See also 2hop  3hop  4hop
1hop ಹಾಪ್‍
ನಾಮವಾಚಕ
  1. ಹಾಪ್‍ ಬಳ್ಳಿ; ಶಂಕುಗಳಿಗಾಗಿ ಬೆಳೆಸುವ ಒಂದು ಜಾತಿಯ ಬಹುವರ್ಷೀಯ ಬಳ್ಳಿ.
  2. ಹಾಪ್‍ಕಾಯಿ; ಕೆಲವು ಮದ್ಯಗಳಿಗೆ ಕಹಿ ರುಚಿ ಕೊಡಲು ಬಳಸುವ ಹಾಪ್‍ ಬಳ್ಳಿಯ ಕಾಯಿ. Figure: hop1_2
  3. (ಆಸ್ಟ್ರೇಲಿಯ, ನ್ಯೂಸಿಲೆಂಡ್‍) ಬಿಯರು (ಮದ್ಯ).
  4. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಅಹೀಮು ಯಾ ಇತರ ಮಾದಕ ವಸ್ತು.
See also 1hop  3hop  4hop
2hop ಹಾಪ್‍
ಕ್ರಿಯಾಪದ

(ವರ್ತಮಾನ ಕೃದಂತ hopping ಭೂತರೂಪ ಮತ್ತು ಭೂತಕೃದಂತ hopped)

ಸಕರ್ಮಕ ಕ್ರಿಯಾಪದ

ಹಾಪ್‍ಕಾಯಿಗಳಿಂದ ರುಚಿಕಟ್ಟು.

ಅಕರ್ಮಕ ಕ್ರಿಯಾಪದ
  1. (ಗಿಡದ ವಿಷಯದಲ್ಲಿ) ಹಾಪ್‍ ಕಾಯಿ ಬಿಡು.
  2. ಹಾಪ್‍ ಕಾಯಿಗಳನ್ನು – ಕೊಯ್ಯು, ಬಿಡಿಸು.
ಪದಗುಚ್ಛ

hop up (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಮುಖ್ಯವಾಗಿ (ಭೂತಕೃದಂತದಲ್ಲಿ) ಮಾದಕ ವಸ್ತುವಿನಿಂದ – ಉತ್ತೇಜಿಸು, ಪ್ರಚೋದಿಸು.

