See also 2line  3line  4line  5line
1line ಲೈನ್‍
ನಾಮವಾಚಕ
  1. (ಮೇಲ್ಮೈ ಮೇಲೆ ಎಳೆದ) ರೇಖೆ; ಗೆರೆ; ಸಾಲು; ಪಂಕ್ತಿ; ಗೀರು: drew a line ಒಂದು ಗೆರೆ ಎಳೆದ.
  2. ರೇಖನ; ರೇಖಾ ಪ್ರಯೋಗ; ರೇಖನ ಕಲೆಯಲ್ಲಿ ಗೆರೆಗಳ ಬಳಕೆ, ಮುಖ್ಯವಾಗಿ ನಕಾಸೆಗಾರಿಕೆ ಯಾ ಉಬ್ಬು ಚಿತ್ರಣಗಳಲ್ಲಿ ಬಳಕೆ: boldness of line ರೇಖೆಯ ಸ್ಪಷ್ಟತೆ. purity of line ರೇಖಾಶುದ್ಧಿ; ರೇಖೆಯ ಶುದ್ಧತೆ, ಸ್ಪಷ್ಟತೆ.
  3. ಗುರುತು ಮಾಡಿದ ರೇಖೆಯನ್ನು ಹೋಲುವ – ಗೆರೆ, ಸಾಲು, ಸುಕ್ಕು, ಬಣ್ಣದ ಪಟ್ಟೆ, ಕೂಡುಹೊಲಿಗೆಯ ರೇಖೆ, ಉಳುಮೆಯ ಜಾಡು.
    1. (ಸಂಗೀತ) ಸ್ಥಾಯೀ ರೇಖೆ; ಸಾಮಾನ್ಯವಾಗಿ ಐದು ಸ್ಥಾಯೀ ರೇಖೆಗಳ ವಿನ್ಯಾಸದಲ್ಲಿ ಒಂದು ಅಡ್ಡಗೆರೆ.
    2. (ವಾದ್ಯದ ಯಾ ಹಾಡುಗಾರಿಕೆಯ ರಾಗವಿನ್ಯಾಸದ) ನಾದಪ್ರಸ್ತಾರ; ಸ್ವರಪ್ರಸ್ತಾರ ಯಾ ಧ್ವನಿಪ್ರಸ್ತಾರ; ಸ್ವರಗಳ ಯಾ ಧ್ವನಿಗಳ ಶ್ರೇಣಿ.
  4. (ಗಣಿತ)
    1. ಸರಳ ಯಾ ವಕ್ರ – ರೇಖೆ, ಗೆರೆ; ಉದ್ದ ಮಾತ್ರ ಇದ್ದು ಅಗಲವಿಲ್ಲದಿರುವ ನೇರವಾದ ಯಾ ವಕ್ರವಾದ ಜ್ಯಾಮಿತೀಯ ಆಕೃತಿ.
    2. ಚಲಿಸುತ್ತಿರುವ ಒಂದು ಬಿಂದು ರಚಿಸುವ ಆಕೃತಿ.
    3. ಹಲವಾರು ಬಿಂದುಗಳನ್ನು ಸೇರಿಸಿ ಎಳೆದ ಗೆರೆ.
  5. ರೂಪರೇಖೆ; ಆಕೃತಿ, ಆಕಾರ, ಬಾಹ್ಯ, ಹೊರ – ರೇಖೆ: admired the sculpture’s clean lines ಶಿಲ್ಪದ ಸ್ಪಷ್ಟ ರೂಪರೇಖೆಯನ್ನು ಪ್ರಶಂಸಿಸಿದ.
  6. ಮುಖ(ಲಕ್ಷಣ) ರೇಖೆ: the savage lines of his mouth ಕ್ರೂರ ಸ್ವಭಾವ ಸೂಚಿಸುವ ಅವನ ಬಾಯಿಯ (ರೂಪ)ರೇಖೆಗಳು. ಅವನ ಬಾಯಿಯ ಕ್ರೂರ (ರೂಪ)ರೇಖೆಗಳು.
  7. (ನಕ್ಷೆ ಯಾ ಗ್ರಾಹ್‍ನ ವಿಷಯದಲ್ಲಿ) ನಿರ್ದಿಷ್ಟವಾದ ಸಾಮಾನ್ಯ ಗುಣಗಳುಳ್ಳ ಬಿಂದುಗಳನ್ನೆಲ್ಲ ಸೇರಿಸಿದ ವಕ್ರರೇಖೆ.
  8. ಮಿತಿ; ಎಲ್ಲೆ; ಮೇರೆ; ಗಡಿ; ಸೀಮಾ(ರೇಖೆ): draw the line ಮಿತಿ ಗೊತ್ತುಮಾಡು; ಮೇರೆ ಹಾಕು.
  9. (ಆಟಗಳ ವಿಷಯದಲ್ಲಿ) (ಆಟದ ಅಂಗಳದ, ಪ್ರದೇಶದ ಯಾ ಅವುಗಳ ವಿಶೇಷ ಭಾಗಗಳ ಎಲ್ಲೆಗಳನ್ನು, ಪಂದ್ಯದಲ್ಲಿ ಪ್ರಾರಂಭ ಯಾ ಮುಕ್ತಾಯದ ಗಡಿಯನ್ನು ಗುರುತಿಸುವ) ಎಲ್ಲೆಗೆರೆ.
  10. ಲೆಕ್ಕದ ಗೆರೆ; ಜಮಾ ಖರ್ಚು ಗೆರೆ; ಲೆಕ್ಕದ ಪುಸ್ತಕದಲ್ಲಿ ಜಮಾ ಖರ್ಚು ಖಾತೆಗಳನ್ನು ವಿಂಗಡಿಸುವ ಎಲ್ಲೆ ಯಾ ಗೆರೆ.
