See also 2lead  3lead  4lead
1lead ಲೀಡ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ led ಉಚ್ಚಾರಣೆ ಲೆಡ್‍)
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಮಾರ್ಗದರ್ಶಿಯಾಗಿ ಯಾ ದಾರಿ ತೋರಿಸುತ್ತ ಯಾ ಮುಂದೆ ಹೋಗುತ್ತ ಯಾ ಕೈಹಿಡಿದುಕೊಂಡು ವ್ಯಕ್ತಿಯನ್ನು, ಯಾ ಕತ್ತಿಗೆ ಹಗ್ಗ ಮೊದಲಾದವನ್ನು ಹಾಕಿ ಪ್ರಾಣಿಯನ್ನು) ಕರೆದುಕೊಂಡು ಹೋಗು; ಕರೆದೊಯ್ಯು; ನಡೆಸಿಕೊಂಡು, ಹಿಡಿದುಕೊಂಡು ಯಾ ಎಳೆದುಕೊಂಡು ಹೋಗು.
  2. (ಕ್ರಿಯೆಗಳನ್ನು ಯಾ ಅಭಿಪ್ರಾಯಗಳನ್ನು) ನಿರ್ದೇಶನ ಮಾಡು; ಮಾರ್ಗದರ್ಶನ ಮಾಡು.
  3. (ತರ್ಕ, ವಾದ, ಉದಾಹರಣೆ, ಮೊದಲಾದವುಗಳ ಮೂಲಕ) ತರು; ಒಯ್ಯು; ಹೋಗುವಂತೆ ಯಾ ಬರುವಂತೆ ಮಾಡು; ಮಾರ್ಗದರ್ಶನ ಮಾಡು: what led you to that conclusion? ಯಾವುದು ನಿನ್ನನ್ನು ಆ ತೀರ್ಮಾನಕ್ಕೆ ಒಯ್ದಿತು?
  4. (ರಸ್ತೆ ಮೊದಲಾದವುಗಳ ವಿಷಯದಲ್ಲಿ) ಪ್ರವೇಶ ಕಲ್ಪಿಸು; ತಲುಪಲು ದಾರಿ, ಮಾರ್ಗ – ಒದಗಿಸು; ನಿರ್ದಿಷ್ಟ ಸ್ಥಾನಕ್ಕೆ ಯಾ ಗಂತವ್ಯಕ್ಕೆ ಒಯ್ಯು: this door leads you into a small room ಈ ಬಾಗಿಲು ಸಣ್ಣದೊಂದು ಕೋಣೆಗೆ ದಾರಿ(ಯಾಗಿದೆ). this road leads you to Mysore ಈ ರಸ್ತೆ ಮೈಸೂರಿಗೆ ಒಯ್ಯುತ್ತದೆ.
  5. (ಇತರರನ್ನು) ಮೀರಿಸು; ಇತರರಿಗಿಂತ – ಮೇಲಿರು, ಮೇಲಾಗಿರು, ಉತ್ತಮವಾಗಿರು; ಮುಂದಾಗಿರು: leads others in runs scored ರನ್ನು ಗಳಿಸುವುದರಲ್ಲಿ ಇತರರನ್ನು ಮೀರಿಸಿದ್ದಾನೆ.
  6. (ಮುಖ್ಯವಾಗಿ ನಿರ್ದಿಷ್ಟ ರೀತಿಯ ಜೀವನ ಮೊದಲಾದವನ್ನು) ನಡೆಸು; ಕಳೆ; ಸಾಗಿಸು; ಬಾಳು: lead a miserable existence ಕಾರ್ಪಣ್ಯದ, ದಾರಿದ್ರ್ಯದ ಜೀವನವನ್ನು ನಡೆಸು. lead a double life ಇಬ್ಬಗೆಯ ಬಾಳು ಬಾಳು; ಹೊರಗೊಂದು ಒಳಗೊಂದು ಇರುವ ಬದುಕನ್ನು ಬದುಕು.
