See also 1hop  2hop  3hop
4hop ಹಾಪ್‍
ನಾಮವಾಚಕ
  1. (ಒಂದು ಕಾಲ ಮೇಲಿನ) ಕುಪ್ಪಳಿಕೆ; ನೆಗೆತ.
  2. (ಆಡುಮಾತು) ಅನೌಪಚಾರಿಕ ತ್ಯ; ಸಾಮಾನ್ಯ ಕುಣಿತ.
  3. (ವಿಮಾನ ಸಂಚಾರದಲ್ಲಿ)
    1. ಒಂದು ಹಾರು; ದಾಟು; ನೆಲಕ್ಕಿಳಿಯದೆ ಸಾಗುವ ದೂರ.
    2. ಯಾನ – ಹಂತ, ಮಜಲು; ದೂರದ ಯಾನದಲ್ಲಿ ವಿಮಾನವು ಇಳಿಯುವ ಹಂತಗಳಲ್ಲಿ ಒಂದು ಘಟ್ಟ: from Delhi to Bangalore in two hops ಡೆಲ್ಲಿಯಿಂದ ಬೆಂಗಳೂರಿಗೆ ಎರಡು ಘಟ್ಟಗಳಲ್ಲಿ.
ಪದಗುಚ್ಛ

hop, skip (or step), and jump ಕುಪ್ಪಳಿಸಿ, ಜಿಗಿದು (ಯಾ ನೆಲಮೆಟ್ಟಿ) ಹಾರು; ಕ್ರಮವಾಗಿ ಕುಪ್ಪಳಿಸುವುದು, ಜಿಗಿಯುವುದು ಮತ್ತು ಹಾರುವುದು – ಈ ಮೂರು ಚಲನೆಗಳುಳ್ಳ ಒಂದು ವ್ಯಾಯಾಮ.

ನುಡಿಗಟ್ಟು
  1. keep one on the hop ಒಬ್ಬನನ್ನು ಜಾಗರೂಕನಾಗಿರುವಂತೆ ಯಾ ಚಟುವಟಿಕೆಯಿಂದ ಇರುವಂತೆ ಮಾಡು, ಇಟ್ಟಿರು.
  2. on the hop (ಆಡುಮಾತು)
    1. ಸಡಗರದಿಂದ; ಚಟುವಟಿಕೆಯಿಂದ; ಗಡಿಬಿಡಿ ಮಾಡುತ್ತಾ.
    2. ಮೈ ಮರೆತಿರುವಾಗ; ಎಚ್ಚರ ವಹಿಸದೆ ಇರುವಾಗ; ಎಚ್ಚರ ತಪ್ಪಿದಾಗ; ಎಚ್ಚರಿಕೆಯಿರದಾಗ; ಅಜಾಗರೂಕವಾಗಿ ಇದ್ದಾಗ: catch one on the hop ಅಜಾಗರೂಕನಾಗಿದ್ದಾಗಿ ಹಿಡಿ.