  11. (ವ್ಯಕ್ತಿಗಳ, ವಸ್ತುಗಳ) ಸಾಲು; ಪಂಕ್ತಿ; ಸರಣಿ; ಶ್ರೇಣಿ: assembly line ಜೋಡಣೆ ತಂಡ, ಸಾಲು; ಉತ್ಪನ್ನವೊಂದನ್ನು ಕ್ರಮವಾದ ಹಂತಗಳಲ್ಲಿ ಸಿದ್ಧಗೊಳಿಸಲು ಇರಿಸಿದ ಯಂತ್ರಗಳ ಮತ್ತು ಕೆಲಸಗಾರರ ಸಾಲು, ತಂಡ.
  12. ದಿಕ್ಕು; ದಿಶೆ; ಕಡೆ: the line of march ಸಾಗುವ ದಿಕ್ಕು.
  13. (ಅಮೆರಿಕನ್‍ ಪ್ರಯೋಗ) ಕ್ಯೂ; ಸರದಿಯ ಸಾಲು: stand in line ಕ್ಯೂ(ನಲ್ಲಿ) ನಿಲ್ಲು.
  14. (ಪುಟದಲ್ಲಿ, ವರ್ತಮಾನ ಪತ್ರಿಕೆಯಲ್ಲಿ ಪದಗಳ) ಸಾಲು; ಪಂಕ್ತಿ.
  15. (ಪದ್ಯದ ಒಂದು) ಪಾದ; ಚರಣ; ಪಂಕ್ತಿ; ಸಾಲು.
  16. (ಬಹುವಚನದಲ್ಲಿ)
    1. ಕವನ; ಪದ್ಯ.
    2. (ಬ್ರಿಟಿಷ್‍ ಪ್ರಯೋಗ) ನಿರ್ದಿಷ್ಟ ಸಂಖ್ಯೆಯ ಪದ್ಯ ಸಾಲುಗಳು; ವಿಷಯದ ಯಾ ವ್ಯಕ್ತಿಯ ಮೇಲೆ ಬರೆದ ಪದ್ಯದ ಸಾಲುಗಳು: 100 lines ನೂರು ಪದ್ಯ ಪಂಕ್ತಿಗಳು.
    3. ನಟನ, ಪಾತ್ರದ – ಮಾತುಗಳು, ಸಾಲುಗಳು, ಪಂಕ್ತಿ.
    4. ಶಿಕ್ಷೆ ಪಂಕ್ತಿಗಳು; ಶಿಕ್ಷೆಸಾಲುಗಳು; ಶಾಲೆಯಲ್ಲಿ ಶಿಕ್ಷೆಯಾಗಿ ಬರೆಯಬೇಕಾದ ನಿರ್ದಿಷ್ಟ ಪ್ರಮಾಣದ ಪಠ್ಯಭಾಗ ಮೊದಲಾದವು.
  17. ಚೀಟಿ; ಕಿರುಪತ್ರ; ಒಂದೆರಡು ಸಾಲು: drop me a line ಒಂದು ಸಾಲು ಪತ್ರ ಬರೆ. just a line to tell you ನಿನಗೆ ತಿಳಿಸಲು ಒಂದು ಪಂಕ್ತಿ.
  18. (ಬಹುವಚನದಲ್ಲಿ) = marriage lines.
  19. (ಆಳ ಕಂಡು ಹಿಡಿಯುವುದು, ದೂರ ಅಳೆಯುವುದು, ಮಟ್ಟ ನೋಡುವುದು, ಮೊದಲಾದವುಗಳಿಗಾಗಿ ಬಳಸುವ) ದಾರ, ಹುರಿ, ಹೊರಜಿ, ಹಗ್ಗ, ತಂತಿ, ಮೊದಲಾದವುಗಳ – ತುಂಡು; ಮುಖ್ಯವಾಗಿ ಮೀನು ಗಾಳದ ಹಗ್ಗ ಯಾ ಬಟ್ಟೆ ಒಣಗಿಸಲು ಉಪಯೋಗಿಸುವ ಹಗ್ಗ.
  20. (ಟೆಲಿಹೋನಿನ ಯಾ ಟೆಲಿಗ್ರಾಹ್‍ನ) ಲೈನು; ತಂತಿ ಯಾ ತಂತಿ ಹೊರಜಿ.
  21. ಲೈನು; ತಂತಿ ಸಂಪರ್ಕ; ಟೆಲಿಹೋನ್‍ ಯಾ ಟೆಲಿಗ್ರಾಹ್‍ ತಂತಿ ಮೂಲಕ ಪಡೆಯುವ ಸಂಪರ್ಕ: the line is bad (ಟೆಲಿಹೋನ್‍ ಯಾ ಟೆಲಿಗ್ರಾಹ್‍) ತಂತಿ(ಸಂಪರ್ಕ) ಕೆಟ್ಟಿದೆ, ಲೈನ್‍ ಕೆಟ್ಟಿದೆ: am trying to get a line ತಂತಿ ಸಂಪರ್ಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ.
  22. ರೈಲುಮಾರ್ಗ; ರೈಲು ಹಾದಿ: up line (ಕೊಟ್ಟ ಕೊನೆಯ ಪ್ರಧಾನ ನಿಲ್ದಾಣಕ್ಕೆ) ಹೋಗುವ ರೈಲು ಹಾದಿ. down line (ಕೊಟ್ಟ ಕೊನೆಯ ಪ್ರಧಾನ ನಿಲ್ದಾಣದಿಂದ) ಬರುವ ರೈಲು ಹಾದಿ.
  23. ರೈಲು ವ್ಯವಸ್ಥೆಯ ಒಂದು ಶಾಖೆ ಯಾ ಒಂದು ಆಡಳಿತ ಮಂಡಲಿಯ ಕೈಕೆಳಗಿರುವ ಇಡೀ ವ್ಯವಸ್ಥೆ: main, branch, loopline ಪ್ರಧಾನ ಶಾಖೆ, ಉಪಶಾಖೆ, ಕುಣಿಕೆ ಶಾಖೆ. Southern line ದಕ್ಷಿಣ ವಲಯದ (ರೈಲ್ವೆ) ವ್ಯವಸ್ಥೆ.