  7. ಮೊದಲಿಗನಾಗು; ಪ್ರಥಮನಾಗು; ಮೊದಲ ಸ್ಥಾನ, ಅಗ್ರಸ್ಥಾನ ಪಡೆ: lead the dance ನೃತ್ಯದಲ್ಲಿ ಮೊದಲಿಗನಾಗು. leads the world in sugar production ಸಕ್ಕರೆ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿದೆ.
  8. ನಡೆಸು; ಮುಂದಾಳತ್ವ ವಹಿಸು; ನೇತೃತ್ವ ವಹಿಸು; ನಿರ್ದೇಶಿಸು; ನಿರ್ದೇಶನ ಮಾಡು: lead orchestra, band, chorus, etc. ವಾದ್ಯ ಗೋಷ್ಠಿ, ತಂಡ, ಮೇಳಗೀತ, ಮೊದಲಾದವನ್ನು ತಾನು ನುಡಿಸಿ ಯಾ ಹಾಡಿ ನಿರ್ದೇಶಿಸು. leads a team of researchers ಸಂಶೋಧಕರ ತಂಡದ ನೇತೃತ್ವ ವಹಿಸುತ್ತಾನೆ.
  9. ತೋರಿಸಿ ಹೇಳಿಕೊಡು; ದೃಷ್ಟಾಂತ ಕೊಟ್ಟು ನಿರ್ದೇಶನ ಮಾಡು.
  10. (ಹ್ಯಾಷನ್ನಿಗೆ) ಮಾದರಿ – ಹಾಕು, ರೂಪಿಸು.
  11. (ಸಂಗೀತಗಾರರ ತಂಡದಲ್ಲಿ) ಮುಖ್ಯ ವಾದಕ ಯಾ ಗಾಯಕನಾಗಿರು; ಪ್ರಧಾನವಾದಕ ಯಾ ಹಾಡುಗಾರ ಆಗಿರು.
  12. (ಇಸ್ಪೀಟು ಆಟ)
    1. ಒಂದು ಪಟ್ಟಿನಲ್ಲಿ ಮೊದಲನೆಯ ಎಲೆಯಾಗಿ – ಇಳಿಸು, ತೂರು, ಆಡು.
    2. ಒಂದು ಪಟ್ಟಿನಲ್ಲಿ ಮೊದಲ ಆಟಗಾರನಾಗು; ಮೊದಲು ಎಲೆ – ಹಾಕುವವನಾಗು, ಇಳಿಸುವವನಾಗು.
    3. (ಮೊದಲನೆ ಎಲೆ ಹಾಕುವಾಗ) ಒಂದೇ ರಂಗಿಗೆ ಸೇರಿದ ಎಲೆಗಳಲ್ಲೊಂದನ್ನು – ಹಾಕು, ಆಡು.
  13. (ಕಥೆಯ ವಿಷಯದಲ್ಲಿ) (ವರ್ತಮಾನ ಪತ್ರಿಕೆಯ ಯಾ ಅದರ ಭಾಗದ ವಿಷಯದಲ್ಲಿ) ಪ್ರಮುಖವಾಗಿರು; ಪ್ರಧಾನವಾಗಿರು: the royal wedding will lead the front page ಅರಸನ ವಿವಾಹ ಪತ್ರಿಕೆಯ ಪ್ರಧಾನ ಸುದ್ದಿಯಾಗುತ್ತದೆ.
  14. (ಹಗ್ಗ, ನೀರು, ಮೊದಲಾದವನ್ನು) ಕಪ್ಪಿ, ರಾಟೆ, ಕಾಲುವೆ, ಮೊದಲಾದವುಗಳ ಮೂಲಕ – ಹಾದು ಹೋಗುವಂತೆ ಮಾಡು, ಹಾಯಿಸು.
