1hurry
ಹರಿ
ನಾಮವಾಚಕ
- ಬಹಳ ತ್ವರೆ; ಅತ್ಯಾತುರ; ವಿಪರೀತ ಅವಸರ; ಬಹಳ ಆತುರ; ಧಾವಂತ; ಜಾಗ್ರತೆ; ತರಾತುರಿ.
- ಬೇಗ ಕೆಲಸ ಮಾಡಿಬಿಡಬೇಕೆಂಬುದಕ್ಕಾಗಿ ಯಾ ಕೆಲಸ ಮಾಡಲು ಯಾ ಯಾವುದೇ ವಸ್ತುವಿಗಾಗಿ – ಅತಿ ತವಕ, ಅತ್ಯಾತುರ, ಧಾವಂತ.
- (ನಿಷೇಧಾರ್ಥದಲ್ಲಿ ಯಾ ಪ್ರಶ್ನಾರ್ಥದಲ್ಲಿ) ಧಾವಂತ; ಆತುರಕ್ಕೆ, ಅವಸರಕ್ಕೆ ಕಾರಣ; ತ್ವರೆಯ ಅಗತ್ಯ: where is the hurry ಅವಸರವೇಕೆ? ಏಕೆ ಈ ಧಾವಂತ?
ನುಡಿಗಟ್ಟು
in a hurry (ಆಡುಮಾತು)
- ಸರಾಗವಾಗಿ; ಸುಲಭವಾಗಿ: you will not beat that in a hurry ಅಷ್ಟೇನೂ ಸುಲಭವಾಗಿ ನೀನದನ್ನು ಸೋಲಿಸಲಾರೆ.
- ಮನಸಾರೆ; ಮನಃಪೂರ್ವಕವಾಗಿ: shall not ask again in a hurry ಪುನಃ ನಾನು ಕೇಳುವ ಮನಸ್ಸಿಲ್ಲ, ಇಷ್ಟವಿಲ್ಲ; ಮತ್ತೆ ಕೇಳುವ ಆತುರವೇನೂ ನನಗಿಲ್ಲ.