  24. (ನಿರ್ದಿಷ್ಟ ಸ್ಥಳಗಳ ಮಧ್ಯೆ ಕ್ರಮವಾಗಿ ಓಡಾಡುವ ಜಹಜು, ಬಸ್ಸು, ವಿಮಾನ, ಮೊದಲಾದವುಗಳ) ಶ್ರೇಣಿ; ಸರಣಿ; ತಂಡ; ಗುಂಪು: shipping line ಹಡಗು ಸಾರಿಗೆ ತಂಡ; ಜಹಜು (ಸಾರಿಗೆ) ಸಂಸ್ಥೆ.
    1. (ಕಾಲಾನುಕ್ರಮದಲ್ಲಿ ಬರುವ ವ್ಯಕ್ತಿಗಳ) ಪಂಕ್ತಿ; ಶ್ರೇಣಿ; ಸಂತತಿ; ಪರಂಪರೆ; ಅನುಕ್ರಮ: male, female, direct, etc. line ಗಂಡು, ಹೆಣ್ಣು, ನೇರ, ಮೊದಲಾದ ಸಂತತಿ. a long line of craftsmen ಕುಶಲಕರ್ಮಿಗಳ ದೀರ್ಘ ಪರಂಪರೆ. next in line to the throne ಅನುಕ್ರಮದಲ್ಲಿ ಸಿಂಹಾಸನಕ್ಕೆ ಮುಂದಿನವನು.
    2. ವಂಶ; ಕುಲ; ಕುಟುಂಬ; ಮನೆತನ; ಬುಡಕಟ್ಟು; ಸಂತತಿ: comes of a good line ಒಳ್ಳೆಯ ಮನೆತನದಲ್ಲಿ ಹುಟ್ಟಿದವನು; ಸತ್ಕುಲ ಪ್ರಸೂತ.
  25. (ಕಾರ್ಯ, ವರ್ತನೆ, ಆಲೋಚನೆ, ಮೊದಲಾದವುಗಳ) ಮಾರ್ಗ; ರೀತಿ; ವಿಧಾನ; ಕ್ರಿಯೆ: did it along these lines ಈ ರೀತಿಯಲ್ಲಿ, ವಿಧಾನದಲ್ಲಿ ಮಾಡಿದ. don’t take that line with me ನನ್ನ ಜೊತೆ ಆ ಕ್ರಮ ಅನುಸರಿಸಬೇಡ.
  26. ಕಾರ್ಯನೀತಿ: the party line ಪಕ್ಷದ ನೀತಿ. on the Conservative line ಕನ್ಸರ್ವೆಟಿವ್‍ ನೀತಿಯ ಪ್ರಕಾರ.
  27. ದಾರಿ; ಹೊಂದಿಕೆ; ಹೊಂದಾವಣೆ; ಅನುರೂಪತೆ: bring them into line ಅವರನ್ನು ದಾರಿಗೆ ತರು.
  28. ಹಾದಿ; ದಾರಿ; ಮಾರ್ಗ; ಕ್ರಮ; ಪಥ: lines of communication ಸಂಪರ್ಕಮಾರ್ಗಗಳು.
  29. ಕಾರ್ಯಕ್ಷೇತ್ರ; ವ್ಯವಹಾರಕ್ಷೇತ್ರ; ಉದ್ಯೋಗ ವಲಯ; ಕರ್ತವ್ಯ ವಿಭಾಗ; ಚಟುವಟಿಕೆಯ ಕ್ಷೇತ್ರ: not in my line ನನ್ನ ಕಾರ್ಯಕ್ಷೇತ್ರದಲ್ಲಿಲ್ಲ, ಕಾರ್ಯಕ್ಷೇತ್ರಕ್ಕೆ ಸೇರಿದ್ದಲ್ಲ.
  30. ಸರಕಿನ, ಮಾಲಿನ – ರಖಮು, ನಮೂನೆ, ಮಾದರಿ, ತರಹ, ಬಗೆ: a new line in hats ಹ್ಯಾಟುಗಳಲ್ಲಿ ಹೊಸ ನಮೂನೆ.
  31. (ಆಡುಮಾತು)
    1. ಸುಳ್ಳುಸುಳ್ಳಾದ ಇಲ್ಲವೇ ಉತ್ಪ್ರೇಕ್ಷೆ ಮಾಡಿದ – ಕಥೆ, ವರದಿ, ಕಥನ, ನಿರೂಪಣೆ, ಬೋರಂಟಿ: gave me a line about missing the bus ಬಸ್ಸು ತಪ್ಪಿಹೋದುದರ ಬಗೆಗೆ ಒಂದು ಕಥೆ ಹೇಳಿದ, ಒಂದು ಬೋರಂಟಿ ಬಿಟ್ಟ.
    2. ಅಪ್ರಾಮಾಣಿಕ ದೃಷ್ಟಿ, ಪ್ರಸ್ತಾಪಿಸುವ ಮಾರ್ಗ.
  32. (ಸೈನ್ಯ)
    1. (ಒಂದಕ್ಕೊಂದು ಸಂಬಂಧವುಳ್ಳ) ಹಂಗಾಮಿ ಕೋಟೆ ಕೊತ್ತಲಗಳು, ಪಾಳೆಯದ ಗುಡಾರಗಳು, ಗುಡಿಸಲುಗಳು, ರಕ್ಷಕ ಸಾಮಾನುಗಳು, ಮೊದಲಾದವುಗಳ – ಸಾಲು, ಶ್ರೇಣಿ, ಸರಣಿ: behind enemy lines ಶತ್ರುಗಳ ರಕ್ಷಣಾ ಶ್ರೇಣಿಗಳ ಹಿಂದೆ.
    2. (ಪಕ್ಕಪಕ್ಕದಲ್ಲಿ ನಿಂತಿರುವ ಯೋಧರ ಯಾ ಹಡಗುಗಳ) ಸಾಲು; ಪಂಕ್ತಿ; ಯುದ್ಧಸನ್ನದ್ಧ ಸೇನಾಪಡೆ ಯಾ ನೌಕಾಪಂಕ್ತಿ; ಯುದ್ಧ ಮಾಡಲು ಸಿದ್ಧವಾಗಿ ನಿಲ್ಲಿಸಿದ ಸೈನಿಕರ ಪಡೆ ಯಾ ಸಾಲು ಹಡಗುಗಳು: ship of the line ನೌಕಾಪಂಕ್ತಿಯ ಫಿರಂಗಿ ನೌಕೆ.
