ಮುತ್ತಿಟ್ಟು (ಪ್ರೀತಿ ಮೊದಲಾದವುಗಳನ್ನು) ತೋರಿಸು, ಪ್ರಕಟಿಸು, ಅಭಿವ್ಯಕ್ತಿಗೊಳಿಸು: kiss me good night ಚೆನ್ನಾಗಿ ನಿದ್ದೆ ಮಾಡೆಂದು ಮುತ್ತಿಡು, ಮುತ್ತಿಟ್ಟು ಹರಸು.
(ಬಿಲಿಯರ್ಡ್ಸ್ ಆಟದ ಚೆಂಡಿನ ವಿಷಯದಲ್ಲಿ) (ಬೇರೊಂದು ಚೆಂಡನ್ನು) ಮುತ್ತಿಡು; ಮೆಲ್ಲಗೆ – ತಾಕು, ಸೋಕು; ಮೃದುವಾಗಿ – ಸ್ಪರ್ಶಿಸು, ತಗಲು.
ಅಕರ್ಮಕ ಕ್ರಿಯಾಪದ
(ಇಬ್ಬರು ವ್ಯಕ್ತಿಗಳ ವಿಷಯದಲ್ಲಿ) ಪರಸ್ಪರ ಮುತ್ತಿಡು, ಚುಂಬಿಸು.
(ಬಿಲಿಯರ್ಡ್ಸ್ ಆಟ) ಚೆಂಡಿಗೆ ಚೆಂಡು – ತಾಕು, ತಗಲು.
ನುಡಿಗಟ್ಟು
kiss and be friends ಮುತ್ತಿಟ್ಟು ರಾಜಿ ಮಾಡಿಕೊಳ್ಳಿ, ಸ್ನೇಹಿತರಾಗಿ.
kiss and tell ತನ್ನ ಲೈಂಗಿಕ ಸಾಹಸಗಳನ್ನು ವಿವರವಾಗಿ ಹೇಳು, ನಿರೂಪಿಸು.
kiss a person’s arse (ಅಶಿಷ್ಟ) ತಿಕ ನೆಕ್ಕು; ತಿಕ ಮುತ್ತಿಕ್ಕು; ಒಬ್ಬ ವ್ಯಕ್ತಿಯ ಬಗ್ಗೆ ಗುಲಾಮನಂತೆ ವರ್ತಿಸು, ನಡೆದುಕೊ.
kiss away (ಕಂಬನಿ ಮೊದಲಾದವನ್ನು) ಮುತ್ತಿಟ್ಟು ತೊಡೆ, ಒರೆಸು, ದುಃಖವನ್ನು ಹೋಗಲಾಡಿಸು, ತೊಲಗಿಸು.
kiss goodbye to (ಆಡುಮಾತು) ನಷ್ಟ ಒಪ್ಪಿಕೊ.
kiss hands (of sovereign etc.) (ವಿಧಿವತ್ತಾದ ವಂದನೆಯ ರೂಪದಲ್ಲಿ, ಯಾ ಯಾವುದೇ ಅಧಿಕಾರಕ್ಕೆ ನೇಮಕ ಮಾಡಿದ್ದಕ್ಕಾಗಿ ಕೃತಜ್ಞತೆಯ ರೂಪದಲ್ಲಿ, ದೊರೆ ಮೊದಲಾದವರ) ಕೈಗೆ ಮುತ್ತಿಡು; ಹಸ್ತಚುಂಬನ ಮಾಡು.
kiss in-the-ring ಚಕ್ರಚುಂಬನದಾಟ; ತರುಣ ತರುಣಿಯರು ಚಕ್ರಾಕಾರವಾಗಿ ಓಡುತ್ತಾ, ಯಾವನೇ ತರುಣನು ಬೀಳಿಸಿದ ಕರವಸ್ತ್ರವನ್ನು ಎತ್ತಿಕೊಂಡ ತರುಣಿಯು ಯಾ ಯಾವಳೇ ತರುಣಿಯು ಬೀಳಿಸಿದ ಕರವಸ್ತ್ರವನ್ನು ಎತ್ತಿಕೊಂಡ ತರುಣನು, ಬೆನ್ನಟ್ಟಿ ಹೋಗಿ ಕರವಸ್ತ್ರ ಬೀಳಿಸಿದ ವ್ಯಕ್ತಿಯನ್ನು ಮುತ್ತಿಡುವ ಆಟ.