See also 2leg
1leg ಲೆಗ್‍
ನಾಮವಾಚಕ
  1. (ಮನುಷ್ಯ ಯಾ ಪ್ರಾಣಿ ನಡೆಯಲು ಯಾ ನಿಲ್ಲಲು ಬಳಸುವ) ಕಾಲು.
  2. ಕಾಲು; ಸೊಂಟದಿಂದ ಹರಡಿನವರೆಗಿನ ಭಾಗ.
  3. (ಆಹಾರವಾಗಿ ಬಳಸುವ) ಪ್ರಾಣಿಯ, ಮೃಗದ – ಕಾಲು.
  4. ಕೃತಕ ಕಾಲು: wooden leg ಮರದ ಕಾಲು. cork leg ಬೆಂಡಿನ ಕಾಲು.
  5. (ಉಡುಪಿನ) ಕಾಲು; ಕಾಲನ್ನು ಪೂರ್ತಿ ಯಾ ಭಾಗಶಃ ಮುಚ್ಚುವ ಉಡುಪಿನ ಭಾಗ.
  6. (ಮೇಜು, ಕುರ್ಚಿ, ಮಂಚ, ಮೊದಲಾದವುಗಳ) ಕಾಲು; ಆಸರೆ; ಊರೆ; ಆಧಾರ.
  7. ಕಾಲು; ಒದೆ ಕೊಟ್ಟಿರುವ, ಉದ್ದವಾಗಿ ತೆಳ್ಳಗಿರುವ ಆಸರೆ, ಮುಖ್ಯವಾಗಿ ಕಂಬ.
  8. (ಕ್ರಿಕಿಟ್‍) ಲೆಗ್‍(ಸ್ಥಾನ); ಬೋಲರನ್ನು ಎದುರಿಸುತ್ತಿರುವ ಬಲಗೈ ದಾಂಡುಗಾರನ ಸ್ಥಾನದ ಎಡ ಪಕ್ಕದ ಹಿಂಭಾಗ.
  9. (ದೂರ ಯಾನ ಯಾ ಪ್ರಯಾಣದ) ಒಂದು ಘಟ್ಟ, ಮಜಲು, ಹಂತ.
  10. ಲೆಗ್‍:
    1. ವರಸೆ; ಪಾಳಿ; ಸುತ್ತು; ರಿಲೇ ಓಟದ ಪಂದ್ಯದಲ್ಲಿನ ಒಂದು ಹಂತ, ಘಟ್ಟ.
    2. (ಎರಡು ಯಾ ಹೆಚ್ಚು ಆಟಗಳು ಕೂಡಿ ಆಗಿರುವ ಒಂದು ಸುತ್ತಿನಲ್ಲಿ) ಒಂದು ಆಟ.
    3. ಸ್ಪರ್ಧೆಯಲ್ಲಿನ ಒಂದು – ಹಂತ, ಘಟ್ಟ.
  11. ಕಾಲು; ಕವಲೊಡೆದಿರುವ, ಕವಲಿನಂತಿರುವ ವಸ್ತುವಿನ ಒಂದು ಕವಲು, ಶಾಖೆ.
  12. (ನೌಕಾಯಾನ) ಯಾನ ದೂರ; ಯಾನದ ವರಸೆ, ಘಟ್ಟ, ಮಜಲು; ದಿಕ್ಕು ಬದಲಾಯಿಸದೆ ನೆಟ್ಟಗೆ ಸಾಗುತ್ತಿರುವ ಹಡಗು ಯಾವುದೇ ಒಂದು ನೇರದಲ್ಲಿ ಚಲಿಸುವ ದೂರ.
  13. (ಪ್ರಾಚೀನ ಪ್ರಯೋಗ) ಒಂದು ಕಾಲನ್ನು ನೇರವಾಗಿಟ್ಟುಕೊಂಡು, ಇನ್ನೊಂದನ್ನು ಹಿಂದಕ್ಕೆ ಸರಿಸಿ ಕೊಂಚ ಬಾಗಿಸಿ ಮಾಡುವ ಒಂದು ಬಗೆಯ ಪ್ರಣಾಮ.
  14. (ಬ್ರಿಟಿಷ್‍ ಪ್ರಯೋಗ) ವಂಚಕ; ಮೋಸಗಾರ.
  15. (ಯಂತ್ರ ಮೊದಲಾದವುಗಳ) ಕಾಲು; ಆಸರೆ; ಊರೆಗೂಟ, ಊರೆಗೋಲು, ಮೊದಲಾದವು.