  15. (ಉದ್ದೇಶ, ಸಂದರ್ಭಗಳ ವಿಷಯದಲ್ಲಿ) ಮುಂದಾಳಾಗಿ ನಡೆಸು; ಮಾರ್ಗದರ್ಶಕನಾಗು; ಮಾರ್ಗದರ್ಶಿಯಾಗು; ಕರೆದೊಯ್ಯಿ: curiosity led him to Delhi ಕುತೂಹಲ ಅವನನ್ನು ದೆಹಲಿಗೆ ಕರೆದೊಯ್ದಿತು.
  16. (ಸೇನಾ ನಾಯಕನ ವಿಷಯದಲ್ಲಿ) ಚಲನವಲನಗಳನ್ನು – ನಡೆಸು, ನಿರ್ದೇಶಿಸು.
  17. (ಸ್ಕಾಟಿಷ್‍ ಭಾಷೆಯಲ್ಲಿ) (ದವಸ, ಧಾನ್ಯ, ಮೊದಲಾದವನ್ನು) ಬಂಡಿಯಲ್ಲಿ ಸಾಗಿಸು.
  18. ಪ್ರಭಾವ ಬೀರು ಯಾ ಮಾಡಲು ಪ್ರೇರಿಸು: lead one to suppose etc. ಭಾವಿಸುವಂತೆ (ವ್ಯಕ್ತಿಯನ್ನು) ಪ್ರಭಾವಗೊಳಿಸು; ಪ್ರೇರಿಸು.
  19. (ಸಾಕ್ಷಿಯನ್ನು) ಉತ್ತರ ಗರ್ಭಿತವಾದ, ಉತ್ತರಸೂಚಕವಾದ, ಉತ್ತರ ಸೂಚಿಸುವಂಥ ಪ್ರಶ್ನೆಗಳನ್ನು ಕೇಳು; ತನಗೆ ಬೇಕಾದ ಉತ್ತರ ಅಡಗಿರುವ ಯಾ ಬರುವ ಪ್ರಶ್ನೆಗಳನ್ನು ಹಾಕು; (ಉತ್ತರ) ಸೂಚಕ ಪ್ರಶ್ನೆ ಹಾಕು; ಉತ್ತರಗರ್ಭಿತ ಪ್ರಶ್ನೆ ಕೇಳು.
  20. (ಪಕ್ಷದ) ಅಧಿಕೃತ ನಿರ್ದೇಶಕ ಯಾ ವಕ್ತಾರಾಗಿರು.
  21. (ಬ್ರಿಟಿಷ್‍ ಪ್ರಯೋಗ) (ಮೊಕದ್ದಮೆಯಲ್ಲಿ) ಪ್ರಧಾನ ನ್ಯಾಯವಾದಿಯಾಗಿ, ಮುಖ್ಯ ವಕೀಲನಾಗಿ – ವಕಾಲತ್ತು ವಹಿಸು ( ಅಕರ್ಮಕ ಕ್ರಿಯಾಪದ ಸಹ).
ಅಕರ್ಮಕ ಕ್ರಿಯಾಪದ
  1. ನಡೆಸು; ಮಾರ್ಗದರ್ಶನ ಮಾಡು; ದಾರಿ ತೋರಿಸು: Gandhi led and the others followed ಗಾಂಧಿ ದಾರಿ ತೋರಿಸಿದರು, ಇತರರು ಅನುಸರಿಸಿದರು.
  2. ಮೊದಲು ಹೋಗು; ಪ್ರಾರಂಭಿಸು: lead off ಪ್ರಾರಂಭಿಸು; ಶುರುಮಾಡು.
  3. (ಆಟದಲ್ಲಿ ಯಾ ಪಂದ್ಯದಲ್ಲಿ) ಮುಂದಿರು; ಪಂದ್ಯದ ಒಂದು ಹಂತದಲ್ಲಿ ಮೊದಲಾಗಿರು, ಮುಂದಿರು, ಮೊದಲಿಗನಾಗಿರು: Bombay led in the first innings ಬೊಂಬಾಯಿ ಮೊದಲನೆಯ ಆಟದ ಸರದಿಯಲ್ಲಿ ಮುಂದಿತ್ತು.
