See also 2laugh
1laugh ಲಾಹ್‍
ಸಕರ್ಮಕ ಕ್ರಿಯಾಪದ
  1. ನಗುತ್ತ – ಹೇಳು, ನುಡಿ, ವ್ಯಕ್ತಪಡಿಸು.
  2. ನಕ್ಕುನಕ್ಕು, ನಗುತ್ತ (ಒಬ್ಬ ವ್ಯಕ್ತಿಯನ್ನು) ಒಂದು ಸ್ಥಿತಿಗೆ ತರು: laughed them into agreeing ನಗುತ್ತಾ ಅವರನ್ನು ಒಪ್ಪಿಸಿದ, ಒಪ್ಪುವಂತೆ ಮಾಡಿದ.
  3. (ವ್ಯಕ್ತಿಯ ಅಭ್ಯಾಸ, ನಂಬಿಕೆ, ಮೊದಲಾದವನ್ನು) ನಕ್ಕು ಬಿಡಿಸು; ಹಾಸ್ಯ, ಕುಚೋದ್ಯ, ಲೇವಡಿ, ಅಪಹಾಸ್ಯ, ಗೇಲಿ ಮಾಡಿ – ಬಿಡಿಸು.
ಅಕರ್ಮಕ ಕ್ರಿಯಾಪದ
  1. ನಗು.
  2. ತಮಾಷೆ, ಗೇಲಿ, ಹಾಸ್ಯ, ಲೇವಡಿ – ಮಾಡು: laughed at us for going ಹೋದುದಕ್ಕೆ ನಮ್ಮನ್ನು ಲೇವಡಿ ಮಾಡಿದ.
  3. (ಮುಖ್ಯವಾಗಿ ಕಾವ್ಯಪ್ರಯೋಗ) ನಗು; ನಗುವಿನ ಧ್ವನಿಮಾಡು; ನಗುವನ್ನು ಜ್ಞಾಪಿಸುವಂಥ ಶಬ್ದ, ಧ್ವನಿ – ಮಾಡು.
  4. (ನೀರು, ದೃಶ್ಯ, ಪಯಿರು, ಮೊದಲಾದವು) ನಲಿದಾಡು; ಕುಣಿದಾಡು; ಹೊಳೆ; ಥಳಥಳಿಸು; ನಳನಳಿಸು.
ಪದಗುಚ್ಛ
  1. be laughing ನಗುತ್ತಿರು; ಅದೃಷ್ಟದ ಯಾ ಯಶಸ್ಸಿನ ಸ್ಥಿತಿಯಲ್ಲಿರು.
  2. laugh at
    1. ತಮಾಷೆ, ಹಾಸ್ಯ, ಲೇವಡಿ, ಅಪಹಾಸ್ಯ, ಗೇಲಿ – ಮಾಡು.
    2. ಮುಗುಳುನಗುತ್ತ, ನಗುಮುಖದಿಂದ, ಹಸನ್ಮುಖದಿಂದ – ನೋಡು.
  3. laugh away
    1. (ವಿಷಯವನ್ನು) ನಕ್ಕು – ತಳ್ಳಿಹಾಕು, ತಿರಸ್ಕರಿಸು.
    2. ತಮಾಷೆ ಮಾಡುತ್ತಾ, ವಿನೋದದಲ್ಲಿ ಕಾಲಕಳೆ.
  4. laugh down ನಕ್ಕು – ಬಾಯಿಮುಚ್ಚಿಸು, ಸುಮ್ಮನಿರಿಸು, ಸುಮ್ಮನಾಗಿಸು.
  5. laugh off (embarrassment etc.) (ಸಂಕೋಚ, ಮುಜುಗರ, ಪೇಚಾಟ, ಮೊದಲಾದವನ್ನು) ನಕ್ಕು – ಕಳೆ, ನಿವಾರಿಸು, ಪರಿಹರಿಸು, ತೊಲಗಿಸು, ಹೋಗಲಾಡಿಸು.
  6. laugh over ನಗುನಗುತ್ತಾ ಚರ್ಚಿಸು.
  7. laugh to scorn ನಕ್ಕು ಮೂದಲಿಸು; ನಕ್ಕು ತಿರಸ್ಕಾರಕ್ಕೆ, ಅಪಹಾಸ್ಯಕ್ಕೆ – ಗುರಿ ಮಾಡು.
ನುಡಿಗಟ್ಟು
  1. don’t make me laugh (ಆಡುಮಾತು, ವ್ಯಂಗ್ಯವಾಗಿ) ನನಗೆ ನಗು – ತರಬೇಡ, ಬರಿಸಬೇಡ; ನೀನು ಹೇಳುತ್ತಿರುವುದು – ಹಾಸ್ಯಾಸ್ಪದ, ಅಸಂಬದ್ಧ, ನಗೆಗೇಡು.
  2. he laughs best who laughs last ಕಡೆಯಲ್ಲಿ ನಗುವವನೇ ಕಡುಜಾಣ; ಅವಸರಪಟ್ಟು ಹಿಗ್ಗಬಾರದು; ಮೊದಲಿಗೇ, ಮೊದಲೇ ಹಿಗ್ಗಿನಿಂದ ಉಬ್ಬಬಾರದು.
