See also 2hurry
1hurry ಹರಿ
ನಾಮವಾಚಕ
  1. ಬಹಳ ತ್ವರೆ; ಅತ್ಯಾತುರ; ವಿಪರೀತ ಅವಸರ; ಬಹಳ ಆತುರ; ಧಾವಂತ; ಜಾಗ್ರತೆ; ತರಾತುರಿ.
  2. ಬೇಗ ಕೆಲಸ ಮಾಡಿಬಿಡಬೇಕೆಂಬುದಕ್ಕಾಗಿ ಯಾ ಕೆಲಸ ಮಾಡಲು ಯಾ ಯಾವುದೇ ವಸ್ತುವಿಗಾಗಿ – ಅತಿ ತವಕ, ಅತ್ಯಾತುರ, ಧಾವಂತ.
  3. (ನಿಷೇಧಾರ್ಥದಲ್ಲಿ ಯಾ ಪ್ರಶ್ನಾರ್ಥದಲ್ಲಿ) ಧಾವಂತ; ಆತುರಕ್ಕೆ, ಅವಸರಕ್ಕೆ ಕಾರಣ; ತ್ವರೆಯ ಅಗತ್ಯ: where is the hurry ಅವಸರವೇಕೆ? ಏಕೆ ಈ ಧಾವಂತ?
ನುಡಿಗಟ್ಟು

in a hurry (ಆಡುಮಾತು)

  1. ಸರಾಗವಾಗಿ; ಸುಲಭವಾಗಿ: you will not beat that in a hurry ಅಷ್ಟೇನೂ ಸುಲಭವಾಗಿ ನೀನದನ್ನು ಸೋಲಿಸಲಾರೆ.
  2. ಮನಸಾರೆ; ಮನಃಪೂರ್ವಕವಾಗಿ: shall not ask again in a hurry ಪುನಃ ನಾನು ಕೇಳುವ ಮನಸ್ಸಿಲ್ಲ, ಇಷ್ಟವಿಲ್ಲ; ಮತ್ತೆ ಕೇಳುವ ಆತುರವೇನೂ ನನಗಿಲ್ಲ.
See also 1hurry
2hurry ಹರಿ
ಸಕರ್ಮಕ ಕ್ರಿಯಾಪದ
  1. (ಮನುಷ್ಯ ಮೊದಲಾದವರನ್ನು ಒಂದು ಕೆಲಸ ಮಾಡಲು):
    1. ತ್ವರೆಗೊಳಿಸು; ಆತುರಪಡಿಸು; ತರಾತುರಿ ಮಾಡು.
    2. ತ್ವರೆ ಮಾಡು; ದೂಡು; ಅಟ್ಟು; ತರುಬು:to hurry a lazy horse ಸೋಮಾರಿ ಕುದುರೆಯನ್ನು ತರುಬು.
  2. ಅವಸರಿಸು; ಅತ್ಯಾತುರದಿಂದ ಮಾಡುವಂತೆ ಬಲಾತ್ಕರಿಸು: to hurry one into a decision ತೀರ್ಮಾನ ಕೈಗೊಳ್ಳುವಂತೆ ಒಬ್ಬನನ್ನು ಅವಸರಪಡಿಸು.
ಅಕರ್ಮಕ ಕ್ರಿಯಾಪದ
  1. ಆತುರಾತುರವಾಗಿ ನಡೆ; ಬೇಗ ಬೇಗ ಕಾಲುಹಾಕು.
  2. ಆತುರಾತುರವಾಗಿ, ಬಹಳ ಅವಸರದಿಂದ – ಕೆಲಸ ಮಾಡು, ವರ್ತಿಸು.
ಪದಗುಚ್ಛ
  1. hurry along (ಆಡುಮಾತು) ತ್ವರೆಮಾಡು; ಅವಸರದಿಂದ ಮಾಡು; ಜಾಗ್ರತೆ ಮಾಡು; ಬೇಗಬೇಗ ಮಾಡು.
  2. hurry up = ಪದಗುಚ್ಛ \((1)\).