See also 2knight
1knight ನೈಟ್‍
ನಾಮವಾಚಕ
  1. ನೈಟ್‍:
    1. (ಊಳಿಗಮಾನ್ಯ ಯುಗದಲ್ಲಿ ರಾಜನ ಯಾ ಹ್ಯೂಡಲ್‍ ನಾಯಕನ) ಸೈನಿಕ ಅನುಯಾಯಿ; ಸೇನಾನುಚರ.
    2. (ಚರಿತ್ರೆ) (ಮಧ್ಯ ಯುಗದ ಷಿವಲ್ರಿ ವ್ಯವಸ್ಥೆಯಲ್ಲಿ ಯುದ್ಧದಲ್ಲೋ ಕ್ಷಾತ್ರಕಲೆಗಳ ಪಂದ್ಯದಲ್ಲೋ ತನ್ನ ಒಲವು ಗೌರವಗಳಿಗೆ ಪಾತ್ರಳಾದ ವರಿಷ್ಠ ಮಹಿಳೆಯ ರಕ್ಷಣ ಧುರೀಣನೂ ಅನುಚರನೂ ಆಗಿ ತನ್ನ ಪೌರುಷ ಪರಾಕ್ರಮಗಳನ್ನು ತೋರಿಸುತ್ತಿದ್ದ) ವೀರಯೋಧ; ಗಂಡುಗಲಿ(ರೂಪಕವಾಗಿ ಸಹ).
    3. (ಉನ್ನತ ಕುಲಜನಾಗಿ ಪೇಜ್‍ ಮತ್ತು ಸ್ಕ್ವೇರ್‍ ದರ್ಜೆಗಳ ಕ್ಷಾತ್ರಕಲೆಗಳ ಪಂದ್ಯಗಳಲ್ಲಿ ಪರಾಕ್ರಮ ಹಾಗೂ ಕ್ಷಾತ್ರಕಲಾ ಪ್ರಾವೀಣ್ಯವನ್ನು ತೋರಿಸಿ ರಾಜನಿಂದಲೋ ಬೇರಾವ ಅರ್ಹ ವ್ಯಕ್ತಿಯಿಂದಲೋ ಸಂಭಾವಿತನಾಗಿ) ನೈಟ್‍ ಪದವಿಗೆ ಏರಿಸಲ್ಪಟ್ಟವನು.
    4. (ವೈಯಕ್ತಿಕ ಯೋಗ್ಯತೆಗೆ ಯಾ ರಾಜನಿಗೋ ದೇಶಕ್ಕೋ ಸಲ್ಲಿಸಿದ ಸೇವೆಗೆ ಪುರಸ್ಕಾರವಾಗಿ) ನೈಟ್‍ ಪದವಿ ಪಡೆದವನು.
    5. (ಚರಿತ್ರೆ) (ಬ್ರಿಟಿಷ್‍ ಪಾರ್ಲಿಮೆಂಟಿನಲ್ಲಿ) ಯಾವುದೇ ಷೈರ್‍ ಯಾ ಜಿಲ್ಲೆಯ ಪ್ರತಿನಿಧಿ.
  2. (ಪ್ರಾಚೀನ ರೋಮನ್‍ ಚರಿತ್ರೆ)
    1. ರಾವುತ; ಅಶ್ವಾರೋಹಿ ಸೈನಿಕ.
    2. (ಮೊದಲಿಗೆ) ರೋಮನ್‍ ಸೇನೆಯ ರಾವುತ ಪಡೆ.
  3. (ಪ್ರಾಚೀನ ಗ್ರೀಕ್‍ ಚರಿತ್ರೆ) ಅಥೆನ್ಸ್‍ ರಾಜ್ಯದ ದ್ವಿತೀಯ ಶ್ರೇಣಿಯ ಪ್ರಜೆ.
  4. (ಚದುರಂಗ) ಕುದುರೆ; ಕುದುರೆ ತಲೆಯ ಕಾಯಿ. Figure: knight
ಪದಗುಚ್ಛ
  1. knight bachelor (ಯಾವುದೇ ಒಂದು ವಿಶೇಷ ವರ್ಗಕ್ಕೆ ಸೇರದ) ಸಾಮಾನ್ಯ ನೈಟ್‍.
  2. knight commander (ಉನ್ನತ ದರ್ಜೆಯ ನೈಟ್‍ಹುಡ್‍ ವರ್ಗಗಳಲ್ಲಿ ಯಾವುದಕ್ಕೇ ಸದಸ್ಯನಾದ) ನೈಟ್‍ ಕಮಾಂಡರು.
  3. Knight hospitaller (ಬಹುವಚನ Knights Hospitaller) ಸುಮಾರು ಕ್ರಿಸ್ತಶಕ $1050$ರಲ್ಲಿ ಸ್ಥಾಪಿತವಾದ ಯೋಧಸಂನ್ಯಾಸಿಗಳ ಒಂದು ಸಂಸ್ಥೆ.
  4. knight $^1$marshal (ನ್ಯಾಯ ನಿರ್ಣಾಯಕ ಕರ್ತವ್ಯಗಳುಳ್ಳ) ರಾಜ ಪರಿವಾರದ ಅಧಿಕಾರಿ.
  5. knight of the post ಸುಳ್ಳು ಸಾಕ್ಷ್ಯವೀರ; ಸುಳ್ಳುಸಾಕ್ಷ್ಯ ಪ್ರವೀಣ; ಸುಳ್ಳು ಸಾಕ್ಷ್ಯ ನೀಡಿ ಹೊಟ್ಟೆ ಹೊರೆಯುವವನು.
  6. knight of the road
    1. ದಾರಿಗಳ್ಳ; ಹಾದಿಗಳ್ಳ; ಹಾದಿಕಾಯ್ದು ಸುಲಿಗೆ ಮಾಡುವವನು.
    2. ಪೇರಿ ವ್ಯಾಪಾರಿ; ಸಂಚಾರಿ ವ್ಯಾಪಾರಿ; ತಿರುಗು ವ್ಯಾಪಾರಿ.
    3. ಅಲೆಮಾರಿ; ಅಡ್ಡಾಳಿ; ಕೆಲಸ ಇಲ್ಲದೆ ಊರಿಂದ ಊರಿಗೆ ಅಲೆಯುವವನು.
    4. ಲಾರಿ ಯಾ ಟ್ಯಾಕ್ಸಿ ಚಾಲಕ.
  7. knight of the shire = 1knight(1, e).
  8. Knight templar (ಬಹುವಚನ Knights Templars.)
See also 1knight
2knight ನೈಟ್‍
ಸಕರ್ಮಕ ಕ್ರಿಯಾಪದ

‘ನೈಟ್‍’ – ಪದವಿಗೇರಿಸು; ‘ನೈಟ್‍’ ಬಿರುದು ಕೊಡು.