See also 2jolly  3jolly  4jolly  5jolly
1jolly ಜಾಲಿ
ಗುಣವಾಚಕ
( ತರರೂಪ jollier, ತಮರೂಪ jolliest).
  1. ನಗುಮುಖದ; ಸಂತೋಷಭರಿತ; ಉಲ್ಲಾಸಶೀಲ; ಕುಶಾಲಿನ; ಖುಷಿಯ; ಮಜಾದ; ನಗುವಿನಿಂದ ಕೂಡಿದ; ಖುಷಿ(ಪಡುವ) ಸ್ವಭಾವದ.
  2. ಕುಡಿದು ಸ್ವಲ್ಪ – ಮತ್ತೇರಿದ, ಅಮಲೇರಿದ.
  3. ಹಬ್ಬದ ಉಲ್ಲಾಸದಲ್ಲಿರುವ; ಉತ್ಸವ ಸಂಭ್ರಮದ.
  4. (ಆಡುಮಾತು) (ವ್ಯಕ್ತಿಯ ಅಥವಾ ವಸ್ತುವಿನ ವಿಷಯದಲ್ಲಿ) ಉಲ್ಲಾಸ ಹಬ್ಬಿಸುವ; ಸಂತೋಷ ಹರಡುವ (ಹಲವೊಮ್ಮೆ ವ್ಯಂಗ್ಯವಾಗಿ ಸಹ): he must be a jolly fool to do it ಹಾಗೆ ಮಾಡಬೇಕಾದರೆ ಅವನೊಬ್ಬ ಬೆಪ್ಪನೇ ಆಗಿರಬೇಕು, ತಾಜಾ ಮರುಳನೇ ಆಗಿರಬೇಕು.
ಪದಗುಚ್ಛ
  1. Jolly Roger (ತಲೆ ಬುರುಡೆ ಮತ್ತು ಅಡ್ಡ ಮೂಳೆಗಳ ಚಿತ್ರವಿರುವ) ಕಡಲಗಳ್ಳರ ಕರಿ ನಿಶಾನೆ, ಕಪ್ಪು ಬಾವುಟ.
  2. the jolly god (ಗ್ರೀಕ್‍ ಪುರಾಣ) ಬ್ಯಾಕಸ್‍; ಸುರಾದೇವ; ಮದ್ಯದ ಅಧಿದೇವತೆ.
See also 1jolly  3jolly  4jolly  5jolly
2jolly ಜಾಲಿ
ಕ್ರಿಯಾವಿಶೇಷಣ

(ಆಡುಮಾತು) ತೀರ; ತುಂಬ; ಬಹಳ: he will be a jolly savage ಅವನು ತೀರ ಕಾಡು ಮನುಷ್ಯ. he will be a jolly good fellow ಅವನು ಬಹಳ ಒಳ್ಳೆಯ ವ್ಯಕ್ತಿ.

See also 1jolly  2jolly  4jolly  5jolly
3jolly ಜಾಲಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಇಂಗ್ಲೆಂಡಿನ ನೌಕಾದಳದ) ನೌಕಾಸೈನಿಕ.

See also 1jolly  2jolly  3jolly  5jolly
4jolly ಜಾಲಿ
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ jollying, ಭೂತರೂಪ ಮತ್ತು ಭೂತಕೃದಂತ jollied). (ಆಡುಮಾತು)
  1. ಮುಖಸ್ತುತಿ ಮಾಡು; ಹೊಗಳಿ ಖುಷಿಪಡಿಸು; ಉಬ್ಬಿಸಿ ಪುಸಲಾಯಿಸು.
  2. ಲೇವಡಿ ಮಾಡು; ಗೇಲಿ ಮಾಡು; ಗೇಲಿ ಎಬ್ಬಿಸು; ಕುಚೋದ್ಯ ಮಾಡು; ಪರಿಹಾಸ್ಯ ಮಾಡು.
See also 1jolly  2jolly  3jolly  4jolly
5jolly ಜಾಲಿ
ನಾಮವಾಚಕ