See also 1laugh
2laugh ಲಾಹ್‍
ನಾಮವಾಚಕ
  1. ನಗು; ನಗೆ; ನಗುವಿನ ಧ್ವನಿ: join in the laugh ನಗುವಿಗೆ ಸೇರಿಕೊ; (ಮುಖ್ಯವಾಗಿ ಗೇಲಿಗೆ ಗುರಿಯಾದವನು ಸರಸವಾಗಿ) ನಗುವವರೊಂದಿಗೆ ತಾನೂ ಸೇರಿಕೊಂಡು ಯಾ ಒಂದಾಗಿ ನಗು.
  2. ನಗುವಿಕೆ; ನಗುವುದು; ಹಸಿತ; ನಗುವ ಕ್ರಿಯೆ.
  3. (ವ್ಯಕ್ತಿಯು) ನಗುವ ರೀತಿ.
  4. (ಆಡುಮಾತು) ಹಾಸ್ಯಾಸ್ಪದವಾದ, ನಗೆ ಬರಿಸುವ ವಸ್ತು: that’s a laugh ಅದೊಂದು ಹಾಸ್ಯಾಸ್ಪದವಾದುದು.
ಪದಗುಚ್ಛ

break into a laugh ಥಟ್ಟನೆ ನಗಲಾರಂಭಿಸು; ಇದ್ದಕ್ಕಿದ್ದಂತೆ, ಹಠಾತ್ತಾಗಿ ನಗಲು ಶುರುಮಾಡು, ಪ್ರಾರಂಭಿಸು.

ನುಡಿಗಟ್ಟು
  1. have (or get) the laugh of (or on) person = ನುಡಿಗಟ್ಟು \((2)\).
  2. have the last laugh on ಕೊನೆಯಲ್ಲಿ ಗೆಲ್ಲು; ಅಂತಿಮ ಜಯ ಪಡೆ; ಮೊದಲು ಸೋತಂತೆ ಕಂಡರೂ ಕೊನೆಯಲ್ಲಿ ಗೆಲ್ಲು; ಕೊನೆಯ ನಗು ನಿನ್ನದಾಗಿರಲಿ, ನಿನ್ನದಾಗಿ ಮಾಡಿಕೊ; ಕೊನೆಯಲ್ಲಿ ಜಯಶೀಲನಾಗು.
  3. have the laugh on one’s side ಎದುರಾಳಿಯನ್ನು ತಿರುಗು ಮುರುಗು ಮಾಡು; ಕೆಳಗೈಯಾಗಿದ್ದವನು ಮೇಲುಗೈಯಾಗು; ಪರಿಸ್ಥಿತಿಯನ್ನು ವಿಪರ್ಯಾಸಗೊಳಿಸಿ ಎದುರಾಳಿಯನ್ನು ಸೋಲಿಸು; ಹಾಸ್ಯ ಮಾಡುತ್ತಿದ್ದವನನ್ನು ಹಾಸ್ಯಕ್ಕೆ ಗುರಿಪಡಿಸು; ನಗೆಗಾರನನ್ನು ನಗೆಗೇಡಿಯಾಗಿಸು.