See also 2draw
1draw ಡ್ರಾ
ಕ್ರಿಯಾಪದ
(ಭೂತರೂಪ drew, ಭೂತಕೃದಂತ drawn).
ಸಕರ್ಮಕ ಕ್ರಿಯಾಪದ
  1. (ನೀರಿನ ಮೇಲೆ ದೋಣಿಯನ್ನು, ಮುಖದ ಮೇಲೆ ಹ್ಯಾಟನ್ನು, ಸೊಂಟದಲ್ಲಿ ಬಿಗಿಯಾಗಿ ನಡುಪಟ್ಟಿಯನ್ನು, ಕಾಗದದ ಮೇಲೆ ಪೆನ್ನನ್ನು, ಏಕಾಂತವಾಗಿ ಮಾತಾಡಲು ಸ್ನೇಹಿತನನ್ನು ಒತ್ತಟ್ಟಿಗೆ) ಎಳೆ; ಸೆಳೆ; ಎಳೆದುಕೊ.
  2. (ನೇಗಿಲು, ಬಂಡಿ, ಹೊರ, ಮೊದಲಾದವನ್ನು) ಎಳೆ; ಎಳೆದುಕೊಂಡು ಹೋಗು; ತುಯ್ಯು.
  3. (ಚರಿತ್ರೆ) (ಅಪರಾಧಿಯನ್ನು ಚೌಕಟ್ಟಿನ ಮೇಲೆ ಕೂರಿಸಿ ವಧ್ಯಸ್ಥಾನಕ್ಕೆ) (ಕುದುರೆಬಾಲಕ್ಕೆ ಕಟ್ಟಿ ಯಾ ಗಲ್ಲು ಚೌಕಟ್ಟಿನ ಮೇಲೆ ದರದರನೆ) ಎಳೆದುಕೊಂಡುಹೋಗು; ಎಳೆದೊಯ್ಯು; ಸೆಳೆದೊಯ್ಯು.
  4. ಕಿರಿದು ಮಾಡಿಕೊ; ಚಿಕ್ಕದುಮಾಡಿಕೊ; ಸೊಟ್ಟ ಮಾಡಿಕೊ; ಸೊಟ್ಟಮಾಡು: with drawn face ಮುಖ ಚಿಕ್ಕದು ಮಾಡಿಕೊಂಡು.
  5. (ಬಲೆ) ಮೇಲಕ್ಕೆಳೆ; ಮೇಲಕ್ಕೆಳೆದುಕೊ; ಮೇಲಕ್ಕೆ ಜಗ್ಗು.
  6. (ಬಿಲ್ಲು) ಬಗ್ಗಿಸು; ಜಗ್ಗಿಸು; ಬಾಗಿಸು; ಹೆದೆ ಏರಿಸು.
  7. ಎಳೆದು ತಡೆ; ಬಿಗಿಮಾಡು; ನಿರೋಧಿಸು.
  8. (ತೆರೆ, ಪರದೆ, ಬುರುಕಿ) ಎಳೆ; ಎಳೆದು ಬಿಚ್ಚು ಯಾ ಮುಚ್ಚು.
  9. (ಬೋಲ್ಸ್‍ ಆಟ) ಉದ್ದಿಷ್ಟ ಜಾಗಕ್ಕೆ (ಚೆಂಡು ಸುತ್ತಿಕೊಂಡು ಯಾ ವಕ್ರಾಕಾರವಾಗಿ) ಹೋಗುವಂತೆ ಮಾಡು, ಉರುಳಿಸು.
  10. (ಕ್ರಿಕೆಟ್‍) ಚೆಂಡನ್ನು (ಬಲಗೈ ಆಟಗಾರ) ಎಡಗಡೆಗೆ, (ಎಡಗೈ ಆಟಗಾರ) ಬಲಗಡೆಗೆ ಹೋಗುವಂತೆ (ಬ್ಯಾಟಿನಿಂದ) ಹೊಡೆ.
  11. (ಗಾಲ್‍, ಬಲಗೈ ಆಟಗಾರನ ವಿಷಯದಲ್ಲಿ) ಚೆಂಡನ್ನು ತೀರ ಎಡಕ್ಕೆ ಹೊಡೆ.
  12. ಸೆಳೆ; ಆಕರ್ಷಿಸು: I felt drawn to him ನಾನು ಅವನಿಂದ ಆಕರ್ಷಿತನಾದೆ.
  13. (ತನ್ನ ಯಾ ಒಂದರ ಕಡೆ) ಎಳೆ; ಸೆಳೆ: draw his attention ಅವನ ಗಮನವನ್ನು ಸೆಳೆ. draw customers ಗಿರಾಕಿಗಳನ್ನು ಆಕರ್ಷಿಸು.