    3. (ಕಾಪುದಳ, ಎಂಜಿನಿಯರುಗಳ ದಳ ಯಾ ಫಿರಂಗಿ ದಳಗಳನ್ನು ಕೆಲವು ಸಲ ಅಶ್ವದಳವನ್ನು ಸಹ ಬಿಟ್ಟು) ಕ್ರಮಬದ್ಧ ಮತ್ತು ಸಂಖ್ಯಾನಿರ್ದಿಷ್ಟ ಸೈನಿಕ ದಳಗಳು.
    4. ಜೋಡಿಸಾಲು; ದ್ವಿಪಂಕ್ತಿ; ಪಕ್ಕಪಕ್ಕದಲ್ಲಿ ನಿಲ್ಲಿಸಿರುವ ಸೈನಿಕರ (ಹಿಂದಿನ ಮತ್ತು ಮುಂದಿನ ಸಾಲುಗಳ) ಜೋಡಿ, ಜೊತೆ.
    5. ಸಾಲುಪಡೆ; ಪಂಕ್ತಿದಳ; ಪಕ್ಕಪಕ್ಕದಲ್ಲಿರುವಂಥ (ಒಂದರ ಹಿಂದೆ ಇನ್ನೊಂದರಂತೆ ಅಲ್ಲ) ದಳಗಳ ವ್ಯವಸ್ಥೆ.
  33. (ದೂರದರ್ಶನ) ಪಟ್ಟೆ; ಖಂಡ; ಪಟ್ಟಿಕೆ; ಟೆಲಿವಿಷನ್‍ ಚಿತ್ರ ತೆಗೆಯಲು ಯಾ ತೆರೆಯ ಮೇಲೆ ಮೂಡಿಸಲು ದೃಶ್ಯವನ್ನು ವಿಭಜಿಸಿ ಮಾಡಿಕೊಂಡ ಉದ್ದುದ್ದನೆಯ ಖಂಡಗಳಲ್ಲಿ ಒಂದು.
  34. ರೋಹಿತದ ಕಿರಿದಾದ ಉಜ್ವಲ ಪಟ್ಟೆ; ನೋಡುವುದಕ್ಕೆ ಪಕ್ಕದ ಭಾಗಗಳಿಗಿಂತ ಉಜ್ವಲವಾದ ಯಾ ದಟ್ಟವಾದ ರೋಹಿತದ ಕಿರಿದಾದ ಭಾಗ, ಪಟ್ಟಿ.
  35. (ಮುದ್ರಣ ಯಾ ಬರಹದಲ್ಲಿ) ಪಾದಮಟ್ಟ; ತಳಮಟ್ಟ; ಮುದ್ರಣದಲ್ಲಿ ಯಾ ಬರಹದಲ್ಲಿ ಬಹುತೇಕ ಅಕ್ಷರಗಳ ತಳಭಾಗದಲ್ಲಿ ಹಾಯ್ದುಹೋಗುವ (ಸಾಮಾನ್ಯವಾಗಿ ಕಾಲ್ಪನಿಕ) ಗೆರೆ: g and y extend below the line. g ಮತ್ತು y ಅಕ್ಷರಗಳು ಪಾದರೇಖೆಯಿಂದ, ತಳಮಟ್ಟದಿಂದ ಕೆಳಕ್ಕೆ ಇಳಿಯುತ್ತವೆ. on the line ಪಾದಮಟ್ಟದ ಮೇಲೆ.
  36. (ಅಳತೆಯಾಗಿ) $1/12$ನೇ ಅಂಗುಲ; ಅಂಗುಲದ $12$ನೇ ಒಂದು ಭಾಗ.
  37. (ಬಹುವಚನದಲ್ಲಿ) ಪ್ರಾಪ್ತಿ; ಅದೃಷ್ಟ; ವಿಧಿ; ಹಣೆಯ ಬರಹ; ಬದುಕಿನಲ್ಲಿ ಪಾಲಿಗೆ ಬಂದದ್ದು: hard lines ದುರದೃಷ್ಟ; ಕಷ್ಟದೆಸೆ; ತೊಂದರೆ.
  38. (ಗತಪ್ರಯೋಗ) ವಿಧಿ; ನಿಯಮ; ಸೂತ್ರ: line upon line (ಎಂಬಲ್ಲಿ ಮಾತ್ರ ರೂಢಿ) ನಿಧಾನವಾದ ಯಾ ಕ್ರಮವಾದ ಮುನ್ನಡೆಯಿಂದ.
  39. ನೇರಗೆರೆ; ಸರಳರೇಖೆ.
  40. (ಬಹುವಚನದಲ್ಲಿ) (ಮುಖ್ಯವಾಗಿ ಹಡಗಿನ ಅಡ್ಡಕೊಯ್ತದ, ಲಂಬಕೊಯ್ತದ, ಓರೆಕೊಯ್ತದ) ನಕ್ಷೆ; ನಕಾಸೆ.
  41. (ಅಮೆರಿಕನ್‍ ಪ್ರಯೋಗ) (ಕುದುರೆ ಮೊದಲಾದವುಗಳಿಗೆ ಬಳಸುವ) ಲಗಾಮು.
  42. ಉಡುಪನ್ನು ಹೊಲಿಯಲಾಗುವ ಆಕಾರ, ರೂಪ.
  43. (ಅಮೆರಿಕನ್‍ ಪ್ರಯೋಗ) ಆಟ ಪ್ರಾರಂಭವಾಗುವುದಕ್ಕೆ ಮೊದಲು ಸಾಲಾಗಿ ಯಾ ಸಾಲಿನಲ್ಲಿ ನಿಂತಿರುವ ಹುಟ್‍ಬಾಲ್‍ ಆಟಗಾರರ ತಂಡ.
  44. (ಮುಖ್ಯವಾಗಿ ನಾಯಿಗಳೊಡನೆ ಬೇಟೆಗೆ ಹೋಗುವಾಗ ಅನುಸರಿಸುವ) ಜಾಡು; ದಾರಿ; ಹಾದಿ; ಮಾರ್ಗ.
