3keen
ಕೀನ್
ಗುಣವಾಚಕ
- ಮೊನಚಾದ; ಹರಿತವಾದ ಅಲಗು ಯಾ ಮೊನೆ ಉಳ್ಳ: keen razor ಹರಿತವಾದ (ಅಲಗಿನ) ಕ್ಷೌರದ ಕತ್ತಿ.
- (ಅಲಗು ಮೊದಲಾದವುಗಳ ವಿಷಯದಲ್ಲಿ) ಹರಿತವಾದ; ಮೊನಚಾದ; ಚೂಪಾದ; ಕೂರಾದ; ತೀಕ್ಷ್ಣವಾದ.
- (ಗಾಳಿ, ಹಿಮ, ಮೊದಲಾದವುಗಳ ವಿಷಯದಲ್ಲಿ) ಕೊರೆತದ; ತೀವ್ರ ಚಳಿಯ; ಕೊರೆಯುವ (ಚಳಿಯ).
- (ನೋವು, ಯಾತನೆ, ಮೊದಲಾದವುಗಳ ವಿಷಯದಲ್ಲಿ) ಕಟುವಾದ; ತೀವ್ರವಾದ; ತಾಳಲಾಗದ; ಅಸಹನೀಯ; ಸಹಿಸಲಾಗದ.
- (ವ್ಯಕ್ತಿ, ಬಯಕೆ, ಆಸಕ್ತಿ, ಮೊದಲಾದವುಗಳ ವಿಷಯದಲ್ಲಿ) ಉತ್ಸುಕ; ತವಕಪಡುವ; ತೀವ್ರಾಸಕ್ತಿಯ; ಉತ್ಸಾಹಶಾಲಿ; ಉತ್ಸಾಹಭರಿತ: keen sportsman ಉತ್ಸಾಹಶಾಲಿಯಾದ ಕ್ರೀಡಾಪಟು.
- (ಕಣ್ಣು, ದೃಷ್ಟಿ, ವಾಸನಾಶಕ್ತಿ, ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ತೀಕ್ಷ್ಣವಾದ; ಸೂಕ್ಷ್ಮವಾದ.
- ಚುರುಕುಬುದ್ಧಿಯ; ಕುಶಾಗ್ರಬುದ್ಧಿಯ; ಸೂಕ್ಷ್ಮಬುದ್ಧಿಯುಳ್ಳ; ತೀಕ್ಷ್ಣಮತಿಯಾದ.
- (ಬ್ರಿಟಿಷ್ ಪ್ರಯೋಗ) (ಬೆಲೆಯ ವಿಷಯದಲ್ಲಿ) ಪೈಪೋಟಿಯ; (ಪೈಪೋಟಿಯ ಕಾರಣದಿಂದಾಗಿ) ಬಹಳ ಅಗ್ಗವಾದ.
- (ಆಡುಮಾತು) ಉತ್ಕೃಷ್ಟ; ಶ್ರೇಷ್ಠ; ಅತ್ತುತ್ತಮ.
ಪದಗುಚ್ಛ
- keen as mustard ಉತ್ಸಾಹಭರಿತ; ಚುರುಕಾದ; ತೀವ್ರೋತ್ಸಾಹದ.
- keen on (ಆಡುಮಾತು) (ವ್ಯಕ್ತಿ, ವಸ್ತು, ಕಾರ್ಯದಿಂದ) ಬಹಳ ಆಕರ್ಷಿತನಾಗಿ.
- keen set ಹಸಿದ; ಹಾತೊರೆಯುತ್ತಿರುವ; ತವಕಪಡುತ್ತಿರುವ; ಆತುರಪಡುತ್ತಿರುವ.