  16. (ರೇಖಾಗಣಿತ) ಭುಜ; ತ್ರಿಭುಜದಲ್ಲಿ ಆಧಾರ ಯಾ ತಳರೇಖೆಯನ್ನು ಬಿಟ್ಟರೆ ಉಳಿಯುವ ಎರಡು ಭುಜಗಳಲ್ಲಿ ಒಂದು.
ಪದಗುಚ್ಛ
  1. have no legs (ಆಡುಮಾತು) (ಗಾಲ್‍ ಚೆಂಡಿನ ವಿಷಯದಲ್ಲಿ) ಅಪೇಕ್ಷಿತ ಸ್ಥಾನವನ್ನು ತಲುಪಲು ಸಾಕಷ್ಟು ಆವೇಗ ಇಲ್ಲದಿರು; ಗುರಿ ಮುಟ್ಟಲು ಸಾಕಷ್ಟು ಆವೇಗ ಇಲ್ಲದಿರು; ಗುರಿ ಮುಟ್ಟಲು ಸಾಕಷ್ಟು ವೇಗವಿಲ್ಲದಿರು.
  2. hit to leg (ಕ್ರಿಕೆಟ್‍) ಲೆಗ್‍ ಕಡೆಗೆ ಯಾ ದಿಕ್ಕಿಗೆ (ಚೆಂಡನ್ನು) ಹೊಡೆ.
  3. leg before wicket (ಸಂಕ್ಷಿಪ್ತ lbw) ಕಾಲುತಡೆ; ಕಾಲಡ್ಡಿ; ವಿಕೆಟ್ಟಿನತ್ತ ಹೋಗುವ ಚೆಂಡನ್ನು ದಾಂಡುಗಾರನ ಕಾಲು ಅಕ್ರಮವಾಗಿ ತಡೆದಾಗ ಆಗುವ ತಪ್ಪು.
  4. leg of mutton ಕುರಿಮಾಂಸದ ಕಾಲು.
  5. short leg, square leg (ಕ್ರಿಕೆಟ್‍) ಮೈದಾನದ ವಿವಿಧ ಸ್ಥಳಗಳಲ್ಲಿ ನಿಂತಿರುವ ಹೀಲ್ಡರುಗಳು. (ಚಿತ್ರಕ್ಕೆ $^2$cricket ನೋಡಿ).
ನುಡಿಗಟ್ಟು
  1. all legs (ಯುವಕನ ವಿಷಯದಲ್ಲಿ) ಅತಿಯಾಗಿ ಬೆಳೆದು ವಿಕಾರವಾಗಿರುವ.
  2. bone in one’s leg ಕುಂಟು ನೆಪ.
  3. $^1$fall. on one’s legs (or feet) ಕಷ್ಟದಿಂದ ಪೂರ್ತಿ ಪಾರಾಗು; ತೊಂದರೆಯಿಂದ ಪೂರ್ಣವಾಗಿ – ತಪ್ಪಿಸಿಕೊ, ಮುಕ್ತನಾಗು.
  4. feel (or find) one’s legs ಎದ್ದು ನಿಂತುಕೊಳ್ಳುವ, ಓಡಾಡುವ ಯಾ ನಡೆದಾಡುವ ಶಕ್ತಿ, ತ್ರಾಣ – ಗಳಿಸು, ಪಡೆ.
  5. give a person leg up ಕುದುರೆ ಮೊದಲಾದವನ್ನು ಹತ್ತಲು, ಏರಲು ಯಾ ಕಷ್ಟ, ಅಡಚಣೆ ದಾಟಲು ಒಬ್ಬನಿಗೆ – ನೆರವಾಗು, ಸಹಾಯ ಮಾಡು.
  6. give leg-bail ಓಟಕೀಳು; ಕಂಬಿಕೀಳು; ಪರಾರಿಯಾಗು.
  7. have the legs of ಇನ್ನೂ ವೇಗವಾಗಿ ಯಾ ದೂರ ಹೋಗುವ ಸಾಮರ್ಥ್ಯ ಪಡೆದಿರು.
  8. keep one’s legs ಬೀಳದಿರು; ಕುಸಿಯದಿರು; ಬೀಳದೆ ನಿಂತಿರು, ನಡೆಯುತ್ತಿರು.
  9. make a leg (ಪ್ರಾಚೀನ ಪ್ರಯೋಗ) ಒಂದು ಕಾಲನ್ನು ಹಿಂದಕ್ಕಿಟ್ಟು ನಮಿಸು, ಪ್ರಣಾಮ ಮಾಡು.
  10. not have a leg to stand on (ತನ್ನ ವಾದಕ್ಕೆ ವಾಸ್ತವಾಂಶಗಳ ಯಾ ಯುಕ್ತಕಾರಣಗಳ) ಯಾವುದೇ ಆಧಾರವಿಲ್ಲದಿರು.
