1jolly
ಜಾಲಿ
ಗುಣವಾಚಕ
( ತರರೂಪ jollier, ತಮರೂಪ jolliest).
- ನಗುಮುಖದ; ಸಂತೋಷಭರಿತ; ಉಲ್ಲಾಸಶೀಲ; ಕುಶಾಲಿನ; ಖುಷಿಯ; ಮಜಾದ; ನಗುವಿನಿಂದ ಕೂಡಿದ; ಖುಷಿ(ಪಡುವ) ಸ್ವಭಾವದ.
- ಕುಡಿದು ಸ್ವಲ್ಪ – ಮತ್ತೇರಿದ, ಅಮಲೇರಿದ.
- ಹಬ್ಬದ ಉಲ್ಲಾಸದಲ್ಲಿರುವ; ಉತ್ಸವ ಸಂಭ್ರಮದ.
- (ಆಡುಮಾತು) (ವ್ಯಕ್ತಿಯ ಅಥವಾ ವಸ್ತುವಿನ ವಿಷಯದಲ್ಲಿ) ಉಲ್ಲಾಸ ಹಬ್ಬಿಸುವ; ಸಂತೋಷ ಹರಡುವ (ಹಲವೊಮ್ಮೆ ವ್ಯಂಗ್ಯವಾಗಿ ಸಹ): he must be a jolly fool to do it ಹಾಗೆ ಮಾಡಬೇಕಾದರೆ ಅವನೊಬ್ಬ ಬೆಪ್ಪನೇ ಆಗಿರಬೇಕು, ತಾಜಾ ಮರುಳನೇ ಆಗಿರಬೇಕು.
ಪದಗುಚ್ಛ
- Jolly Roger (ತಲೆ ಬುರುಡೆ ಮತ್ತು ಅಡ್ಡ ಮೂಳೆಗಳ ಚಿತ್ರವಿರುವ) ಕಡಲಗಳ್ಳರ ಕರಿ ನಿಶಾನೆ, ಕಪ್ಪು ಬಾವುಟ.
- the jolly god (ಗ್ರೀಕ್ ಪುರಾಣ) ಬ್ಯಾಕಸ್; ಸುರಾದೇವ; ಮದ್ಯದ ಅಧಿದೇವತೆ.