See also 2horn
1horn ಹಾರ್ನ್‍
ನಾಮವಾಚಕ
  1. (ದನ, ಕುರಿ, ಮೇಕೆ, ಮೊದಲಾದ ಸಸ್ತನಿಗಳ ತಲೆಮೇಲಿನ) ಕೋಡು; ಕೊಂಬು; ಂಗ.
  2. (ಮುಖ್ಯವಾಗಿ ಗಂಡು) ಸಾರಂಗದ (ತಲೆಯ ಮೇಲಿನ, ಸ್ವಲ್ಪ ಕಾಲದ) ಕವಲುಗೊಂಬು.
  3. (ಇತರ ಪ್ರಾಣಿಗಳ) ಕೋಡು; ತಲೆಯ ಮೇಲೆ ಚಾಚಿಕೊಂಡಿರುವ ಭಾಗ, ಉದಾಹರಣೆಗೆ ಬಸವನ ಹುಳುವಿನ, ಸ್ಪರ್ಶಕೀಟಗಳ ಸ್ಪರ್ಶತಂತು ಯಾ ಕುಡಿಮೀಸೆ, ಕೋಡಿನ ಗೂಬೆಯ ತಲೆಜುಟ್ಟು ಯಾ ಶಿಖೆ.
  4. ಹಾದರಗಿತ್ತಿಯ ಗಂಡನ ಲಾಂಛನ, ಸಂಕೇತ; ಹಾದರಗಿತ್ತಿಯ ಗಂಡನ ಹಣೆಯ ಮೇಲೆ ಚಿಗುರುವುದೆಂದು ಭಾವಿಸಲಾದ ಕಾಲ್ಪನಿಕ ಕೊಂಬು.
  5. ಕೊಂಬು; ಕೊಂಬಿನ ದ್ರವ್ಯ.
  6. ಕೊಂಬಿನ ಸಾಮಾನು; ಕೊಂಬಿನಿಂದ ಮಾಡಿದ ವಸ್ತು.
  7. (ಕೊಂಬಿನಿಂದ ಮಾಡಿದ) ಕುಡಿಯುವ ಪಾತ್ರೆ.
  8. (ಬಂದೂಕಿನ ಮದ್ದು ತುಂಬುವ) ಕೊಂಬಿನ ನಳಿಕೆ.
  9. ಕೊಂಬು; ಕಹಳೆ; ತುತ್ತೂರಿ; ತೂರ್ಯ; ಈಗ ಕೊಂಬಿನಿಂದಲ್ಲದೆ ಹಿತ್ತಾಳೆಯಿಂದ ತಯಾರಿಸುವ ಗಾಳಿ ವಾದ್ಯ, ಊದುವಾದ್ಯ: hunting horn ಬೇಟೆ ಕೊಂಬು, ತುತ್ತೂರಿ.
  10. ಹಾರನ್ನು; ಸುತ್ತಿಕೊಂಡಿರುವ ನಳಿಕೆ, ಕೀಲಿರಂಧ್ರಗಳು ಮತ್ತು ಗಂಟೆಯಂಥ ಬಾಯುಳ್ಳ, ವಾದ್ಯಮೇಳದಲ್ಲಿ ಬಳಸುವ ಒಂದು ವಾದ್ಯ. Figure: horns-10
  11. ಕೊಂಬಿನಾಕಾರದ – ಚಾಚು, ಚೂಪು.
  12. ಕೋಡು; ಕೊಂಬು; ಬಾಲಚಂದ್ರನ ಯಾ ಆ ಆಕಾರದ ಇತರ ವಸ್ತುವಿನ ತುದಿ, ಕೊಪ್ಪು.
  13. (ಕೊಲ್ಲಿ, ನದಿ, ಮೊದಲಾದವುಗಳ) ತೋಳು; ಶಾಖೆ; ಕವಲು.
  14. ಕೋಟಿ; ವಿಕಲ್ಪ ಪ್ರಮೇಯದ ಎರಡು ಪಕ್ಷಗಳಲ್ಲಿ ಒಂದು.