  4. (ರೂಪಕವಾಗಿ) (ಕೊನೆಗೆ) ಒಯ್ಯು; ಉಂಟುಮಾಡು; ಪರಿಣಮಿಸು: this led to confusion ಇದು ಗೊಂದಲಕ್ಕೆ ಒಯ್ದಿತು, ಗೊಂದಲದಲ್ಲಿ ಪರಿಣಮಿಸಿತು, ಗೊಂದಲವನ್ನುಂಟು ಮಾಡಿತು. what does all this lead to? ಇದೆಲ್ಲ ಕೊನೆಗೆ ಎಲ್ಲಿಗೆ ಒಯ್ಯುತ್ತದೆ?
  5. (ಮುಷ್ಟಿಕಾಳಗ) (ಒಂದು ನಿರ್ದಿಷ್ಟ ಹೊಡೆತದಿಂದ) ಆಕ್ರಮಣ ಪ್ರಾರಂಭಿಸು; ದಾಳಿ ಮಾಡು: lead with a left ಎಡಗೈ ಹೊಡೆತದಿಂದ ಆಕ್ರಮಣ ಮಾಡು.
  6. (ಯಾವುದೇ ಕ್ಷೇತ್ರದಲ್ಲಿ) ಮುಂದಾಗಿರು; ಪ್ರಮುಖ, ಪ್ರಧಾನ ಆಗಿರು; ಸರ್ವೋತ್ಕೃಷ್ಟವಾಗಿರು.
  7. (ವೃತ್ತ ಪತ್ರಿಕೆಯ ವಿಷಯದಲ್ಲಿ) ಒಂದು ನಿರ್ದಿಷ್ಟ ವಿಷಯವನ್ನು ಮುಖ್ಯ ವೃತ್ತಾಂತವಾಗಿ ಬಳಸು: led with the Stock Market crash ಬಂಡವಾಳ ಮಾರುಕಟ್ಟೆಯ ಕುಸಿತವನ್ನು ಮುಖ್ಯ ವೃತ್ತಾಂತವಾಗಿ ಮಾಡಿದೆ.
  8. ಮನವೊಲಿಸಿ ಮುಂದೆ ನಡೆಸು; ಪುಸಲಾಯಿಸಿ ಕರೆದೊಯ್ಯು: he is easier led than driven ಅವನನ್ನು ಮುಂದೆ ಅಟ್ಟುವುದಕ್ಕಿಂತ ಮನವೊಲಿಸಿ ನಡೆಸುವುದು ಸುಲಭ.
  9. (ರಸ್ತೆ ಮೊದಲಾದವುಗಳ ವಿ) ದಾರಿಯಾಗಿರು; ಹಾದಿಯಾಗಿರು; ಒಂದು ಕಡೆಗೆ – ಒಯ್ಯು, ಕರೆದೊಯ್ಯು: this road leads to Mysore ಈ ರಸ್ತೆ ಮೈಸೂರಿಗೆ ಒಯ್ಯುತ್ತದೆ; ಈ ರಸ್ತೆ ಮೈಸೂರಿಗೆ ದಾರಿ: this path leads uphill ಹಾದಿ ಈ ಬೆಟ್ಟದ ಮೇಲಕ್ಕೆ ಕೊಂಡೊಯ್ಯುತ್ತದೆ.
  10. (ಇಸ್ಪೀಟಾಟ)
    1. ಒಂದು ಪಟ್ಟಿನಲ್ಲಿ ಮೊದಲನೆಯ ಎಲೆಯಾಗಿ ಹಾಕು, ಇಳಿಸು.
    2. ಮೊದಲನೆ ಆಟಗಾರನಾಗಿ ಎಲೆ ಇಳಿಸುವಾಗ ಒಂದೇ ರಂಗಿಗೆ ಸೇರಿದ ಎಲೆಗಳಲ್ಲೊಂದನ್ನು ಹಾಕು.
