See also 2kiss
1kiss ಕಿಸ್‍
ನಾಮವಾಚಕ
  1. (ರಕ್ತ ಬಂಧುಗಳ ಪ್ರೀತಿ, ಮಮತೆ, ಆಪ್ತರನ್ನು ಕಂಡಾಗ ಉಂಟಾಗುವ ಸಂತೋಷ, ಪೂಜ್ಯರಲ್ಲಿ ಭಕ್ತಿ, ಇವುಗಳ ಕುರುಹಾಗಿ ಕೊಡುವ) ಮುತ್ತು; ಚುಂಬನ.
  2. (ಬಿಲಿಯರ್ಡ್ಸ್‍) ಚಲಿಸುತ್ತಿರುವ ಚೆಂಡುಗಳ ಪರಸ್ಪರ ತಾಗು, ಸ್ಪರ್ಶ, ಸೋಕು(ವಿಕೆ).
  3. ಒಂದು ಬಗೆಯ ಸಕ್ಕರೆ ಮಿಠಾಯಿ.
ಪದಗುಚ್ಛ
  1. kiss of death ಹಿತಶತ್ರುತ್ವ; ತೋರಿಕೆಗೆ ಮೈತ್ರಿಯ ಕುರುಹಾಗಿ, ನಿಜಕ್ಕೂ ವಿನಾಶಕಾರಕವಾದ ಕಾರ್ಯ: lukewarm reviews that are the kiss of death for a new work ಹೊಸ ಕೃತಿಯೊಂದಕ್ಕೆ ಹಿತಶತ್ರುವಾಗಿರುವ ಉಗುರು ಬೆಚ್ಚನೆಯ ಯಾ ತುಸು ಮೆಚ್ಚಿಕೆಯ ಗ್ರಂಥ ವಿಮರ್ಶೆಗಳು.
  2. kiss of life ಪ್ರಾಣದಾಯಕ ಮುತ್ತು; ಜೀವದಾನಿ ಚುಂಬನ; ಮತ್ತೆ ಬದುಕಿಸುವ ಮುತ್ತು; ಪುನರುಜ್ಜೀವಕ ಚುಂಬನ; ಪೆಟ್ಟು ತಿಂದ ಯಾ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಗೆ ಮತ್ತೆ ಸರಾಗವಾಗಿ ಉಸಿರಾಡುವಂತಾಗಲು ಅವನ ಬಾಯಿಗೆ ತನ್ನ ಬಾಯಿಟ್ಟು ಗಾಳಿ ಊದುವ ಕಾರ್ಯವಿಧಾನ.
  3. kiss of peace (ಪ್ರಭುಭೋಜನ ಸಂಸ್ಕಾರದಲ್ಲಿ ಐಕ್ಯದ ಕುರುಹಾಗಿ ಕೊಡುವ) ಧಾರ್ಮಿಕ ಮುತ್ತು; ಶಾಂತಿ ಚುಂಬನ (ಸಂಸ್ಕಾರ).
ನುಡಿಗಟ್ಟು

blow a kiss ಮುತ್ತು ಕಳುಹು; (ಪ್ರೀತಿಯ ಕುರುಹಾಗಿ) ಕೈಯನ್ನು ಮುತ್ತಿಟ್ಟು, ಅದನ್ನು ಎತ್ತಿ ದೂರದಲ್ಲಿರುವ ಯಾ ದೂರ ಹೋಗುತ್ತಿರುವ ವ್ಯಕ್ತಿಯತ್ತ ಅಲ್ಲಾಡಿಸು, ಬೀಸು.

See also 1kiss
2kiss ಕಿಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪ್ರೀತಿ, ಸ್ನೇಹ, ಅಭಿವಂದನೆ ಯಾ ಭಕ್ತಿಗೌರವಗಳ ಕುರುಹಾಗಿ) ಮುತ್ತಿಡು; ಮುತ್ತಿಕ್ಕು; ಚುಂಬಿಸು; ಮುತ್ತು ಕೊಡು; ತುಟಿ – ಸೋಕಿಸು, ಮುಟ್ಟಿಸು.
  2. ಮುತ್ತಿಟ್ಟು (ಪ್ರೀತಿ ಮೊದಲಾದವುಗಳನ್ನು) ತೋರಿಸು, ಪ್ರಕಟಿಸು, ಅಭಿವ್ಯಕ್ತಿಗೊಳಿಸು: kiss me good night ಚೆನ್ನಾಗಿ ನಿದ್ದೆ ಮಾಡೆಂದು ಮುತ್ತಿಡು, ಮುತ್ತಿಟ್ಟು ಹರಸು.
  3. (ಬಿಲಿಯರ್ಡ್ಸ್‍ ಆಟದ ಚೆಂಡಿನ ವಿಷಯದಲ್ಲಿ) (ಬೇರೊಂದು ಚೆಂಡನ್ನು) ಮುತ್ತಿಡು; ಮೆಲ್ಲಗೆ – ತಾಕು, ಸೋಕು; ಮೃದುವಾಗಿ – ಸ್ಪರ್ಶಿಸು, ತಗಲು.
ಅಕರ್ಮಕ ಕ್ರಿಯಾಪದ
  1. (ಇಬ್ಬರು ವ್ಯಕ್ತಿಗಳ ವಿಷಯದಲ್ಲಿ) ಪರಸ್ಪರ ಮುತ್ತಿಡು, ಚುಂಬಿಸು.
  2. (ಬಿಲಿಯರ್ಡ್ಸ್‍ ಆಟ) ಚೆಂಡಿಗೆ ಚೆಂಡು – ತಾಕು, ತಗಲು.