  15. ಹಾರನ್ನು; (ಹಡಗು, ಮೋಟಾರು ವಾಹನ, ಮೊದಲಾದವುಗಳಲ್ಲಿ ಎಚ್ಚರಿಕೆ ನೀಡುವ ಸಲುವಾಗಿ ಅಳವಡಿಸಿದ) ಕೂಗು ಕೊಂಬು.
  16. (ಶಕ್ತಿ, ರಕ್ಷಣೆ, ಮೊದಲಾದವುಗಳಿಗೆ) ಮೂಲ; ಆಧಾರ: the Lord is the horn of my salvation ಜಗದೀಶ್ವರನೇ ನನ್ನ ಮುಕ್ತಿಗೆ ಆಧಾರ.
  17. ಹಾರನ್ನು; ಶಂಕು; ಗ್ರಾಮಹೋನ್‍ ಮೊದಲಾದವುಗಳ ಶಂಕುವಿನಾಕಾರದ ಭಾಗ.
  18. = shoehorn.
  19. (ಅಶಿಷ್ಟ) ನಿಗುರಿರುವ ಶಿಶ್ನ.
ಪದಗುಚ್ಛ
  1. English horn = cor anglais.
  2. French horn = 1horn(10).
  3. $^1$gate of horn.
  4. horn of plenty = cornucopia.
  5. the Horn (ದಕ್ಷಿಣ ಅಮೆರಿಕನ್‍ ಪ್ರಯೋಗದ ದಕ್ಷಿಣ ತುದಿಯ ದ್ವೀಪದಲ್ಲಿರುವ ಕೊಂಬಿನಾಕಾರದ) ಹಾರ್ನ್‍ ಭೂಶಿರ.
ನುಡಿಗಟ್ಟು
  1. blow one’s own horn ತನ್ನ ತುತ್ತೂರಿ ತಾನೇ ಊದಿಕೊ; ಬಡಾಯಿ ಕೊಚ್ಚಿಕೊ; ಆತ್ಮ ಪ್ರಶಂಸೆ ಮಾಡಿಕೊ.
  2. draw in one’s horns.
    1. ಬಿಸುಪನ್ನು ಯಾ ಉತ್ಸಾಹವನ್ನು – ತಡೆದುಕೊ, ತಡೆಹಿಡಿ, ತಡೆದಿಡು.
    2. ಹಿಂದೆಗೆ; ಬಾಲ ಮುದುರಿಕೊ.
  3. lock horns ಹಣಾಹಣಿ ಕಾದು; ಕಡಿದಾಡು; ಜಗಳವಾಡು; ಹೊಡೆದಾಡು; ಘರ್ಷಣೆಗೆ ಬರು: the administration and the staff locked horns over the issue ಆ ವಿಷಯದ ಸಲುವಾಗಿ ಆಡಳಿತ ವರ್ಗ ಹಾಗೂ ನೌಕರರು ಕಡಿದಾಡಿದರು.
  4. on the horns of a dilemma ಉಭಯ ಸಂಕಟಕ್ಕೆ ಸಿಕ್ಕಿ; ಇಕ್ಕಟ್ಟಿಗೆ ಸಿಕ್ಕಿ.
  5. take the $^1$bull by the horns.
See also 1horn
2horn ಹಾರ್ನ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ) ಕೊಂಬನ್ನು ಬೆಳೆಸು.
  2. (ದನ ಮೊದಲಾದವುಗಳ) ಕೊಂಬು ಕತ್ತರಿಸು; ಕೊಂಬನ್ನು ಮೊಟಕುಮಾಡು.
  3. ಕೊಂಬಿನಿಂದ – ತಿವಿ, ಹಾಯು.
  4. (ಹಡಗಿನ ಒಡಲನ್ನು) ತಳತೊಲೆಯ ರೇಖೆಗೆ ಸಮಕೋನದಲ್ಲಿರುವಂತೆ ಅಳವಡಿಸು.
ನುಡಿಗಟ್ಟು

horn in (ಅಮೆರಿಕನ್‍ ಪ್ರಯೋಗ, ಅಶಿಷ್ಟ) ನಡುವೆ – ಬಾಯಿ ಹಾಕು, ತಲೆಹಾಕು, ಪ್ರವೇಶಿಸು.