  14. ಹೀರು; ಸೆಳೆದುಕೊ; ಒಳಕ್ಕೆ ಎಳೆದುಕೊ: draw a deep breath ನೀಳವಾಗಿ ಉಸಿರನ್ನು ಎಳೆದುಕೊ.
  15. ಮಾಡಲು ಒಲಿಸು; ಪ್ರೇರೇಪಿಸು; ಪ್ರತ್ತಗೊಳಿಸು; ಪುಸಲಾಯಿಸು: him into talk ಅವನನ್ನು ಮಾತುಕತೆಗೆ ಎಳೆ, ಪ್ರೇರೇಪಿಸು.
  16. ಉಂಟುಮಾಡು; ಆಗಿಸು; ತರು: draw comment ಟೀಕೆ ತರು; ಟೀಕೆಗೆ ಒಳಪಡಿಸು. draw ruin upon oneself ತನ್ನ ಮೇಲೆ ತಾನೇ ಹಾನಿ ತಂದುಕೊ.
  17. (ಬಿರಡೆ, ಹಲ್ಲು, ಬಂದೂಕದ ಗುಂಡು, ಮೊಳೆ, ಆಟದ ಕೊನೆಯಲ್ಲಿ ನೆಲದಿಂದ ಕ್ರಿಕೆಟ್ಟಿನ ವಿಕೆಟ್ಟುಗಳು, ಪ್ಯಾಕಿನಿಂದ ಇಸ್ಪೀಟೆಲೆ, ಕೋಶದಿಂದ ಪಿಸ್ತೂಲು; ಒರೆಯಿಂದ ಕತ್ತಿ, ಪೆಟ್ಟಿಗೆಯಿಂದ ಲಾಟರಿಚೀಟಿ ಇವನ್ನು) ಹೊರಕ್ಕೆ ಎಳೆ; ಹೊರ ತೆಗೆ; ಹೊರಕ್ಕೆತ್ತು.
  18. (ನೆಲಗರಡಿ, ನರಿ, ಮೊದಲಾದವನ್ನು ಬಿಲದಿಂದ) ಹೊರಕ್ಕೆ ಎಳೆ; ಹೊರಡಿಸು.
  19. (ನೀರನ್ನು ಬಾವಿಯಿಂದ ಮೇಲಕ್ಕೆ) ಸೇದು; ಎಳೆ; ಜಗ್ಗು: draw water from the well ಬಾವಿಯಿಂದ ನೀರು ಸೇದು.
  20. (ಪಾತ್ರೆಯಿಂದ ದ್ರವ, ದೇಹದಿಂದ ರಕ್ತವನ್ನು) ಹೊರಹರಿಸು; ಹೊರಬರಿಸು; ಹೊರತೆಗೆ; ನಿಷ್ಕಾಸಿಸು; ನಿಷ್ಕಾಸಗೊಳಿಸು.
  21. (ಕಷಾಯ, ಸಾರ) ಇಳಿಸು; ತೆಗೆ; ಹಿಂಡು: draw the tea ಚಹದ ಕಷಾಯ ಇಳಿಸು. oil newly drawn ಹೊಸದಾಗಿ ಹಿಂಡಿ ತೆಗೆದ ಎಣ್ಣೆ.
  22. (ಪೋಲ್ಟೀಸಿನ ವಿಷಯದಲ್ಲಿ) (ಕೀವು ಮೊದಲಾದವನ್ನು) ಹೀರಿಕೊ; ಹೀರು; ತೆಗೆ.
  23. (ಒಂದು ಮೂಲದಿಂದ) ತೆಗೆ; ತೆಗೆದುಕೊ; ಪಡೆ; ಪಡೆದುಕೊ: draw one’s salary ಸಂಬಳ ಪಡೆ; ಪಗಾರ ತೆಗೆದುಕೊ.
  24. (ಇಸ್ಪೀಟು) (ಎಲೆಗಳನ್ನೆಲ್ಲ) ಆಡಿಸಿಬಿಡು; ಉದುರಿಸಿಬಿಡು; ಬೀಳಿಸಿಬಿಡು: all the trumps ತುರುಫನ್ನೆಲ್ಲ ಉದುರಿಸಿ ಬಿಡು.
  25. (ಗೂಢವಾಗಿರುವುದನ್ನು) ಹೊರ ಸೆಳೆ; ಹೊರಡಿಸು; ಹೊರಪಡಿಸು; ಹೊರಬರಿಸು; ಪ್ರಕಟಪಡಿಸು.
  26. (ಸುದ್ದಿ, ಸಹಜಶಕ್ತಿ, ಕೋಪ, ಮೊದಲಾದವನ್ನು ವ್ಯಕ್ತಿ) ಹೊರಪಡಿಸುವಂತೆ ಮಾಡು; ಪ್ರಕಟಿಸುವಂತೆ ಮಾಡು.