    3. ಒಂದು ಪಟ್ಟಿನಲ್ಲಿ ಮೊದಲನೆಯ ಆಟಗಾರನಾಗಿರು: lead upto ಮುಂದಿನ ಆಟಗಾರನ ಕೈಯಿಂದ ಹೆಚ್ಚು ಬೆಲೆಯ ಎಲೆ ಹೊರಗೆ ಬರುವಂತೆ ಎಲೆ ಇಳಿಸು.
ಪದಗುಚ್ಛ
  1. lead astray ಅಡ್ಡದಾರಿಗೆ ಎಳೆ; ತಪ್ಪುದಾರಿ ಹಿಡಿಸು; (ಮುಖ್ಯವಾಗಿ) ಪಾಪಕಾರ್ಯ ಮೊದಲಾದವಕ್ಕೆ ಪ್ರೇರೇಪಿಸು.
  2. lead away (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ ಬಳಕೆ) ವಿಚಾರಮಾಡದೆ ಅನುಸರಿಸುವಂತೆ ಮಾಡು; ತಪ್ಪುದಾರಿಗೆ ಒಯ್ಯು.
  3. lead off
    1. (ನೃತ್ಯ, ಸಂಭಾಷಣೆ) ಶುರುಮಾಡು; ಪ್ರಾರಂಭಿಸು.
    2. (ಆಡುಮಾತು) ಶಾಂತಿ ಕಳೆದುಕೊ; ಕೋಪಗೊಳ್ಳು.
  4. lead on
    1. ಉದ್ದೇಶಿಸಿದ್ದಕ್ಕಿಂತ ಹೆಚ್ಚು ದೂರ ಹೋಗುವಂತೆ ಪುಸಲಾಯಿಸು.
    2. ತಪ್ಪುದಾರಿಗೆಳೆ; ಮೋಸಹೋಗಿಸು ಯಾ ವಂಚಿಸು: she led him to think that she was in love with him ತಾನು ಅವನನ್ನು ಪ್ರೀತಿಸುವುದಾಗಿ ಭಾವಿಸುವಂತೆ ಅವನನ್ನು ಅವಳು ವಂಚಿಸಿದಳು.
  5. lead the way ದಾರಿತೋರಿಸು; ಮೊದಲು ಹೋಗು; ಮುಂದಾಳಾಗು; ನಡೆಯಲ್ಲಿ, ಓಟದಲ್ಲಿ ಮುಂದಾಗು (ರೂಪಕವಾಗಿ ಸಹ).
  6. lead up to
    1. (ವಿಷಯಕ್ಕೆ) ಪೂರ್ವಸಿದ್ಧತೆ ಮಾಡು.
    2. (ವಿಷಯಕ್ಕೆ ಕ್ರಮವಾಗಿ) ತರು; ತಂದುಬಿಡು; ಪ್ರವೇಶ ಮಾಡಿಸು.
    3. (ವಿಷಯದ ಕಡೆಗೆ) ಸಂಭಾಷಣೆಯನ್ನು, ಮಾತುಕತೆಯನ್ನು ತಿರುಗಿಸು.
ನುಡಿಗಟ್ಟು
  1. all roads lead to Rome ಎಲ್ಲದರ ಪರಿಣಾಮವೂ ಒಂದೇ; ಎಲ್ಲವೂ ಒಂದೇ ಪರಿಣಾಮಕ್ಕೆ ಒಯ್ಯುತ್ತವೆ.
  2. lead by the hand ಕೈಹಿಡಿದುಕೊಂಡು ನಡೆಸು; ಮಗುವನ್ನು ನಡೆಸುವಂತೆ ನಡೆಸು; ಮಾರ್ಗದರ್ಶಿಯಾಗು.
  3. lead by the nose ಮೂಗುದಾರ ಹಾಕಿ ಎಳೆದುಕೊಂಡು ಹೋಗು; ತನ್ನಿಚ್ಛೆ ಬಂದಂತೆ ನಡೆಸು, ಒಯ್ಯು; ತನಗೆ ಬೇಕಾದ ಹಾಗೆ ಇನ್ನೊಬ್ಬನು ಗೊತ್ತಿಲ್ಲದಂತೆಯೇ ಮಾಡುವಂತೆ ಪ್ರೇರಿಸು; ಹೇಳಿದ ಹಾಗೆ ಕೇಳುವಂತೆ ಮಾಡು.