  45. ಸರಕಿನ ದಾಸ್ತಾನು; ಮಾಲಿನ ಸಂಗ್ರಹ: a full line of hosiery ಕಾಲ್ಚೀಲ ಮೊದಲಾದವುಗಳ ಒಂದು ದೊಡ್ಡ ಸಂಗ್ರಹ.
ಪದಗುಚ್ಛ
  1. above the line
    1. (ಬ್ರಿಡ್ಜ್‍ ಮತ್ತು ಇಸ್ಪೀಟಾಟ) ಆಟವನ್ನು ಗೆಲ್ಲುವ ಕಡೆಗೆ ಗಳಿಸದ.
    2. (ಅರ್ಥಶಾಸ್ತ್ರ) ದಿನನಿತ್ಯದ ಖರ್ಚಿಗೆ ಯಾ ಚಾಲ್ತಿ ವೆಚ್ಚಕ್ಕೆ ಸಂಬಂಧಿಸಿದ.
  2. all along the line
    1. ಉದ್ದಕ್ಕೂ; ಪ್ರತಿ ಸ್ಥಳದಲ್ಲಿಯೂ.
    2. (ಜಯ ಮೊದಲಾದವುಗಳ ವಿಷಯದಲ್ಲಿ ರೂಪಕವಾಗಿ.) ಪೂರ್ತಿಯಾಗಿ; ಪ್ರತಿಯೊಂದು ವಿವರದಲ್ಲಿಯೂ.
  3. dividing line ವಿಭಾಜಕ ರೇಖೆ; ವಿಂಗಡಿಸುವ ಗೆರೆ, ಎಲ್ಲೆ, ಮೇರೆ.
  4. $^1$draw the line.
  5. form into line (ಪಡೆಯ) ಜೋಡಿಸಾಲು ರಚಿಸು.
  6. go as straight as a line ಗೆರೆಯಂತೆ ನೇರವಾಗಿ ಹೋಗು.
  7. hook, line and sinker (ರೂಪಕವಾಗಿ) ಪೂರಾ; ಇಡಿ(ಯಾಗಿ); ಪೂರ್ತಿ(ಯಾಗಿ).
  8. isothermal line ಸಮತಾರೇಖೆ; ನಕ್ಷೆಯಲ್ಲಿ ಒಂದೇ ತಾಪವನ್ನು ಸೂಚಿಸುವ ಬಿಂದುಗಳನ್ನು ಸೇರಿಸಿ ಎಳೆದ ಗೆರೆ.
  9. line abreast (ಅಡಿ ದಿಮ್ಮಿಗಳ ರೇಖೆಗೆ ಸಮಕೋನದಲ್ಲಿರುವಂತೆ ಸಮಾಂತರವಾಗಿ ನಿಲ್ಲಿಸಿರುವ) ಹಡಗುಗಳ ಸಾಲು; ಪಕ್ಕಪಕ್ಕ ನಿಂತಿರುವ ನೌಕಾ ಶ್ರೇಣಿ.
  10. line ahead ಒಂದರ ಹಿಂದೊಂದರಂತೆ ಹೋಗುತ್ತಿರುವ ಹಡಗುಗಳ ಸಾಲು, ನೌಕಾ ಪಂಕ್ತಿ.
  11. line of beauty ಚೆಲುವುಗೆರೆ; ಸೌಂದರ್ಯರೇಖೆ; ಲಂಬಿಸಿದ ‘sx ಆಕಾರದ ಎರಡು ಎದುರು ಬದುರಾದ ಕೊಂಕುಗಳುಳ್ಳ ರೇಖೆ.
  12. line of $^1$country.
  13. line of $^1$fire.
  14. line of force (ಭೌತವಿಜ್ಞಾನ) ಬಲರೇಖೆ; ಯಾವುದೇ ಬಿಂದುವಿನಲ್ಲಿ ಗುರುತ್ವ, ವಿದ್ಯುತ್‍ ಯಾ ಕಾಂತೀಯ ಕ್ಷೇತ್ರದ ದಿಕ್ಕನ್ನೂ ತೀವ್ರತೆಯನ್ನೂ ಸೂಚಿಸುವ ರೇಖೆ.
  15. line of life, fortune (ಹಸ್ತಸಾಮುದ್ರಿಕೆಯಲ್ಲಿ) ಆಯುಷ್ಯರೇಖೆ; ಬಾಳಗೆರೆ; ಭಾಗ್ಯರೇಖೆ.
  16. line of march (ಪಡೆಗಳು) ಸಾಗುವ ದಿಕ್ಕು; ಮುನ್ನಡೆಯ ದಿಕ್ಕು.
  17. line of sight (or vision) ದೃಷ್ಟಿರೇಖೆ; ವೀಕ್ಷಕನು ನೋಡುವ ಯಾ ವೀಕ್ಷಕನ ಕಣ್ಣುಗಳ ಮಟ್ಟಕ್ಕೆ ಸಮನಾಗಿರುವ, ನೇರವಾಗಿರುವ ಮಟ್ಟ, ರೇಖೆ.
  18. on the line
    1. ಅಪಾಯದಲ್ಲಿ; ಗಂಡಾಂತರದಲ್ಲಿ: put my reputation on the line ನನ್ನ ಹೆಸರನ್ನು, ಕೀರ್ತಿಯನ್ನು ಅಪಾಯದಲ್ಲಿ ಸಿಕ್ಕಿಸು.
    2. ಲೈನಿನಲ್ಲಿರು; ಟೆಲಿಹೋನಿನಲ್ಲಿ ಮಾತನಾಡುತ್ತಿರು.
    3. (ಪ್ರದರ್ಶನದಲ್ಲಿನ ಚಿತ್ರವೊಂದರ ವಿಷಯದಲ್ಲಿ) ನೋಡುವವನ ಕಣ್ಣಿನ ನೇರಕ್ಕೆ ಅದರ ಕೇಂದ್ರ ಭಾಗ ಇರುವಂತೆ ನೇತುಹಾಕಿದ: picture hung on the line ನೋಡುವವನ ಕಣ್ಣಿನ ಮಟ್ಟಕ್ಕೆ ಚಿತ್ರದ ಕೇಂದ್ರವಿರುವಂತೆ ತೂಗಹಾಕಿರುವ ಚಿತ್ರ.