  27. (ತೀರ್ಮಾನವನ್ನು) ಊಹಿಸು; ತರ್ಕಿಸು; ಅನುಮಾನಿಸು.
  28. (ಒಂದರಿಂದ ಯಾವುದೇ ವಸ್ತುವನ್ನು) ಹೊರಕ್ಕೆಳೆ; ಹೊರತೆಗೆ; ಹೀರು; ಬರಿದುಮಾಡು; ಕಾಲಿ ಮಾಡು: calf draws cow ಕರು ಹಸುವಿನ ಕೆಚ್ಚಲು ಹೋರುತ್ತದೆ, ಬರಿದುಮಾಡುತ್ತದೆ.
  29. ಕರುಳು – ಕೀಳು, ತೆಗೆ, ಹಿರಿ: draw fowl (ಅಡುಗೆಗೆ ಮುಂಚೆ) ಕೋಳಿಯ ಕರುಳು ಹಿರಿ.
  30. (ಬೇಟೆ) (ಗೊತ್ತನ್ನು, ಅಡಗುದಾಣವನ್ನು) ಪ್ರಾಣಿಗಾಗಿ ಹುಡುಕು, ಶೋಧಿಸು.
  31. ಲಂಬಿಸು; ಎಳೆ; ಉದ್ದಮಾಡು: long drawn agony ದೀರ್ಘ ಕಾಲದ ವೇದನೆ; ಬಹುಕಾಲದ ನೋವು.
  32. (ನೇಗಿಲಿನ ಗೆರೆ, ರೇಖಾಚಿತ್ರ, ರೇಖೆ) ಎಳೆ; ಗುರುತಿಸು.
  33. ರೇಖಿಸು; ಚಿತ್ರಿಸು; ರೇಖನದಿಂದ ಚಿತ್ರ ರಚಿಸು; ಗೆರೆಗಳನ್ನೆಳೆದು (ವಸ್ತುವಿನ) ಆತಿ ರೂಪಿಸು.
  34. ವರ್ಣಿಸು; ಶಬ್ದಗಳಲ್ಲಿ ನಿರೂಪಿಸು; ಪದಗಳಲ್ಲಿ ಚಿತ್ರಿಸು: draw a character ಪಾತ್ರವನ್ನು ನಿರೂಪಿಸು.
  35. (ದಸ್ತಾವೇಜು) ಕಾಯಿದೆ ಬದ್ಧರೂಪದಲ್ಲಿ – ಬರೆ, ತಯಾರಿಸು, ರಚಿಸು: draw a deed of gift ದಾನಪತ್ರ ಬರೆ.
  36. (ಹೋಲಿಕೆಗಳನ್ನು, ತಾರತಮ್ಯಗಳನ್ನು) ಸೂತ್ರೀಕರಿಸು; ನಿರೂಪಿಸು: draw distinctions (ಪರಸ್ಪರ) ಭೇದ ನಿರೂಪಿಸು; ವ್ಯತ್ಯಾಸ ತೋರಿಸು.
  37. (ಖಾಸಗಿ ಬ್ಯಾಂಕರು, ಬ್ಯಾಂಕು, ಮೊದಲಾದವಕ್ಕೆ ಬಿಲ್ಲು, ಚೆಕ್ಕು, ಹುಂಡಿ) ಬರೆ.
  38. (ಹಡಗಿನ ವಿಷಯದಲ್ಲಿ) ತೇಲಲು ನಿರ್ದಿಷ್ಟ ಆಳ ಬೇಕಾಗಿರು: the ship draws 20ft. of water ಹಡಗಿಗೆ ತೇಲಲು 20 ಅಡಿ ಆಳನೀರು ಬೇಕು.
  39. (ಆಟವನ್ನು, ಯುದ್ಧವನ್ನು) ನಿರ್ಣಯವಾಗದೆಯೇ ಮುಗಿಸು; ತೀರ್ಮಾನಿಸಲಾಗದೆ ಕೈಬಿಡು; ಸಮ ಮಾಡಿಕೊ: (ಗೆಲ್ಲಲೂ ಆಗದೆ ಸೋತೂ ಹೋಗದೆ) ಸಮಸಮ ಮಾಡಿಕೊ.
  40. ಎಳೆ; ಲೋಹದ ಚೂರನ್ನು ಒಂದಾದ ಮೇಲೊಂದರಂತೆ ಸಣ್ಣದಾಗುತ್ತ ಹೋಗುವ ತೂತುಗಳ ಮೂಲಕ ಎಳೆದು ತಂತಿ ಮಾಡು: draw wire ಕಂಬಚ್ಚಿನಲ್ಲಿ ತಂತಿ ಎಳೆ; ಕ್ರಮವಾಗಿ ಕಿರಿದಾಗುವ ತೂತುಗಳ ಮೂಲಕ ಲೋಹದ ಕಂಬಿ ಎಳೆದು ತಂತಿ ತಯಾರಿಸು.
