See also 2keen  3keen
1keen ಕೀನ್‍
ನಾಮವಾಚಕ

(ಗೋಳಾಟದೊಡನೆ ಕೂಡಿದ ಐರ್ಲೆಂಡಿನ) ಮಸಣದ ಹಾಡು; ಸ್ಮಶಾನಗೀತೆ; ಚರಮಗೀತೆ.

See also 1keen  3keen
2keen ಕೀನ್‍
ಸಕರ್ಮಕ ಕ್ರಿಯಾಪದ
  1. ಸ್ಮಶಾನಗೀತೆಯ ಮೂಲಕ ಸತ್ತವನಿಗಾಗಿ ಗೋಳಾಡು.
  2. ಗೋಳಿಡು; ಗೋಳಾಟದ ಧ್ವನಿಯಲ್ಲಿ ಹಾಡು; ಗೋಳಿಡುತ್ತ ಹಾಡು ಯಾ ಹೇಳು; ಹಾಡಿ ಹಲುಬು.
ಅಕರ್ಮಕ ಕ್ರಿಯಾಪದ

ಸ್ಮಶಾನಗೀತೆಯನ್ನು ಹಾಡು; ಮಸಣದ ಹಾಡು ಹಾಡು.

See also 1keen  2keen
3keen ಕೀನ್‍
ಗುಣವಾಚಕ
  1. ಮೊನಚಾದ; ಹರಿತವಾದ ಅಲಗು ಯಾ ಮೊನೆ ಉಳ್ಳ: keen razor ಹರಿತವಾದ (ಅಲಗಿನ) ಕ್ಷೌರದ ಕತ್ತಿ.
  2. (ಅಲಗು ಮೊದಲಾದವುಗಳ ವಿಷಯದಲ್ಲಿ) ಹರಿತವಾದ; ಮೊನಚಾದ; ಚೂಪಾದ; ಕೂರಾದ; ತೀಕ್ಷ್ಣವಾದ.
  3. (ಗಾಳಿ, ಹಿಮ, ಮೊದಲಾದವುಗಳ ವಿಷಯದಲ್ಲಿ) ಕೊರೆತದ; ತೀವ್ರ ಚಳಿಯ; ಕೊರೆಯುವ (ಚಳಿಯ).
  4. (ನೋವು, ಯಾತನೆ, ಮೊದಲಾದವುಗಳ ವಿಷಯದಲ್ಲಿ) ಕಟುವಾದ; ತೀವ್ರವಾದ; ತಾಳಲಾಗದ; ಅಸಹನೀಯ; ಸಹಿಸಲಾಗದ.
  5. (ವ್ಯಕ್ತಿ, ಬಯಕೆ, ಆಸಕ್ತಿ, ಮೊದಲಾದವುಗಳ ವಿಷಯದಲ್ಲಿ) ಉತ್ಸುಕ; ತವಕಪಡುವ; ತೀವ್ರಾಸಕ್ತಿಯ; ಉತ್ಸಾಹಶಾಲಿ; ಉತ್ಸಾಹಭರಿತ: keen sportsman ಉತ್ಸಾಹಶಾಲಿಯಾದ ಕ್ರೀಡಾಪಟು.
  6. (ಕಣ್ಣು, ದೃಷ್ಟಿ, ವಾಸನಾಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ತೀಕ್ಷ್ಣವಾದ; ಸೂಕ್ಷ್ಮವಾದ.
  7. ಚುರುಕುಬುದ್ಧಿಯ; ಕುಶಾಗ್ರಬುದ್ಧಿಯ; ಸೂಕ್ಷ್ಮಬುದ್ಧಿಯುಳ್ಳ; ತೀಕ್ಷ್ಣಮತಿಯಾದ.
  8. (ಬ್ರಿಟಿಷ್‍ ಪ್ರಯೋಗ) (ಬೆಲೆಯ ವಿಷಯದಲ್ಲಿ) ಪೈಪೋಟಿಯ; (ಪೈಪೋಟಿಯ ಕಾರಣದಿಂದಾಗಿ) ಬಹಳ ಅಗ್ಗವಾದ.
  9. (ಆಡುಮಾತು) ಉತ್ಕೃಷ್ಟ; ಶ್ರೇಷ್ಠ; ಅತ್ತುತ್ತಮ.
ಪದಗುಚ್ಛ
  1. keen as mustard ಉತ್ಸಾಹಭರಿತ; ಚುರುಕಾದ; ತೀವ್ರೋತ್ಸಾಹದ.
  2. keen on (ಆಡುಮಾತು) (ವ್ಯಕ್ತಿ, ವಸ್ತು, ಕಾರ್ಯದಿಂದ) ಬಹಳ ಆಕರ್ಷಿತನಾಗಿ.
  3. keen set ಹಸಿದ; ಹಾತೊರೆಯುತ್ತಿರುವ; ತವಕಪಡುತ್ತಿರುವ; ಆತುರಪಡುತ್ತಿರುವ.