  19. out of line
    1. ಸರಿ ಹೊಂದದ; ಹೊಂದಿಕೊಳ್ಳದ; ಮೇಳೈಸದ; ಅಸಮಂಜಸ; ವಿಸಂಗತ.
    2. ತನಗೆ ಬಳಕೆಯಿಲ್ಲದ; ತನ್ನದಲ್ಲದ.
  20. something in one’s line ಸ್ವಾಸಕ್ತಿ ಕ್ಷೇತ್ರ, ವಿಷಯ; ತನಗೆ ಆಸಕ್ತಿಯಿರುವ ಯಾ ಸಂಬಂಧಪಟ್ಟ ವಿಷಯ, ಕ್ಷೇತ್ರ.
  21. something out of one’s line ತನಗೆ ಆಸಕ್ತಿ ಇಲ್ಲದ, ಬಳಕೆಯಿಲ್ಲದ ಯಾ ಸಂಬಂಧಪಡದ – ವಿಷಯ, ಕ್ಷೇತ್ರ.
  22. take one’s own line (ಅನೇಕ ವೇಳೆ ರೂಪಕವಾಗಿ ಸಹ) ತನ್ನದೇ (ಬೇಟೆಯ) ದಾರಿ, ಮಾರ್ಗ – ಹಿಡಿ.
  23. the line = equator(1).
  24. up the line ಯುದ್ಧರಂಗಕ್ಕೆ, ಯುದ್ಧರಂಗದ ಮುಂಬದಿಗೆ.
ನುಡಿಗಟ್ಟು
  1. bring into line ಒಪ್ಪಿಸು; ಒಪ್ಪುವಂತೆ ಮಾಡು; ಸಹಕರಿಸುವಂತೆ, ಮಾಡುವಂತೆ – ಮಾಡು; ಹೊಂದಿಕೊಳ್ಳುವಂತೆ ಮಾಡು; ದಾರಿಗೆ ತರು: he brought his opponents into line with his own views ತನ್ನ ಎದುರಾಳಿಗಳು ತನ್ನ ಅಭಿಪ್ರಾಯಗಳನ್ನು ಒಪ್ಪುವಂತೆ ಮಾಡಿದನು.
  2. by rule and line ಕರಾರುವಾಕ್ಕಾಗಿ; ಲೆಕ್ಕಾಚಾರವಾಗಿ; ನಿಖರವಾಗಿ: plantations which are laid out by rule and line ಕರಾರುವಾಕ್ಕಾಗಿ ರೂಪುಗೊಳಿಸಿದ ದೊಡ್ಡ ತೋಟಗಳು.
  3. come into line ಒಪ್ಪು; ಸಹಕರಿಸು; ಹೊಂದಿಕೊಳ್ಳು: he was persuaded to come into line with the party policy ಪಕ್ಷದ ಧೋರಣೆಗೆ ಹೊಂದಿಕೊಳ್ಳುವಂತೆ ಅವನನ್ನು ಒಲಿಸಲಾಯಿತು.
  4. end of the line ಅಂತಿಮ ಘಟ್ಟ; ಮೂಗೋಣಿ; ಕೊನೆಯ ಹಂತ; ಯಾವ ಹಂತದಿಂದ ಮುಂದೆ ಮಾಡುವ ಪ್ರಯತ್ನ ಸಫಲವಾಗುವುದಿಲ್ಲವೋ ಯಾ ಯಾವ ಹಂತದಿಂದ ಮುಂದೆ ಹೋಗಲಾಗುವುದಿಲ್ಲವೋ ಆ ಹಂತ.
  5. get a line on (ಆಡುಮಾತು) (ಒಂದರ ಬಗ್ಗೆ) ಸ್ವಲ್ಪ ಅರಿತುಕೊ; ಸ್ವಲ್ಪ ವಿಷಯ ತಿಳಿದುಕೊ.
  6. get one’s (or the) lines crossed ಗೊಂದಲಕ್ಕೆ ಬಿದ್ದು ತಪ್ಪು ಅರ್ಥ ಮಾಡಿಕೊ; ಗಲಿಬಿಲಿ ಉಂಟಾಗಿ ಅಪಾರ್ಥ ಮಾಡಿಕೊ.
  7. give one line enough ಸಾಕಷ್ಟು ಅವಕಾಶ ಕೊಡು; ಕೊನೆಯಲ್ಲಿ ಹಿಡಿಯುವುದಕ್ಕಾಗಿ ಯಾ ಪತ್ತೆ ಮಾಡುವುದಕ್ಕಾಗಿ, ಅವನ ದಾರಿಯಲ್ಲೇ ಹೋಗಲು ಕೆಲವು ಕಾಲ ಅವನನ್ನು ಬಿಟ್ಟುಬಿಡು.
  8. go up the line ಸೈನ್ಯದ ನೆಲೆಯನ್ನು ಬಿಟ್ಟು ಯುದ್ಧ ನಡೆಯುತ್ತಿರುವ ತಾವಿಗೆ ಹೋಗು; ಯುದ್ಧರಂಗಕ್ಕೆ ಹೋಗು.
  9. hold the line (ಮುಖ್ಯವಾಗಿ ಅನನುಕೂಲ ಬೆಳವಣಿಗೆಗಳು ಒದಗಿದಂತಾಗಲು) ಇರುವ ಪರಿಸ್ಥಿತಿಯನ್ನು – ಕಾಯ್ದುಕೊ, ಮುಂದುವರಿಸು, ಉಳಿಸಿಕೊ, (ಇರುವಂತೆಯೇ) ಇಟ್ಟಿರು.
  10. in line for (ಅದನ್ನು ಪಡೆಯುವವರ) ಸಾಲಿನಲ್ಲಿ; ಪಂಕ್ತಿಯಲ್ಲಿ; ಪಡೆಯುವಂತಿರುವ.