  41. (ಲಾಟರಿ, ಚೀಟಿ – ಎತ್ತುವ ಮೂಲಕ) ಪಡೆ; ಆರಿಸು; ಆಯು: draw the winner ಗೆಲ್ಲುವ ಚೀಟಿ ಆಯು: the jury is drawn fairly ಚೀಟಿ ಹಾಕಿ ನ್ಯಾಯದರ್ಶಿಗಳನ್ನು ಸರಿಯಾಗಿ ಆಯ್ಕೆ ಮಾಡಲಾಗಿದೆ.
  42. (ಬೆಂಕಿಯಿಂದ) ಕೆಂಡ ತೆಗೆ.
ಅಕರ್ಮಕ ಕ್ರಿಯಾಪದ
  1. ಗಾಳಿ ಎಳೆದುಕೊ; ಗಾಳಿ – ಸೆಳೆ, ಹೀರು: the pipe draws well ಚಿಲುಮೆ ಗಾಳಿಯನ್ನು ಚೆನ್ನಾಗಿ ಸೆಳೆಯುತ್ತದೆ.
  2. (ಒಂದು ಕೇಂದ್ರದ ಸುತ್ತ) ನೆರೆ; ಸೇರು; ಕೂಡು: draw round the table ಮೇಜಿನ ಸುತ್ತ ನೆರೆ.
  3. ಚೀಟಿ ಎತ್ತು; ಲಾಟರಿ ಎತ್ತು; ಸೋಡತಿ ತೆಗೆ.
  4. (ಕಷಾಯದ, ಸಾರದ ವಿಷಯದಲ್ಲಿ) ಇಳಿ; ತೆಗೆ; ಹಿಂಡು: the tea draws ಚಹದ ಕಷಾಯ ಇಳಿಯುತ್ತದೆ.
  5. (ಒಂದು ಮೂಲದಿಂದ) ಬರು: tax draws well ತೆರಿಗೆ ಚೆನ್ನಾಗಿ ಬರುತ್ತಿದೆ.
  6. (ನೌಕಾಯಾನ) (ಹಾಯಿ ಪಟದ ವಿಷಯದಲ್ಲಿ) ಗಾಳಿಯಿಂದ ಉಬ್ಬಿಕೊ.
  7. ರೇಖಿಸು: ಗೆರೆ ಎಳೆದು ಚಿತ್ರ ರೂಪಿಸು; ರೇಖಾಚಿತ್ರಣ ಮಾಡು.
  8. (ತನ್ನದೇ ಪ್ರತಿಭೆ, ಶಕ್ತಿ, ಮೊದಲಾದವುಗಳ) ಸಹಾಯ – ಕೋರು, ಅವಲಂಬಿಸು.
  9. (ವ್ಯಕ್ತಿ, ಅವನ ನಂಬಿಕೆ, ಅವನ ನೆನಪು, ಮೊದಲಾದವುಗಳನ್ನು ಬಳಸಿಕೊಂಡು ಸಹಾಯ, ಹಣ ಸೇವೆ ಮೊದಲಾದವನ್ನು) ಕೋರು; ಬೇಡು: draw on me for any help you need ನಿನಗೆ ಏನು ಸಹಾಯ ಬೇಕಾದರೂ ನನ್ನನ್ನು ಕೋರು.
  10. (ಕಡೆಗೆ, ಹತ್ತಿರಕ್ಕೆ, ದೂರಕ್ಕೆ, ಹಿಂದಕ್ಕೆ) ಬರು; ಹೋಗು; ಸರಿ; ಚಲಿಸು; ಮುಟ್ಟು; ತಲಪು; ಹತ್ತಿರವಾಗು: the year is drawing to an end ವರ್ಷ ಕೊನೆಮುಟ್ಟುತ್ತಿದೆ. the examinations are drawing near ಪರೀಕ್ಷೆಗಳು ಹತ್ತಿರವಾಗುತ್ತಿವೆ.
  11. ಕತ್ತಿ ಹಿರಿ; ಕತ್ತಿ ಎಳೆ.
  12. ಪಿಸ್ತೂಲು ಹೊರತೆಗೆ.
  13. (ಆಟ, ಯುದ್ಧ) ಸಮವಾಗು; ಸರಿಸಮವಾಗು; ಯಾರೂ ಗೆಲ್ಲದೆ ಯಾ ಸೋಲದೆ ಆಗು.
  14. (ರೇಸಿನಲ್ಲಿ)
    1. ಮುಂದಾಗು.
    2. ಸಮಕ್ಕೆ ಬರು.
    3. ಹತ್ತಿರಕ್ಕೆ ಬರು.