  4. lead (person) a $^2$dance.
    1. ಉಪಯೋಗಕ್ಕೆ ಬಾರದ ಕೆಲಸದಲ್ಲಿ ತೊಡಗಿಸು.
    2. ಕಾಟ ಕೊಡು; ಕೋಟಲೆಗೊಳಿಸು.
  5. lead one a life (ವ್ಯಕ್ತಿಯನ್ನು) ಎಡೆಬಿಡದೆ ಕಾಡು, ಪೀಡಿಸು.
  6. lead up the garden (path) (ಆಡುಮಾತು) ದಾರಿ ತಪ್ಪಿಸು; ಹಾದಿ ತಪ್ಪಿಸು; ಮರುಳುಗೊಳಿಸು; ಮೋಹಗೊಳಿಸು; (ಪುಸಲಾಯಿಸಿ) ತಪ್ಪುದಾರಿಗೆ ಎಳೆ.
  7. lead woman to the altar ಹೆಂಗಸನ್ನು – ಮದುವೆಯಾಗು, ವಿವಾಹವಾಗು, ಕೈಹಿಡಿ, ಹಸೆಮಣೆಗೆ ಕರೆದೊಯ್ಯು.
See also 1lead  3lead  4lead
2lead ಲೀಡ್‍
ನಾಮವಾಚಕ
  1. ಮಾರ್ಗದರ್ಶನ; ಉದಾಹರಣೆ; ನಿದರ್ಶನ; ಮೇಲ್ಪಂಕ್ತಿ: follow the lead of (-ನ) ಮೇಲ್ಪಂಕ್ತಿಯನ್ನು ಅನುಸರಿಸು.
  2. ಅಗ್ರಸ್ಥಾನ; ಮುಂದಾಳುತನ; ಮುಂದಾಳುತ್ವ; ನೇತೃತ್ವ; ನಾಯಕತ್ವ: is in the lead ಅಗ್ರಸ್ಥಾನದಲ್ಲಿದ್ದಾನೆ. take the lead
    1. ನಾಯಕತ್ವವಹಿಸು; ಮುಂದಾಳಾಗು.
    2. (ಆಟ, ಪಂದ್ಯಗಳಲ್ಲಿ) ಮುಂದಿನವನಾಗು; ಮುಂದೆ ಹೋಗು.
  3. ಅಧಿಕ್ಯ; ಹೆಚ್ಚುವರಿ; ಇತರ ಸ್ವರ್ಧಾಳುಗಳಿಗಿಂತ ಮುಂದೆ ಇರುವ ಪ್ರಮಾಣ: a lead of ten yards ಹತ್ತು ಗಜಗಳ ಆಧಿಕ್ಯ.
  4. ಸುಳಿವು (ಮುಖ್ಯವಾಗಿ ಒಂದು ಸಮಸ್ಯೆಯ ಪರಿಹಾರಕ್ಕೆ ಮೊದಲೇ ದೊರೆತದ್ದು): is the first real lead in the case ಕೇಸಿನಲ್ಲಿ ನಿಜವಾಗಿ ಮೊದಲು ದೊರೆತ ಸುಳಿವು.
  5. (ನಾಯಿ ಮೊದಲಾದವನ್ನು) ಕರೆದೊಯ್ಯುವ ಹಗ್ಗ, ಹುರಿ, ಸರಪಣಿ, ಮೊದಲಾದವು.
  6. ವಾಹಕ; ವಿದ್ಯುದಾಕರದಿಂದ ಉಪಕರಣಕ್ಕೆ ವಿದ್ಯುತ್ತನ್ನು ಒದಗಿಸುವ ಸಾಧನ (ಮುಖ್ಯವಾಗಿ ತಂತಿ).