ನುಡಿಗಟ್ಟು
  1. kiss and be friends ಮುತ್ತಿಟ್ಟು ರಾಜಿ ಮಾಡಿಕೊಳ್ಳಿ, ಸ್ನೇಹಿತರಾಗಿ.
  2. kiss and tell ತನ್ನ ಲೈಂಗಿಕ ಸಾಹಸಗಳನ್ನು ವಿವರವಾಗಿ ಹೇಳು, ನಿರೂಪಿಸು.
  3. kiss a person’s arse (ಅಶಿಷ್ಟ) ತಿಕ ನೆಕ್ಕು; ತಿಕ ಮುತ್ತಿಕ್ಕು; ಒಬ್ಬ ವ್ಯಕ್ತಿಯ ಬಗ್ಗೆ ಗುಲಾಮನಂತೆ ವರ್ತಿಸು, ನಡೆದುಕೊ.
  4. kiss away (ಕಂಬನಿ ಮೊದಲಾದವನ್ನು) ಮುತ್ತಿಟ್ಟು ತೊಡೆ, ಒರೆಸು, ದುಃಖವನ್ನು ಹೋಗಲಾಡಿಸು, ತೊಲಗಿಸು.
  5. kiss goodbye to (ಆಡುಮಾತು) ನಷ್ಟ ಒಪ್ಪಿಕೊ.
  6. kiss hands (of sovereign etc.) (ವಿಧಿವತ್ತಾದ ವಂದನೆಯ ರೂಪದಲ್ಲಿ, ಯಾ ಯಾವುದೇ ಅಧಿಕಾರಕ್ಕೆ ನೇಮಕ ಮಾಡಿದ್ದಕ್ಕಾಗಿ ಕೃತಜ್ಞತೆಯ ರೂಪದಲ್ಲಿ, ದೊರೆ ಮೊದಲಾದವರ) ಕೈಗೆ ಮುತ್ತಿಡು; ಹಸ್ತಚುಂಬನ ಮಾಡು.
  7. kiss in-the-ring ಚಕ್ರಚುಂಬನದಾಟ; ತರುಣ ತರುಣಿಯರು ಚಕ್ರಾಕಾರವಾಗಿ ಓಡುತ್ತಾ, ಯಾವನೇ ತರುಣನು ಬೀಳಿಸಿದ ಕರವಸ್ತ್ರವನ್ನು ಎತ್ತಿಕೊಂಡ ತರುಣಿಯು ಯಾ ಯಾವಳೇ ತರುಣಿಯು ಬೀಳಿಸಿದ ಕರವಸ್ತ್ರವನ್ನು ಎತ್ತಿಕೊಂಡ ತರುಣನು, ಬೆನ್ನಟ್ಟಿ ಹೋಗಿ ಕರವಸ್ತ್ರ ಬೀಳಿಸಿದ ವ್ಯಕ್ತಿಯನ್ನು ಮುತ್ತಿಡುವ ಆಟ.
  8. kiss-me-quick
    1. ತಲೆಯ ಮೇಲೆ ತೀರ ಹಿಂದಕ್ಕಿರುವ ಕಿರುಟೋಪಿ.
    2. = kiss-curl.
  9. kiss off (ಅಶಿಷ್ಟ)
    1. ತೊಲಗಿಸು; ತೆಗೆದುಹಾಕು.
    2. ಸಾಯು; ಮಡಿ.
  10. kiss one’s hand to = 1kiss ನುಡಿಗಟ್ಟುನೋಡಿ.
  11. kiss the book (ಪ್ರಮಾಣ ಮಾಡುವಲ್ಲಿ) ಬೈಬಲ್ಲನ್ನು ಮುತ್ತಿಡು, ಬೈಬಲ್ಲನ್ನು ಮುತ್ತಿಟ್ಟು ಪ್ರಮಾಣ ಮಾಡು.
  12. kiss the dust
    1. (ಮಾನ ಮರ್ಯಾದೆ ತೊರೆದು) ಶರಣಾಗು; ಶರಣಾಗತನಾಗು; ಪಾದಾಕ್ರಾಂತನಾಗು; ಪಾದಧೂಳಿಯಲ್ಲಿ ಹೊರಳು.
    2. ಮೈಯ್ಯಿಕ್ಕು; ಮಣ್ಣುಮುಕ್ಕು; ನೆಲ ಕಚ್ಚು; ಸೋತುಹೋಗು; ಪರಾಜಿತನಾಗು.
    3. ಹತನಾಗು; ಕೊಲ್ಲಲ್ಪಡು.
  13. kiss the ground
    1. (ರಾಜಭಕ್ತಿ ಮೊದಲಾದವುಗಳ ಕುರುಹಾಗಿ) ನೆಲದ ಮೇಲೆ ಅಡ್ಡಬೀಳು; ಪಾದತಲಕ್ಕೆರಗು; ಸಾಷ್ಟಾಂಗ ಪ್ರಣಾಮ ಮಾಡು.
    2. (ರೂಪಕವಾಗಿ) ಮಣ್ಣು ಮುಕ್ಕು; ಸೋತು ಹೋಗು; ಕೆಳಕ್ಕೆ ಬೀಳು; ಅಧಃಪತನ ಹೊಂದು.
  14. kiss the rod (ವಿಧಿಸಿದ ದಂಡನೆಯನ್ನು ಶಿರಸಾ ವಹಿಸುವ ಕುರುಹಾಗಿ) ದಂಡವನ್ನು ಮುತ್ತಿಡು; ಶಿಕ್ಷೆಯನ್ನು ಯಾ ದಂಡನೆಯನ್ನು ಮರು ಮಾತಾಡದೆ ಒಪ್ಪಿಕೊ.