ಪದಗುಚ್ಛ
  1. draw at ಚಿಲುಮೆ ಸೇದು; ಚಿಲುಮೆಯಿಂದ ಹೊಗೆಯನ್ನು ಸೇದು.
  2. draw cloth (ಊಟವಾದ ಮೇಲೆ) ಮೇಜನ್ನು ಚೊಕ್ಕಟ ಮಾಡು.
  3. draw inspiration ಸೂರ್ತಿಪಡೆ.
  4. draw person’s fire ಒಬ್ಬನ ಮೇಲೆ ಹಾರಿಸಿದ ಗುಂಡನ್ನು ಬೇರೆಡೆಗೆ ತಿರುಗಿಸು.
  5. draw straws (ಚೀಟಿಗಳಿಗೆ ಬದಲು) ಸಮವಲ್ಲದ ಹುಲ್ಲುಕಡ್ಡಿಗಳನ್ನು ಬಳಸಿ ಲಾಟರಿ ಎತ್ತು.
  6. draw stumps (ಕ್ರಿಕೆಟ್‍) (ವಿಕೆಟ್ಟುಗಳನ್ನು ಕಿತ್ತು) ಕ್ರಿಕೆಟ್‍ ಆಟ ಮುಗಿಸು, ಕೊನೆಗೊಳಿಸು.
  7. draw taut ಎಳೆದು ಬಿಗಿಯಾಗು: the rope drew taut ಹಗ್ಗ ಎಳೆದು ಬಿಗಿಯಾಯಿತು.
  8. draw well ಚೆನ್ನಾಗಿ ಎಳೆ; ಸರಾಗವಾಗಿ ಎಳೆದುಕೊಳ್ಳಲು, (ಚಿಲುಮೆಯ ವಿಷಯದಲ್ಲಿ) ಸೇದಲು, ಅನುಕೂಲವಾಗಿರು: the pipe draws well ಈ ಚಿಲುಮೆ (ಸುಲಭವಾಗಿ) ಸೇದಲು ಅನುಕೂಲವಾಗಿದೆ.
  9. hanged, drawn and quartered (ಅಪರಾಧಿಯ ವಿಷಯದಲ್ಲಿ) ನೇಣುಹಾಕಿ, ಕರುಳು ಬಗೆದು, ಅಂಗಾಂಗ ಕತ್ತರಿಸಿ ಹಾಕಿದ.
  10. with drawn face ಮುಖ ಸೆಟೆಸಿ; ಮುಖ ಸೊಟ್ಟಗೆ ಮಾಡಿಕೊಂಡು; ಸಿಂಡರಿಸಿಕೊಂಡು.
ನುಡಿಗಟ್ಟು
  1. at daggers drawn ಕತ್ತಿ ಹಿರಿದು; ಪ್ರತ್ಯಕ್ಷವಾಗಿ ದ್ವೇಷ ತಳೆದು.
  2. draw a bead on (ಬಂದೂಕಿನಿಂದ) ಗುರಿ ಇಡು.
  3. draw (a) blank
    1. ಸೊನ್ನೆ ಚೀಟಿ ಎತ್ತು; ಬೆಲೆಯಿಲ್ಲದ್ದನ್ನು ಪಡೆ.
    2. (ಬೇಟೆಯ ಪ್ರಾಣಿಯ ವಿಷಯದಲ್ಲಿ) ಹುಡುಕಿದ್ದು ಪಡೆಯದೆ ಹೋಗು.
    3. ಬರಿಗೈಯಲ್ಲಿ ಹೋಗು; ಅಯಶಸ್ವಿಯಾಗು.
    4. ಪ್ರತಿಕ್ರಿಯೆ, ಉತ್ತರ – ಪಡೆಯದೆ ಹೋಗು.
  4. draw a bow at a venture ಗುರಿಗೆ ಹೇಗೋ ತಗಲುವಂತೆ ಆಕಸ್ಮಿಕ ಟೀಕೆಮಾಡು.
  5. draw a cover (or convert) ನರಿಯನ್ನು ಬೆದರಿಸಿ ಹೊರಹೊಡಿಸಲು ಬೇಟೆ ನಾಯಿಗಳನ್ನು ಅದರ ಗೊತ್ತಿಗೆ, ಮರೆಗೆ ಕಳುಹಿಸು.
  6. draw a distinction between ಭೇದ ತೋರಿಸು; ವ್ಯತ್ಯಾಸ ಗುರುತಿಸು.
