತ್ರ್ಯ ಪಡೆದಿರು.
ಪದಗುಚ್ಛ
- lock on to ರಾಡಾರ್ ಮೊದಲಾದವುಗಳ ಮೂಲಕ ಪತ್ತೆ ಹಚ್ಚಿ ಯಾ ಪತ್ತೆ ಹಚ್ಚಿಸಿ, ಆನಂತರ ಜಾಡುಹಿಡಿದು – ಹೋಗು, ಹಿಂಬಾಲಿಸು.
- lock out
- = 2lock (ಸಕರ್ಮಕ ಕ್ರಿಯಾಪದ \(11\)).
- (ವ್ಯಕ್ತಿಯನ್ನು) ಬಾಗಿಲಿಗೆ ಬೀಗ ಹಾಕಿ ಹೊರಗಿಡು.
- lock step = 2lock (ಅಕರ್ಮಕ ಕ್ರಿಯಾಪದ \(5\)).