  7. ಮುಖ್ಯ ಪಾತ್ರ; ನಾಯಕ ಪಾತ್ರ.
  8. ಮುಖ್ಯ ಪಾತ್ರಧಾರಿ; ಮುಖ್ಯ ಪಾತ್ರ ವಹಿಸುವವನು.
  9. ಪ್ರಮುಖ ಸುದ್ದಿ; ವೃತ್ತಪತ್ರಿಕೆ ಯಾ ನಿಯತಕಾಲಿಕದಲ್ಲಿ ಅತ್ಯಂತ ಮಹತ್ತ್ವ ಕೊಟ್ಟಿರುವ ಸುದ್ದಿ.
  10. (ಇಸ್ಪೀಟು) ಮೊದಲಿಳಿತ; ಮೊದಲಿಳಿತದ ಹಕ್ಕು: return lead ಜೊತೆಗಾರ ಇಳಿದ ರಂಗನ್ನೇ ಹಾಕುವುದು.
  11. (ಇಸ್ಪೀಟು) ಮೊದಲಿಳಿಸಿದ ಕಾರ್ಡು.
  12. ಇಳಿದೂರ; ಒಂದು ಸುತ್ತು ತಿರುಗಿಸಿದಾಗ ಸ್ಕ್ರೂಮೊಳೆ ಒಳಗಿಳಿದ ಪ್ರಮಾಣ.
  13. (ಮುಖ್ಯವಾಗಿ ಜಲಯಂತ್ರಕ್ಕೆ ಹೋಗುವ) ತೋಡುಗಾಲುವೆ.
  14. ನೀರ್ಗಲ್ಲ ಮೈದಾನದಲ್ಲಿರುವ ಕಾಲುವೆ.
ನುಡಿಗಟ್ಟು

give one a lead ಮಾಡಿ ತೋರಿಸು; ತಾನು ಮೊದಲು ಮಾಡಿ (ಮುಖ್ಯವಾಗಿ ಬೇಟೆಯಲ್ಲಿ ಬೇಲಿಯನ್ನು ಮೊದಲು ಹಾರಿ) ಮತ್ತೊಬ್ಬನನ್ನು ಪ್ರೋತ್ಸಾಹಿಸು.

See also 1lead  2lead  4lead
3lead ಲೆಡ್‍
ನಾಮವಾಚಕ
  1. (ರಸಾಯನವಿಜ್ಞಾನ) ಸೀಸ; ಸೀಸದ ಸಲೆಡ್‍; ಅದುರಿನಲ್ಲಿ ಸ್ವಾಭಾವಿಕವಾಗಿ ದೊರೆಯುವ, ಕಟ್ಟಡ ಹಾಗೂ ಮಿಶ್ರಲೋಹಗಳ ತಯಾರಿಕೆಯಲ್ಲಿ ಬಳಸುವ, ಪರಮಾಣು ಸಂಖ್ಯೆ 82, ಪರಮಾಣು ತೂಕ 207 ಉಳ್ಳ, ನಸುನೀಲಿ – ಊದಾ ಬಣ್ಣದ, ಮೃದುವಾದ, ತಗಡಾಗಿ ಬಡಿಯಬಹುದಾದ, ಭಾರವಾದ ಲೋಹಧಾತು, ಸಂಕೇತ Pb.
  2. = graphite.
  3. (ಪೆನ್ಸಿಲ್‍ನಲ್ಲಿ ಬರೆಯಲು ಬಳಸುವ) ಸೀಸ.
  4. (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) ಚಾವಣಿಗೆ ಹೊದೆಸಲು ಬಳಸುವ ಸೀಸದ – ಹಾಳೆಗಳು, ತಗಡುಗಳು, ಪಟ್ಟಿಗಳು.
  5. ಸೀಸ ಹೊದೆಸಿದ (ಮುಖ್ಯವಾಗಿ ಅಡ್ಡನೆಯ) ಚಾವಣಿಯ ಭಾಗ.