  7. draw a line ಗೆರೆ ಹಾಕು; ಎಲ್ಲೆ ಕಲ್ಪಿಸು; ಗಡಿ ಹಾಕು; (ಪರಸ್ಪರ ಬೆರೆತುಹೋಗುವ ಸಂಭವವಿರುವ ವಿಷಯಗಳಲ್ಲಿ) ಇಷ್ಟಬಂದ ಯಾವುದೋ ಗಡಿಹಾಕು: the courts must draw a line between the right of free speech and genuine subversive utterance ವಾಕ್‍ಸ್ವಾತಂತ್ರ್ಯದ ಹಕ್ಕಿಗೂ ನಿಜವಾಗಿ ಬುಡಮೇಲು ಮಾಡುವ ಭಾಷಣಕ್ಕೂ ನಡುವಣ ಗಡಿಯನ್ನು ನ್ಯಾಯಸ್ಥಾನಗಳು ನಿರ್ಧರಿಸಬೇಕು.
  8. draw a long bow ಉತ್ಪ್ರೇಕ್ಷಿಸು.
  9. draw a parallel, comparison, analogy (between) ಹೋಲಿಕೆ ತೋರಿಸು; ಸಾಶ್ಯ, ಸಾಮ್ಯ – ತೋರಿಸು.
  10. draw a veil over (ಒಂದರ ಮೇಲೆ) ಮುಸುಕೆಳೆ; ಮುಚ್ಚಿಡು; ಗೋಪ್ಯಮಾಡು.
  11. draw back (ಕೈಗೊಂಡ ಕೆಲಸದಿಂದ) ಹಿಮ್ಮೆಟ್ಟು; ಹಿಂಜರಿ.
  12. draw bit, bride, rein
    1. ಕಡಿವಾಣ ಯಾ ಲಗಾಮು ಎಳೆದು ಕುದುರೆಯನ್ನು ತಡೆ, ನಿಲ್ಲಿಸು.
    2. ಬಿಗಿ ಹಿಡಿ; ಸಂಯಮ ತೋರು; ನಿಗ್ರಹಿಸು; ತನ್ನನ್ನು ತಾನೇ ಅಂಕೆಯಲ್ಲಿಟ್ಟುಕೊ.
  13. draw blood
    1. ರಕ್ತ ಬರಿಸು; ದೇಹವನ್ನು ಗಾಯಗೊಳಿಸು.
    2. ಮನಸ್ಸನ್ನು ನೋಯಿಸು: he drew blood when he ridiculed us for our failure ನಮ್ಮ ಸೋಲಿಗಾಗಿ ನಮ್ಮನ್ನವನು ಅಪಹಾಸ್ಯ ಮಾಡಿದಾಗ ನಮ್ಮ ಮನಸ್ಸನ್ನು ನೋಯಿಸಿದ.
  14. draw cuts (ಲಾಟರಿ) ಚೀಟಿ ಎತ್ತು.
  15. draw down the curtain
    1. ನಾಟಕ ಮುಗಿಸು.
    2. ಜೀವನ ಕೊನೆಗಾಣಿಸು; ಬದುಕು ಮುಗಿಸು.
  16. draw in
    1. ಪುಸಲಾಯಿಸಿ ಸೆಳೆ; ಮರುಳುಮಾಡಿ – ಸೇರಿಸಿಕೊ, ಸಿಕ್ಕಿಸಿಕೊ; ಆಸೆ ಹುಟ್ಟಿಸಿ ವಶಮಾಡಿಕೊ; ಪ್ರಲೋಭನಗೊಳಿಸು; ವ್ಯಾಮೋಹಕ್ಕೊಳಪಡಿಸು.
    2. (ಹಗಲಿನ ವಿಷಯದಲ್ಲಿ) ಮುಗಿಯುತ್ತ ಬರು.
    3. (ಹಗಲು) ದಿನೇದಿನೇ ಕಡಮೆಯಾಗು.
  17. draw in one’s expenditure ಖರ್ಚು ತಗ್ಗಿಸು; ವೆಚ್ಚ ಕಡಿಮೆ ಮಾಡು; ಖರ್ಚು ಕತ್ತರಿಸು; ವೆಚ್ಚ ಕಡಿ.
  18. draw in one’s horns ಹಿಂದಿಗಿಂತ ಜಾಗರೂಕವಾಗಿರು: he had better draw in his horns if he wants to keep out of trouble ತೊಂದರೆಯಿಂದ ದೂರ ಇರಬೇಕೆಂದರೆ ಅವನು ಹಿಂದಿಗಿಂತ ಜಾಗರೂಕನಾಗಿರಬೇಕು.
  19. draw it fine (ತಾರತಮ್ಯ ಮೊದಲಾದವನ್ನು ನಿರ್ಣಯಿಸುವುದರಲ್ಲಿ) ತೀರ ಖಚಿತವಾಗಿರು; ಬಹಳ ನಿಷ್ಕೃಷ್ಟವಾಗಿರು; ಬಹಳ ಕರಾರುವಾಕ್ಕಾಗಿರು.
