See also 2lip
1lip ಲಿಪ್‍
ನಾಮವಾಚಕ
    1. ತುಟಿ; ಅಧರ; ಓಷ್ಠ: upper, lower or under lip ಮೇಲ್ತುಟಿ, ಕೆಳತುಟಿ, ಅವುಡು.
    2. ತುಟಿ; ಅಧರ; ತುಟಿಯನ್ನು ಹೋಲುವ, ತುಟಿಯಂಥ ಯಾವುದೇ ವಸ್ತು.
    3. = labium.
  1. (ಬಟ್ಟಲು, ಪಾತ್ರೆ, ಕುಳಿ, ಗಾಯ, ಮೊದಲಾದವುಗಳ) ಅಂಚು; ಅರುಗು; ಮುಖ್ಯವಾಗಿ ಸುರಿಯಲು ಅನುಕೂಲವಾಗುವಂತೆ ಆಕಾರ ಕೊಟ್ಟ ಭಾಗ.
  2. (ಆಡುಮಾತು) ತಲೆಹರಟೆ; ಅಧಿಕಪ್ರಸಂಗಿತನ; ಧೃಷ್ಟಮಾತು: (ಅಶಿಷ್ಟ) (ಮುಖ್ಯವಾಗಿ): that is enough of your lip! ಸಾಕು ನಿನ್ನ ತಲೆಹರಟೆ!
ಪದಗುಚ್ಛ
  1. escape one’s lips (ಮಾತು ಮೊದಲಾದವು ಮುಂದಾಲೋಚನೆಯಿಲ್ಲದೆ) ತುಟಿ ದಾಟಿ, ಮೀರಿ, ಜಾರಿ ಬರು.
  2. lick one’s lips (ಆಹಾರದ ರುಚಿ ಸವಿಯುತ್ತಾ ಯಾ ಅದರ ಸವಿಯ ನಿರೀಕ್ಷಣೆಯಲ್ಲಿ-ಮುಖ್ಯವಾಗಿ ಸಶಬ್ದವಾಗಿ) ತುಟಿ ನೆಕ್ಕು, ಸವರಿಕೊ; ಚಪ್ಪರಿಸು; ಲೊಟ್ಟೆ ಹೊಡೆ(ರೂಪಕವಾಗಿ ಸಹ).
  3. smack one’s lips = ಪದಗುಚ್ಛ \((2)\).
ನುಡಿಗಟ್ಟು
  1. bite one’s lip (ಕೆರಳಿದಾಗ, ಉದ್ವೇಗವನ್ನು ಅಡಗಿಸುವಾಗ, ನಗುವನ್ನು ತಡೆಯುವಾಗ) ಅವುಡು, ತುಟಿ – ಕಚ್ಚು: he was angry, but bit his lip in order to avoid a scene ಅವನಿಗೆ ಸಿಟ್ಟು ಬಂದರೂ ರಂಪವನ್ನು ತಪ್ಪಿಸಲು ತುಟಿ ಕಚ್ಚಿದನು.
  2. curl one’s lip (ತಿರಸ್ಕಾರ ಸೂಚಿಸಲು) ತುಟಿ – ಸುರುಟಿಸು, ಸೊಟ್ಟಗೆ ಮಾಡು, ಮಡಚು, ಸುರುಳಿ ಸುತ್ತು.
  3. hang on a person’s lips ತುಟಿಗೆ ಜೋತು ಬೀಳು; (ವ್ಯಕ್ತಿಯ ಪ್ರತಿ ಮಾತನ್ನೂ) ಪೂಜ್ಯ ಭಾವನೆಯಿಂದ ಯಾ ಅತ್ಯಂತ ಆಸಕ್ತಿಯಿಂದ ಆಲಿಸು. ಕೇಳು: the students hung on the lips of the new teacher ವಿದ್ಯಾರ್ಥಿಗಳು ಹೊಸ ಉಪಾಧ್ಯಾಯರು ಆಡಿದ ಪ್ರತಿ ಮಾತನ್ನೂ ಅತ್ಯಂತ ಆಸಕ್ತಿಯಿಂದ, ಗೌರವದಿಂದ ಕೇಳಿದರು.
  4. hang one’s lip (ಅಪಮಾನವಾದಾಗ ಯಾ ಅವಮಾನದಿಂದ) ತುಟಿ – ಇಳಿಬಿಡು, ಜೋಲು ಬಿಡು.
  5. pass a person’s lips ತುಟಿ – ಹೊಕ್ಕಿರು, ಪ್ರವೇಶಿಸಿರು; ತಿಂದಿರು, ಕುಡಿದಿರು, ಮಾತಾಡಿರು ಮೊದಲಾದ.
  6. stiff upper lip ಧೈರ್ಯ; ಸ್ಥೈರ್ಯ; ಧೃತಿ; ಸೈರಣೆ; ಹಟ: throughout the crisis they kept a stiff upper lip ಬಿಕ್ಕಟ್ಟಿನುದ್ದಕ್ಕೂ ಅವರು ಸ್ಥೈರ್ಯ ತಾಳಿದ್ದರು.
See also 1lip
2lip ಲಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lipped, ವರ್ತಮಾನ ಕೃದಂತ lipping).
  1. ತುಟಿ – ಮುಟ್ಟಿಸು, ತಾಗಿಸು, ಸ್ಪರ್ಶಿಸು, ಸೋಕಿಸು; ತುಟಿಗಳಿಂದ ಮುಟ್ಟು.
  2. (ನೀರಿನ ವಿಷಯದಲ್ಲಿ) ಸೋಕು; ಮೃದುವಾಗಿ ಮುಟ್ಟು; (ದಡಕ್ಕೆ) ಮೆಲ್ಲನೆ – ಹೊಡೆ, ತಾಗು; ಮುತ್ತಿಡು; ಚುಂಬಿಸು (ರೂಪಕವಾಗಿ): the murmur of the sea slightly lipping the rocks ಸಮುದ್ರದ ಮರ್ಮರ ಧ್ವನಿ ಬಂಡೆಗಳಿಗೆ ಮೆಲ್ಲನೆ ಸೋಕುತ್ತಾ (ಬಂಡೆಗಳನ್ನು ಚುಂಬಿಸುತ್ತಾ).
  3. (ಗಾಲ್‍ ಆಟ)
    1. ಕುಳಿಯ ಅಂಚಿನವರೆಗೆ ಮಾತ್ರ ಹೋಗುವಂತೆ ಚೆಂಡನ್ನು ಹೊಡೆ.
    2. (ಚೆಂಡಿನ ವಿಷಯದಲ್ಲಿ) ಒಳಗೆ ಬೀಳದಂತೆ ಕುಳಿಯ ಅಂಚಿಗೆ ಹೋಗಿ ನಿಲ್ಲು.
  4. ಪಿಸುಗುಟ್ಟು; ಮರ್ಮರಿಸು; ಮೃದುವಾಗಿ – ನುಡಿ, ಹೇಳು.