See also 1lip
2lip ಲಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ lipped, ವರ್ತಮಾನ ಕೃದಂತ lipping).
  1. ತುಟಿ – ಮುಟ್ಟಿಸು, ತಾಗಿಸು, ಸ್ಪರ್ಶಿಸು, ಸೋಕಿಸು; ತುಟಿಗಳಿಂದ ಮುಟ್ಟು.
  2. (ನೀರಿನ ವಿಷಯದಲ್ಲಿ) ಸೋಕು; ಮೃದುವಾಗಿ ಮುಟ್ಟು; (ದಡಕ್ಕೆ) ಮೆಲ್ಲನೆ – ಹೊಡೆ, ತಾಗು; ಮುತ್ತಿಡು; ಚುಂಬಿಸು (ರೂಪಕವಾಗಿ): the murmur of the sea slightly lipping the rocks ಸಮುದ್ರದ ಮರ್ಮರ ಧ್ವನಿ ಬಂಡೆಗಳಿಗೆ ಮೆಲ್ಲನೆ ಸೋಕುತ್ತಾ (ಬಂಡೆಗಳನ್ನು ಚುಂಬಿಸುತ್ತಾ).
  3. (ಗಾಲ್‍ ಆಟ)
    1. ಕುಳಿಯ ಅಂಚಿನವರೆಗೆ ಮಾತ್ರ ಹೋಗುವಂತೆ ಚೆಂಡನ್ನು ಹೊಡೆ.
    2. (ಚೆಂಡಿನ ವಿಷಯದಲ್ಲಿ) ಒಳಗೆ ಬೀಳದಂತೆ ಕುಳಿಯ ಅಂಚಿಗೆ ಹೋಗಿ ನಿಲ್ಲು.
  4. ಪಿಸುಗುಟ್ಟು; ಮರ್ಮರಿಸು; ಮೃದುವಾಗಿ – ನುಡಿ, ಹೇಳು.