  20. draw it mild ಅತಿ ಮಾಡಬೇಡ; ಉತ್ಪ್ರೇಕ್ಷೆ ಮಾಡಬೇಡ; ಹಾಳತದಲ್ಲಿರು.
  21. draw off
    1. (ಸೇನೆಯನ್ನು) ಹಿಂದಕ್ಕೆ – ಕರೆ, ಕರೆಸಿಕೊ.
    2. (ಸೇನೆ) ಹಿಂದಕ್ಕೆ – ಬರು, ಸರಿ, ಹೋಗು.
    3. (ಕೈಗವಸು, ಬೂಟ್ಸು, ಮೊದಲಾದವನ್ನು) ಕಳಚಿಹಾಕು.
  22. draw on
    1. ಉಂಟುಮಾಡು ಯಾ ಉಂಟಾಗು.
    2. ಮರುಳುಮಾಡಿ ಸೆಳೆ; ಆಕರ್ಷಿಸು; ಪುಸಲಾಯಿಸಿ – ಸೇರಿಸಿಕೊ, ಸಿಕ್ಕಿಸಿಕೊ.
    3. ಆಧಾರ ಯಾ ಆಕರವಾಗಿ ಅವಲಂಬಿಸು: drawing on the Bible for authority ಆಧಾರಗ್ರಂಥವಾಗಿ ಬೈಬಲ್ಲನ್ನು ಅವಲಂಬಿಸಿ.
    4. ಹತ್ತಿರ ಬರು; ಬಳಿಸಾರು; ಸಈಪಿಸು: he felt death drawing on ಸಾವು ಹತ್ತಿರವಾಗುತ್ತಿದೆಯೆಂದು ಅವನಿಗೆ ಅರಿವಾಯಿತು.
    5. (ಕೈಗವಸು, ಬೂಟ್ಸು, ಮೊದಲಾದವನ್ನು) ಹಾಕಿಕೊ; ತೊಡು.
    6. ಒಯ್ಯು; ತರು.
  23. draw one’s first breath ಮೊದಲುಸಿರೆಳೆ; ಹುಟ್ಟು.
  24. draw one’s last breath ಕಡೆಯುಸಿರೆಳೆ; ಕೊನೆಯುಸಿರೆಳೆ; ಸಾಯು.
  25. draw one’s sword against ಮೇಲೆ ಬೀಳು; ಎರಗು; ಆಕ್ರಮಣಮಾಡು.
  26. draw one’s time (ಮುಖ್ಯವಾಗಿ ಒತ್ತಡಕ್ಕೊಳಗಾಗಿ) ತನ್ನ ಹುದ್ದೆಯನ್ನು ಬಿಟ್ಟುಬಿಡು: get to work or draw your time right now ಕೆಲಸದಲ್ಲಿ ತೊಡಗು, ಇಲ್ಲವೆ ಈಗಲೇ ನಿನ್ನ ಹುದ್ದೆ ಬಿಟ್ಟು ಬಿಡು.
  27. draw on one’s imagination ಕಲ್ಪಿತವಾದ ಯಾ ಸುಳ್ಳು ಹೇಳಿಕೆಗಳನ್ನು ಕೊಡು.
  28. draw on one’s memory
    1. ನೆನಪಿಗೆ ತಂದುಕೊಳ್ಳಲು ಯತ್ನಿಸು.
    2. ನೆನಪಿಗೆ ಬಂದದ್ದನ್ನು ಬಳಸು.
  29. draw out
    1. (ಸೈನ್ಯವನ್ನು) ಹೊರಕ್ಕೆ ಒಯ್ಯು.
    2. (ಸೇನೆಯ ತುಕಡಿಯನ್ನು) ಬೇರ್ಪಡಿಸು; ಪ್ರತ್ಯೇಕಿಸು.
    3. (ಸೇನೆಯ) ವ್ಯೂಹ ರಚಿಸು: ಸಾಲುಕಟ್ಟಿ ನಿಲ್ಲಿಸು.
    4. ಕಾಲ – ಎಳೆ, ಲಂಬಿಸು.
    5. (ಒಬ್ಬನ) ಮನಸ್ಸಿನಲ್ಲಿರುವುದನ್ನು ಹೊರಡಿಸು, ಹೊರಪಡಿಸು.
    6. (ವ್ಯಕ್ತಿಯನ್ನು) ಮಾತಾಡುವಂತೆ, ಬಾಯಿಬಿಡುವಂತೆ – ಮಾಡು; ಮಾತನಾಡಲು – ಮನವೊಲಿಸು. ಪ್ರೇರೇಪಿಸು.
    7. (ದಸ್ತಾವೇಜು ಮೊದಲಾದವನ್ನು) ಕಾಯಿದೆಬದ್ಧ ರೂಪದಲ್ಲಿ – ಬರೆ, ತಯಾರಿಸು.