  3. laugh in a person’s face ಬಹಿರಂಗವಾಗಿ ಒಬ್ಬನನ್ನು ಜರೆ, ತಿರಸ್ಕಾರ ತೋರಿಸು, ತುಚ್ಛವಾಗಿ ಕಾಣು.
  4. laugh in (or up) one’s sleeve ಒಳಗೊಳಗೇ, ತನ್ನೊಳಗೇ – ನಗು, ವಿನೋದಪಡು; ಮರೆಯಲ್ಲಿ, ಗುಟ್ಟಾಗಿ – ನಗು: the gods laugh in their sleeve to watch man doubt and fear ಮಾನವನು ಶಂಕಿಸುವುದನ್ನೂ ಹೆದರುವುದನ್ನೂ ನೋಡಿ ದೇವತೆಗಳು ಒಳಗೊಳಗೇ ನಗುತ್ತಾರೆ.
  5. laugh on the other side of one’s face or laugh on wrong side of mouth ನಗುವಿನಿಂದ ಅಳುವಿಗೆ, ಹಿಗ್ಗಿನಿಂದ ಕುಗ್ಗಿಗೆ, ವಿನೋದದಿಂದ ವಿಷಾದಕ್ಕೆ, ಸಂತೋಷದಿಂದ ದುಃಖಕ್ಕೆ – ತಿರುಗು, ಬೀಳು.
  6. laugh (person, opinion, etc.) out of court (ವ್ಯಕ್ತಿಗೆ, ಅಭಿಪ್ರಾಯ, ಮೊದಲಾದವಕ್ಕೆ) ಪ್ರತ್ಯುತ್ತರ ಕೊಡುವ, ವಿವರಣೆ ನೀಡುವ ಅವಕಾಶವನ್ನು ಕುಚೋದ್ಯದಿಂದ ಯಾ ಗೇಲಿಯಿಂದ ತಪ್ಪಿಸು.
See also 1laugh
2laugh ಲಾಹ್‍
ನಾಮವಾಚಕ
  1. ನಗು; ನಗೆ; ನಗುವಿನ ಧ್ವನಿ: join in the laugh ನಗುವಿಗೆ ಸೇರಿಕೊ; (ಮುಖ್ಯವಾಗಿ ಗೇಲಿಗೆ ಗುರಿಯಾದವನು ಸರಸವಾಗಿ) ನಗುವವರೊಂದಿಗೆ ತಾನೂ ಸೇರಿಕೊಂಡು ಯಾ ಒಂದಾಗಿ ನಗು.
  2. ನಗುವಿಕೆ; ನಗುವುದು; ಹಸಿತ; ನಗುವ ಕ್ರಿಯೆ.
  3. (ವ್ಯಕ್ತಿಯು) ನಗುವ ರೀತಿ.
  4. (ಆಡುಮಾತು) ಹಾಸ್ಯಾಸ್ಪದವಾದ, ನಗೆ ಬರಿಸುವ ವಸ್ತು: that’s a laugh ಅದೊಂದು ಹಾಸ್ಯಾಸ್ಪದವಾದುದು.
ಪದಗುಚ್ಛ

break into a laugh ಥಟ್ಟನೆ ನಗಲಾರಂಭಿಸು; ಇದ್ದಕ್ಕಿದ್ದಂತೆ, ಹಠಾತ್ತಾಗಿ ನಗಲು ಶುರುಮಾಡು, ಪ್ರಾರಂಭಿಸು.

ನುಡಿಗಟ್ಟು
  1. have (or get) the laugh of (or on) person = ನುಡಿಗಟ್ಟು \((2)\).
  2. have the last laugh on ಕೊನೆಯಲ್ಲಿ ಗೆಲ್ಲು; ಅಂತಿಮ ಜಯ ಪಡೆ; ಮೊದಲು ಸೋತಂತೆ ಕಂಡರೂ ಕೊನೆಯಲ್ಲಿ ಗೆಲ್ಲು; ಕೊನೆಯ ನಗು ನಿನ್ನದಾಗಿರಲಿ, ನಿನ್ನದಾಗಿ ಮಾಡಿಕೊ; ಕೊನೆಯಲ್ಲಿ ಜಯಶೀಲನಾಗು.
  3. have the laugh on one’s side ಎದುರಾಳಿಯನ್ನು ತಿರುಗು ಮುರುಗು ಮಾಡು; ಕೆಳಗೈಯಾಗಿದ್ದವನು ಮೇಲುಗೈಯಾಗು; ಪರಿಸ್ಥಿತಿಯನ್ನು ವಿಪರ್ಯಾಸಗೊಳಿಸಿ ಎದುರಾಳಿಯನ್ನು ಸೋಲಿಸು; ಹಾಸ್ಯ ಮಾಡುತ್ತಿದ್ದವನನ್ನು ಹಾಸ್ಯಕ್ಕೆ ಗುರಿಪಡಿಸು; ನಗೆಗಾರನನ್ನು ನಗೆಗೇಡಿಯಾಗಿಸು.