See also 1hop  2hop  4hop
3hop ಹಾಪ್‍
ಕ್ರಿಯಾಪದ
(ವರ್ತಮಾನ ಕೃದಂತ hopping, ಭೂತಕೃದಂತಮತ್ತು ಭೂತರೂಪ hopped)
ಸಕರ್ಮಕ ಕ್ರಿಯಾಪದ
  1. (ಹಳ್ಳ, ಕಾಲುವೆ, ಮೊದಲಾದವನ್ನು) ಹಾರು; ಲಂಘಿಸು; ನೆಗೆದು ದಾಟು.
  2. (ಆಡುಮಾತು) (ವಾಹನದೊಳಕ್ಕೆ) ನೆಗೆ; ಹಾರು; ನೆಗೆದು ಏರು.
  3. (ಆಡುಮಾತು) (ವಾಹನದೊಳಕ್ಕೆ) ನೆಗೆದು ಹತ್ತಿ ಸವಾರಿ ಪಡೆದುಕೊ, ಪ್ರಯಾಣಗಿಟ್ಟಿಸಿಕೊ.
  4. ಒಂದು ಸ್ಥಳದಿಂದ ಮತ್ತೊಂದಕ್ಕೆ ಬೇಗ ಹೋಗು, ನೆಗೆ, ಧಾವಿಸು, ಹಾರು, ಬೇಗ ಪ್ರಯಾಣ ಮಾಡು: hopped to Delhi for a day ಒಂದು ದಿನದ ಮಟ್ಟಿಗೆ ಡೆಲ್ಲಿಗೆ ಧಾವಿಸಿದ.
ಅಕರ್ಮಕ ಕ್ರಿಯಾಪದ
  1. (ಮನುಷ್ಯ) ಒಂಟಿಕಾಲಿನಲ್ಲಿ ನೆಗೆ, ಎಗರು.
  2. (ಪ್ರಾಣಿಗಳ ವಿಷಯದಲ್ಲಿಏಕಕಾಲದಲ್ಲಿ ಎಲ್ಲ ಕಾಲುಗಳಿಂದಲೂ) ನೆಗೆ; ಜಿಗಿ; ಕುಪ್ಪಳಿಸು.
ಪದಗುಚ್ಛ
  1. hop in (ಆಡುಮಾತು) (ಮೋಟಾರ್‍ ಕಾರನ್ನು) ಪ್ರವೇಶಿಸು; ಹೊಗು; ಹತ್ತು.
  2. hop it (ಅಶಿಷ್ಟ) (ಬೇಗನೆ) ಹೊರಟುಹೋಗು; ತೊಲಗಿ ಹೋಗು.
  3. hop out (ಮೋಟಾರ್‍ಕಾರ್‍ನಿಂದ) ಇಳಿ; ಹೊರಬರು; ಹೊರಕ್ಕೆ ಧುಮುಕು.
  4. wave-hopping ನೀರಿನಿಂದ ಸ್ವಲ್ಪವೇ ಎತ್ತರದಲ್ಲಿ (ವಿಮಾನದಲ್ಲಿ) ಹಾರಾಡುವುದು.
ನುಡಿಗಟ್ಟು
  1. hopping mad ತೀರ ಕೋಪಗೊಂಡಿರುವ; ಬಹಳ ಸಿಟ್ಟಾದ.
  2. hop the twig(or stick) (ಅಶಿಷ್ಟ)
    1. ಥಟ್ಟನೆ ಹೊರಟು ಹೋಗು.
    2. ಥಟ್ಟನೆ ಸತ್ತುಹೋಗು, ಸಾಯು.
See also 1hop  2hop  3hop
4hop ಹಾಪ್‍
ನಾಮವಾಚಕ
  1. (ಒಂದು ಕಾಲ ಮೇಲಿನ) ಕುಪ್ಪಳಿಕೆ; ನೆಗೆತ.
  2. (ಆಡುಮಾತು) ಅನೌಪಚಾರಿಕ ತ್ಯ; ಸಾಮಾನ್ಯ ಕುಣಿತ.
  3. (ವಿಮಾನ ಸಂಚಾರದಲ್ಲಿ)
    1. ಒಂದು ಹಾರು; ದಾಟು; ನೆಲಕ್ಕಿಳಿಯದೆ ಸಾಗುವ ದೂರ.
    2. ಯಾನ – ಹಂತ, ಮಜಲು; ದೂರದ ಯಾನದಲ್ಲಿ ವಿಮಾನವು ಇಳಿಯುವ ಹಂತಗಳಲ್ಲಿ ಒಂದು ಘಟ್ಟ: from Delhi to Bangalore in two hops ಡೆಲ್ಲಿಯಿಂದ ಬೆಂಗಳೂರಿಗೆ ಎರಡು ಘಟ್ಟಗಳಲ್ಲಿ.
ಪದಗುಚ್ಛ

hop, skip (or step), and jump ಕುಪ್ಪಳಿಸಿ, ಜಿಗಿದು (ಯಾ ನೆಲಮೆಟ್ಟಿ) ಹಾರು; ಕ್ರಮವಾಗಿ ಕುಪ್ಪಳಿಸುವುದು, ಜಿಗಿಯುವುದು ಮತ್ತು ಹಾರುವುದು – ಈ ಮೂರು ಚಲನೆಗಳುಳ್ಳ ಒಂದು ವ್ಯಾಯಾಮ.

ನುಡಿಗಟ್ಟು
  1. keep one on the hop ಒಬ್ಬನನ್ನು ಜಾಗರೂಕನಾಗಿರುವಂತೆ ಯಾ ಚಟುವಟಿಕೆಯಿಂದ ಇರುವಂತೆ ಮಾಡು, ಇಟ್ಟಿರು.
  2. on the hop (ಆಡುಮಾತು)
    1. ಸಡಗರದಿಂದ; ಚಟುವಟಿಕೆಯಿಂದ; ಗಡಿಬಿಡಿ ಮಾಡುತ್ತಾ.
    2. ಮೈ ಮರೆತಿರುವಾಗ; ಎಚ್ಚರ ವಹಿಸದೆ ಇರುವಾಗ; ಎಚ್ಚರ ತಪ್ಪಿದಾಗ; ಎಚ್ಚರಿಕೆಯಿರದಾಗ; ಅಜಾಗರೂಕವಾಗಿ ಇದ್ದಾಗ: catch one on the hop ಅಜಾಗರೂಕನಾಗಿದ್ದಾಗಿ ಹಿಡಿ.