  11. on one’s hind legs = ನುಡಿಗಟ್ಟು \((12)\).
  12. on one’s (or its) last legs
    1. ಸಾವಿನಂಚಿನಲ್ಲಿ; ಸಾವನ್ನು ಯಾ ಅಂತ್ಯವನ್ನು ತಲುಪಿ, ಸಮೀಪಿಸಿ.
    2. ಅಳಿವಿನಂಚಿನಲ್ಲಿ; ತನ್ನ ಉಪಯುಕ್ತತೆ ಮೊದಲಾದವುಗಳ ಅಂತ್ಯದಲ್ಲಿ.
  13. pull one’s leg (ಆಡುಮಾತು) (ಪರಿಹಾಸ ಮೊದಲಾದವುಗಳಿಂದ ಒಬ್ಬನನ್ನು) ಅವಿವೇಕಿಯಾಗಿ ತೋರುವಂತೆ ಮಾಡು; ಬೆಪ್ಪು – ಮಾಡು, ಹಿಡಿಸು.
  14. put one’s $^1$best leg (or foot) foremost (or forward)
    1. ಆದಷ್ಟು ಜೋರಾಗಿ ಹೋಗು; ಬಿರುಸಾಗಿ ನಡೆ; ಬೀಸುಗಾಲು ಹಾಕು.
    2. ಶಕ್ತಿಮೀರಿ ಶ್ರಮಿಸು; ಮುಂದಕ್ಕೆ ಬರಲು ಯಾ ಮೇಲಕ್ಕೇರಲು ಸಾಧ್ಯವಾದುದನ್ನೆಲ್ಲ ಮಾಡು.
  15. set (one) on one’s legs ಒಬ್ಬನನ್ನು ಸ್ವಾವಲಂಬಿಯನ್ನಾಗಿ ಮಾಡು; ತನ್ನ ಕಾಲ ಮೇಲೆಯೇ ನಿಲ್ಲುವಂತೆ ಮಾಡು.
  16. shake a leg ಕುಣಿ; ನರ್ತಿಸು; ನೃತ್ಯ ಮಾಡು.
  17. show a leg ಹಾಸಿಗೆಯಿಂದ ಏಳು.
  18. stand on one’s own legs ಸ್ವಾವಲಂಬಿಯಾಗಿರು; ತನ್ನ ಕಾಲಿನ ಮೇಲೆ ನಿಲ್ಲುವಂತಾಗು.
  19. stretch one’s legs ವ್ಯಾಯಾಮಕ್ಕಾಗಿ ಕಾಲುನೀಡು, ಕಾಲಾಡಿಸು, ನಡೆದಾಡು.
  20. take to one’s legs ಕಾಲಿಗೆ ಬುದ್ಧಿ ಹೇಳು; ಕಂಬಿಕೀಳು; ಓಡಿಹೋಗು.
  21. the $^1$boot is on the other leg ನಿಜಸ್ಥಿತಿಯು (ಒಬ್ಬನು ಹೇಳುತ್ತಿರುವುದಕ್ಕೆ ಯಾ ಆರೋಪಿ ಸುತ್ತಿರುವುದಕ್ಕೆ) ವ್ಯತಿರಿಕ್ತವಾಗಿದೆ: you are blaming me, but the boot is on the other leg ನೀನು ನನ್ನನ್ನು ದೂರುತ್ತಿದ್ದೀಯೆ, ನಿಜಸ್ಥಿತಿಯಾದರೋ ಅದಕ್ಕೆ ವ್ಯತಿರಿಕ್ತವಾಗಿದೆ.
  22. walk etc. off one’s legs ನಡೆಸಿ ನಡೆಸಿ (ಮೊದಲಾದವನ್ನು ಮಾಡಿ) ಸುಸ್ತು ಮಡು; ಕಾಲು ಬಿದ್ದು ಹೋಗುವಂತೆ ಯಾ ಕುಸಿಯುವಂತೆ ಮಾಡು.
See also 1leg
2leg ಲೆಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ legged, ವರ್ತಮಾನ ಕೃದಂತ legging).

ಕಾಲಿನಿಂದ ದೋಣಿ ನಡೆಸು; ಸುರಂಗದ ಪಕ್ಕವನ್ನು ಕಾಲಿಂದ ಮೆಟ್ಟಿ ಸುರಂಗ ಕಾಲುವೆಯಲ್ಲಿ ದೋಣಿಯನ್ನು ನಡೆಸು ಯಾ ಮುಂದೆ ಹೋಗುವಂತೆ ಮಾಡು.

ಪದಗುಚ್ಛ

leg it (ಆಡುಮಾತು) ವೇಗವಾಗಿ ನಡೆ ಯಾ ಓಡು.