  11. in line with
    1. ಅನುಗುಣವಾಗಿ; ಅನುಸಾರವಾಗಿ.
    2. ಅದೇ ಮಟ್ಟದಲ್ಲಿ; ನೇರ ರೇಖೆಯಲ್ಲಿ; ಸರಳ ರೇಖೆಯನ್ನು ರೂಪಿಸುವಂತೆ.
  12. in the line of (duty) ಕರ್ತವ್ಯ ನಿರ್ವಹಣೆಯಲ್ಲಿ; ವೃತ್ತಿಗೆ ಸಂಬಂಧಪಟ್ಟ (ಮುಖ್ಯವಾಗಿ ಜೀವಸಾವುಗಳ ಜವಾಬ್ದಾರಿಯಿರುವ) ಕಾರ್ಯದಲ್ಲಿ ತೊಡಗಿದಾಗ: a policeman met his death in the line of duty ಪೊಲೀಸಿನವನು ತನ್ನ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದ್ದಾಗ ಮರಣ ಹೊಂದಿದನು.
  13. keep to one’s own line (ಅನೇಕ ವೇಳೆ ರೂಪಕವಾಗಿ ಸಹ) ತನ್ನದೇ (ಬೇಟೆಯ) ಜಾಡು ಅನುಸರಿಸು; ತನ್ನದೇ ದಾರಿಯಲ್ಲಿ, ದಿಕ್ಕಿನಲ್ಲಿ, ಹಾದಿಯಲ್ಲಿ, ಮಾರ್ಗದಲ್ಲಿ – ಹೋಗು.
  14. lay (or put) it on the line
    1. (ಅಶಿಷ್ಟ) ಹಣಕೊಡು; ದುಡ್ಡು ಪೀಕು; ರೊಕ್ಕ ಬಿಚ್ಚು.
    2. ಬೇಕಾದ ಸುದ್ದಿ ಕೊಡು; ನೇರವಾಗಿ ಯಾ ಮನಬಿಚ್ಚಿ, ಮರೆ ಮಾಚದೆ ಮಾತನಾಡು.
  15. on the line
    1. ಅಡ್ಡಗೋಡೆಯ ಮೇಲಿನಂತೆ; ಇಬ್ಬಂದಿಯಾಗಿ; ಸ್ಪಷ್ಟವಾಗಿ ಇದೂ ಇಲ್ಲ ಅದೂ ಇಲ್ಲ ಎಂಬಂತೆ.
    2. ಹಿಂಜರಿತವಿಲ್ಲದೆ, ಮುಚ್ಚುಮರೆಯಿಲ್ಲದೆ, ಸಂಪೂರ್ಣವಾಗಿ – ನೀಡಿದ, ಸಲ್ಲಿಸಿದ: put (or lay) on the line ಪೂರ್ತಿ ಮುಂದಿಡು; ಒದಗಿಸು.
  16. out of line with
    1. ಅನುಗುಣವಾಗಿಲ್ಲದೆ; ಅನುಸಾರವಾಗಿಲ್ಲದೆ.
    2. ಒಂದೇ ಮಟ್ಟದಲ್ಲಿ ಇಲ್ಲದೆ; ಏರುಪೇರಾಗಿ.
  17. read between the lines (ದಸ್ತೈವಜು, ಭಾಷಣ, ಮೊದಲಾದವುಗಳ) ಗೂಢಾರ್ಥವನ್ನು ಕಾಣು, ಕಂಡುಹಿಡಿ; ರಹಸ್ಯಾರ್ಥವನ್ನು ಪತ್ತೆಹಚ್ಚು; ಇಂಗಿತವನ್ನು ಗ್ರಹಿಸು: her letter sounded cheerful enough, but I read a certain sadness between the lines ಅವಳ ಕಾಗದವೇನೋ ಸಾಕಷ್ಟು ಸಂತೋಷದಿಂದ ಕೂಡಿದ್ದಂತೆ ಕಂಡಿತು, ಆದರೆ ಅದರೊಳಗೆ ಅಡಗಿದ್ದ ಯಾವುದೋ ದುಃಖವನ್ನು ಕಂಡೆ.
  18. toe the line (ಮುಖ್ಯವಾಗಿ ಇಚ್ಛೆಗೆ ವಿರೋಧವಾಗಿ ಯಾ ಒತ್ತಾಯಕ್ಕೆ ಮಣಿದು ಪಕ್ಷದ ಕಾರ್ಯಕ್ರಮ ಮೊದಲಾದವನ್ನು) ಒಪ್ಪಿಕೊ; ಅಂಗೀಕರಿಸು.
  19. translate life etc. into line and colour ಬಾಳು ಮೊದಲಾದವನ್ನು ರೇಖೆ ಮತ್ತು ಬಣ್ಣಗಳಿಂದ ಚಿತ್ರಿಸು, ನಿರೂಪಿಸು.
See also 1line  3line  4line  5line
2line ಲೈನ್‍
ಸಕರ್ಮಕ ಕ್ರಿಯಾಪದ
  1. (ಕಾಗದ ಮೊದಲಾದವುಗಳ ಮೇಲೆ) ಗೆರೆಹಾಕು; ಗೆರೆ ಎಳೆ; ರೇಖಿಸು.
  2. (ಕಾಗದ ಮೊದಲಾದವುಗಳ ಮೇಲೆ) ಗೆರೆಹಾಕಿ – ಪ್ರತ್ಯೇಕಿಸು, ಒಳಕೊಳ್ಳು ಯಾ ಗುರುತಿಸು.
  3. ಗೆರೆಗಳಿಂದ ತುಂಬು: a face lined with pain ನೋವಿನ ಗೆರೆಗಳಿಂದ ತುಂಬಿದ ಮುಖ.
  4. (ಜನರನ್ನು, ವಸ್ತುಗಳನ್ನು) ಸಾಲಾಗಿಸು; ಪಂಕ್ತಿಯಾಗಿಸು; ಸಾಲಾಗಿ – ನಿಲ್ಲಿಸು, ಇರಿಸು: crowds lined the route ಜನಸಂದಣಿ ದಾರಿಯುದ್ದಕ್ಕೂ ಸಾಲಾಗಿ ನಿಂತಿತ್ತು.