  6. (ಬಹುವಚನದಲ್ಲಿ) (ಬ್ರಿಟಿಷ್‍ ಪ್ರಯೋಗ) (ಜಾಲಂದರದ ಯಾ ಬಣ್ಣದ ಕಿಟಕಿಗಳ ಗಾಜು ಹಲಗೆಗಳನ್ನು ಹಿಡಿದುಕೊಂಡಿರುವ) ಸೀಸದ ಚೌಕಟ್ಟು.
  7. (ಮುದ್ರಣ) ಲೆಡ್‍; ಸೀಸದ ಯಾ ಲೋಹದ ತುಂಡು; ಸಾಲುಗಳ ಮಧ್ಯೆ ಇಡುವ ಯಾ ಜಾಗವನ್ನು ಬಿಡಿಸುವ ಸೀಸದ ಯಾ ಲೋಹದ ಪಟ್ಟಿ.
  8. ಆಳದ ಗುಂಡು; ನೀರಿನ ಆಳ ಕಂಡುಹಿಡಿಯಲು ಬಳಸುವ ಸೀಸದ ಗುಂಡು: cast the lead ಆಳ ಅಳೆಯುವ ಗುಂಡನ್ನು ಯಾ ಆಳದ ಗುಂಡನ್ನು – (ಇಳಿ)ಬಿಡು: heave the lead ಆಳದ ಗುಂಡನ್ನು ಎತ್ತು.
ಪದಗುಚ್ಛ
  1. arm the lead (ಆಳದ ಸ್ವರೂಪವನ್ನು ತಿಳಿಯಲು) ಆಳದ ಗುಂಡಿನ ಪೊಳ್ಳಿಗೆ ಚರಬಿ ತುಂಬು.
  2. ounce of lead ಬಂದೂಕಿನ (ಸೀಸದ) ಗುಂಡು, ಗೋಲಿ.
  3. red lead ಸಿಂಧೂರ; ಚಂದ್ರ; ಉಜ್ವಲ ಕೆಂಪು ಬಣ್ಣದ ಸೀಸದ ಆಕ್ಸೈಡು, ${\rm Pb}_3{\rm O}_4$.
  4. white lead ಸಹೇದು; ಪ್ರತ್ಯಾಮ್ೀಯ ಸೀಸದ ಕಾರ್ಬೊನೇಟು.
ನುಡಿಗಟ್ಟು

swing the lead (ಅಶಿಷ್ಟ) (ಸಿಪಾಯಿ ಯಾ ನಾವಿಕ) ಕೆಲಸ ತಪ್ಪಿಸಿಕೊಳ್ಳಲು ರೋಗ ನಟಿಸು; ಕೆಲಸಕ್ಕೆ ಹಿಂದೇಟುಹಾಕು; ಮೈಗಳ್ಳತನ ಮಾಡು.

See also 1lead  2lead  3lead
4lead ಲೆಡ್‍
ಸಕರ್ಮಕ ಕ್ರಿಯಾಪದ
  1. ಸೀಸ – ಕವಿಸು, ಹೊದಿಸು; ಸೀಸದಿಂದ ಮುಚ್ಚು.
  2. ಸೀಸದ ಭಾರ ಹೇರು.
  3. (ಕಿಟಕಿಯ ಗಾಜುಗಳಿಗೆ) ಸೀಸದ ಚೌಕಟ್ಟು ಹಾಕು.
  4. (ಮುದ್ರಣ) ಲೆಡ್‍ ಹಾಕು; (ಮುದ್ರಣದ ಸಾಲುಗಳನ್ನು) ತೆಳು ಸೀಸಪಟ್ಟಿಗಳಿಂದ ಪ್ರತ್ಯೇಕಿಸು.
ಅಕರ್ಮಕ ಕ್ರಿಯಾಪದ

(ಬಂದೂಕಿನ ನಳಿಗೆಯ ವಿಷಯದಲ್ಲಿ) ಸೀಸದಿಂದ ಯಾ ಸೀಸ ಹತ್ತಿಕೊಂಡು ಕೊಳೆಯಾಗು.