See also 1hurry
2hurry ಹರಿ
ಸಕರ್ಮಕ ಕ್ರಿಯಾಪದ
  1. (ಮನುಷ್ಯ ಮೊದಲಾದವರನ್ನು ಒಂದು ಕೆಲಸ ಮಾಡಲು):
    1. ತ್ವರೆಗೊಳಿಸು; ಆತುರಪಡಿಸು; ತರಾತುರಿ ಮಾಡು.
    2. ತ್ವರೆ ಮಾಡು; ದೂಡು; ಅಟ್ಟು; ತರುಬು:to hurry a lazy horse ಸೋಮಾರಿ ಕುದುರೆಯನ್ನು ತರುಬು.
  2. ಅವಸರಿಸು; ಅತ್ಯಾತುರದಿಂದ ಮಾಡುವಂತೆ ಬಲಾತ್ಕರಿಸು: to hurry one into a decision ತೀರ್ಮಾನ ಕೈಗೊಳ್ಳುವಂತೆ ಒಬ್ಬನನ್ನು ಅವಸರಪಡಿಸು.
ಅಕರ್ಮಕ ಕ್ರಿಯಾಪದ
  1. ಆತುರಾತುರವಾಗಿ ನಡೆ; ಬೇಗ ಬೇಗ ಕಾಲುಹಾಕು.
  2. ಆತುರಾತುರವಾಗಿ, ಬಹಳ ಅವಸರದಿಂದ – ಕೆಲಸ ಮಾಡು, ವರ್ತಿಸು.
ಪದಗುಚ್ಛ
  1. hurry along (ಆಡುಮಾತು) ತ್ವರೆಮಾಡು; ಅವಸರದಿಂದ ಮಾಡು; ಜಾಗ್ರತೆ ಮಾಡು; ಬೇಗಬೇಗ ಮಾಡು.
  2. hurry up = ಪದಗುಚ್ಛ \((1)\).