  5. ಸಾಲಾಗಿ ಹರಡು.
  6. (ರಸ್ತೆ, ಬೇಲಿ, ಮೊದಲಾದವುಗಳ ಉದ್ದಕ್ಕೂ ಸೈನಿಕರು ಮೊದಲಾದವರನ್ನು) ಸಾಲಾಗಿ ನಿಲ್ಲಿಸು.
  7. (ಒತ್ತಾದ ಯಾ ಬಿಟ್ಟುಬಿಟ್ಟು ಇರುವ) ಸಾಲನ್ನು ರಚಿಸು.
ಅಕರ್ಮಕ ಕ್ರಿಯಾಪದ
  1. ಸಾಲಾಗು; ಪಂಕ್ತಿಯಾಗು; ಸಾಲಿಗೆ ಬರು.
  2. ಸಾಲಾಗಿ ಹರಡಿಕೊ.
  3. (ಸೈನಿಕರ ವಿಷಯದಲ್ಲಿ) (ಕಣಿವೆ ಮೊದಲಾದವುಗಳ ಉದ್ದಕ್ಕೂ ಒತ್ತಾಗಿ ಯಾ ಬಿಟ್ಟುಬಿಟ್ಟು) ಸಾಲಾಗಿ ನಿಲ್ಲು.
  4. (ವಸ್ತುಗಳ ವಿಷಯದಲ್ಲಿ) (ಗೋಡೆ ಮೊದಲಾದವುಗಳ ಉದ್ದಕ್ಕೂ, ಮಧ್ಯೆ ಮಧ್ಯೆ ಸ್ಥಳ ಬಿಟ್ಟು) ಸಾಲಾಗಿರು; ಸಾಲಾಗಿ ನಿಲ್ಲು.
ಪದಗುಚ್ಛ

line up

  1. ಸಾಲಾಗಿಸು; ಸಾಲುಗೊಳಿಸು; ಪಂಕ್ತೀಕರಿಸು; ಸಾಲಿನಲ್ಲಿ ಯಾ ಸಾಲುಗಳಲ್ಲಿ ವ್ಯವಸ್ಥೆಗೊಳಿಸು, ಏರ್ಪಡಿಸು, ನಿಲ್ಲಿಸು.
  2. ಸಾಲಾಗು; ಸಾಲುಗೂಡು; ಪಂಕ್ತಿಯಾಗು; ಸಾಲಿನಲ್ಲಿ ಯಾ ಸಾಲುಗಳಲ್ಲಿ ವ್ಯವಸ್ಥೆಗೊಳ್ಳು, ಏರ್ಪಡು, ನಿಲ್ಲು.
  3. ಸಿದ್ಧವಾಗಿಟ್ಟುಕೊ; ವ್ಯವಸ್ಥೆ ಮಾಡಿಕೊ: had a job lined up ಒಂದು ಕೆಲಸವನ್ನು ಸಿದ್ಧವಾಗಿಟ್ಟುಕೊಂಡಿದ್ದ.
See also 1line  2line  4line  5line
3line ಲೈನ್‍
ಸಕರ್ಮಕ ಕ್ರಿಯಾಪದ
  1. (ಉಡುಪು; ಪೆಟ್ಟಿಗೆ, ಪಾತ್ರೆ, ಚೀಲ, ಮೊದಲಾದವುಗಳ) ಒಳಭಾಗಕ್ಕೆ (ಸಾಮಾನ್ಯವಾಗಿ ಬೇರೆಯ ವಸ್ತುವಿನ) ಒಳಪದರ ಜೋಡಿಸು; ಪದರವನ್ನು ಕೂಡಿಸು, ಹಾಕು; ಅಸ್ತರಿ ಹಾಕು.
  2. (ಉಡುಪು ಮೊದಲಾದವುಗಳಿಗೆ) ಒಳಪದರವಾಗಿರು; ಅಸ್ತರಿಯಾಗಿರು; ಅಸ್ತರಿಗೆ ಉಪಯೋಗವಾಗು.
  3. ಅಸ್ತರಿ ಯಾ ಒಳಪದರದಂತೆ ಮುಚ್ಚು: shelves lined with books ಪುಸ್ತಕಗಳ ಅಸ್ತರಿ ಹಾಕಿದಂತಿರುವ ಬಡುಗಳು.
  4. (ಆಡುಮಾತು) (ದುಡ್ಡಿನ ಚೀಲ, ಜೇಬು, ಹೊಟ್ಟೆ, ಮೊದಲಾದವನ್ನು, ಮುಖ್ಯವಾಗಿ ಯಥೇಚ್ಛವಾಗಿ) ತುಂಬು; ಭರ್ತಿಮಾಡು.
ನುಡಿಗಟ್ಟು

line one’s pocket (or purse) ಕಿಸೆ ತುಂಬು; ಜೇಬು ಭರ್ತಿ ಮಾಡು; (ಮುಖ್ಯವಾಗಿ ಭ್ರಷ್ಟಾಚಾರದಿಂದ) ದುಡ್ಡು ಮಾಡು.

See also 1line  2line  3line  5line
4line ಲೈನ್‍
ನಾಮವಾಚಕ

(ತುಂಡುನಾರಿನಿಂದ ಪ್ರತ್ಯೇಕಿಸಿದ) ಉದ್ದವಾದ, ನಯವಾದ ಕಿತ್ತಾನಾರು, ಅಗಸೆ ನಾರು.

See also 1line  2line  3line  4line
5line ಲೈನ್‍
ಸಕರ್ಮಕ ಕ್ರಿಯಾಪದ

(ನಾಯಿ, ತೋಳ, ನರಿ, ಮೊದಲಾದವುಗಳ ಗಂಡಿನ ವಿಷಯದಲ್ಲಿ) ಹೆಣ್ಣಿನೊಡನೆ – ಬೆರೆ, ಸಂಭೋಗ ಮಾಡು, ಕೂಡು.