    8. (ಹಗಲು) ನೀಳವಾಗುತ್ತಾ ಹೋಗು.
    9. ನೀಳಮಾಡು; ಉದ್ದವಾಗಿಸು; ದೀರ್ಘವಾಗಿಸು: ದೀರ್ಘವಾಗಿಸು: the argument was long drawn out ವಾದ ಬಹಳ ದೀರ್ಘವಾಗಿ ಬೆಳೆಯಿತು.
    10. (ರೈಲು ಮೊದಲಾದವುಗಳ ವಿಷಯದಲ್ಲಿ) ನಿಲ್ದಾಣವನ್ನು ಬಿಡು.
  30. draw the fangs ನಿರುಪದ್ರವಿಯಾಗಿಸು; ನಿಷ್ಪರಿಣಾಮಗೊಳಿಸು: this forthright answer drew the fangs of his criticism ಈ ನೇರವಾದ ಉತ್ತರ ಆತನ ಟೀಕೆಯನ್ನು ನಿಷ್ಪರಿಣಾಮಗೊಳಿಸಿತು.
  31. draw the line (ತನ್ನ ಸಹನೆ, ಇಷ್ಟ, ಮೊದಲಾದವುಗಳ) ಮಿತಿ ಗುರುತಿಸು: ಮಿತಿಹಾಕು: I am not intolerant but one must draw the line somewhere ನಾನೇನೂ ಅಸಹಿಷ್ಣುವಲ್ಲ, ಆದರೆ ಎಲ್ಲಾದಾರೂ ಒಂದು ಗೆರೆ ಎಳೆಯಲೇ ಬೇಕು.
  32. draw the line at ಮಿತಿಹಾಕು; ಅಷ್ಟು ದೂರ ಯಾ ಅಲ್ಲಿಂದಾಚೆ ಹೋಗಲು ನಿರಾಕರಿಸು, ಒಪ್ಪದಿರು.
  33. draw the long bow = ನುಡಿಗಟ್ಟು \((8)\).
  34. draw the temper (ಕಾಯಿಸುವುದರಿಂದ ಹದಮಾಡಿದ ಉಕ್ಕಿನ) ಹದ ಕಡಿಮೆಮಾಡು: ದುರ್ಬಲಗೊಳಿಸು.
  35. draw to a head ಪರಿಪಕ್ವಮಾಗು: ಅಂತಿಮ ಘಟ್ಟ ತಲಪು: the struggle for power drew to a head ಅಧಿಕಾರಕ್ಕಾಗಿ ನಡೆದ ಹೋರಾಟ ಅಂತಿಮ ಘಟ್ಟ ತಲಪಿತು.
  36. draw together
    1. ಒಂದಾಗಿಸು: only hatred shared drew them together ಇಬ್ಬರಿಗೂ ಇದ್ದ ದ್ವೇಷವೊಂದೇ ಅವರನ್ನು ಒಂದಾಗಿಸಿತು.
    2. ಒಂದಾಗು: sensible people will draw together to face a common danger ಸಮಾನವಾಗಿ ಇರುವ ಅಪಾಯ ಎದುರಿಸಲು ವಿವೇಕಿಗಳು ಒಂದಾಗುತ್ತಾರೆ.
  37. draw up
    1. ಸೆಟೆದು ನಿಲ್ಲು.
    2. ಬಿಗಿ ಮನೋಭಾವ ತಳೆ: she drew herself up and asserted that she would never sell her family house ಆಕೆ ಬಿಗಿ ಮನೋಭಾವ ತಳೆದು ತನ್ನ ಕುಟುಂಬದ ಮನೆಯನ್ನು ಎಂದಿಗೂ ಮಾರುವುದಿಲ್ಲವೆಂದು ಖಂಡಿತವಾಗಿ ಹೇಳಿಬಿಟ್ಟಳು.
    3. (ಸೇನೆಯನ್ನು) ಸುವ್ಯವಸ್ಥೆಗೊಳಿಸು.
    4. (ದಸ್ತಾವೇಜು ಮೊದಲಾದವನ್ನು) ಕಾಯಿದೆಬದ್ಧ ರೂಪದಲ್ಲಿ ಬರೆ, ತಯಾರಿಸು.
    5. ಸಮಕ್ಕೆ ಬರು; ಸರಿಯಾಗಿ (ಸ್ಥಳಕ್ಕೆ) ಬಂದು ನಿಲ್ಲು: the carriage drew up before the door ಗಾಡಿ ಸರಿಯಾಗಿ ಬಾಗಿಲ ಮುಂದೆ ಬಂದು ನಿಂತಿತು.
    6. (ಸೇನೆ) ಸುವ್ಯವಸ್ಥೆಗೆ ಬರು.
  38. draw upon ಆಧಾರ ಯಾ ಆಕರವಾಗಿ ಅವಲಂಬಿಸು.